Author: AIN Author

ಗದಗ:- ನಾಡಿನಾದ್ಯಂತ ರಂಜಾನ್ ಹಬ್ಬದ ಸಂಭ್ರಮ ಮನೆ ಮಾಡಿದೆ. ಅದರಂತೆ ಗದಗನಲ್ಲಿ ಸಂಭ್ರಮದಿಂದ ರಂಜಾನ ಹಬ್ಬ ಆಚರಣೆ ಮಾಡಲಾಗಿದ್ದು, ನಗರದ ಡಂಬಳ ನಾಕಾ ಬಳಿ ಇರೋ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ನೆರವೇರಿದೆ. https://ainlivenews.com/the-government-in-the-state-is-anti-people-by-vijayendra/ ಮುಸ್ಲಿಂ ಬಾಂಧವರಿಂದ ಸಾಮೂಹಿಕ ಪ್ರಾರ್ಥನೆ ಜರುಗಿದ್ದು, ಪ್ರಾರ್ಥನೆಯಲ್ಲಿ ಸಚಿವ ಎಚ್ ಕೆ ಪಾಟೀಲ್ ಭಾಗಿಯಾಗಿದರು. ಈ ವೇಳೆ ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಶುಭಾಶಯ ಕೋರಿದ್ದಾರೆ. ಮುಸ್ಲಿಂ ಬಾಂಧವರು ಪರಸ್ಪರ ಹಬ್ಬದ ಶುಭಾಶಯ ಕೋರಿದ್ದಾರೆ. ಬಿಸಿಲಿನ ತಾಪಕ್ಕೆ ಮುಸ್ಲಿಂ ಬಾಂಧವರು ಕೊಡೆಗಳ ಮೊರೆ ಹೋಗಿದ್ದಾರೆ. ಸಾವಿರಾರು ಜನ ಮುಸ್ಲಿಂ ಬಾಂಧವರು ಪ್ರಾರ್ಥನೆಯಲ್ಲಿ ಭಾಗಿಯಾಗಿದರು.

Read More

ಚಾಮರಾಜನಗರ:- ರಾಜ್ಯದಲ್ಲಿರುವುದು ಜನವಿರೋಧಿ ಸರ್ಕಾರವಾಗಿದೆ ಎಂದು ಬಿವೈ ವಿಜಯೇಂದ್ರ ಹೇಳಿದ್ದಾರೆ. ಕೊಳ್ಳೇಗಾಲದಲ್ಲಿ ಮಾತನಾಡಿದ ಅವರು, ಈ ಬಾರಿಯ ಲೋಕಸಭೆ ಚುನಾವಣೆ ವಿಶ್ವದ ಗಮನ ಸೆಳೆಯುತ್ತಿದೆ. 10 ವರ್ಷದ ಬಳಿಕವೂ ಪ್ರಧಾನಿ ಮೋದಿಯವರ ಆಡಳಿತದ ಪರವಾದ ಅಲೆ ಹೆಚ್ಚಾಗಿದೆ. ಮಾಜಿ ಪ್ರಧಾನಿ ಹೆಚ್‌‌.ಡಿ ದೇವೇಗೌಡರು ಮೋದಿಯವರ ದೂರದೃಷ್ಟಿಯನ್ನು ಮೆಚ್ಚಿದ್ದಾರೆ https://ainlivenews.com/the-festival-of-ramzan-was-celebrated-in-bagalkot/ ದೇಶದ ಹಿತದೃಷ್ಟಿಯಿಂದ ಹೆಚ್.ಡಿ ದೇವೇಗೌಡರು ಎನ್.ಡಿ.ಎ ಜೊತೆ ಕೈಜೋಡಿಸಿದ್ದಾರೆ. ರಾಜ್ಯದಲ್ಲಿ ಹತ್ತು ತಿಂಗಳ ಹಿಂದೆ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಜನವಿರೋಧಿಯಾಗಿದೆ. ಕಿಸಾನ್ ಸಮ್ಮಾನ್ ಯೋಜನೆಯ ರಾಜ್ಯದ ಪಾಲನ್ನು ಕಡಿತಗೊಳಿಸಿದ್ದಾರೆ. ಹಾಲಿಗೆ ಕೊಡಲಾಗುತ್ತಿದ್ದ ಹಾಲಿನ ಪ್ರೋತ್ಸಾಹ ಧನವನ್ನು ಕಾಂಗ್ರೆಸ್ ಸರ್ಕಾರ ಬಾಕಿ ಕೊಟ್ಟಿಲ್ಲ. ವಿದ್ಯಾರ್ಥಿಗಳಿಗೆ ಕೊಡಲಾಗುತ್ತಿದ್ದ ವಿದ್ಯಾಸಿರಿ ಯೋಜನೆ ಮೊಟಕುಗೊಳಿಸಿದ್ದಾರೆ 24 ಸಾವಿರ ಕೋಟಿ ರೂಪಾಯಿ ಎಸ್.ಸಿ.ಪಿ/ಟಿಎಸ್.ಪಿ ಹಣ ಗ್ಯಾರೆಂಟಿ ಯೋಜನೆಗೆ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದರು.

Read More

ಬಾಗಲಕೋಟೆ:- ಬಾಗಲಕೋಟೆ ಜಿಲ್ಲೆಯಲ್ಲಿ ರಂಜಾನ್ ಹಬ್ಬದ ಆಚರಣೆ ಬಹಳ ಸಂಭ್ರಮದಿಂದ ಜರುಗಿದೆ. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಮುಸ್ಲಿಂ ಬಾಂಧವರಿಂದ ಈದ್ಗಾ ಮೈದಾನಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಪ್ರಾರ್ಥನೆ ಬಳಿಕ ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. https://ainlivenews.com/a-gun-was-found-during-the-election-inspection/ ಮುಸ್ಲೀಂ ಧರ್ಮಗುರುಗಳು ಮುಖಂಡರು ಗಣ್ಯರಿಂದಲೂ ಶುಭಾಶಯಗಳ ವಿನಿಮಯ ಮಾಡಿಕೊಂಡಿದ್ದರು. ಭಾರತ ಪ್ರಜಾಪ್ರಭುತ್ವ ದೇಶ ದೇಶದಲ್ಲಿ ಎಲ್ಲ ಜನರನ್ನು ಪರಸ್ಪರ ಅಣ್ಣ-ತಮ್ಮಂದಿರ ಹಾಗೆ ಇರುವಂತೆ ದೇವರು ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಂಡರು. ಪ್ರಕಾಶ ಕುಂಬಾರ ಬಾಗಲಕೋಟೆ

Read More

ನೆಲಮಂಗಲ: ಲೋಕಸಭಾ ಚುನಾವಣೆ ಚಕ್ ಪೋಸ್ಟ್ ನಲ್ಲಿ ತಪಾಸಣೆ ವೇಳೆ ಬಂದೂಕು ಪತ್ತೆಯಾಗಿದೆ. ನೆಲಮಂಗಲದ ಲ್ಯಾಂಕೋ ಟೋಲ್ ಬಳಿ ಬಂದೂಕು ಪತ್ತೆಯಾಗಿದ್ದು, ಐದು ಗುಂಡು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನಿಂದ ಮಡಿಕೇರಿಗೆ ಕಾರು ಹೋಗುತ್ತಿತ್ತು. ಈ ವೇಳೆ ಪರಿಶೀಲಿಸಿದಾಗ ಬಂದೂಕು ಪತ್ತೆಯಾಗಿದೆ. ರತನ್ 35 ವರ್ಷ ಈತನ ಬಳಿ ಲೈಸೆನ್ಸ್ ಇರುವ ಬಂದೂಕು ಪತ್ತೆಯಾಗಿದೆ. https://ainlivenews.com/passed-in-distinction-rural-student-development-with-agricultural-work/ ರತನ್ ನೆಲಮಂಗಲ ಮಾರ್ಗದಲ್ಲಿ ಮಡಿಕೇರಿಗೆ ತೆರಳುತಿದ್ದ ಎನ್ನಲಾಗಿದೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬಾಗಲಕೋಟೆ:- ಜಿಲ್ಲೆಯ ರಬಕವಿ ಬನಹಟ್ಟಿತಾಲೂಕಿನ ನಾವಲಗಿ ಗ್ರಾಮದ ಆನಂದ ಕಂಪು ಅವರ ಸುಪುತ್ರ ವಿಕಾಸ,ಆನಂದ ಚಿಂಚಖಂಡಿ (ಕಂಪು) ತಮ್ಮ ತೋಟದಲ್ಲಿ ಕೃಷಿ ಕೆಲಸದೊಂದಿಗೆ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ 600 ಕ್ಕೆ 569 ಅಂಕಗಳನ್ನು ಪಡೆಯುವ ಮೂಲಕ ಗ್ರಾಮಕ್ಕೆ ಹಾಗೂ ಕಾಲೇಜಿಗೆ ಕೀರ್ತಿ ತಂದಿದ್ದಾನೆ, https://ainlivenews.com/an-elephant-attacked-a-woman-who-was-going-to-madappa-hill-she-died-on-the-spot/ ಇತನು ಲೆಕ್ಕಶಾಸ್ತ್ರ ಹಾಗೂ ಅರ್ಥಶಾಸ್ತ್ರ ವಿಷಯದಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆದಿದ್ದು,ಕನ್ನಡ 89.ಇಂಗ್ಲೀಷ 85.ಅರ್ಥಶಾಸ್ತ್ರ 100.ವ್ಯವಹಾರ ಅಧ್ಯಯನ 98.ಸಮಾಜಶಾಸ್ತ್ರ 97.ಲೆಕ್ಕಶಾಸ್ತ್ರ 100. ಪ್ರತಿ ಶತ 94,83 ಅಂಕಗಳನ್ನು ಗಳಿಸಿದ್ದಾನೆ. ಇತನು ಬನಹಟ್ಟಿಯ ಎಸ್ ಆರ್ ಎ ಕಾಲೇಜು ವಿದ್ಯಾರ್ಥಿಯಾಗಿದ್ದು ಈ ವಿದ್ಯಾರ್ಥಿಯು ತನ್ನ ಬಿಡುವಿನ ಸಮಯದಲ್ಲಿ ಪಾಲಕರೊಂದಿಗೆ ತೋಟದಲ್ಲಿ ಕೃಷಿ ಕೆಲಸದಲ್ಲಿ ತೋಡಗಿಕೊಳ್ಳುವ ಮೂಲಕ ಸಾಧನೆ ಮಾಡಿದ್ದಾನೆ.ಇತನ ಸಾಧನೆಗೆ ಗ್ರಾಮದ ಗುರುಹಿರಿಯರು,ಶಿಕ್ಷಕರು ಯುವ ಮಿತ್ರರು ಅಭಿನಂದಿಸಿದ್ದಾರೆ. ಪ್ರಕಾಶ ಕುಂಬಾರ ಬಾಗಲಕೋಟೆ

Read More

ಚಾಮರಾಜನಗರ: ಮಾದಪ್ಪನ ದರ್ಶನಕ್ಕೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಮಹಿಳಾ ಭಕ್ತೆ ಮೇಲೆ ಕಾಡಾನೆಯೊಂದು ದಾಳಿ ನಡೆಸಿ ಕೊಂದಿರುವ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪ್ರಸಿದ್ದ ಯಾತ್ರಾಸ್ಥಳವಾದ ಮಲೆಮಹದೇಶ್ವರಬೆಟ್ಟಕ್ಕೆ ಮಾದಪ್ಪನ ದರ್ಶನ ಪಡೆಯಲು ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ವೇಳೆ ಆನೆ ತಲೆದಿಂಬ ಎಂಬ ಪ್ರದೇಶದಲ್ಲಿ ಏಕಾಏಕಿ ಆನೆ ದಾಳಿ ನಡೆಸಿ ಈ ಘಟನೆ ನಡೆದಿದೆ. https://ainlivenews.com/countdown-to-lok-sabha-elections-people-of-kendakari-against-congress-promise/ ಮೃತ ಲಕ್ಷ್ಮೀಯು ಮಗ ಚಿರಾಗ್ ಸೇರಿ ಸಂಬಂಧಿಕರಾದ ಚಿಕ್ಕತಾಯಮ್ಮ ಮನು ಪ್ರಸನ್ನ, , ಮಹದೇವು, ಪುಟ್ಟರಾಜು ಎಲ್ಲರೂ ಜೊತೆಗೂಡಿ ಮಹದೇಶ್ವರ ಬೆಟ್ಟಕ್ಕೆ ಗೂಡ್ಸ್ ವಾಹನದಲ್ಲಿ ಹೊನಗನಹಳ್ಳಿ ಗ್ರಾಮದಿಂದ ಹೊರಟು ಕೊಳ್ಳೇಗಾಲ ಮಾರ್ಗವಾಗಿ ತಾಳಬೆಟ್ಟಕ್ಕೆ ಆಗಮಿಸಿದ್ದಾರೆ. ನಂತರ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದುಕೊಂಡು ನಂತರ ಮತ್ತೆ ಮಹದೇಶ್ವರ ಬೆಟ್ಟಕ್ಕೆ ಹೊರಡಲು ಹೋದಾಗ ತಾಳಬೆಟ್ಟದ ಹತ್ತಿರ ಸುಮಾರು 10-15 ಜನ ಸಾರ್ವಜನಿಕರು ಪಾದಯಾತ್ರೆಯ ಮೂಲಕ ಮಹದೇಶ್ವರಬೆಟ್ಟಕ್ಕೆ ಹೋಗುತ್ತಿರುವುದನ್ನು ನೋಡಿ ಅವರ ಜೊತೆ ಕಾಲ್ನಡಿಗೆಯಲ್ಲಿ ತಾವು ಕೂಡ ಹೆಜ್ಜೆ ಹಾಕಿದ್ದಾರೆ. ಮಾರ್ಗ ಮದ್ಯೆ ಅರಣ್ಯ ಪ್ರದೇಶದ ಕಾಲುದಾರಿಯಲ್ಲಿ…

Read More

ಬೆಂಗಳೂರು:- 2024 ರ ಲೋಕಸಭಾ ಚುನಾವಣೆಗೆ ದಿನಗಣನೆ ಹಿನ್ನೆಲೆ ಮತದಾರರನ್ನ ಸೆಳೆಯಲು ರಾಜಕೀಯ ಪಕ್ಷಗಳಿಂದ ಭರ್ಜರಿ ಪ್ರಚಾರ ನಡೆದಿದ್ದು, ಚುನಾವಣೆ ಗೆಲ್ಲಲು ಸಾರ್ವಜನಿಕರಿಗೆ ವಿವಿಧ ಗ್ಯಾರೆಂಟಿಗಳ ಆಶ್ವಾಸನೆ ನೀಡಿದ್ದಾರೆ. ಆದ್ರೆ ಕಾಂಗ್ರೆಸ್ ಪಕ್ಷದ ವಾಗ್ದಾನ ವಿರುದ್ದ ಜನತೆ ಮಾತ್ರ ಕೆಂಡಕಾರಿದ್ದಾರೆ. 9ರಿಂದ 12ನೇ ತರಗತಿ ಮಕ್ಕಳಿಗೆ ಉಚಿತ ಮೊಬೈಲ್ ವಿತರಣೆ ಬಗ್ಗೆ ಕಾಂಗ್ರೆಸ್ ವಾಗ್ದಾನ ಮಾಡಿದ್ದು, ಈ ವಾಗ್ದಾನಾದ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರ ಹಾಕಿದ್ದಾರೆ. https://ainlivenews.com/complication-of-the-year-deadly-attack-at-night/ ಇದು ಮಕ್ಕಳ ಭವಿಷ್ಯವನ್ನ ಹಾಳುಮಾಡುವ ವಾಗ್ದಾನ ಎಂದು ಟೀಕೆ ಮಾಡಿದ್ದು, ಈಗಾಗಲೇ ಮೊಬೈಲ್ ನಿಂದ ಮಕ್ಕಳ ಭವಿಷ್ಯ ಹಾಳಾಗ್ತಿದೆ, ಶಿಕ್ಷಣಕ್ಕೆ ಮಾರಕವಾದ ಪರಿಸ್ಥಿತಿ ಎದುರಾಗಿದೆ. ಇದರ ಬೆನ್ನಲ್ಲೆ ಕಲಿಕೆ ಹೆಸರಿನಲ್ಲಿ ಮೊಬೈಲ್ ಕೊಡುವ ಗ್ಯಾರೆಂಟಿ ಘೋಷಣೆ ಬೇಕಿತ್ತಾ ಎಂದು ಪ್ರಶ್ನೆ ಮಾಡಿದ್ದಾರೆ. ಬಿಟ್ಟಿ ಭಾಗ್ಯಗಳ ನಡುವೆ ಮೊಬೈಲ್ ಭಾಗ್ಯ ಓದುವ ಮಕ್ಕಳ ಭವಿಷ್ಯಕ್ಕೆ ಬೆಂಕಿ ಇಟ್ಟಂತೆ ಎಂದು ವ್ಯಾಪಕ ಟೀಕೆ ಮಾಡುತ್ತಿದ್ದಾರೆ.

Read More

ಆನೇಕಲ್:- ವರ್ಷದ ತೊಡಕು ರಾತ್ರಿ ಹಳೆ ದ್ವೇಷದ ಹಿನ್ನೆಲೆ ವ್ಯಕ್ತಿಯೋರ್ವನ ಮೇಲೆ ಡೆಡ್ಲಿ ಅಟ್ಯಾಕ್ ನಡೆದಿದೆ. ರಾಜಧಾನಿ ಬೆಂಗಳೂರಿನ ಸೂರ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗೋಪಸಂದ್ರದಲ್ಲಿ ನಿನ್ನೆ ರಾತ್ರಿ 10:30 ರ ಸುಮಾರಿಗೆ ಘಟನೆ ಜರುಗಿದೆ ಮುತ್ತಾನಲ್ಲೂರು ವಾಸಿ ಸತೀಶ್(30) ಹಲ್ಲೆಗೊಳಗಾದ ವ್ಯಕ್ತಿ ಎನ್ನಲಾಗಿದೆ. ಮುತ್ತಾನಲ್ಲೂರು ವಾಸಿಗಳಾದ ಮುನಿಯಲ್ಲಪ್ಪ, ದರ್ಶನ್ ಪ್ರಶಾಂತ್, ಆನಂದ್ , ಅಶೋಕ್ ಮತ್ತು ವೈಟ್ ಫೀಲ್ಡ್ ಮೂರ್ತಿ ಅಂಡ್ ಗ್ಯಾಂಗ್ ನಿಂದ ಕೃತ್ಯ ನಡೆದಿದೆ. ನಿನ್ನೆ ಮಧ್ಯಾಹ್ನ ಸತೀಶ್ ಜೊತೆ ಮುನಿಯಲ್ಲಪ್ಪ ಕಿರಿಕ್ ತೆಗೆದಿದ್ದ. ಸಂಜೆ ಹೊತ್ತಿಗೆ ಅಗಿದ್ದು ಆಗೋಯ್ತು ರಾಜಿಗೆ ಬಾ ಎಂದು ಕರೆದಿದ್ದಾನೆ. https://ainlivenews.com/15-people-are-sick-after-drinking-raw-water-in-mangalore/ ರಾತ್ರಿ ಮಾತನಾಡಬೇಕು ಅಂತಾ ಕರೆಸಿ ಸತೀಶ್ ಮೇಲೆ ಡೆಡ್ಲಿ ಅಟ್ಯಾಕ್ ಮಾಡಲಾಗಿದೆ. ತಲೆ, ಕಣ್ಣು, ಹೊಟ್ಟೆ, ಬೆನ್ನು, ಕೈ ಹತ್ತಾರು ಡ್ರಾಗರ್ ಮತ್ತು ಚಾಕುವಿನಿಂದ ಇರಿಯಲಾಗಿದ್ದು, ಜೊತೆಯಲ್ಲಿದ್ದ ಸತೀಶ್ ಮಗನ ಮೇಲೂ ಹಲ್ಲೆ ನಡೆದಿದೆ. ರಾತ್ರಿ ಬೇಡವೆಂದರೂ ಒತ್ತಾಯ ಮಾಡಿ ಸತೀಶ್ ನನ್ನು ಮುನಿಯಲ್ಲಪ್ಪ ಕರೆದೊಯ್ದಿದ್ದ. ಆತಂಕಗೊಂಡ ಮನೆಯವರು…

Read More

ಮಂಗಳೂರು:- ಎಳನೀರು ಕುಡಿದು 15 ಮಂದಿ ಅಸ್ವಸ್ಥಗೊಂಡ ಘಟನೆ ಮಂಗಳೂರಿನಲ್ಲಿ ಜರುಗಿದೆ. ಮಂಗಳೂರು ಹೊರವಲಯದ ಅಡ್ಯಾರ್‌ನಲ್ಲಿರುವ ಐಸ್‌ಕ್ರೀಂ ಘಟಕವೊಂದರಲ್ಲಿ ಘಟನೆ ಜರುಗಿದೆ. ಅಡ್ಯಾರ್, ಕಣ್ಣೂರು ಮತ್ತು ತುಂಬೆ ನಿವಾಸಿಗಳು ಏಪ್ರಿಲ್ 8 ರಂದು ಎಳನೀರು ಖರೀದಿಸಿದ್ದರು ಮತ್ತು ಮರುದಿನ ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎಳನೀರು ಕುಡಿದ ಬಳಿಕ ಅವರಲ್ಲಿ ವಾಂತಿ ಮತ್ತು ಭೇದಿ ಆರಂಭವಾಗಿತ್ತು. ಐಸ್‌ಕ್ರೀಂ ಘಟಕದಲ್ಲಿ ಪ್ರತಿ ಲೀಟರ್‌ಗೆ 40 ರೂ. ಬೆಲೆಯಲ್ಲಿ ಎಳನೀರು ಮಾರಾಟ ಮಾಡಲಾಗುತ್ತದೆ. ಹೀಗಾಗಿ ಈ ಪ್ರದೇಶದ ಹಲವಾರು ಜನ ಅದನ್ನು ಖರೀದಿಸುತ್ತಾರೆ. https://ainlivenews.com/due-to-ramadan-traffic-is-closed-on-these-roads-today/ ಅಸ್ವಸ್ಥರು ಮೊದಲಿಗೆ ಸ್ಥಳೀಯ ವೈದ್ಯರಿಂದ ಚಿಕಿತ್ಸೆ ಪಡೆದಿದ್ದಾರೆ. ನಂತರ ನಗರದ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಮೂವರು ಒಳರೋಗಿಗಳಾಗಿ ದಾಖಲಾಗಿದ್ದರೆ, 12 ಮಂದಿ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯ ಹೊರರೋಗಿ ಘಟಕದಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಬುಧವಾರ ವಾಟ್ಸ್ ಆ್ಯಪ್ ಮೂಲಕ ದೂರು ಸ್ವೀಕರಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ ಹಾಗೂ ಆಹಾರ ಭದ್ರತಾ ಅಧಿಕಾರಿ ಐಸ್​ಕ್ರೀಂ ಘಟಕಕ್ಕೆ ಭೇಟಿ ನೀಡಿ ಮಾದರಿ…

Read More

ಬೆಂಗಳೂರು:- ರಂಜಾನ್ ಹಬ್ಬದ ಪ್ರಯುಕ್ತ ನಗರದ ಹಲವು ರಸ್ತೆಗಳಲ್ಲಿ ಸಂಚಾರ ನಿರ್ಬಂಧ ಹೇರಲಾಗಿದೆ. ಮೈಸೂರು ರಸ್ತೆಯ ಬಿಬಿ ಜಂಕ್ಷನ್ ಮತ್ತು ಚಾಮರಾಜಪೇಟೆಯ 1ನೇ ಮುಖ್ಯರಸ್ತೆಯ 7ನೇ ಕ್ರಾಸ್‌ನಲ್ಲಿರುವ ಬಿಬಿಎಂಪಿ ಆಟದ ಮೈದಾನದಲ್ಲಿ 25,000 ಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆಯಿದೆ. ಸಿಟಿ ಮಾರ್ಕೆಟ್ ಮೇಲ್ಸೇತುವೆಯಿಂದ (ಬಿಜಿಎಸ್ ಮೇಲ್ಸೇತುವೆ) ಟೋಲ್ ಗೇಟ್ ಜಂಕ್ಷನ್ ವರೆಗೆ ಬೆಳಿಗ್ಗೆ 7 ರಿಂದ ಮಧ್ಯಾಹ್ನ 12 ರವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ಎಲ್ಲಾ ವಾಹನಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. https://ainlivenews.com/do-you-know-what-kind-of-batter-rcb-batter-will-jacks-is/ ಟೌನ್ ಹಾಲ್‌ನಿಂದ ಮೈಸೂರು ರಸ್ತೆಯತ್ತ ಸಾಗುವ ವಾಹನಗಳು ಮೇಲ್ಸೇತುವೆಯ ಕೆಳಗೆ ಮುಂದುವರಿದು ಶಿರಸಿ ವೃತ್ತದಲ್ಲಿ ಬಳಿ ಬಲಕ್ಕೆ ತಿರುಗಿ, ನಂತರ ಬಿನ್ನಿ ಮಿಲ್ ಜಂಕ್ಷನ್, ಹುಣಸೆಮರ ಜಂಕ್ಷನ್, ಎಂಸಿ ಸರ್ಕಲ್ ಮತ್ತು ಹೊಸಹಳ್ಳಿ ಸಿಗ್ನಲ್ ಮೂಲಕ ಪ್ರಯಾಣಿಸಿ ವೆಸ್ಟ್ ಆಫ್ ಕಾರ್ಡ್ ರಸ್ತೆ ಮೂಲಕ ಕಿಮ್ಕೋ ಜಂಕ್ಷನ್ ಬಳಿ ಮೈಸೂರು ರಸ್ತೆಗೆ ಸೇರಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಕೆಂಗೇರಿಯಿಂದ ಮಾರುಕಟ್ಟೆ ಕಡೆಗೆ ಸಾಗುವ ವಾಹನಗಳು ವೆಸ್ಟ್ ಆಫ್…

Read More