ಗದಗ: ನಗರದ ನ್ಯೂ ಇಂಡಿಯನ್ ಸೋಶಿಯಲ್ ವೆಲ್ ಫೇರ್ & ಎಜ್ಯುಕೇಶನ್ ಸೊಸೈಟಿ(ರಿ) ಗದಗ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವು ಸಾರ್ವಜನಿಕ ಕುಡಿಯುವ ನೀರಿನ ಅರವಟಿಗೆಯನ್ನು ಗದಗ ನಗರದ ಭೀಷ್ಮಕೆರೆ ಹತ್ತಿರ ಇರುವ ಬಸ್ ನಿಲ್ದಾಣದ ಬಳಿ ಉದ್ಘಾಟನೆ ಮಾಡಲಾಯಿತು.
ಈ ಬಾರಿ ಬಿಸಿಲು ಹೆಚ್ಚಿದ್ದು ಈ ಸುಡು ಬಿಸಿಲಿನಲ್ಲಿ ದೇಹದ ಆರೋಗ್ಯ ಚೆನ್ನಾಗಿರಬೇಕಾದರೆ ಹೆಚ್ಚಾಗಿ ನೀರು ಕುಡಿಯಬೇಕಾಗಿದೆ ಈಗಾಗಲೇ ನಗರದ ನ್ಯೂ ಇಂಡಿಯನ್ ಸೋಶಿಯಲ್ ವೆಲ್ ಫೇರ್ & ಎಜ್ಯುಕೇಶನ್ ಸೊಸೈಟಿ(ರಿ) ವತಿಯಿಂದ ಗಾಂಧೀ ವೃತ್ತ, ಕೆಸಿ ರಾಣಿ ರಸ್ತೆ, ಸ್ಟೇಶನ್ ರಸ್ತೆಗಳಲ್ಲಿ ಸಾರ್ವಜನಿಕ ಕುಡಿಯುವ ನೀರಿನ ಅರವಟಿಗೆಯನ್ನು ಸ್ಥಾಪಿಸಿದ್ದೆವು ಈ ವರ್ಷ ನಗರದ ಭೀಷ್ಮಕೆರೆ ಹತ್ತಿರ ಇರುವ ಬಸ್ ನಿಲ್ದಾಣದ ಬಳಿ ಅತಿಹೆಚ್ಚು ಜನ ಸಂದಣಿ ಇರುವ ಕಾರಣ ಈ ಬಾರಿ ಈ ಸ್ಥಳದಲ್ಲಿ ಪ್ರಾರಂಭಿಸಿದ್ದೆವೆ ಎಂದು ನ್ಯೂ ಇಂಡಿಯನ್ ಸೋಶಿಯಲ್ ವೆಲ್ ಫೇರ್ & ಎಜ್ಯುಕೇಶನ್ ಸೊಸೈಟಿ(ರಿ) ಅಧ್ಯಕ್ಷರಾದ ಮಂಜುನಾಥ ಅಚ್ಚಳ್ಳಿ ಹೇಳಿದರು.
ಈ ಸಂದರ್ಭದಲ್ಲಿ ಮುತ್ತು ಸುಂಕದ, ಸಂಗು ಚಿತ್ತರಗಿ, ಅಭಿಷೇಕ ವಾಲ್ಮೀಕಿ, ಸಂತೋಷ ಕುರಿ, ಚಂದ್ರು ಗೋಡಿ ಸೇರಿದಂತೆ ಅನೇಕ ಸಾರ್ವಜನಿಕರು ಹಾಜರಿರು.