ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಲೋಕಿಕೆರೆ ಚೆಕ್ ಪೋಸ್ಟ್ ನ ಚುನಾವಣಾಧಿಕಾರಿಗಳು ದಾಖಲೆ ಇಲ್ಲದ 12 ಕೋಟಿ ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ. ಹಳೆಯ ದಾಖಲೆಗಳನ್ನಿಟ್ಟುಕೊಂಡು ಅಪಾರ ಪ್ರಮಾಣದ ಚಿನ್ನದ ಆಭರಣ ತೆಗೆದುಕೊಂಡು ಹೋಗುತ್ತಿದ್ದಾಗ ಚುನಾವಣಾಧಿಕಾರಿ ಲೋಕೇಶ್ ಹಾಗೂ
![Demo](https://ainlivenews.com/wp-content/uploads/2023/12/spoorthi-1.jpg)
ಪಾಲಿಕೆ ಆಯುಕೆ ಹಾಗೂ ಚುನಾವಣಾಧಿಕಾರಿ ರೇಣುಕಾ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಗಿದೆ. ದಾಖಲೆಗಳು ಹಳೆಯದ್ದು ಎಂದು ಗೊತ್ತಾಗಿದೆ. ಹೀಗಾಗಿ ಆ ಚಿನ್ನವನ್ನ ವಶಕ್ಕೆ ಪಡೆಯಲಾಗಿದ್ದು, ತನಿಖೆಯನ್ನ ಮುಂದುವರಿಸಿದ್ದಾರೆ. ಈ ಅಪಾರ ಪ್ರಮಾಣದ ಚಿನ್ನವನ್ನ ದಾವಣಗೆರೆಗೆ ತರಲಾಗುತ್ತಿತ್ತು ಎಂದು ಹೇಳಲಾಗುತ್ತಿದೆ
![](https://ainlivenews.com/wp-content/uploads/2024/01/Ad-Banner-copy-scaled.jpg)