Author: AIN Author

ಬಳ್ಳಾರಿ: ಲೋಕಸಭಾ ಅಖಾಡ ದಿನದಿಂದ ದಿನಕ್ಕೆ‌ ದೊಡ್ಡ ಮಟ್ಟದಲ್ಲಿ ರಂಗೇರ್ತಿದೆ, ಲಿಂಗಾಯತರಿಗೆ ಬಿಜೆಪಿ ಬಗೆಗಿನ ಮುನಿಸು ತಣಿಸಿ ಲಿಂಗಾಯತ ಮತಗಳನ್ನು ಬಿಜೆಪಿಗೆ ಗಟ್ಟಿಗೊಳಿಸುವ ಪ್ರಯತ್ನಕ್ಕೆ ಮುಂದಾಗಿದ್ದು, ವೀವಿ ಸಂಘದ ಕಚೇರಿಗೆ ಬಿ.ವೈ.ವಿಜಯೇಂದ್ರ ಭೇಟಿ ನೀಡಿದ್ದಾರೆ. ಬಳ್ಳಾರಿಯ ವಿ.ವಿ ಸಂಘದ ಸದ್ಯಸ್ಯರ ಜತೆ ಚರ್ಚೆ ನಡೆಸಿದರು. ಈ ವೇಳೆ ಮಾತನಾಡಿದ ಬಿ.ವೈ.ವಿಜಯೇಂದ್ರ, ಬಳ್ಳಾರಿ ಲೋಕಸಭೆ ಕ್ಷೇತ್ರಕ್ಕೆ ಶ್ರೀರಾಮುಲು ನಾಮಪತ್ರ ಸಲ್ಲಿಕೆ ಮಾಡ್ತಾರೆ, ಯಡಿಯೂರಪ್ಪ ಅವರು ಆದೇಶ ಮಾಡಿದ್ರು, ಹಾಗಾಗಿ ನಾನು ಇಲ್ಲಿಗೆ ಬಂದಿದ್ದೇನೆ, ಕಾಂಗ್ರೆಸ್ ಏನೇ ಹಾರಾಟ ಮಾಡಿದ್ರು, ನಮಗೆ ಲಾಭ ಆಗುತ್ತದೆ, ಬಿಜೆಪಿ- ಜೆಡಿಎಸ್ ಒಟ್ಟಾಗಿದೆ, ಬಹಳ ಅಂತರದಲ್ಲಿ ರಾಮುಲು ಗೆಲ್ತಾರೆ ಎಂದು ಹೇಳಿದರು. ಇನ್ನೂ ಈಶ್ವರಪ್ಪ ನಾಮಪತ್ರ ಸಲ್ಲಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇನ್ನೂ ನಾಮಪತ್ರ ವಾಪಾಸ್ ಪಡೆಯಲು ಸಮಯ ಇದೆ, ಕಾದು ನೋಡಿ, ಹೊಸ ಚರ್ಚೆಗಳು ಮಾಡಬೇಡಿ, ನಾವು 28 ಸ್ಥಾನಗಳು ಗೆಲ್ಲಬೇಕು ಅನ್ನೋ ಗುರಿ ಇದೆ ಅಷ್ಟೆ , ಹೆಚ್ಚು ಸ್ಥಾನ ಗೆದ್ರೆ, ವಿಜಯೇಂದ್ರ ಸ್ಥಾನ ಗಟ್ಟಿಯಾಗುತ್ತದೆ…

Read More

ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಲೋಕಿಕೆರೆ ಚೆಕ್ ಪೋಸ್ಟ್ ನ ಚುನಾವಣಾಧಿಕಾರಿಗಳು ದಾಖಲೆ ಇಲ್ಲದ 12 ಕೋಟಿ ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ. ಹಳೆಯ ದಾಖಲೆಗಳನ್ನಿಟ್ಟುಕೊಂಡು ಅಪಾರ ಪ್ರಮಾಣದ ಚಿನ್ನದ ಆಭರಣ ತೆಗೆದುಕೊಂಡು ಹೋಗುತ್ತಿದ್ದಾಗ ಚುನಾವಣಾಧಿಕಾರಿ ಲೋಕೇಶ್ ಹಾಗೂ ಪಾಲಿಕೆ ಆಯುಕೆ ಹಾಗೂ ಚುನಾವಣಾಧಿಕಾರಿ ರೇಣುಕಾ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಗಿದೆ. ದಾಖಲೆಗಳು ಹಳೆಯದ್ದು ಎಂದು ಗೊತ್ತಾಗಿದೆ. ಹೀಗಾಗಿ ಆ ಚಿನ್ನವನ್ನ ವಶಕ್ಕೆ ಪಡೆಯಲಾಗಿದ್ದು, ತನಿಖೆಯನ್ನ ಮುಂದುವರಿಸಿದ್ದಾರೆ. ಈ ಅಪಾರ ಪ್ರಮಾಣದ ಚಿನ್ನವನ್ನ ದಾವಣಗೆರೆಗೆ ತರಲಾಗುತ್ತಿತ್ತು ಎಂದು ಹೇಳಲಾಗುತ್ತಿದೆ

Read More

ತುಮಕೂರು: ಲೋಕಸಭಾ ಚುನಾವಣೆ ಹಿನ್ನೆಲೆ ನೀತಿ ಸಂಹಿತೆ ಜಾರಿಯಾದ ದಿನದಿಂದ ಇದುವರೆಗೂ  ತುಮಕೂರು ಜಿಲ್ಲೆಯಲ್ಲಿ 70 ಲಕ್ಷ ಹಣ ಸೀಜ್ ಮಾಡಲಾಗಿದೆ ಎಂದು ತುಮಕೂರು ಎಸ್ ಪಿ ಅಶೋಕ್ ವೆಂಕಟ್ ಹೇಳಿದ್ದಾರೆ. ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಚೆಕ್ ಪೋಸ್ಟ್ ಗಳಲ್ಲಿ ಆಂಧ್ರದಿಂದ ತುಮಕೂರು ಜಿಲ್ಲೆಗೆ ಬರುತ್ತಿದ್ದ 705 ಲೀಟರ್ ಮದ್ಯ ವಶ, ಇದರಲ್ಲಿ 400 ಲೀಟರ್ ಸಾರಾಯಿ ವಶಕ್ಕೆ ಪಡೆದಿದ್ದೇವೆ. ಐದೂವರೆ ಕೆಜಿ ಗಾಂಜಾ ವಶ ಹಾಗೂ ಗಡಿಯಾರ,ಸೀರೆಗಳು,ಕುಕ್ಕರ್, ಒಡವೆ ಸೇರಿದಂತೆ ಒಟ್ಟು ಆರು ಲಕ್ಷ ಬೆಲೆಬಾಳುವ ಮಾಲ್ ಗಳನ್ನು ಚುನಾವಣೆ ಸಿಬ್ಬಂದಿಗಳು ಜಪ್ತಿ ಮಾಡಿದ್ದಾರೆಂದು ತುಮಕೂರು ಎಸ್ ಪಿ ಅಶೋಕ್ ವೆಂಕಟ್ ಹೇಳಿದರು.

Read More

ಹುಬ್ಬಳ್ಳಿ: ನಗರದ ಮಯೂರ ರೆಸಾರ್ಟ್ ನಲ್ಲಿ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಅವರ ನೇತೃತ್ವದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಜಯಂತೋತ್ಸವ ಅಂಗವಾಗಿ ನಡೆಯಲಿರುವ ಏಪ್ರಿಲ್ 14ರಂದು ನೆಹರು ಕ್ರೀಡಾಂಗಣದಲ್ಲಿ ನಡೆಯಲಿರುವ ಜಯಂತೋತ್ಸವ ಅಂಗವಾಗಿ ಕಾರ್ಯಕ್ರಮದ ಪೂರ್ವ ಸಭೆಯಲ್ಲಿ ನಡೆಸಲಾಯಿತು. ಈ ಸಂದರ್ಭದಲ್ಲಿ ಇಂದಿರಾನಗರ ಬ್ಲಾಕ್ ಅಧ್ಯಕ್ಷರಾದ ಮಹೇಶ ಎಸ್ ಹಂಜಗಿ ಮಾತನಾಡಿ, ಡಾ. ಬಿ.ಆರ್ ಅಂಬೇಡ್ಕರ್ ಅವರ ಜಯಂತಿಯನ್ನು ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಆಚರಣೆ ಮಾಡಲಾಗುವುದು ಎಂದರು. ಹಿರಿಯರಾದ ಸೋಮಣ್ಣಅಂಜಿಗಿ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು. 

Read More

ಚಾಮರಾಜನಗರ: ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಶಿವಕುಮಾರ್ ಅವರ ನೇತೃತ್ವದಲ್ಲಿ ಲೋಕಸಭಾ ಚುನಾವಣೆಯ ರಣಕಹಳೆ ಊದಲಾಗಿದ್ದು, ಇಂದು ಗಡಿ ಜಿಲ್ಲೆ ಚಾಮರಾಜನಗರದ ಕೊಳ್ಳೇಗಾಲದಲ್ಲಿ ಪ್ರಜಾಧ್ವನಿ-2 ಸಭೆ ನಡೆಯಲಿದ್ದು, ಚಾಮರಾಜನಗರ ಲೋಕಸಭಾ ಮೀಸಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಸುನೀಲ್ ಬೋಸ್ ಪರ ಸಿ.ಎಂ.ಸಿದ್ದರಾಮಯ್ಯ ಭರ್ಜರಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಆದ್ದರಿಂದ ಕೊಳ್ಳೇಗಾಲದ ಎಂ.ಜಿ.ಎಸ್.ವಿ ಕಾಲೇಜು ಮೈದಾನದಲ್ಲಿ  ಕಾಂಗ್ರೆಸ್ ಪಕ್ಷದಿಂದ ಬೃಹತ್ ಸಭೆ ಏರ್ಪಡಿಸಲಾಗಿದ್ದು, https://ainlivenews.com/the-wife-pays-her-ex-husband-rs-10000-every-month-alimony-to-be-given-high-court-orders/  ಕಾಂಗ್ರೆಸ್ ಪಕ್ಷದ ಐದು ಗ್ಯಾರಂಟಿಗಳ ಮೂಲಕ ಮತದಾರರನ್ನು ಸೆಳೆಯಲು ಕಾಂಗ್ರೆಸ್ ಪಕ್ಷ  ವಿಶೇಷ ಪ್ಲಾನ್ ಮಾಡಲಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಪರ ಭರ್ಜರಿ ಬ್ಯಾಟಿಂಗ್ ಆಡಲು ಸಿ.ಎಂ.ಸಿದ್ದರಾಮಯ್ಯ ಸನ್ನದ್ದವಾಗಿದ್ದು, ಶತಾಯಗತಾಯ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಗೆಲ್ಲಿಸಲು ಸಿ.ಎಂ.ಸಿದ್ದತೆ ಮಾಡಿಕೊಂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಡಿಸಿಎಂ ಡಿಕೆ ಶಿವಕುಮಾರ್ , ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ, ಜಿಲ್ಲಾ ಉಸ್ತುವಾರಿ ಸಚಿವ  ಕೆ.ವೆಂಕಟೆಶ್ ಸಾಥ್ ನೀಡಲಿದ್ದಾರೆ.

Read More

ಕನ್ನಡದ ಮತ್ತೋರ್ವ ನಟಿ ಹೊಸ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ. ಕೆಂಡ ಸಂಪಿಗೆ ಸಿನಿಮಾ ಮೂಲಕ ಚಿತ್ರೋದ್ಯಮಕ್ಕೆ ಕಾಲಿಟ್ಟ ಮಾನ್ವಿತಾ ಕಾಮತ್ (Manvita Kamat) ಮೇ 1ರಂದು ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮದುವೆ ಕುರಿತಾದ ಡಿಜಿಟೆಲ್ ಆಮಂತ್ರಣ ಪತ್ರಿಕೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಅವರು ಅಪ್ ಲೋಡ್ ಮಾಡಿದ್ದಾರೆ. https://www.instagram.com/reel/C5paRHbS7UF/?utm_source=ig_embed&ig_rid=91289c5f-a292-442a-81fa-fe23bb55a7a4 ಅರುಣ್ ಎನ್ನುವವರ ಜೊತೆ ಮಾನ್ವಿತಾ ಮದುವೆ ಆಗುತ್ತಿದ್ದು, ಮೈಸೂರು ಮೂಲದ ಅರುಣ್ ಸಿನಿಮಾ ರಂಗಕ್ಕೆ ಹತ್ತಿರದವರೇ ಎಂದು ಹೇಳಲಾಗುತ್ತಿದೆ. ಏಪ್ರಿಲ್ 30ಕ್ಕೆ ಅರಿಶಿನ ಶಾಸ್ತ್ರ ಮತ್ತು ಮೇ 1ಕ್ಕೆ ಮದುವೆ ನಡೆಯಲಿದೆ. https://ainlivenews.com/the-wife-pays-her-ex-husband-rs-10000-every-month-alimony-to-be-given-high-court-orders/ ಅರುಣ್ ಮತ್ತು ಮಾನ್ವಿತಾ ಅವರ ತಾಯಿ ಹುಟ್ಟುಹಬ್ಬ ಒಂದೇ ದಿನವಂತೆ. ಅಲ್ಲದೆ, ಸಂಗೀತ ಪ್ರೇಮಿಯಾಗಿರುವ ಮಾನ್ವಿತಾಗೆ ಮೈಸೂರು ಮೂಲದ ಮ್ಯೂಸಿಕ್ ಪ್ರೊಡ್ಯೂಸರ್ ಆಗಿರುವ ಅರುಣ್ ಕುಮಾರ್ ಪತಿಯಾಗಿ ಸಿಗುತ್ತಿರುವುದು ಮತ್ತೊಂದು ವಿಶೇಷ. ಆರ್.ಜೆಯಾಗಿ ವೃತ್ತಿಯನ್ನು ಆರಂಭಿಸಿದ್ದ ಮಾನ್ವಿತಾ ಆನಂತರ ಸಿನಿಮಾ ರಂಗಕ್ಕೆ ಬಂದರು. ಸೂರಿ ನಿರ್ದೇಶನದ ಕೆಂಡ ಸಂಪಿಗೆ ಸಿನಿಮಾ ಅವರಿಗೆ ಹೆಸರು ತಂದುಕೊಟ್ಟಿತು. ಆನಂತರ ಟಗರು ಸಿನಿಮಾದ…

Read More

ಹಾಸನ : ನಾನು ಅವರಿಗೆ ಲೆಕ್ಕಕ್ಕೆ ಇದೀನಾ? ಅವರಿಗೆ ಸರಿಸಾಟಿ ಇದೀನಾ ಇಲ್ಲವಾ? ಎಂಬುದನ್ನು ಜನರು ಚುನಾವಣೆಯಲ್ಲಿಯೇ ತೀರ್ಮಾನ ಮಾಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಮಂಡ್ಯ ಲೋಕಸಭೆ ಕ್ಷೇತ್ರದ ಜೆಡಿಎಸ್ ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿ ಎಚ್‌ಡಿ ಕುಮಾರಸ್ವಾಮಿ ಅವರು ಹೇಳಿದರು. ಮಾಧ್ಯಮಗಳ ಜತೆ ಅವರು ಮಾತನಾಡಿದರು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಖಾರವಾಗಿ ತಿರುಗೇಟು ಕೊಟ್ಟ ಅವರು,  ” ಹೊಸ ತೊಡಕು ದಿನ ನಮ್ಮ ತೋಟದಲ್ಲಿ ಏನು ನಡೆದಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ನನಗೆ ಅಷ್ಟು ಜ್ಞಾನ ಇಲ್ಲವೇ? ಆದರೆ ಊಟವನ್ನೇ ದೊಡ್ಡ ವಿವಾದ ಮಾಡುತ್ತಿರುವ ಕಾಂಗ್ರೆಸ್ ನವರು ಅದೆಷ್ಟು ಹತಾಶರಾಗಿದ್ದಾರೆ ಎನ್ನುವುದು ಇದರಿಂದ ಅರ್ಥವಾಗುತ್ತದೆ ” ಎಂದರು. ನಾನು ಜಾತಿ ಆಧಾರದಲ್ಲಿ ರಾಜಕಾರಣ ಮಾಡಿದವನಲ್ಲ. ಪಾಪ ನನ್ನ ಸ್ನೇಹಿತರಿಗೆ ಹಣದ ಮದ ನೆತ್ತಿಗೇರಿದೆ. https://ainlivenews.com/the-wife-pays-her-ex-husband-rs-10000-every-month-alimony-to-be-given-high-court-orders/ ಕುಮಾರಸ್ವಾಮಿ ನನಗೆ ಡೋಂಟ್ ಕೇರ್ ಅಂದಿದ್ದಾರೆ, ನಾನೇನು ಲೆಕ್ಕಕ್ಕೆ ಇಟ್ಟಿಕೋ ಎಂದು ಹೇಳಿದ್ದೀನಾ? ರಾಜ್ಯದ ಜನ ತೀರ್ಮಾನ ಮಾಡುತ್ತಾರೆ. ಇವರ ಹಣ ಅಧಿಕಾರ…

Read More

ಬೆಂಗಳೂರು: ಈಗಿನ ಬಿಜಿ ಲೈಫ್ ನಲ್ಲಿ ಜನ ತಮ್ಮ ಲೈಫ್  ಪಾರ್ಟ್ನರ್ ಹುಡುಕೋದು ಕೂಡ ಆನ್ ಲೈನ್ ಗಳಲ್ಲೇ.  ಮ್ಯಾಟ್ರಿ ಮೋನಿಯಲ್  ವೆಬ್ ಸೈಟ್ಗಳಲ್ಲಿ  ವಧು- ವರರನ್ನು ಹುಡೋಕೋರು ಸದಾ ಎಚ್ಚರವಾಗಿರಬೇಕು. ಇಲ್ಲಾಂದ್ರೆ ನೀವು ವಂಚನೆಗೊಳಗಾಗೋದು ಪಕ್ಕಾ ಯಾಕಂದ್ರೆ  ವಂಚಕರು ಅಪ್ಡೇಟ್ ಆಗಿದ್ದು ಆನ್ ಲೈನ್ ನಲ್ಲಿ  ವಧು- ವರರನ್ನು ಹುಡುಕೋರನ್ನೇ ಟಾರ್ಗೆಟ್ ಮಾಡ್ತಿದ್ದಾರೆ… ಈ ಸಂಬಂಧ ಒಂದು ಸ್ಟೋರಿ ತೋರಿಸ್ತೀವಿ ನೋಡಿ… ಇತ್ತೀಚಿನ ವರ್ಷಗಳಲ್ಲಿ ಸೋಷಿಯಲ್‌ ಮೀಡಿಯಾ ಸದ್ಬಳಕ್ಕೆಕ್ಕಿಂತ ದುರ್ಬಳಕೆ‌ ಮಾಡೋರ ಸಂಖ್ಯೆ  ಜಾಸ್ತಿಯಾಗ್ತಿದೆ.ಹೌದು.ವೈವಾಹಿಕ ಸಂಬಂದಕ್ಕೆ ವೇದಿಕೆಯಾಗಿರುವ ಮ್ಯಾಟ್ರಿಮೋನಿ ವೆಬ್ ಸೈಟ್ ನಲ್ಲಿ ನಕಲಿ ಫ್ರೊಫೈಲ್ ರಚಿಸಿ ಯುವತಿಯನ್ನ ಪರಿಚಯಿಸಿಕೊಂಡು‌ ಮದುವೆ ಮಾಡಿಕೊಳ್ಳುವ ಸೋಗಿನಲ್ಲಿ ವಂಚಿಸುತ್ತಿದ್ದ ವಂಚಕನನ್ನ ಜೆಪಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.ಚಿಕ್ಕನಾಯಕನಹಳ್ಳಿಯ ಹುಳಿಯಾರು ಮೂಲದ ದೀಪಕ್  ಬಂಧಿತ ಆರೋಪಿ. ಬಿಎಸ್ಸಿ ಮಾಡಿಕೊಂಡಿರುವ ಈತ ಈ ಹಿಂದೆ ಮೈಸೂರಿನ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದ.‌  ಸುಲಭವಾಗಿ ಹಣ‌ ಸಂಪಾದಿಸ ಬೇಕು ಅಂತ 10 ವರ್ಷದ ಹಿಂದೆ ನಗರಕ್ಕೆ ಬಂದವನು  ನಿರುದ್ಯೂಗಿ ಯುವಕರಿಗೆ…

Read More

ಬೆಂಗಳೂರು: ನಗರದ ನಾಯಂಡಹಳ್ಳಿ ಫ್ಲೈ ಓವರ್ ಮೇಲಿಂದ ಕೆಳಗೆ ಜಿಗಿದು ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ. ನವೀನ್ ಕುಮಾರ್ (30) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ತನ್ನ ಬೈಕನ್ನ ಫ್ಲೈಓವರ್ ಮೇಲೆ ಪಾರ್ಕಿಂಗ್ ಮಾಡಿ ಏಕಾಏಕಿ ಕೆಳಗೆ ಜಿಗಿದಿದ್ದಾನೆ. ಸದ್ಯ ಘಟನಾ ಸ್ಥಳಕ್ಕೆ ಬ್ಯಾಟರಾಯನಪುರ ಪೊಲೀಸರು ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ. https://ainlivenews.com/the-wife-pays-her-ex-husband-rs-10000-every-month-alimony-to-be-given-high-court-orders/ ಕಳೆದ 3-4 ತಿಂಗಳಿನಿಂದ ಕರ್ನಾಟಕ ವಿದ್ಯುತ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ನವೀನ್, ಕೆಲಸಕ್ಕೆ ಹೋಗುವುದಾಗಿ ಹೇಳಿ ಹೊರಟಿದ್ದಾನೆ. ಬಳಿಕ ಬೈಕ್ ಪಾರ್ಕ್ (Bike Parking) ಮಾಡಿ, ಫ್ಲೈಓವರ್‌ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 2 ತಿಂಗಳ ಹಿಂದೆಯಷ್ಟೇ ಮದುವೆ: ಆತ್ಮಹತ್ಯೆ ಮಾಡಿಕೊಂಡ ನವೀನ್ 2 ತಿಂಗಳ ಹಿಂದೆ ಮದುವೆಯಾಗಿದ್ದ, ಕವಿಕಾ (ಕರ್ನಾಟಕ ವಿದ್ಯುತ್ ಕಾರ್ಖಾನೆ)ದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ. ಕೆಲಸದ ಮೇಲೆ ಹೋಗಿ ಬರ್ತೀನಿ ಅಂತಾ ಏಪ್ರಿಲ್ 11ರಂದು ಮನೆಯಿಂದ ಹೊರಟಿದ್ದ ನವೀನ್‌, ಇಂದು (ಏ.12) ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸ್…

Read More

ಲಖನೌ: ಐಪಿಎಲ್‌ 17ನೇ ಆವೃತ್ತಿಯಲ್ಲಿ ಕಳಪೆ ಆರಂಭ ಪಡೆದಿರುವ ಡೆಲ್ಲಿ ಕ್ಯಾಪಿಟಲ್ಸ್‌, ಶುಕ್ರವಾರ ಬಲಿಷ್ಠ ಲಖನೌ ಸೂಪರ್‌ ಜೈಂಟ್ಸ್‌ ಸವಾಲನ್ನು ಎದುರಿಸಲಿದ್ದು, ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಆಡಿರುವ 5 ಪಂದ್ಯಗಳಲ್ಲಿ 4ರಲ್ಲಿ ಸೋತಿರುವ ಡೆಲ್ಲಿ ಈ ಪಂದ್ಯದಲ್ಲಿ ಸುಧಾರಿತ ಬೌಲಿಂಗ್‌ ಪ್ರದರ್ಶನ ತೋರಬೇಕಿದೆ. ಸದ್ಯ ರಿಷಭ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಮತ್ತೊಂದೆಡೆ ಲಖನೌ ಆರಂಭಿಕ ಸೋಲಿನ ಬಳಿಕ ಸತತ 3 ಪಂದ್ಯಗಳನ್ನು ಗೆದ್ದಿದ್ದು, ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ.  ಪ್ರಚಂಡ ವೇಗಿ ಮಯಾಂಕ್‌ ಯಾದವ್‌ ಈ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ. ಆದರೂ ಲಖನೌ ಬೌಲಿಂಗ್‌ ಪಡೆ ಬಲಿಷ್ಠವಾಗಿಯೇ ಇದೆ. ನಾಯಕ ಕೆ.ಎಲ್‌.ರಾಹುಲ್‌ ದೊಡ್ಡ ಇನ್ನಿಂಗ್ಸ್‌ ಆಡಲು ಕಾಯುತ್ತಿದ್ದು, ಅಭಿಮಾನಿಗಳೂ ಅವರ ಮೇಲೆ ಭಾರಿ ನಿರೀಕ್ಷೆ ಇರಿಸಿದ್ದಾರೆ. ಲಖನೌ ತಂಡದ ಪರ ಕ್ವಿಂಟನ್ ಡಿ ಕಾಕ್, ಮಾರ್ಕಸ್ ಸ್ಟೋನಿಸ್ ಉತ್ತಮ ಲಯದಲ್ಲಿದ್ದಾರೆ. ಇನ್ನು ದೇವದತ್ ಪಡಿಕ್ಕಲ್ ಲಯಕ್ಕೆ ಮರಳಬೇಕಿದೆ. ಇನ್ನು ನಿಕೋಲಸ್ ಪೂರನ್ ಅವರನ್ನು ನಿಯಂತ್ರಿಸಬೇಕಾದ…

Read More