Author: AIN Author

ಕೋಲಾರ: ಬೆಂಗಳೂರಿನಲ್ಲಿ ಒಕ್ಕಲಿಗರ ಸ್ವಾಮೀಜಿ ಭೇಟಿ ವಿಚಾರಕ್ಕೆ ಸಂಬಂಧಸಿದಂತೆ ಕೋಲಾರದಲ್ಲಿ ಮಾಜಿ ಸಚಿವ ಆರ್ ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ. ಆದಿಚುಂಚನಗಿರಿ ಮಠ ಎಲ್ಲ ಸಮುದಾಯಗಳನ್ನು ಪ್ರೀತಿಸುತ್ತದೆ. ಡಿ. ಕೆ. ಶಿವಕುಮಾರ್ ಭಯೋತ್ಪಾದಕರನ್ನು ಬ್ರದರ್ ಎಂದ ಬಳಿಕ ಅವರು ಒಕ್ಕಲಿಗ ನಾಯಕರಾಗಲು ಸಾಧ್ಯವಿಲ್ಲ. ಜಾತಿ ಗಣತಿ ಹೆಸರಲ್ಲಿ ಕಾಂಗ್ರೆಸ್ ಒಕ್ಕಲಿಗ ಸಮುದಾಯಕ್ಕೆ ಯಾವ ಅನ್ಯಾಯ ಮಾಡಿದೆ ಎಂಬುದು ತಿಳಿದಿದೆ. ಡಿಸಿಎಂ ಡಿ. ಕೆ. ಶಿವಕುಮಾರ್‌ಗೆ ಬುದ್ಧಿ ಭ್ರಮಣೆಯಾಗಿದೆ. ಸರ್ಕಾರ ಬೀಳಿಸುವಾಗ 14 ಶಾಸಕರು ಬಿಜೆಪಿಗೆ ಸೇರ್ಪಡೆಯಾಗಿದ್ದರು. ಅವರನ್ನು ಕಳುಹಿಸಿದ್ದೇ ಸಿದ್ದರಾಮಯ್ಯ. ಮಂಡ್ಯದಲ್ಲಿ ಕುಮಾರಸ್ವಾಮಿ ಮಗನನ್ನು ಸೋಲಿಸಿದ್ದು ನಾನೇ ಎಂದು ಸಿದ್ದರಾಮಯ್ಯ ಹೇಳಿದ್ದರು ಎಂದರು.

Read More

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮ ಮಾದರಿ ನೀತಿ ಸಂಹಿತೆ ಹಾಗೂ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳ ಖರ್ಚು-ವೆಚ್ಚಗಳ ಮೇಲೆ ಅಧಿಕಾರಿಗಳು ಸರಿಯಾಗಿ ನಿಗಾವಹಿಸಬೇಕೆಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಾಮಾನ್ಯ ವೀಕ್ಷಕರಾದ ಶ್ರೀ ಮಕ್ರಂದ್ ಪಾಂಡುರಂಗ್ ರವರು ಸೂಚನೆ ನೀಡಿದರು. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇಂದು ಕುಮಾರ ಕೃಪಾ ಸಭಾಂಗಣದಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮಾದರಿ ನೀತಿ ಸಂಹಿತೆಯ ಉಲ್ಲಂಘನೆಗಳ ಮೇಲೆ ಎಫ್.ಎಸ್.ಸಿ ತಂಡಗಳು ಸರಿಯಾಗಿ ನಿಗಾವಹಿಸುತ್ತಿರಬೇಕು. ಯಾವುದೇ ಉಲ್ಲಂಘನೆ ಕಂಡುಬಂದಲ್ಲಿ ತಕ್ಷಣವೇ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ನಡೆಯುವ ಸಾಮಾವೇಶಗಳು, ಪ್ರಚಾರ ಕಾರ್ಯಗಳ ವೇಲೆ ವಿವಿಟಿ, ವಿಎಸ್‌ಟಿ ಹಾಗೂ ಎಫ್‌ಎಸ್‌ಟಿ ತಂಡಗಳು ಸರಿಯಾಗಿ ಮೇಲ್ವಿಚಾರಣೆ ಮಾಡಬೇಕು. ಚುನಾವಣೆಯಲ್ಲಿ ಯಾವುದೇ ಸಮಸ್ಯೆಯಾಗದಂತೆ ಸುಗಮವಾಗಿ ನಡೆಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚಿಸಿದರು. ಮಾಧ್ಯಮ ಪ್ರಮಾಣೀಕರಣ ಹಾಗೂ ಮೇಲುಸ್ತುವಾರಿ ಸಮಿತಿಯು ದೃಶ್ಯ ಮಾಧ್ಯಮ, ಸಾಮಾಜಿಕ ಜಾಲತಾಣ ಹಾಗೂ ಮುದ್ರಣ…

Read More

ಬೆಂಗಳೂರು: ಬಿಜೆಪಿ ಕಾರ್ಯಕರ್ತ ನವೀನ್ ಎಂಬವರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ ಅವರು ಕಾಂಗ್ರಸ್ ಪಕ್ಷ ಮತ್ತು ಡಿಕೆ ಸಹೋದರರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಂಡೆ ಪುಡಿಪುಡಿಯಾಗುವ ವಾತಾವರಣ ಉದ್ಙವಿಸಿರುವ ಹಿನ್ನೆೆಲೆಯಲ್ಲಿ ಹತಾಶರಾಗಿರುವ ಕಾಂಗ್ರೆಸಿಗರು ಇದೀಗ ಗೂಂಡಾಗಿರಿಗೆ ಮುಂದಾಗಿದ್ದಾರೆ ಎಂದು ವ್ಯಂಗ್ಯಭರಿತ ಆರೋಪ ಮಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಚ್ ಮಾಡಿರುವ ಅವರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಸಂಸದ ಡಿಕೆ ಸುರೇಶ್ ಅವರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚುನಾವಣಾ ಆಯೋಗ ಮತ್ತು ಪೊಲೀಸ್ ಇಲಾಖೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದ್ದಾರೆ. https://ainlivenews.com/big-news-for-government-employees-important-order-for-old-pension/ “ಹಣ, ಹೆಂಡ ಹಾಗೂ ತೋಳ್ಬಲದ ಗೂಂಡಾಗಿರಿ ರಾಜಕೀಯಕ್ಕೆ ಹೆಸರಾಗಿರುವ ಕರ್ನಾಟಕ ಕಾಂಗ್ರೆಸ್ ಬೆಂಗಳೂರು ಗ್ರಾಮಾಂತರದಲ್ಲಿ ಬಂಡೆ ಪುಡಿ ಪುಡಿಯಾಗುವ ವಾತಾವರಣ ಉದ್ಭವಿಸಿರುವ ಹಿನ್ನಲೆಯಲ್ಲಿ ಕಾಂಗ್ರೆಸ್ಸಿಗರು ಹತಾಶರಾಗಿದ್ದಾರೆ. ಇವರಿಗೆ ವಿರುದ್ಧವಾಗಿ ನಿಂತಿರುವ ಮತದಾರರು ಹಾಗೂ ಬಿಜೆಪಿ-ಜೆಡಿಎಸ್…

Read More

ಚಂಡೀಗಢ: ಶಾಲಾ ಬಸ್‌ ಪಲ್ಟಿಯಾಗಿ 6 ಮಕ್ಕಳು ದಾರುಣ ಸಾವಿಗೀಡಾಗಿದ್ದು, 20ಕ್ಕೂ ಮಂದಿ ಗಾಯಗೊಂಡಿರುವ ಘಟನೆ ಹರಿಯಾಣದ (Haryana) ನರ್ನಾಲ್‌ನಲ್ಲಿ ಇಂದು ಬೆಳಗ್ಗೆ (ಏ.11) ನಡೆದಿದೆ. ಜಿ.ಎಲ್ ಪಬ್ಲಿಕ್ ಸ್ಕೂಲ್‌ಗೆ ಸೇರಿದ ಬಸ್ ಕನಿನಾದ ಉನ್ಹಾನಿ ಗ್ರಾಮದ ಬಳಿ ಶಾಲಾ ಬಸ್‌ ಪಲ್ಟಿಯಾಗಿದೆ (School bus Overturns). ಈದ್‌ ಉಲ್‌ ಫ್ರಿತ್‌ (ರಂಜಾನ್‌) ಹೊರತಾಗಿಯೂ ಶಾಲೆಯು ರಜೆ ಘೋಷಿಸಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  https://ainlivenews.com/big-news-for-government-employees-important-order-for-old-pension/ ಪ್ರಾಥಮಿಕ ತನಿಖೆಯ ನಂತರ ಚಾಲಕನ (Bus Driver) ನಿಯಂತ್ರಣ ತಪ್ಪಿ ಬಸ್ ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿರುವುದಾಗಿ ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಜಿಲ್ಲಾ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ. ಅಲ್ಲದೇ ಚಾಲಕ ಮದ್ಯ ಸೇವಿಸಿ ವಾಹನ ಚಲಾಯಿಸಿದ್ದಾನೆ ಎಂದು ಶಂಕಿಸಿದ್ದಾರೆ. ಸದ್ಯ ಗಾಯಗೊಂಡ ವಿದ್ಯಾರ್ಥಿ ಗಳನ್ನು ಸ್ಥಳೀಯ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Read More

ಕೋಲ್ಕತ್ತಾ: ಮಮತಾ ಬ್ಯಾನರ್ಜಿಯವರು ಪ್ರಧಾನಿಯಾಗುವ ಎಲ್ಲಾ ಅರ್ಹತೆಯನ್ನು ಹೊಂದಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಸೌಗತ ರಾಯ್ ಹೇಳಿದ್ದಾರೆ. ಜೂನ್ 4 ರಂದು ಜನಾದೇಶ ಸಿಗಲಿದೆ. ಮಮತಾ ಅವರು 30ಕ್ಕೂ ಹೆಚ್ಚು ಸಂಸದರನ್ನು ಹೊಂದಿರುತ್ತಾರೆ. ಅವರು ಪ್ರಧಾನಿಯಾಗುವ ಎಲ್ಲಾ ಅರ್ಹತೆ ಹೊಂದಿದ್ದಾರೆ. ಇದು 3 ಅವಧಿಗೆ ಮುಖ್ಯಮಂತ್ರಿಯಾಗಿ ಸಾಬೀತಾಗಿದೆ ಎಂದು ಸೌಗತ ರಾಯ್ (Saugata Roy) ಹೇಳಿದರು.  76 ವರ್ಷದ ಸೌಗತ ರಾಯ್ ಅವರು ಟಿಎಂಸಿಯಿಂದ ಮಾತ್ರವಲ್ಲದೆ ಬಂಗಾಳದಿಂದಲೂ ಅತ್ಯಂತ ಹಳೆಯ ಅಭ್ಯರ್ಥಿ. ಮಾಜಿ ಕೇಂದ್ರ ಸಚಿವರಾಗಿರುವ ಅವರು ಲೋಕಸಭೆಗೆ 4ನೇ ಬಾರಿ ಸ್ಪರ್ಧೆ ಮಾಡಿದ್ದಾರೆ. ಇದು ನನ್ನ 4 ನೇ ಬಾರಿಯ ಸ್ಪರ್ಧೆಯಾಗಿದೆ. ನಾನು ಮೊದಲ ಬಾರಿಗೆ 1977 ರಲ್ಲಿ ಸಂಸದನಾದಾಗ, ಸ್ಟಾರ್ ಐಕಾನ್‌ಗಳಾದ ಚರಣ್ ಸಿಂಗ್, ಮೊರಾರ್ಜಿ ದೇಸಾಯಿಯಂತಹ ದಿಗ್ಗಜರು ಇದ್ದರು. https://ainlivenews.com/big-news-for-government-employees-important-order-for-old-pension/ ಈಗ ನನ್ನನ್ನು ಗೂಗಲ್ ಅಂಕಲ್ ಎಂದು ಕರೆಯುತ್ತಾರೆ. ಯುವ ಸಂಸದರು ಏನಾದರೂ ತಿಳಿದುಕೊಳ್ಳಬೇಕೆಂದರೆ ನನ್ನ ಬಳಿ ಬರುತ್ತಾರೆ ಎಂದು ಹೇಳಿದರು. ಬಂಗಾಳದಲ್ಲಿ ಬಿಜೆಪಿ ಗೆಲ್ಲುವ…

Read More

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೆಡಿಎಸ್ ನಡುವೆ ಒಕ್ಕಲಿಗ ಮತಬ್ಯಾಂಕ್ ಗೆ ಕಣ್ಣು ಬಿದ್ದಿದೆ.ಒಕ್ಕಲಿಗ ಮತಗಳ ಡೈವರ್ಟ್ ಗಾಗಿ ಕೈತೆನೆ ನಾಯಕರ ನಡುವೆ ಮಠದ ಪಾಲಿಟಿಕ್ಸ್ ಶುರುವಾಗಿದೆ.ನಿರ್ಮಲಾನಂದ ಶ್ರೀಗಳನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್ ನಾಯಕರು ಕುಮಾರಸ್ವಾಮಿಯವರನ್ನ ಟಾರ್ಗೆಟ್ ಮಾಡಿದ್ದಾರೆ.ಶ್ರೀಗಳ ಫೋನ್ ಟ್ಯಾಪಿಂಗ್ ಹಾಗೂ ಪರ್ಯಾಯ ಮಠದ ವಿಚಾರಗಳನ್ನೆತ್ತಿ ಒಕ್ಕಲಿಗ ಸಮುದಾಯದ ಜನರನ್ನೇ ಡೈವರ್ಟ್ ಮಾಡೋ ಪ್ರಯತ್ನ ನಡೆದಿದೆ..ಇದು ಯಾರಿಗೆ ಪ್ಲಸ್ ಆಗಲಿದೆ..ಯಾರಿಗೆ ಮೈನಸ್ ಆಗಲಿದೆ ..ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.. ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸೀಟು ಗೆಲ್ಲೋಕೆ ನಾನಾ ತಂತ್ರಗಾರಿಗೆ ಶುರುವಾಗಿದೆ..ಕಾಂಗ್ರೆಸ್ ಹಾಗೂ ಮೈತ್ರಿಪಕ್ಷಗಳ ನಡುವೆ ಟಾಕ್ ವಾರ್ ಪ್ರಾರಂಭವಾಗಿದೆ..ಅದ್ರಲ್ಲೂ ಒಕ್ಕಲಿಗ ಸಮುದಾಯದ ಮತಗಳ ಮೇಲೆಯೇ ಎರಡು ಕಡೆಯವರ ಕಣ್ಣು ಬಿದ್ದಿದೆ..ಜೆಡಿಎಸ್ ಕಡೆ ಇದ್ದ ಸಾಂಪ್ರದಾಯಿಕ ಮತಗಳನ್ನ ಈ ಭಾರಿ ಡೈವರ್ಟ್ ಮಾಡುವ ಪ್ರಯತ್ನ ನಡೆದಿದೆ…ಹಿಂದೆ ದೇವೇಗೌಡರು ಮಾಡಿದ್ದ ಒಕ್ಕಲಿಗ ಸಮುದಾಯದ ಪರ್ಯಾಯ ಮಠವನ್ನೇ ಮುಂದಿಟ್ಟುಕೊಂಡು ದಾಳ ಉರುಳಿಸಿದ್ದಾರೆ..ಇದ್ರ ಜೊತೆಗೆ ಮೈತ್ರಿ ಸರ್ಕಾರದ ವೇಳೆ ನಿರ್ಮಲಾನಂದ ಶ್ರೀಗಳ ಫೋನ್ ಟ್ಯಾಪಿಂಗ್ ಮಾಡಿಸಿದ್ರು ಎಂಬ…

Read More

ಹುಬ್ಬಳ್ಳಿ : ಯಾರದಾದ್ರೂ ಮನೆಯಲ್ಲಿ ಮಗು ಹುಟ್ಟಿದ್ರೂ, ಎರಡು ಸಾವಿರ ರೂಪಾಯಿಯಿಂದ ಹುಟ್ಟಿದ್ದು ಅಂತಾ ಕಾಂಗ್ರೆಸ್‌ನವರು ಹೇಳ್ತಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ವ್ಯಂಗ್ಯವಾಡಿದ್ದಾರೆ. ಬಡ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಗೃಹಲಕ್ಷ್ಮೀ ಯೋಜನೆಯ ಹಣ ಸಹಾಯ ಮಾಡುತ್ತಿದೆ ಎಂಬ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರ ಎಕ್ಸ್‌ ಪೋಸ್ಟ್‌ಗೆ ತಿರುಗೇಟು ನೀಡಿದ ಪ್ರಹ್ಲಾದ್‌ ಜೋಶಿ ವ್ಯಂಗ್ಯವಾಡಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ. ಇನ್ನು ಅವರ ಪುತ್ರನ ಕಾಂಗ್ರೆಸ್ ಸೇರ್ಪಡೆ ಅಚ್ಚರಿಯಲ್ಲ, ದಿಂಗಾಲೇಶ್ವರ ಸ್ವಾಮೀಜಿ ವಿರುದ್ಧ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ದಿಂಗಾಲೇಶ್ವರರ ಮಾತುಗಳು ನನಗೆ ಆಶಿರ್ವಾದ ಎಂದು ಹೇಳಿದರು. https://ainlivenews.com/big-news-for-government-employees-important-order-for-old-pension/ ವಿನಯ್ ಕುಲಕರ್ಣಿ ಅವರಿಗೆ ಧಾರವಾಡ ಪ್ರವೇಶ ನಿರಾಕರಣೆ ಮಾಡಿದ್ದು ಸುಪ್ರೀಂ ಕೋರ್ಟ್, ವಿವಿಧ ಹಂತದ ನ್ಯಾಯಾಲಯದಲ್ಲಿ ಅವರ ಅರ್ಜಿ ವಜಾಗೊಂಡಿದೆ. ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ. ನಾನು ಯಾವುದೇ ಲಿಂಗಾಯತಗೆ ಅನ್ಯಾಯ ಮಾಡಿಲ್ಲ. ಧಾರವಾಡದ ಕ್ಷೇತ್ರದಲ್ಲಿ ನಾಲ್ಕು ಜನ ಲಿಂಗಾಯತ ಶಾಸಕರುಗಳಿದ್ದಾರೆ. ನಾವು ಹಿಂದುತ್ವದ ಮೇಲೆ…

Read More

ಐಪಿಎಲ್ 2024 ರ 25 ನೇ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸುತ್ತಿದೆ. ಟಾಸ್ ಗೆದ್ದ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಇನ್ನೂ ಈ ಪಂದ್ಯದಲ್ಲಿ ಭಾರತ ತಂಡದ ಇಬ್ಬರು ಪ್ರಮುಖ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ನಡುವೆ ಕುತೂಹಲಕಾರಿ ಕದನ ನಡೆಯಲಿದೆ. ಅದೇ ವೇಳೆ ನಾಯಕತ್ವದ ವಿಚಾರದಲ್ಲಿ ನಿರಂತರವಾಗಿ ಟೀಕೆ ಎದುರಿಸುತ್ತಿರುವ ಹಾರ್ದಿಕ್ ಪಾಂಡ್ಯ ಹಾಗೂ ಫಾಫ್ ಡುಪ್ಲೆಸಿಸ್ ಅವರಿಗೂ ಕಠಿಣ ಪರೀಕ್ಷೆ ಎದುರಾಗಿದೆ. https://ainlivenews.com/big-news-for-government-employees-important-order-for-old-pension/ ಐಪಿಎಲ್‌ನಲ್ಲಿ ಇಲ್ಲಿಯವರೆಗೆ ಎರಡು ತಂಡಗಳ ನಡುವೆ 32 ಪಂದ್ಯಗಳು ನಡೆದಿವೆ, ಅದರಲ್ಲಿ ಮುಂಬೈ 18 ಪಂದ್ಯಗಳನ್ನು ಗೆದ್ದಿದ್ದರೆ ಬೆಂಗಳೂರು 14 ಪಂದ್ಯಗಳನ್ನು ಗೆದ್ದಿದೆ. ವಾಂಖೆಡೆ ಸ್ಟೇಡಿಯಂನಲ್ಲಿ ಇದುವರೆಗೆ ನಡೆದ ಪಂದ್ಯಗಳ ಬಗ್ಗೆ ಹೇಳುವುದಾದರೆ, ಉಭಯ ತಂಡಗಳ ನಡುವೆ ಇದುವರೆಗೆ 10 ಪಂದ್ಯಗಳು ನಡೆದಿದ್ದು, ಅದರಲ್ಲಿ 7 ಪಂದ್ಯಗಳನ್ನು ಮುಂಬೈ ಇಂಡಿಯನ್ಸ್ ಮತ್ತು…

Read More

ಬೆಂಗಳೂರು: ಜಾತಿ ಹೆಸರೇಳಿ ಮತದಾರರ ಮೇಲೆ ಪ್ರಭಾವ ಹಾಗೂ ದುರ್ಬಳಕೆ ಆರೋಪ ಹೊರಿಸಿ ಡಿಸಿಎಂ ಡಿ.ಕೆ.ಶಿವಕುಮಾರ್‌ (D.K.Shivakumar) ವಿರುದ್ಧ ಚುನಾವಣಾಧಿಕಾರಿಗಳಿಗೆ ಬಿಜೆಪಿ (BJP) ದೂರು ನೀಡಿದೆ. ಮಾಜಿ ಡಿಸಿಎಂ ಅಶ್ವಥ್‌ ನಾರಾಯಣ್‌ (Ashwath Narayan) ನೇತೃತ್ವದಲ್ಲಿ ರಾಜ್ಯದ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಲಾಗಿದೆ. ಇದೇ ವೇಳೆ ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಡ್ ಹಂಚಿಕೆಯ ಬಗ್ಗೆಯೂ ದೂರು ನೀಡಲಾಗಿದೆ. https://ainlivenews.com/big-news-for-government-employees-important-order-for-old-pension/ ಬಿಜೆಪಿ ಹಾಗೂ ಜೆಡಿಎಸ್‌ ನಾಯಕರು ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಾದ ಪಡೆದುಕೊಂಡಿದ್ದರು. ಮೈತ್ರಿ ನಾಯಕರ ಭೇಟಿಗೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಆಕ್ಷೇಪ ವ್ಯಕ್ತಪಡಿಸಿದ್ದರು. ಒಕ್ಕಲಿಗರ ಸರ್ಕಾರವನ್ನು ಬಿಜೆಪಿಯವರೇ ಬೀಳಿಸಿದ್ದು, ಅದನ್ನು ಕೇಳುವ ಶಕ್ತಿ ಸ್ವಾಮೀಜಿ ಅವರಿಗೆ ಇದೆಯೋ ಇಲ್ವೊ ನನಗೆ ಗೊತ್ತಿಲ್ಲ ಎಂದು ಡಿಕೆಶಿ ಹೇಳಿಕೆ ನೀಡಿದ್ದರು. ಡಿಸಿಎಂ ಹೇಳಿಕೆಗಳಿಗೆ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ ಚುನಾವಣಾಧಿಕಾರಿಗಳಿಗೆ ದೂರು ನೀಡಿದೆ. 

Read More

ಬೆಂಗಳೂರು: ಪತಂಜಲಿ ಔಷಧದ ಗುಣಮಟ್ಟದ ಪರೀಕ್ಷೆ ಮಾಡಲು ಸೂಚನೆ ನೀಡಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು,ಪತಂಜಲಿ ಸಂಸ್ಥೆ ಜನರಿಗೆ ಪುರಾವೆ ಇಲ್ಲದೆಯೇ ದಾರಿತಪ್ಪಿಸುತ್ತಿದೆ. ರೋಗ ಗುಣಪಡಿಸುವ ಲಕ್ಷಣ ಇಲ್ಲದಿದ್ದರೂ ಆಯುರ್ವೇದ ಎಂದು ಮಾರಾಟ ಮಾಡುತ್ತಿದೆ ಎಂದರು. ಪತಂಜಲಿ ಸಂಸ್ಥೆಗೆ ಸುಪ್ರೀಂ ಕೋರ್ಟ್‌ ತರಾಟ ವಿಚಾರವಾಗಿ ಮಾತನಾಡಿ, ಜನರಿಗೆ ದಾರಿ ತಪ್ಪಿಸಿ ಕಂಪನಿಗೆ ಲಾಭ ಮಾಡಿಕೊಳ್ಳಲು ಸುಳ್ಳುಗಳನ್ನು ಹೇಳುತ್ತಿದ್ದರು. ಆಧಾರ ರಹಿತ ಮಾಹಿತಿಗಳನ್ನು ಯಾವುದೇ ಸಂಶೋಧನೆ ಇಲ್ಲದೆಯೇ ಪ್ರಚಾರ ಮಾಡುತ್ತಿದ್ದರು. ಈ ನಿಟ್ಟಿನಲ್ಲಿ ಪತಂಜಲಿ ಉತ್ಪನ್ನಗಳನ್ನು ಪರೀಕ್ಷೆ ನಡೆಸಲು ನಮ್ಮಲ್ಲೂ ಡ್ರಗ್ಸ್ ಕಂಟ್ರೋಲ್‌ ಹಾಗೂ ಆಯುಷ್ ಇಲಾಖೆಗೆ ಸೂಚನೆ ನೀಡಿದ್ದೇನೆ ಎಂದರು. https://ainlivenews.com/big-news-for-government-employees-important-order-for-old-pension/ ಪತಂಜಲಿ ಔಷಧದ ಗುಣಮಟ್ಟದ ಪರೀಕ್ಷೆ ಕೂಡ ಮಾಡುವುದಕ್ಕೆ ಸೂಚನೆ ನೀಡಿದ್ದೇನೆ. ಔಷಧಕ್ಕೆ ಬೇರೆ ಏನಾದ್ರೂ ಬೆರೆಸಲಾಗುತ್ತದೆಯೆ ಎಂಬ ಪರಿಶೀಲನೆ ಮಾಡುತ್ತೇವೆ. ಇದೇ ತರಹ ಕ್ಲೇಮ್ ಮಾಡುವ ಉತ್ಪನ್ನಗಳ ಬಗ್ಗೆಯೂ ಪರಿಶೀಲನೆ ಮಾಡಬೇಕಿದೆ. ಔಷಧಗಳ ಗುಣಮಟ್ಟ ಚೆಕಪ್ ಮಾಡುವುದಕ್ಕೆ ಹೇಳಿದ್ದೇನೆ. ವರದಿ ಬಂದ ಬಳಿಕ…

Read More