Author: AIN Author

ಬೆಂಗಳೂರು :- ಬೆಂಗಳೂರು ಗ್ರಾಮಾಂತರದಲ್ಲಿ ಭಯದ ವಾತಾವರಣವಿದೆ ಎಂದು ಸಿ ಎನ್ ಮಂಜುನಾಥ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಬೆಂಗಳೂರು ಗ್ರಾಮಾಂತರ ವಿಚಾರದಲ್ಲಿ ರಾಜಕೀಯ ಜೋರಾಗಿದೆ. ಕ್ಷೇತ್ರದಲ್ಲಿ ಭಯದ ವಾತಾವರಣವಿದ್ದರೂ ಜನರಿಗೆ ಅದನ್ನು ಎದುರಿಸುವ ಶಕ್ತಿಯಿದೆ ಎಂದು ಬಿಜೆಪಿ ಅಭ್ಯರ್ಥಿ ಡಾ. ಮಂಜುನಾಥ್‌ ಹೇಳಿದ್ದಾರೆ. ಕ್ಷೇತ್ರದಲ್ಲಿ ಭಯದ ವಾತಾವರಣವಿದೆ ಎಂದು ವರದಿಯಾಗುತ್ತಿದೆ. ಎಲ್ಲವನ್ನೂ ಚುನಾವಣಾ ಅಧಿಕಾರಿಗಳು ಪರಿಶೀಲನೆ ನಡೆಸುತ್ತಾರೆ ಎಂದು ತಿಳಿಸಿದರು. https://ainlivenews.com/warm-rain-for-the-people-of-hubli-who-were-tired-of-the-heat-of-the-sun/ ಡಿಕೆ ಸುರೇಶ್ ಏನು ಮಾಡಿಲ್ಲ ಬರೀ ಹೆದರಿಸುವ ಬೆದರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಮಂತ್ರಿ ಅಶ್ವಥ್‌ನಾರಾಯಣ್ ಆರೋಪಿಸಿದರು. ಅಷ್ಟೇ ಅಲ್ಲದೇ ಈ ಬಾರಿ ನೂರಕ್ಕೆ ನೂರು ಡಾಕ್ಟರ್ ಮಂಜುನಾಥ್‌ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Read More

ಹುಬ್ಬಳ್ಳಿ:- ಜಿಲ್ಲೆಯ ಹುಬ್ಬಳ್ಳಿ ನಗರದಲ್ಲಿ ಧಾರಾಕಾರ ಮಳೆ ಬಂದಿದ್ದು, ಮಳೆಯಿಂದ ಕೆಲಕಾಲ ಜನಜೀವನ ಅಸ್ತವ್ಯಸ್ತವಾಗಿದೆ. ಬಿಸಿಲಿನ ಝಳದಿಂದ ಕಂಗೆಟ್ಟಿದ್ದ ಜನರಿಗೆ ವರುಣ ತಂಪೆರೆದಿದ್ದು, ವರ್ಷದ ಮೊದಲ ಮಳೆ ಆಗಮನದಿಂದ ಜನ ಸಂತಸಗೊಂಡಿದ್ದಾರೆ. https://ainlivenews.com/ipl-2024-how-many-more-years-will-rcb-need-to-win-the-trophy/#google_vignette ರಾಜ್ಯದಲ್ಲಿ ಭೀಕರ ಬರಗಾಲ ತಾಂಡವವಾಡುತ್ತಿದೆ. ನೀರಿಗಾಗಿ ಹಾಹಾಕಾರ ಶುರುವಾಗಿದೆ. ಎಲ್ಲರೂ ಮಳೆಗಾಗಿ ಪ್ರಾರ್ಥಿಸುತ್ತಿದ್ದಾರೆ. ಈ ಮಧ್ಯೆ ಇಂದು ಧಾರವಾಡ ಜಿಲ್ಲೆಯ ಹುಬ್ಬಳ್ಳಿ ನಗರದಲ್ಲಿ ಧಾರಾಕಾರ ಮಳೆ ಬಂದಿದ್ದು, ಜನತೆ ಖುಷಿ ಆಗಿದ್ದಾರೆ.

Read More

ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಉಳಿದಿರುವ, ವಿರಾಟ್ ಕೊಹ್ಲಿ ಮತ್ತು ಆರ್‌ಸಿಬಿ ತಂಡ ಐಪಿಎಲ್ ಟ್ರೋಫಿ ಗೆಲ್ಲುತ್ತಾರೆಯೇ? ಎಂಬುದು. ಇದಕ್ಕೆ ಕೂಡ ಎಐ ಬಳಿ ಉತ್ತರವಿದೆ. ಆರ್‌ಸಿಬಿ ತಂಡ ತನ್ನ ಮೊದಲ ಐಪಿಎಲ್ ಪ್ರಶಸ್ತಿಯನ್ನು 2029ರಲ್ಲಿ ಗೆಲ್ಲಲಿದೆ. ಅಂದರೆ, ಆರ್‌ಸಿಬಿ ತನ್ನ ಚೊಚ್ಚಲ ಐಪಿಎಲ್ ಟ್ರೋಫಿ ಎತ್ತಿ ಹಿಡಿಯಲು ಇನ್ನೂ ಐದು ವರ್ಷಗಳ ಕಾಲ ಕಾಯಬೇಕಿದೆ. ಅಲ್ಲಿಯವರೆಗೂ ಆರ್‌ಸಿಬಿ ಸ್ಟಾರ್ ವಿರಾಟ್ ಕೊಹ್ಲಿ ಆಡುತ್ತಾರೆಯೇ? ಎಂಬ ಪ್ರಶ್ನೆಗೆ ಉತ್ತರಿಸುವುದು ಕಷ್ಟ ಎಂದು ಹೇಳಿದೆ. https://ainlivenews.com/two-brothers-who-went-to-swim-in-the-quarry-pit-died/ 2008ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪ್ರಾರಂಭವಾದಾಗಿನಿಂದ, ಪಂದ್ಯಾವಳಿಯ ಭಾಗವಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಕಳೆದ 16 ವರ್ಷಗಳಲ್ಲಿ ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲ. ಮೂರು ಬಾರಿ (2009, 2011, 2016) ಫೈನಲ್ ಪ್ರವೇಶಿಸಿದ್ದರೂ, ಪ್ರಶಸ್ತಿ ಗೆಲುವು ಕನಸಾಗಿಯೇ ಉಳಿದಿದೆ. ಇನ್ನು 2024ರ ಐಪಿಎಲ್ ಆವೃತ್ತಿಯಲ್ಲಿ ಈಗಾಗಲೇ ಹೆಣಗಾಡುತ್ತಿರುವ ಆರ್‌ಸಿಬಿ ತಂಡಕ್ಕೆ ಮುಂದಿನ ಐದು ವರ್ಷಗಳು ಕೂಡ ನಿರಾಸೆಯಿಂದ ಕೂಡಿರಲಿವೆ ಎಂದು ಕೃತಕ ಬುದ್ಧಿಮತ್ತೆ (AI)…

Read More

ಕೋಲಾರ:- ಜಿಲ್ಲೆಯ ಮಾಲೂರು ತಾಲೂಕಿನ ಮಲ್ಯಪ್ಪನಹಳ್ಳಿ ಬಳಿ ಕ್ವಾರಿ ಹಳ್ಳದಲ್ಲಿ ಈಜಲು ಹೋಗಿದ್ದ ಇಬ್ಬರು ಸಹೋದರರ ಸಾವನ್ನಪ್ಪಿದ ಘಟನೆ ಜರುಗಿದೆ. https://ainlivenews.com/inauguration-of-drinking-water-tank-for-public-near-bhishmakere/ ಪವನ್​ಕುಮಾರ್​ ಮತ್ತು ಮಧುಕುಮಾರ್​ ಮೃತ ರ್ದುದೈವಿಗಳು ಎಂದು ತಿಳಿದು ಬಂದಿದೆ. ಮುಳುಗುತ್ತಿದ್ದ ತಮ್ಮನನ್ನು ರಕ್ಷಿಸಲು ಹೋಗಿ ಅಣ್ಣನೂ ಕೊನೆಯುಸಿರೆಳೆದಿದ್ದಾನೆ. ಈ ಕುರಿತು ಮಾಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More

ಗದಗ: ನಗರದ ನ್ಯೂ ಇಂಡಿಯನ್ ಸೋಶಿಯಲ್ ವೆಲ್ ಫೇರ್ & ಎಜ್ಯುಕೇಶನ್ ಸೊಸೈಟಿ(ರಿ) ಗದಗ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವು ಸಾರ್ವಜನಿಕ ಕುಡಿಯುವ ನೀರಿನ ಅರವಟಿಗೆಯನ್ನು ಗದಗ ನಗರದ ಭೀಷ್ಮಕೆರೆ ಹತ್ತಿರ ಇರುವ ಬಸ್ ನಿಲ್ದಾಣದ ಬಳಿ ಉದ್ಘಾಟನೆ ಮಾಡಲಾಯಿತು. https://ainlivenews.com/a-fight-for-a-trivial-reason-the-husband-who-killed-his-second-wife-and-surrendered-to-khaki/#google_vignette ಈ ಬಾರಿ ಬಿಸಿಲು ಹೆಚ್ಚಿದ್ದು ಈ ಸುಡು ಬಿಸಿಲಿನಲ್ಲಿ ದೇಹದ ಆರೋಗ್ಯ ಚೆನ್ನಾಗಿರಬೇಕಾದರೆ ಹೆಚ್ಚಾಗಿ ನೀರು ಕುಡಿಯಬೇಕಾಗಿದೆ ಈಗಾಗಲೇ ನಗರದ ನ್ಯೂ ಇಂಡಿಯನ್ ಸೋಶಿಯಲ್ ವೆಲ್ ಫೇರ್ & ಎಜ್ಯುಕೇಶನ್ ಸೊಸೈಟಿ(ರಿ) ವತಿಯಿಂದ ಗಾಂಧೀ ವೃತ್ತ, ಕೆಸಿ ರಾಣಿ ರಸ್ತೆ, ಸ್ಟೇಶನ್ ರಸ್ತೆಗಳಲ್ಲಿ ಸಾರ್ವಜನಿಕ ಕುಡಿಯುವ ನೀರಿನ ಅರವಟಿಗೆಯನ್ನು ಸ್ಥಾಪಿಸಿದ್ದೆವು ಈ ವರ್ಷ ನಗರದ ಭೀಷ್ಮಕೆರೆ ಹತ್ತಿರ ಇರುವ ಬಸ್ ನಿಲ್ದಾಣದ ಬಳಿ ಅತಿಹೆಚ್ಚು ಜನ ಸಂದಣಿ ಇರುವ ಕಾರಣ ಈ ಬಾರಿ ಈ ಸ್ಥಳದಲ್ಲಿ ಪ್ರಾರಂಭಿಸಿದ್ದೆವೆ ಎಂದು ನ್ಯೂ ಇಂಡಿಯನ್ ಸೋಶಿಯಲ್ ವೆಲ್ ಫೇರ್ & ಎಜ್ಯುಕೇಶನ್ ಸೊಸೈಟಿ(ರಿ) ಅಧ್ಯಕ್ಷರಾದ ಮಂಜುನಾಥ ಅಚ್ಚಳ್ಳಿ ಹೇಳಿದರು. ಈ…

Read More

ಚಿಂತಾಮಣಿ:- ಕ್ಷುಲ್ಲಕ ಕಾರಣಕ್ಕೆ ಜಗಳ ಉಂಟಾಗಿ ಎರಡನೇ ಹೆಂಡತಿ ಕೊಂದು ಗಂಡ ಪೊಲೀಸರಿಗೆ ಶರಣಾದ ಘಟನೆ ಚಿಂತಾಮಣಿ ನಗರದ ಸೊಣ್ಣಶೆಟ್ಟಿಹಳ್ಳಿ ಬಡಾವಣೆಯಲ್ಲಿ ಜರುಗಿದೆ. 30 ವರ್ಷದ ರೆಡ್ಡಿಲಕ್ಷ್ಮಿ ಮೃತ ರ್ದುದೈವಿ ಎನ್ನಲಾಗಿದೆ. ಆಂಧ್ರ ಪ್ರದೇಶ ಮೂಲದವರಾಗಿದ್ದ ದಂಪತಿ, ಒಂದು ವರ್ಷದ ಹಿಂದೆ ಸಾರ್ವಜನಿಕರ ಸಮ್ಮೂಖದಲ್ಲಿ ಅದ್ದೂರಿ ವಿವಾಹ ಮಾಡಿಕೊಂಡು, ಸೊಣ್ಣಶೆಟ್ಟಿಹಳ್ಳಿ ಬಡಾವಣೆಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಿದ್ದರು. ಹರೀಶ್ ಹೋಸಕೋಟೆಯಲ್ಲಿ ಹೂ ವ್ಯಾಪಾರಿಯಾಗಿದ್ರೆ, ರೆಡ್ಡಿಲಕ್ಷ್ಮಿ ಮನೆಯಲ್ಲಿ ಇದ್ದಳು. ಆದ್ರೆ, ಈಗ ಸ್ವತಃ ಹರೀಶ್ ಪತ್ನಿಯನ್ನು ಬರ್ಬರವಾಗಿ ಕೊಂದು ಹೊಸಕೋಟೆ ಠಾಣೆ ಪೊಲೀಸರಿಗೆ ಶರಣಾಗಿದ್ದಾನೆ. https://ainlivenews.com/be-careful-if-you-eat-too-much-meat-cancer-is-increasing/ ಇನ್ನು ಹರೀಶ್​ಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಪಟ್ಟಣದಲ್ಲಿ ಮಮತಾ ಎಂಬುವವರ ಜೊತೆ ಹತ್ತು ವರ್ಷಗಳ ಹಿಂದೆ ಮದುವೆಯಾಗಿ, ಇಬ್ಬರು ಗಂಡು ಮಕ್ಕಳು ಇದ್ದಾರೆ. ಇತ್ತ ವಿವಾತೆಯಾಗಿದ್ದ ರೆಡ್ಡಿಲಕ್ಷ್ಮಿ ಪತಿಯಿಂದ ವಿಚ್ಚೇದನ ಪಡೆದು, ಹರೀಶ್​ನನ್ನು ಎರಡನೆ ಮದುವೆಯಾಗಿದ್ದಳು. ಆದ್ರೆ, ಹರೀಶ್​ ಮದುವೆಯಾಗಿರುವ ವಿಚಾರ ತಿಳಿಸಿರಲಿಲ್ಲ. ಇದೆ ವಿಚಾರಕ್ಕೆ ಇಬ್ಬರ ಮದ್ಯೆ ಮನಸ್ತಾಪ ಇತ್ತು. ಈ ಹಿನ್ನಲೆ…

Read More

ಅತಿಯಾಗಿ ಮಾಂಸಾಹಾರ ಸೇವಿಸುವುದರಿಂದ ಕರುಳಿನ ಕ್ಯಾನ್ಸರ್ ಉಂಟಾಗುತ್ತದೆ ಎಂದು ಬಯಲಾಗಿದೆ. ಸಾಕಷ್ಟು ವ್ಯಾಯಾಮ ಮಾಡದಿರುವುದು, ಸ್ಥೂಲಕಾಯತೆ, ಮದ್ಯಪಾನ ಅಥವಾ ತಂಬಾಕು ಸೇವನೆ, ಹಣ್ಣುಗಳು ಮತ್ತು ತರಕಾರಿಗಳಲ್ಲಿ ಕಡಿಮೆ ಆಹಾರವನ್ನು ಸೇವಿಸುವುದು ಮತ್ತು ಫೈಬರ್ ಮತ್ತು ಕೊಬ್ಬಿನ ಆಹಾರವನ್ನು ಸೇವಿಸುವುದು ಕರುಳಿನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. https://ainlivenews.com/background-on-eid-tomorrow-route-changes-in-bengaluru/ ಕೆಂಪು ಮಾಂಸ ಅಥವಾ ಸಂಸ್ಕರಿಸಿದ ಮಾಂಸದ ದೀರ್ಘಾವಧಿಯ ಸೇವನೆಯು ನಿರ್ದಿಷ್ಟವಾಗಿ, ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಹೆಚ್ಚಿನ ತಾಪಮಾನದಲ್ಲಿ ಮಾಂಸವನ್ನು ಬೇಯಿಸಿದಾಗ, ಅವು ಕ್ಯಾನ್ಸರ್ ಉಂಟುಮಾಡುವ ರಾಸಾಯನಿಕಗಳನ್ನು ಉತ್ಪತ್ತಿ ಮಾಡುತ್ತವೆ. ಸಮತೋಲಿತ ಆಹಾರ, ವ್ಯಾಯಾಮ, ಆರೋಗ್ಯಕರ ದೇಹದ ತೂಕವನ್ನು ಕಾಪಾಡಿಕೊಳ್ಳುವುದು, ಧೂಮಪಾನ ಮತ್ತು ಮದ್ಯಪಾನದಿಂದ ದೂರವಿರುವುದು ಮುಂತಾದ ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವ ಮೂಲಕ ಕರುಳಿನ ಕ್ಯಾನ್ಸರ್ ಅನ್ನು ತಡೆಯಬಹುದು. ಮಲಬದ್ಧತೆ, ಅತಿಸಾರ, ಮಲದಲ್ಲಿ ರಕ್ತ, ಕರುಳಿನ ಚಲನೆಯ ಸಮಯದಲ್ಲಿ ಹೊಟ್ಟೆ ನೋವು, ರಕ್ತಹೀನತೆ, ಆಯಾಸ ಮತ್ತು ತೂಕ ನಷ್ಟವನ್ನು ನಿರ್ಲಕ್ಷಿಸಬಾರದು ಎಂದು ತಜ್ಞರು ಎಚ್ಚರಿಸುತ್ತಾರೆ. ಕರುಳಿನ ಕ್ಯಾನ್ಸರ್ನ ಲಕ್ಷಣಗಳನ್ನು ಅರ್ಥಮಾಡಿಕೊಳ್ಳುವ ಮೂಲಕ, ರೋಗದ ಆರಂಭಿಕ ಪತ್ತೆ…

Read More

ಬೆಂಗಳೂರು:- ನಾಳೆ ಈದ್ ಹಿನ್ನೆಲೆ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಸುಮಾರು 25 ಸಾವಿರಕ್ಕೂ ಹೆಚ್ಚು ಜನರು ಸೇರುವ ಸಾಧ್ಯತೆಗಳಿವೆ. ಈ ಹಿನ್ನಲೆ ಸಂಚಾರ ದಟ್ಟಣೆಯಾಗದಂತೆ ಪೊಲೀಸರು ಎರಡು ಪ್ರಮುಖ ರಸ್ತೆಗಳಲ್ಲಿ ಸಂಚಾರ ಮಾರ್ಗ ಬದಲಾವಣೆ ಮಾಡಿದ್ದಾರೆ. ಟೌನ್ ಹಾಲ್ ಟು ಮೈಸೂರು ರಸ್ತೆ ಕಡೆಗೆ ಮತ್ತು ಕೆಂಗೇರಿ ಟು ಮಾರ್ಕೆಟ್ ಬರುವ ರಸ್ತೆಯಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದೆ. ಬೆಳಗ್ಗೆ ಏಳು ಗಂಟೆಯಿಂದ ಹನ್ನೆರಡು ಗಂಟೆಯವರೆಗೆ ಮಾತ್ರ ಈ ಬದಲಾವಣೆ ಇರಲಿದೆ. https://ainlivenews.com/big-shock-for-dcm-dk-notice-from-lokayukta-just-before-election/ ನಿನ್ನೆ ಚಂದ್ರ ದರ್ಶನವಾದ ಹಿನ್ನೆಲೆ ಇಂದು ರಾಜ್ಯದ ಕರಾವಳಿ ಭಾಗದಲ್ಲಿ ರಂಜಾನ್​ ಹಬ್ಬ ಆಚರಿಸಲಾಗಿದೆ. ಕರಾವಳಿ ಭಾಗಗಳಾದ ದಕ್ಷಿಣಕನ್ನಡ, ಉತ್ತರಕನ್ನಡ ಹಾಗೂ ಕೇರಳದಲ್ಲಿ ಇಂದು ರಂಜಾನ್ ಹಬ್ಬ ಆಚರಣೆ ಮಾಡಲಾಗಿದೆ. 29 ದಿನಗಳ ಉಪವಾಸ ವ್ರತ ಆಚರಿಸಿದ್ದ ಮುಸ್ಲಿಮರು, ಇಂದು ಈದ್ ಉಲ್ ಫಿತರ್ ಹಬ್ಬದೊಂದಿಗೆ ಅಂತ್ಯ ಮಾಡಿದ್ದಾರೆ. ಇನ್ನೂ ಇಂದು ಸಂಜೆ ಚಂದ್ರ ದರ್ಶನವಾದ ಹಿನ್ನೆಲೆ ಗುರುವಾರ ರಾಜ್ಯಾದ್ಯಂತ ಈದ್ ಉಲ್ ಫಿತರ್ ಆಚರಣೆ ಮಾಡಲಾಗುತ್ತದೆ. ರಾಜ್ಯದ…

Read More

ಬೆಂಗಳೂರು:- ಲೋಕಸಭಾ ಚುನಾವಣೆ ಪ್ರಚಾರದಲ್ಲಿ ಬ್ಯುಸಿಯಾಗಿರುವ ಡಿಕೆ ಶಿವಕುಮಾರ್​ಗೆ ಮತ್ತೊಂದು ಸಂಕಷ್ಟ ಎದುರಾದಂತಾಗಿದೆ. https://ainlivenews.com/unscientific-polling-change-in-bhattarahalli/ ಅಕ್ರಮ ಆಸ್ತಿ ಪ್ರಕರಣದಲ್ಲಿ ಸಿಬಿಐ ತನಿಖೆ ರದ್ದು ಮಾಡಿ ರಾಜ್ಯ ಸರ್ಕಾರ, ಲೋಕಾಯುಕ್ತ ತನಿಖೆಗೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸ್, ಕಳೆದ ಪ್ರೆಬ್ರವರಿ ತಿಂಗಳಲ್ಲಿ ಡಿಕೆ ಶಿವಕುಮಾರ್ ವಿರುದ್ಧ ಎಫ್​ಐಆರ್ ದಾಖಲಿಸಿತ್ತು. ಇದೀಗ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ತಿ ಗಳಿಕೆ ವಿವರ ನೀಡುವಂತೆ ನೋಟಿಸ್ ಜಾರಿ ಮಾಡಿದ್ದು, ಸಿಬಿಐಗೆ ನೀಡಿರುವ ದಾಖಲಾತಿಗಳ ಮಾಹಿತಿಗಳನ್ನು ಒದಗಿಸುವಂತೆ ನೋಟಿಸ್​ನಲ್ಲಿ ಸೂಚಿಸಿದೆ.

Read More

ಕೆಆರ್ ಪುರ:- ಅಧಿಕಾರಿಗಳ ಅವೈಜ್ಞಾನಿಕ ಬೂತ್ ಗಳ ಬದಲಾವಣೆ ಮಾಡಿರುವ ಹಿನ್ನೆಲೆಯಲ್ಲಿ    ಕೆಆರ್ ಪುರದ ಭಟ್ಟರಹಳ್ಳಿ ನಿವಾಸಿಗಳು ಮತದಾನ ಮಾಡಲು ನಾಲ್ಕರಿಂದ ಐದು ಕಿಲೋಮೀಟರ್ ಸುತ್ತುವಂತಾಗಿದ್ದು ಬೂತ್ ಗಳ ಬದಲಾವಣೆಯ ಕ್ರಮಕ್ಕೆ ಭಟ್ಟರಹಳ್ಳಿ ಗ್ರಾಮಸ್ಥರು ಚುನಾವಣಾ ಅಧಿಕಾರಿಗಳಿಗೆ ಬಹಿಷ್ಕಾರದ ಎಚ್ಚರಿಕೆ ನೀಡಿದ್ದಾರೆ. https://ainlivenews.com/rr-vs-gt-toss-delayed-due-to-rain-in-indore/ ಐದಾರು ದಶಕಗಳ ಕಾಲದಿಂದಲೂ ಭಟ್ಟರಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮತದಾನ ನಡೆಯುತ್ತಿದ್ದು ಈಗ ಏಕಾಏಕಿ ಮತಗಟ್ಟೆಯನ್ನ ಅವೈಜ್ಞಾನಿಕವಾಗಿ ಸ್ಥಳಾಂತರ ಮಾಡಿರುವುದನ್ನ ಖಂಡಿಸಿದ್ದಾರೆ.ಭಟ್ಟರಹಳ್ಳಿ ಗ್ರಾಮದಲ್ಲಿರುವ ಬೂತ್ ಅನ್ನು ರಾಷ್ಟ್ರೀಯ ಹೆದ್ದಾರಿ 75ರ ಮತ್ತೊಂದು ಬದಿಯಾದ ವಿನಾಯಕ ಬಡಾವಣೆಗೆ ವರ್ಗಾಯಿಸಿದ ಹಿನ್ನಲೆ ಸಹಾಯಕ ಚುನಾವಣಾ ಅಧಿಕಾರಿಗಳಿಗೆ ನಮ್ಮ ಗ್ರಾಮದಲ್ಲೆ ಮತದಾನ ನಡೆಯುವಂತೆ ಚುನಾವಣಾ ಬೂತನ್ನ ಬದಲಿಸಿ ಕೊಡಬೇಕು ಎಂದು ಮನವಿ ಮಾಡಿದ್ದಾರೆ.ಬದಲಾವಣೆ ಮಡದಿದ್ದಲ್ಲಿ ಗ್ರಾಮಸ್ಥರೆಲ್ಲಾ ಸೇರಿ ಪ್ರತಿಭನೆ ಮಾಡಿ ಮತದಾನ ಬಹಿಷ್ಕಾರ ಮಾಡಲಾಗುವುದು ಎಂದು ಎಚ್ಚರಿಕೆಯೂ ಸಹ ನೀಡಿದರು. ಗ್ರಾಮಸ್ಥರಾದ ಭಟ್ಟರಹಳ್ಳಿ ಬಿ.ವಿ. ಮಂಜುನಾಥ ಅವರು ಮಾತನಾಡಿ, ನಮ್ಮ ತಾತ,ತಂದೆಯವ ಕಾಲದಿಂದಲೂ ನಮ್ಮ ಗ್ರಾಮದಲ್ಲೇ ಮತ ಚಲಾಯಿಸುತ್ತಿದ್ದೆವು ಆದರೆ ಈಗ…

Read More