Author: AIN Author

ಬೆಂಗಳೂರು:- ಚುನಾವಣೆ ಹೊತ್ತಲ್ಲೇ ಕಾಂಗ್ರೆಸ್ ಗುರುವಾರ ರಾತ್ರಿ ಮಿಡ್ ನೈಟ್ ಆಪರೇಷನ್ ಮೂಲಕ ಬೆಳ್ಳಂಬೆಳಗ್ಗೆ ದಳಪತಿಗಳಿಗೆ ಶಾಕ್ ನೀಡಿದೆ. ಹೌದು. ತಡರಾತ್ರಿ 11.30ರ ಸುಮಾರಿಗೆ ನಗರದ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆದಿದೆ. ಅಕ್ಕೂರ್ ದೊಡ್ಡಿ ಶಿವಣ್ಣ ಸೇರಿ ಚನ್ನಪಟ್ಟಣದ 300ಕ್ಕೂ ಹೆಚ್ಚು ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್‍ಗೆ ಸೇರ್ಪಡೆಗೊಂಡಿದ್ದಾರೆ. ಈ ವೇಳೆ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ ಉಪಸ್ಥಿತರಿದ್ದರು. ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರೇ ಕಾರ್ಯಕರ್ತರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ದೋಸ್ತಿ ನಾಯಕರಿಗೆ ಶಾಕ್ ಕೊಟ್ಟಿದ್ದಾರೆ. https://ainlivenews.com/accused-of-theft-of-documents-in-various-scams/ ಬಳಿಕ ಮಾತನಾಡಿದ ಡಿಕೆಶಿ, ಚನ್ನಪಟ್ಟಣ ಭಾಗದ 300 ಕ್ಕೂ ಹೆಚ್ಚು ಜೆಡಿಎಸ್ ಕಾರ್ಯಕರ್ತರು ಇಂದು ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ. ಈಗಾಗಲೇ ಮಾಗಡಿ, ರಾಮನಗರ, ಚನ್ನಪಟ್ಟಣ ಭಾಗದ 4 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಸೇರಿಕೊಂಡಿದ್ದಾರೆ. ಬಹುತೇಕ ಕುಮಾರಸ್ವಾಮಿ ಅವರ ಆಪ್ತರೇ ಕಾಂಗ್ರೆಸ್ ಮೆಚ್ಚಿ ಬರುತ್ತಿದ್ದಾರೆ ಎಂದರು.

Read More

ನವದೆಹಲಿ:- ವಿವಿಧ ಹಗರಣಗಳ ದಾಖಲೆಗಳ ಕಳವು ಆರೋಪಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯ ಕಾರ್ಯದರ್ಶಿ ವಿರುದ್ಧ FIR ದಾಖಲಾಗಿದೆ. ದೆಹಲಿ ಮುಖ್ಯ ಕಾರ್ಯದರ್ಶಿ (Delhi Chief Secretary) ನರೇಶ್ ಕುಮಾರ್ ಮತ್ತು ಸಹಾಯಕ ಅಧಿಕಾರಿ ವೈವಿವಿಜೆ ರಾಜಶೇಖರ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಉತ್ತರಾಖಂಡದ ಅಲ್ಮೋರಾ ಪಟ್ಟಣದ ನ್ಯಾಯಾಲಯದ ಆದೇಶದ ಮೇರೆಗೆ FIR ದಾಖಲಾಗಿದೆ. https://ainlivenews.com/in-more-than-25-districts-of-karnataka-from-today-a-heavy-rain-until-18/ ಇದೇ ಮಾರ್ಚ್‌ 2ರಂದು ನ್ಯಾಯಾಲಯವು ಅಧಿಕಾರಿಗಳ ವಿರುದ್ಧ ಪ್ಲೆಸೆಂಟ್ ವ್ಯಾಲಿ ಫೌಂಡೇಶನ್ ಎನ್‌ಜಿಒ ಸಂಸ್ಥೆ ನೀಡಿದ್ದ ದೂರನ್ನು ಸ್ವೀಕರಿಸಿತ್ತು. ಕೋರ್ಟ್‌ ದೆಹಲಿ ಸರ್ಕಾರದ ಕಾರ್ಯದರ್ಶಿಗಳ ವಿರುದ್ಧ ಕೇಸ್‌ ದಾಖಲಿಸಿ ತನಿಖೆ ನಡೆಸುವಂತೆ ಕಂದಾಯ ಪೊಲೀಸರಿಗೆ ಸೂಚಿಸಿತ್ತು. ಕೋರ್ಟ್‌ ಆದೇಶದ ಮೇರೆಗೆ ಪೊಲೀಸರು ಐಪಿಸಿ ಸೆಕ್ಷನ್ 392 (ದರೋಡೆ), 447 (ಕ್ರಿಮಿನಲ್ ಅತಿಕ್ರಮಣ), 120-ಬಿ (ಕ್ರಿಮಿನಲ್ ಪಿತೂರಿ), 504 (ಉದ್ದೇಶಪೂರ್ವಕ ಅವಮಾನ) ಮತ್ತು 506 (ಕ್ರಿಮಿನಲ್ ಬೆದರಿಕೆ) ಮತ್ತು ಎಸ್‌ಸಿ-ಎಸ್ಟಿ ಕಾಯ್ದೆ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಕಳೆದ ಫೆಬ್ರವರಿ 14 ರಂದು ದಡಕಡ ಗ್ರಾಮದಲ್ಲಿ ಎನ್‌ಜಿಒ ನಡೆಸುತ್ತಿರುವ ಶಾಲೆಗೆ…

Read More

ಬೆಂಗಳೂರು:- ಇಂದಿನಿಂದ ಏಪ್ರಿಲ್​ 18ರವರೆಗೆ ಕರ್ನಾಟಕದ 25ಕ್ಕೂ ಹೆಚ್ಚಿನ ಜಿಲ್ಲೆಗಳಲ್ಲಿ ಮಳೆ ಆಗಲಿದೆ ಎಂದು ಭಾರತೀಯ ಹವಮಾನ ಇಲಾಖೆ ಮಾಹಿತಿ ನೀಡಿದೆ. ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಆದರೆ ಇದೀಗ ವಿಪರೀತ ಸೆಕೆ ಮುಂದುವರೆದಿದೆ. ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಹಾಸನ, , ಕೊಡಗು, ಮೈಸೂರು, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಮಳೆಯಾಗಲಿದೆ. https://ainlivenews.com/15787000-of-undocumented-rs-valuable-gold-jewelry-confiscated/ ಕಲಬುರಗಿಯಲ್ಲಿ 40.1 ಡಿಗ್ರಿ ಸೆಲ್ಸಿಯಸ್​ ಅತ್ಯಂತ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಸಂಕೇಶ್ವರ, ಹುಕ್ಕೇರಿ, ಯಡವಾಡದಲ್ಲಿ ಮಳೆಯಾಗಿದೆ. ಮುಂದಿನ 2 ದಿನಗಳಲ್ಲಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಸಿ ವಾತಾವರಣವಿರಲಿದೆ. ಮುಂದಿನ ಎರಡು ದಿನ ರಾಜ್ಯದ ವಿವಿಧೆಡೆ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆ ಇದೆ ಮುಂದಿನ 48 ಗಂಟೆಗಳಲ್ಲಿ ಬೆಂಗಳೂರಿನಲ್ಲಿ ಕೂಡ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆ ಇದೆ. ಎಚ್​ಎಎಲ್​ನಲ್ಲಿ 35.2 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 20.6 ಡಿಗ್ರಿ…

Read More

ಚಾಮರಾಜನಗರ: ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ಸಂಬಂಧ ಚಾಮರಾಜನಗರ ಜಿಲ್ಲೆಯ ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸತ್ತೇಗಾಲ ಚೆಕ್‌ ಪೋಸ್ಟ್ ನಲ್ಲಿ ದಾಖಲೆ ಇಲ್ಲದೆ ಸಾಗಾಣಿಕೆ ಮಾಡುತ್ತಿದ್ದ 1,57,87,000 ರೂ. ಮೌಲ್ಯದ 2 ಕೆ.ಜಿ. 170 ಗ್ರಾಂ ಚಿನ್ನಾಭರಣಗಳನ್ನು ಎಫ್.ಎಸ್.ಟಿ ತಂಡದ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. https://ainlivenews.com/rcb-fans-angry-against-umpiring/ ಚಾಮರಾಜನಗರ ಲೋಕಸಭಾ ವ್ಯಾಪ್ತಿಯ ಸತ್ತೇಗಾಲ ಚೆಕ್‌ ಪೋಸ್ಟ್ ನಲ್ಲಿ ನಿನ್ನೆ ಬೆಂಗಳೂರಿನಿಂದ ಕೊಳ್ಳೆಗಾಲಕ್ಕೆ ಬರುತ್ತಿದ್ದ ಕೆಎ-17 ಜಡ್-9447 ಸಂಖ್ಯೆಯ ಹುಂಡೈ ವೆನ್ಯೂ (ಕಾರು) ವಾಹನದಲ್ಲಿ ದಾಖಲೆಗಳಿಲ್ಲದೇ ಸಾಗಾಣಿಕೆ ಮಾಡುತ್ತಿದ್ದ ಕಾರ್ತಿಕ್ ಮತ್ತು ಚಿರಾಂತ್ ಎಂಬುವವರಿಂದ ಚಿನ್ನಾಭರಣಗಳನ್ನು ಎಫ್.ಎಸ್.ಟಿ ತಂಡದ ಅಧಿಕಾರಿ ಎಂ. ರವಿಶಂಕರ್ ಅವರು ಜಪ್ತಿ ಮಾಡಿದ್ದಾರೆ. ಚಿನ್ನಾಭರಣ ಸಾಗಣೆ ಮಾಡುತ್ತಿದ್ದ ಬಗ್ಗೆ ವಿಚಾರಣೆ ಮಾಡಿದ ವೇಳೆ ಸ್ಪಷ್ಟ, ಸಮಂಜಸ ಉತ್ತರ ದೊರೆಯದ ಹಿನ್ನೆಲೆಯಲ್ಲಿ ಚಿನ್ನವನ್ನು ವಶಕ್ಕೆ ಪಡೆದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆದಾಯ ತೆರಿಗೆ ಇಲಾಖೆಯ ಅನ್ವೇಷಣೆ ವಿಭಾಗದ ಸಹಾಯಕ ನಿರ್ದೇಶಕರಾದ ಆರ್. ರಂಗನಾಥ್, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಾದ ಜಿ.…

Read More

ಗುರುವಾರ ನಡೆದ ಮುಂಬೈ ವಿರುದ್ಧದ ಪಂದ್ಯದಲ್ಲಿ ಅಂಪೈರಿಂಗ್ ವಿರುದ್ಧ ಆರ್‌ಸಿಬಿ ಫ್ಯಾನ್ಸ್ ರೊಚ್ಚಿಗೆದ್ದಿದ್ದಾರೆ. ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ಅಂಪೈರ್ ಗಳು ಮಾಡಿದ ಎಡವಟ್ಟುಗಳ ವಿರುದ್ಧ ಆರ್‌ಸಿಬಿ ಅಭಿಮಾನಿಗಳು ಅಸಮಾಧಾನಗೊಂಡಿದ್ದಾರೆ. ಆರ್‌ಸಿಬಿ ಬ್ಯಾಟಿಂಗ್ ಮಾಡುವಾಗ ಮೈದಾನದಲ್ಲಿ ಕೆಲವು ಅಂಪೈರಿಂಗ್ ತೀರ್ಮಾನಗಳು ವಿವಾದಕ್ಕೆ ಕಾರಣವಾಗಿದೆ. ಮೊದಲ ಸಂದರ್ಭದಲ್ಲಿ ಬೌಂಡರಿ ಲೈನ್‌ನಲ್ಲಿ ಫೀಲ್ಡಿಂಗ್ ಮಾಡುವಾಗ ಮುಂಬೈ ಫೀಲ್ಡರ್ ಚೆಂಡನ್ನು ತಡೆಯುವಾಗ ಬೌಂಡರಿಗೆ ಅವರ ಕೈ ತಾಕಿದ್ದನ್ನು ನೋಡಿಯೂ ಮೂರನೇ ಅಂಪೈರ್ ಅದನ್ನು ಬೌಂಡರಿ ನೀಡದೆ ಕೇವಲ ಎರಡು ರನ್ ನೀಡಿದರು. ಆ ವಿಡಿಯೋವನ್ನು ಮತ್ತೊಮ್ಮೆ ನೋಡಿದಾಗ, ಚೆಂಡು ಫೀಲ್ಡರ್‍‌ಗೆ ತಾಕಿದ್ದಾಗ ಅವರ ಕೈ ಬೌಂಡರಿ ಗೆರೆಯನ್ನು ತಾಕಿದ್ದು ಸ್ಪಷ್ಟವಾಗಿ ಕಂಡು ಬಂತು. ಕಾಮೆಂಟೇಟರ್ ಕೂಡ ಅದು ಬೌಂಡರಿ ಎಂದು ಹೇಳಿದರು. ಅಂಪೈರ್ ಮಾಡಿದ ಎಡವಟ್ಟಿನಿಂದ ಆರ್ ಸಿಬಿಗೆ ಎರಡು ರನ್‌ ತಪ್ಪಿಹೋಯಿತು. https://ainlivenews.com/change-in-state-politics-is-sure-in-another-year/ ಮತ್ತೊಂದು ಘಟನೆಯಲ್ಲಿ ಮುಂಬೈ ಇಂಡಿಯನ್ಸ್ ಬಳಿ ರಿವ್ಯೂ ಇರಲಿಲ್ಲ. 17ನೇ ಓವರ್ ನಲ್ಲಿ ಬುಮ್ರಾ ಬೌಲಿಂಗ್ ವೇಳೆ…

Read More

ಹಾಸನ :- ಇನ್ನೊಂದು ವರ್ಷದಲ್ಲಿ ರಾಜ್ಯ ರಾಜಕೀಯದಲ್ಲಿ ಬದಲಾವಣೆ ಖಚಿತ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ದೇವರ ಇಚ್ಛೆಯಿಂದ ನಿಮ್ಮ ಸೇವೆ ಮಾಡಲು ನನಗೆ ಇನ್ನೊಂದು ಅವಕಾಶ ಸಿಗುತ್ತದೆ. ನಾನು ಮೂರು ಬಾರಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೇನೆ. ನಿಮ್ಮ ಆಶೀರ್ವಾದದಿಂದಲೇ ನನಗೆ ಮೂರನೇ ಜನ್ಮ ಸಿಕ್ಕಿದೆ. ಈ ಜನ್ಮದಲ್ಲಿ ಇನ್ನೊಂದು ವರ್ಷದೊಳಗೆ ನಿಮ್ಮ ಸೇವೆಗೆ ಅವಕಾಶ ಸಿಗಲಿದೆ ಎಂದಿದ್ದಾರೆ. ಕುಮಾರಸ್ವಾಮಿ ಮತ್ತೆ ಸಿಎಂ ಆಗುವ ಬಗ್ಗೆ ಮಾರ್ಮಿಕವಾಗಿ ಈ ರೀತಿ ಸುಳಿವು ನೀಡಿದ್ದಾರೆಯೇ ಎಂಬ ಗುಸುಗುಸು ಇದೀಗ ಆರಂಭವಾಗಿದೆ. https://ainlivenews.com/miss-fire-while-playing-with-gun-7-year-old-boy-shot-dead/ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದಕ್ಕೆ ನಮಗೆ ಹೊಟ್ಟೆಕಿಚ್ಚು ಇಲ್ಲ. ಆದರೆ, ಈಗಿನ ಬೆಳವಣಿಗೆಗಳನ್ನು ನೋಡಿದರೆ ರಾಜ್ಯ ಎಲ್ಲಿಗೆ ಹೋಗುತ್ತದೋ ಎಂಬ ಆತಂಕ ಕಾಡುತ್ತಿದೆ. ಉಚಿತ ಗ್ಯಾರಂಟಿ ಯೋಜನೆಗಳಿಗೆ ಕಾಂಗ್ರೆಸ್ ಪಕ್ಷವೇನೂ ಅದರ ಹಣ ಖರ್ಚು ಮಾಡುತ್ತಿಲ್ಲ. ಬದಲಾಗಿ ಜನರ ಹಣದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. 1.05 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಈ ಪೈಕಿ 58,000 ಕೋಟಿ…

Read More

ಬೆಂಗಳೂರು:- ತಮಿಳುನಾಡಿನ ಕಿಲ್ಪೆನ್ನತುರ್ ಠಾಣಾ ವ್ಯಾಪ್ತಿಯ ತಿರುವಣ್ಣಾಮಲೈ- ದಿಂಡಿವನಂ ಹೈವೇಯಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಐವರು ಪೊಲೀಸ್‌ ಅಧಿಕಾರಿಗಳು ಹೋಗುತ್ತಿದ್ದ ಜೀಪ್‌ ಮತ್ತು ಬಸ್‌ ನಡುವೆ ಅಪಘಾತ ಸಂಭವಿಸಿದೆ. ಕರ್ನಾಟಕದ ಅಧಿಕಾರಿ ಸೇರಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉಳಿದ ಮೂವರಿಗೆ ಗಂಭೀರ ಗಾಯಗಳಾಗಿವೆ. ಕರ್ನಾಟಕದಿಂದ ಎಲೆಕ್ಷನ್ ಡ್ಯೂಟಿಗೆ ಹೋಗಿದ್ದ ಪೊಲೀಸ್ ಅಧಿಕಾರಿ, KSRP ಅಸಿಸ್ಟೆಂಟ್ ಕಮಾಂಡೆಂಟ್ ಪ್ರಭಾಕರ್ ಹಾಗೂ ತಮಿಳುನಾಡು ಕಾನ್ಸ್‌ಟೇಬಲ್ ದಿನೇಶ್ ಮೃತಪಟ್ಟಿದ್ದಾರೆ. https://ainlivenews.com/miss-fire-while-playing-with-gun-7-year-old-boy-shot-dead/ ಸಂಜೆ ನಾಲ್ಕು ಗಂಟೆ ಸುಮಾರಿಗೆ ತಿರುವಣ್ಣಾಮಲೈ- ದಿಂಡಿವನಂ ಹೈವೇಯಲ್ಲಿ ಅಪಘಾತ ಸಂಭವಿಸಿದ್ದು, ತೀವ್ರವಾಗಿ ಗಾಯಗೊಂಡಿದ್ದ ಇವರನ್ನು ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡುವಷ್ಟರಲ್ಲಿ ಕೊನೆಯುಸಿರೆಳೆದಿದ್ದಾರೆ. ಸದ್ಯ ಇಬ್ಬರ ಮೃತದೇಹಗಳನ್ನು ತಮಿಳುನಾಡಿನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ

Read More

ಮುಂಬೈ: ವ್ಯಕ್ತಿಯೊಬ್ಬನಿಗೆ ಪ್ರತಿ ತಿಂಗಳು 10,000 ರೂ. ಜೀವನಾಂಶ ನೀಡುವಂತೆ ಆತನ ಮಾಜಿ ಪತ್ನಿಗೆ ಬಾಂಬೆ ಹೈಕೋರ್ಟ್ (Bombay High Court) ನಿರ್ದೇಶನ ನೀಡಿದೆ. ಮಹಿಳೆಯ ಮಾಜಿ ಪತಿಯು ಅನಾರೋಗ್ಯದ ಕಾರಣದಿಂದ ದುಡಿಯಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ನ್ಯಾಯಾಲಯ ಗಮನಿಸಿದೆ. ಇದರಿಂದಾಗಿ ಆದಾಯದ ಮೂಲ ಹೊಂದಿರುವ ಮಹಿಳೆ ಜೀವನಾಂಶವನ್ನು ಪಾವತಿಸಬೇಕು. ಜೀವನಾಂಶ ಪಾವತಿಸುವ ಹೊಣೆ ಮಹಿಳೆಯದ್ದಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಹಿಂದೂ ವಿವಾಹ ಕಾಯಿದೆಯ (Hindu Marriage Act) ಸೆಕ್ಷನ್ 24ರ ನಿಬಂಧನೆಗಳು `ಸಂಗಾತಿ’ ಪದವನ್ನು ಸೂಚಿಸುತ್ತದೆ. ಇದು ತನ್ನನ್ನು ಕಾಪಾಡಿಕೊಳ್ಳಲು ಸಾಧ್ಯವಾಗದ ಪತಿ ಅಥವಾ ಪತ್ನಿಯನ್ನು ಉಲ್ಲೇಖಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ. ಅನಾರೋಗ್ಯದಿಂದಾಗಿ ತಾನು ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಬ್ಯಾಂಕ್ ಮ್ಯಾನೇಜರ್ ಆಗಿ ಉದ್ಯೋಗದಲ್ಲಿದ್ದ ತನ್ನ ಮಾಜಿ ಪತ್ನಿಯಿಂದ ಜೀವನಾಂಶಕ್ಕೆ ಅರ್ಹನಾಗಿದ್ದೇನೆ ಎಂದು ವ್ಯಕ್ತಿ ಕೌಟುಂಬಿಕ ನ್ಯಾಯಾಲಯದ ( Family Court) ಮೊರೆ ಹೋಗಿದ್ದ. https://ainlivenews.com/big-news-for-government-employees-important-order-for-old-pension/ ಇದರಂತೆ ಮಾರ್ಚ್ 2020 ರಲ್ಲಿ ಮಾಸಿಕ 10,000 ರೂ. ಹಣವನ್ನು ಜೀವನಾಂಶವಾಗಿ ನೀಡಬೇಕು ಎಂದು…

Read More

ಚಿಕ್ಕಮಗಳೂರು:- ತಾಲೂಕಿನ ಮಲ್ಲೇನಹಳ್ಳಿಯಲ್ಲಿ ಆಟವಾಡುವಾಗ ಏರ್​ ಗನ್ ಜೊತೆ ಆಟವಾಡುವಾಗ ಮಿಸ್ ಫೈರ್ ಆಗಿ ಏಳು ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಜರುಗಿದೆ. ಏರ್‌ ಗನ್‌ ಇಟ್ಟುಕೊಂಡು ಆಟ ಆಡುವಾಗ ಬಾಲಕ ಟ್ರಿಗರ್‌ ಒತ್ತಿದ್ದಾನೆ. ಗನ್ ಮಿಸ್‌ ಫೈರ್‌ ಆಗಿ ಗುಂಡು ಬಾಲಕನ ದೇಹದೊಳಗೆ ಹೊಕ್ಕಿದೆ. 7 ವರ್ಷದ ಬಾಲಕ ವಿಷ್ಣು ಮೃತ ದುರ್ದೈವಿ. https://ainlivenews.com/a-crushing-defeat-against-mumbai-where-rcb-have-stumbled/ ಕಾಫಿ ತೋಟದಲ್ಲಿ ಮಂಗಗಳನ್ನ ಓಡಿಸಲು ಬಳಸುವ ಏರ್ ಗನ್ ಜೊತೆ ವಿಷ್ಣು ಮನೆ ಮುಂದೆ ಆಟವಾಡುತ್ತಿದ್ದ. ಈ ವೇಳೆ ವಿಷ್ಣು ಅಚಾನಕ್ ಆಗಿ ಟ್ರಿಗರ್​ ಒತ್ತಿದ್ದಾನೆ. ಪರಿಣಾಮ ಏರ್​ ಗನ್ ಫೈರ್ ಆಗಿದ್ದು, ನೇರವಾಗಿ ​ಗನ್​ನೊಳಗಿದ್ದ ಬಾಲ್ಸ್ ವಿಷ್ಣುವಿನ ಹೃದಯ ಭಾಗಕ್ಕೆ ಹೊಕ್ಕಿದೆ. ಪೋಷಕರು ಮನೆಯಲ್ಲಿ ಇದ್ದಾಗಲೇ ಈ ದುರ್ಘಟನೆ ಸಂಭವಿಸಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

Read More

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಮುಂಬೈ ಇಂಡಿಯನ್ಸ್ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಆಡಿರುವ 6 ಪಂದ್ಯದಲ್ಲಿ ಬೆಂಗಳೂರು ತಂಡವು 5ರಲ್ಲಿ ಸೋತು ಕೇವಲ 1 ಪಂದ್ಯವನ್ನು ಮಾತ್ರ ಗೆದ್ದಿದೆ, ಐಪಿಎಲ್ 2024ರ 25ನೇ ಪಂದ್ಯ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB vs MI) ನಡುವೆ ನಡೆದ ಪಂದ್ಯದಲ್ಲಿ ಮೊದಲ ಬ್ಯಾಟಿಂಗ್​ ಮಾಡಿದ ಆರ್‌ಸಿಬಿ 20 ಓವರ್​ಗೆ 9 ವಿಕೆಟ್ ನಷ್ಟಕ್ಕೆ 196 ರನ್​ ಗಳಿಸಿತು. ಈ ಟಾರ್ಗೆಟ್ ಬೆನ್ನಟ್ಟಿದ ಮುಂಬೈ ಇಂಡಯನ್ಸ್ ತಂಡವು 15.3 ಓವರ್​ಗೆ 3 ವಿಕೆಟ್ ನಷ್ಟಕ್ಕೆ 199 ರನ್​ ಗಳಿಸುವ ಮೂಲಕ 7 ವಿಕೆಟ್​ ಗಳ ಜಯ ದಾಖಲಿಸಿತು. https://ainlivenews.com/rcb-lost-by-7-wickets-against-mumbai/ ಈ ಮೂಲಕ ಮುಂಬೈ ಇಂಡಿಯನ್ಸ್ ತಂಡವು ಸತತ 2ನೇ ಗೆಲುವು ದಾಖಲಿಸಿದೆ. ಆದರೆ ಆರ್​​ಸಿಬಿ ತಂಡವು 5ನೇ ಪಂದ್ಯದಲ್ಲಿ ಸೋಲನ್ನಪ್ಪಿದೆ. ಈ ಮೂಲಕ ಆಡಿರುವ 6 ಪಂದ್ಯದಲ್ಲಿ ಬೆಂಗಳೂರು ತಂಡವು 5ರಲ್ಲಿ ಸೋತು ಕೇವಲ 1 ಪಂದ್ಯವನ್ನು ಮಾತ್ರ ಗೆದ್ದಿದೆ,…

Read More