ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಮುಂಬೈ ಇಂಡಿಯನ್ಸ್ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಆಡಿರುವ 6 ಪಂದ್ಯದಲ್ಲಿ ಬೆಂಗಳೂರು ತಂಡವು 5ರಲ್ಲಿ ಸೋತು ಕೇವಲ 1 ಪಂದ್ಯವನ್ನು ಮಾತ್ರ ಗೆದ್ದಿದೆ,
ಐಪಿಎಲ್ 2024ರ 25ನೇ ಪಂದ್ಯ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB vs MI) ನಡುವೆ ನಡೆದ ಪಂದ್ಯದಲ್ಲಿ ಮೊದಲ ಬ್ಯಾಟಿಂಗ್ ಮಾಡಿದ ಆರ್ಸಿಬಿ 20 ಓವರ್ಗೆ 9 ವಿಕೆಟ್ ನಷ್ಟಕ್ಕೆ 196 ರನ್ ಗಳಿಸಿತು. ಈ ಟಾರ್ಗೆಟ್ ಬೆನ್ನಟ್ಟಿದ ಮುಂಬೈ ಇಂಡಯನ್ಸ್ ತಂಡವು 15.3 ಓವರ್ಗೆ 3 ವಿಕೆಟ್ ನಷ್ಟಕ್ಕೆ 199 ರನ್ ಗಳಿಸುವ ಮೂಲಕ 7 ವಿಕೆಟ್ ಗಳ ಜಯ ದಾಖಲಿಸಿತು.
![Demo](https://ainlivenews.com/wp-content/uploads/2023/12/spoorthi-1.jpg)
ಈ ಮೂಲಕ ಮುಂಬೈ ಇಂಡಿಯನ್ಸ್ ತಂಡವು ಸತತ 2ನೇ ಗೆಲುವು ದಾಖಲಿಸಿದೆ. ಆದರೆ ಆರ್ಸಿಬಿ ತಂಡವು 5ನೇ ಪಂದ್ಯದಲ್ಲಿ ಸೋಲನ್ನಪ್ಪಿದೆ. ಈ ಮೂಲಕ ಆಡಿರುವ 6 ಪಂದ್ಯದಲ್ಲಿ ಬೆಂಗಳೂರು ತಂಡವು 5ರಲ್ಲಿ ಸೋತು ಕೇವಲ 1 ಪಂದ್ಯವನ್ನು ಮಾತ್ರ ಗೆದ್ದಿದೆ,
ಪ್ರತಿ ಬಾರಿಯಂತೆ ಈ ಬಾರಿಯೂ ಮುಂಬೈ ಪಂದ್ಯದಲ್ಲಿಯೂ ಬ್ಯಾಟಿಂಗ್ ಉತ್ತಮವಾಗಿ ಮಾಡಿದರೂ ಸಹ ಬೌಲಿಂಗ್ ಮಾತ್ರ ತೀರಾ ಕಳಪೆಯಾಗಿತ್ತು. ಆದರೆ ಇಂದು ಬೌಲಿಂಗ್ ಜೊತೆ ಮತ್ತೊಬ್ಬೆ ಬ್ಯಾಟರ್ ಸಹ ಸೋಲಿಗೆ ಪ್ರಮುಖ ಕಾರಣ ಎಂದರೆ ತಪ್ಪಾಗಲಾರದು. ಹೌದು, ಗ್ಲೇನ್ ಮ್ಯಾಕ್ಸ್ವೆಲ್ ಸಹ ಇಂದಿನ ಸೋಲಿಗೆ ಒಂದರ್ಥದಲ್ಲಿ ಕಾರಣ ಎನ್ನಬಹುದು
ವಿರಾಟ್ ಕೊಹ್ಲಿ 3 ರನ್ ಮತ್ತು ವಿಲ್ ಜಾಕ್ಸ್ 8 ರನ್ ಗಳಿಗೆ ಔಟ್ ಆದರು. ಆದರೆ ನಾಯಕ ಫಾಫ್ ಡುಪ್ಲೇಸಿಸ್ ಮತ್ತು ರಜತ್ ಪಾಟಿದಾರ್ ಉತ್ತಮ ಜೊತೆಯಾಟವಾಡಿದರು. ಬಳಿಕ ಪಾಟಿದಾರ್ ಔಟ್ ಆಗುತ್ತಿದ್ದಂತೆ ಕ್ರೀಸ್ ಗೆ ಬಂದ ಮ್ಯಾಕ್ಸ್ ವೆಲ್ ಶೂನ್ಯಕ್ಕೆ ಔಟ್ ಆದರು. ಮ್ಯಾಕ್ಸಿ ಏನಾದರೂ ಉತ್ತಮವಾಗಿ ಆಡಿದ್ದರೆ ಸ್ಕೋರ್ ಇನ್ನಷ್ಟು ಹೆಚ್ಚಿಸಲು ಸಹಾಯಕವಾಗುತ್ತಿತ್ತು.
ಹೀಗಾಗಿ ಆರ್ಸಿಬಿ ಸೋಲಿಗೆ ಮೊದಲ ಕಾರಣ ಎಂದರೆ ಅದು ಗ್ಲೇನ್ ಮ್ಯಾಕ್ಸ್ವೆಲ್ ಎಂದೇ ಹೇಳಬಹುದು. ಇನ್ನು ಪ್ರತಿ ಪಂದ್ಯದಂತೆಯೇ ಈ ಬಾರಿಯೂ ಬೌಲಿಂಗ್ ಸಂಪೂರ್ಣ ವಿಫಲಾಯಿತು. ಇಂದು ಯಾವೊಬ್ಬ ಬೌಲರ್ ಸಹ ಕೊಂಚವೂ ಪೈಪೋಟಿಯನ್ನೂ ನೀಡಲಿಲ್ಲ.
ಆರ್ಸಿಬಿ ಪರ ರಸ್ಸೆ ಟೋಪ್ಲೆ 2 ಓವರ್ಗೆ 34 ರನ್ ನಿಡಿದರೆ, ಮೊಹಮ್ಮದ್ ಸಿರಾಜ್ 3 ಓವರ್ಗೆ 37 ರನ್, ಆಕಾಶ್ ದೀಪ್ 3.3 ಓವರ್ಗೆ 55 ರನ್, ಮ್ಯಾಕ್ಸ್ವೆಲ್ 1 ಓವರ್ಗೆ 17 ರನ್, ವೈಶಾಕ್ ವಿಜಯ್ಕುಮಾರ್ 3 ಓವರ್ಗೆ 32 ರನ್ ಮತ್ತು ವಿಲ್ ಜಾಕ್ಸ್ 2 ಓವರ್ಗೆ 24 ರನ್ ನೀಡಿದರು. ಇದರಲ್ಲಿ ವಿಲ್ ಜಾಕ್ಸ್, ವೈಶಾಕ್ ಮತ್ತು ಆಕಾಶ್ ತಲಾ 1 ವಿಕೆಟ್ ಪಡೆದರು.
ಈ ಮೂಲಕ ಎಂದಿನಂತೆ 196 ರನ್ ಗಳ ಬೃಹತ್ ಮೊತ್ತವಿದ್ದರೂ ಸಹ ಆರ್ಸಿಬಿ ಬೌಲರ್ ಗಳು ಅದನ್ನು ಡಿಫೆಂಡ್ ಮಾಡಿಕೊಳ್ಳುವಲ್ಲಿ ವಿಫಲರಾದರು. ಈ ಮೂಲಕ ಸತತ 5ನೇ ಬಾರಿಗೆ ಆರ್ಸಿಬಿ ಸೋಲನ್ಪ್ಪಿದೆ. ಈ ಮೂಲಕ ಪ್ಲೇಆಫ್ ಹಂತದ ಹಾದಿ ಸಂಪೂರ್ಣ ಕಷ್ಟಕರವಾಗಿದೆ.
ಆರ್ಸಿಬಿ ಪರ ಆಡುವಾಗ ಫಾಫ್ ಡು ಪ್ಲೆಸಿಸ್ 40 ಎಸೆತದಲ್ಲಿ 3 ಸಿಕ್ಸ್, 4 ಫೊರ್ ಮೂಲಕ 61 ರನ್, ರಜತ್ ಪಾಟಿದಾರ್ 26 ಎಸೆತದಲ್ಲಿ 44 ಸಿಕ್ಸ್ ಮತ್ತು 3 ಬೌಂಡರಿ ಸಹಿತ 50 ರನ್ ಮತ್ತು ದಿನೇಶ್ ಕಾರ್ತಿಕ್ ಅಜೇಯ ಕೇವಲ 23 ಎಸೆತದಲ್ಲಿ 4 ಸಿಕ್ಸ್ ಮತ್ತು 5 ಫೋರ್ ಮೂಲಕ 53 ರನ್ ಗಳಿಸಿದ್ದು ಬಿಟ್ಟರೆ ಬೇರೆ ಯಾರೂ ಸಹ ಮುಂಬೈ ವಿರುದ್ಧ ಉತ್ತಮ ಪ್ರದರ್ಶನ ನೀಡಲಿಲ್ಲ.
![](https://ainlivenews.com/wp-content/uploads/2024/01/Ad-Banner-copy-scaled.jpg)