Author: AIN Author

ಬೆಳಗಾವಿ : ಕರ್ನಾಟಕದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೇ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿದ್ದಾರೆ. ಅದಲ್ಲದೇ ನಾನು ಯಾರಿಗೂ ಅಪ್ಪಾಜಿ ಅಪ್ಪಾಜಿ ಅಂತ ಕಾಲಿಗೆ ನಮಸ್ಕರಿಸುವುದಿಲ್ಲ. ದೇವರು ನನಗೆ ಎಲ್ಲವನ್ನು ಕೊಟ್ಟಿದ್ದಾನೆ. ನಾನು ಯಾರಿಗೂ ವಂಚನೆ ಮಾಡುವುದಿಲ್ಲ ಎಂದು ಇದೇ ವೇಳೆ ಯತ್ನಾಳ್‌ ಹೇಳಿದರು. ಮಾತನಾಡಿದ ಅವರು, ಮುಂದಿನ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದರೇ ಉತ್ತರ ಕರ್ನಾಟಕದ, ನಾನೇ ಮುಖ್ಯಮಂತ್ರಿಯಾಗುತ್ತೇನೆ. ಜಾತಿ ಜಾತಿ ಅಂತ ನೋಡದೆ, ದೇಶ ಉಳಿಸುವುದಕ್ಕಾಗಿ ಎಲ್ಲರೂ ಮತ ಹಾಕಿ ಎಂದು ಹೇಳಿದರು. https://ainlivenews.com/the-wife-pays-her-ex-husband-rs-10000-every-month-alimony-to-be-given-high-court-orders/ ಈ ಚುನಾವಣೆ ಮುಂದಿನ ಐದು ವರ್ಷದ ಭಾರತದ ಭವಿಷ್ಯವನ್ನು ನಿರ್ಮಾಣ ಮಾಡುವಂತಹ ಚುನಾವಣೆ. ನನ್ನ ದೇಶ, ನನ್ನ ಸನಾತನ ಧರ್ಮ ಉಳಿವಿಗಾಗಿ ನಡೆಯುತ್ತಿರುವ ಚುನಾವಣೆ. ಹತ್ತು ವರ್ಷ ನರೇಂದ್ರ ಮೋದಿ ಅವರು ಏನು ಮಾಡಿದ್ದಾರೆ ಎಂದು ಕಾಂಗ್ರೆಸ್‌ನವರು ಕೇಳ್ತಿದ್ದಾರೆ. ಆದರೆ, 10 ವರ್ಷ ಏನು ಮಾಡಿಲ್ಲ ಎಂಬುದನ್ನು ಕಾಂಗ್ರೆಸ್‌ನವರು ಹೇಳಲಿ ಎಂದು ನಾನು…

Read More

ಬೆಂಗಳೂರು: ದಿನದಿಂದ ದಿನಕ್ಕೆ ರಾಜಧಾನಿಯಲ್ಲಿ ಹೆಚ್ಚಿದ ಬಿಸಿಲಿನ ಝಳ… ಕುಡಿಯುವ ನೀರಿಗೆ ಭಾರಿ ತೊಂದರೆ… ಶಾಲೆಗಳಿಗೆ ರಜೆ.. ನೀರು ಹೆಚ್ಚಾಗಿ ಬೇಕು.. ಈ ಸಮಯದಲ್ಲಿ ಸರಿಯಾಗಿ ಕುಡಿಯಲ ನೀರು ಸಿಗುವುದಿಲ್ಲ.. ಕೇವಲ ಏರಿಯಾ ಗಳಲ್ಲಿ ಇದ್ದ ನೀರಿನ ಸಮಸ್ಯೆ ಇದೀಗ ಡಿಪೋ ಗಳಲ್ಲಿ ಕೂಡ ಶುರುವಾಗಿದೆ.. ಇದನ್ನು ಕಂಡ ಸಿಬ್ಬಂದಿ ಅಸ್ಟ್ ಇಷ್ಟೋ ನೀರನ್ನು ಒದಗಿಸಿ ಮಾರಾಯ್ರೇ ಎಂದು ಇಲ್ಲಿರುವ ಸಿಬ್ಬಂದಿ ಪತ್ರ ಬರೆದಿದ್ದಾರೆ..  ಹಾಗಿದ್ದರೆ ಏನಿದು ಸ್ಟೋರಿ ಅಂತೀರಾ ಇಲ್ಲಿ ನೋಡಿ. ಬೇಸಿಗೆಯ ಝಳ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯನ್ನೂ ಕಾಡುತ್ತಿದೆ.ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಕುಡಿಯಲು ನೀರು ಕೂಡ ಸಿಗುತ್ತಿಲ್ಲವಂತೆ.ಸುಡೋ ಬಿಸಿಲಿನಲ್ಲಿ ಕೆಲಸ ಮಾಡಲು ಸಾಧ್ಯವಾಗದ ಸ್ಥಿತಿಗೆ ಸಿಲುಕಿರುವ ಸಾರಿಗೆ ಸಿಬ್ಬಂದಿಗೆ ನೀರನ್ನು ಕೊಟ್ಟು ಪುಣ್ಯ ಕಟ್ಟಿಕೊಳ್ಳಿ ಎಂದು ಬಿಎಂಟಿಸಿ ಸಿಬ್ಬಂದಿಯೋರ್ವರು ಪತ್ರವನ್ನೇ ಬರೆದಿದ್ದಾರೆ.. ಇಲ್ಲಿ ನೋಡಿ  ಹಲವಾರು ತಿಂಗಳಿನಿಂದ ಸಮರ್ಪಕವಾಗಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ಡ್ರೈವರ್, ಕಂಡಕ್ಟರ್  ಪ್ರಣಿಕರು ಹೈರಾಣಾಗುತ್ತಿದ್ದಾರೆ. ಅಂತರ್‌ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಈ…

Read More

ಡೆಹ್ರಾಡೂನ್‌: ಕೇಂದ್ರದ ಬಿಜೆಪಿ ನೇತೃತ್ವದ ಬಲಿಷ್ಠ ಸರ್ಕಾರದ ಅಡಿಯಲ್ಲಿ ಉಗ್ರರು ಅವರ ನೆಲದಲ್ಲೇ ಹತ್ಯೆಯಾಗುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಹೇಳಿದ್ದಾರೆ. ಋಷಿಕೇಶದಲ್ಲಿ ನಡೆದ ಪಕ್ಷದ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶದಲ್ಲಿ ದುರ್ಬಲ ಮತ್ತು ಅಸ್ಥಿರ ಸರ್ಕಾರಗಳಿದ್ದಾಗ ಶತ್ರುಗಳು ಲಾಭ ಪಡೆದರು ಮತ್ತು ಭಯೋತ್ಪಾದನೆ (Terrorism) ಹರಡಿತು. ಆದರೆ ಬಲಿಷ್ಠ ಮೋದಿ ಸರ್ಕಾರದ (Modi Government) ಅಡಿಯಲ್ಲಿ ನಮ್ಮ ಪಡೆಗಳು ಅವರ ನೆಲದಲ್ಲೇ ಅವರನ್ನು ಹತ್ಯೆ ಮಾಡುತ್ತಿದೆ ಎಂದು ಹೇಳಿದರು. ಪಾಕಿಸ್ತಾನದಲ್ಲಿ (Pakistan) ಅಡಗಿರುವ ಭಾರತಕ್ಕೆ ಬೇಕಾಗಿರುವ ಉಗ್ರರು ನಿಗೂಢವಾಗಿ ಹತ್ಯೆಯಾಗುತ್ತಿದ್ದು, ಈ ಹತ್ಯೆಗಳ ಹಿಂದೆ ಭಾರತದ ಪಾತ್ರವಿದೆ ಎಂಬ ಆರೋಪ ಕೇಳಿ ಬರುತ್ತಿರುವ ಬೆನ್ನಲ್ಲೇ ಪ್ರಧಾನಿ ಮೋದಿ ಅವರ ಈ ಹೇಳಿಕೆ ಮಹತ್ವ ಪಡೆದಿದೆ.  ಭಾರತದಲ್ಲಿ ಸ್ಥಿರ ಸರ್ಕಾರದಿಂದ ಆಗುವ ಪ್ರಯೋಜನಗಳನ್ನು ಜನರು ನೋಡಿರುವುದರಿಂದ ‘ಫಿರ್ ಏಕ್ ಬಾರ್ ಮೋದಿ ಸರ್ಕಾರ್’ ಎಂಬ ಪ್ರತಿಧ್ವನಿ ದೇಶಾದ್ಯಂತ ಕೇಳಿಬರುತ್ತಿದೆ ಎಂದು ಹೇಳಿದರು. https://ainlivenews.com/the-wife-pays-her-ex-husband-rs-10000-every-month-alimony-to-be-given-high-court-orders/ ಹಿಂದಿನ ದುರ್ಬಲ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ…

Read More

ಹೆಚ್ಚುತ್ತಿರುವ ಬೇಸಿಗೆಯಿಂದಾಗಿ ದೇಶದ ಬಹುತೇಕ ಭಾಗಗಳಲ್ಲಿ ತಾಪಮಾನವು 35 ಡಿಗ್ರಿಗಳ ಆಸುಪಾಸಿನಲ್ಲಿದೆ. ಏತನ್ಮಧ್ಯೆ, ಈ ಏರುತ್ತಿರುವ ತಾಪಮಾನದಲ್ಲಿ, ಜನರು ನಿಂಬೆ ಸೋಡಾವನ್ನು ಹೊರತುಪಡಿಸಿ ವಿವಿಧ ರೀತಿಯ ಕೋಲ್ಡ್ರಿಗ್ ಅನ್ನು ತೆಗೆದುಕೊಳ್ಳುತ್ತಿದ್ದಾರೆ. ಈ ಪರಿಸ್ಥಿತಿಯಿಂದಾಗಿ ಮಾರುಕಟ್ಟೆಯಲ್ಲಿ ನಿಂಬೆ ಹಣ್ಣಿನ ಬೆಲೆ ಏರಿಕೆಯಾಗಿರುವುದನ್ನು ಕಾಣಬಹುದು. ನಿಂಬೆಹಣ್ಣು ಮಾರಾಟಕ್ಕಿರುವ ರೈತರಿಗೆ ಹೆಚ್ಚಿನ ಲಾಭವಾಗುತ್ತಿದೆ. ನಿಂಬೆ ಹಣ್ಣಿನ ಬೆಲೆ ಶೇ.350ರಷ್ಟು ಏರಿಕೆಯಾಗಿದೆ. ತಾಪಮಾನದಲ್ಲಿ ಹೆಚ್ಚಳ ನಿಂಬೆ ದರ ಮತ್ತಷ್ಟು ದುಬಾರಿ  ಮೂಲಗಳ ಪ್ರಕಾರ ಈ ಹಿಂದೆ ನಿಂಬೆ ಸೋಡಾ ಪ್ರತಿ ಕಪ್ ಗೆ 20 ರೂ.ಗೆ ಮಾರಾಟವಾಗುತ್ತಿತ್ತು. ಈಗ ನಿಂಬೆ ಸೋಡಾ ಒಂದು ಕಪ್ ಗೆ 25 ರಿಂದ 30 ರೂ.ಗೆ ಮಾರಾಟವಾಗುತ್ತಿದೆ. ಇದೇ ವೇಳೆ ತಾಪಮಾನ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಇದರಿಂದ ಭವಿಷ್ಯದಲ್ಲಿ ನಿಂಬೆ ಹಣ್ಣಿನ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಕೆಲವೆಡೆ ಮಧ್ಯಮ ಗಾತ್ರದ ನಿಂಬೆಹಣ್ಣು ಕೆಜಿಗೆ 100 ರೂಪಾಯಿ ಇದೆ. ಬೇಸಿಗೆಯ ಸೆಖೆ ಹೆಚ್ಚಾದಂತೆ ಮಾರುಕಟ್ಟೆಯಲ್ಲಿ ನಿಂಬೆ ಹಣ್ಣಿಗೆ ಬೇಡಿಕೆ…

Read More

ಲಕ್ನೋ: ಉತ್ತರಪ್ರದೇಶದಲ್ಲಿ ಲೋಕಸಭಾ ಚುನಾವಣಾ (Loksabha Election 2024) ಪ್ರಚಾರದ ಭರಾಟೆ ಜೋರಾಗಿದೆ. ಮತದಾರರನ್ನು ಒಲಿಸಿಕೊಳ್ಳಲು ಅಭ್ಯರ್ಥಿಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಬಿಜೆಪಿ ಅಭ್ಯರ್ಥಿ ಹಾಗೂ ಸಂಸದೆ ಹೇಮಾ ಮಾಲಿನಿಯವರು (Hema Malini) ಮತಯಾಚನೆ ಮಾಡಿರುವ ವೀಡಿಯೋವೊಂದು ವೈರಲ್‌ ಆಗುತ್ತಿದೆ. ಬಲದೇವ್ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ಹೇಮಾಮಾಲಿನಿ ಅವರು ಉರಿಬಿಸಿಲಿನಲ್ಲಿಯೂ ಕೆಲ ಮಹಿಳೆಯರ ಜೊತೆ  ಗದ್ದೆಯಲ್ಲಿ ಗೋಧಿ ಕೊಯ್ಲು ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. https://ainlivenews.com/the-wife-pays-her-ex-husband-rs-10000-every-month-alimony-to-be-given-high-court-orders/ ವೀಡಿಯೋದಲ್ಲೇನಿದೆ..?: ಚುನಾವಣಾ ಪ್ರಚಾರದ ವೇಳೆ ಬಲದೇವ್ ಪ್ರದೇಶದ ಹಯಾತ್‌ಪುರ ಗ್ರಾಮದಲ್ಲಿ ಕೆಲ ಮಹಿಳೆಯರು ಬಿಸಿಲಲ್ಲಿ ಗದ್ದೆಯಲ್ಲಿ ಗೋಧಿ ಕೊಯ್ಲು ಮಾಡುತ್ತಿದ್ದರು. ಗೋಧಿ ಕೊಯ್ಲು ಮಾಡುತ್ತಿರುವ ಮಹಿಳೆಯರನ್ನು ನೋಡಿದ ಹೇಮಾ ಮಾಲಿನಿ, ತನ್ನ ಕಾರನ್ನು ನಿಲ್ಲಿಸಿ ಹೊಲಕ್ಕೆ ಇಳಿದಿದ್ದಾರೆ. ಬಳಿಕ ಮಹಿಳೆಯೊಬ್ಬರ ಕೈಯಿಂದ ಕುಡುಗೋಲು ತೆಗೆದುಕೊಂಡು ಗೋಧಿ ಕೊಯ್ಲು ಮಾಡಿದರು. https://twitter.com/dreamgirlhema/status/1778491926288662765?ref_src=twsrc%5Etfw%7Ctwcamp%5Etweetembed%7Ctwterm%5E1778491926288662765%7Ctwgr%5Ee3708631b314f225dd65ba451680c1ac0ec2d868%7Ctwcon%5Es1_&ref_url=https%3A%2F%2Fpublictv.in%2Fbjp-candidate-hema-malini-meets-farmers-and-lends-hand-to-women-working-in-fields-in-mathura%2F ಮಹಿಳೆಯರೊಂದಿಗೆ ಫೋಟೋ: ಹೊಲದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಶೇಕ್‌ಹ್ಯಾಂಡ್ ಕೊಡುವುದರಿಂದ ಹಿಡಿದು ಅವರ ಜೊತೆ ಕ್ಲಿಕ್ಕಿಸಿಕೊಂಡ ಫೋಟೋಗಳನ್ನು…

Read More

ಬೆಂಗಳೂರು: ಕೋಡ್‌ವರ್ಡ್‌ ಸಹಾಯದಿಂದ ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಆರೋಪಿಗಳ ಬಂಧನ ಮಾಡಲಾಗಿದೆ. ಹೌದು.ಬೆಂಗಳೂರಿನಲ್ಲಿ ಕೃತ್ಯ ಎಸಗಿದ್ದ ಮುಸಾವೀರ್ ಹುಸೇನ್  ಕೋಲ್ಕತ್ತಾದ ಪೂರ್ವ ಮಿಡ್ನಾಪುರ ದಿಘಾ ಮನೆಯಲ್ಲಿ ಅಡಗಿದ್ದ. ರಾಷ್ಟ್ರೀಯ ತನಿಖಾ ದಳ (NIA) ಅಧಿಕಾರಿಗಳು ಖಚಿತ ಮಾಹಿತಿಯ ಮೇರೆಗೆ ಮುಸಾವೀರ್ ಹುಸೇನ್ ಮತ್ತು ಕೃತ್ಯಕ್ಕೆ ಸಹಕಾರ ನೀಡಿದ್ದ ಅಬ್ದುಲ್ ಮತೀನ್‌ನನ್ನು (Abdul Matin) ಅರೆಸ್ಟ್‌ ಮಾಡಿದ್ದಾರೆ. ಸೆರೆಯಾಗಿದ್ದು ಹೇಗೆ? ಶಿವಮೊಗ್ಗ ತುಂಗಾ ನದಿ ತೀರದಲ್ಲಿ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಈಗಾಗಲೇ ಬಂಧನಕ್ಕೆ ಒಳಗಾಗಿ ಜೈಲು ಸೇರಿದ್ದ ಮಾಝ್‌ ಮುನೀರ್‌ನನ್ನು (Maaz Muneer) ಎನ್‌ಐಎ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಿತ್ತು. ಮುನೀರ್ ಸೆಲ್ ಮೇಲೆ ದಾಳಿ ಮಾಡಿದಾಗ ಮೆಮೋರಿ ಕಾರ್ಡ್ ಪತ್ತೆಯಾಗಿತ್ತು. ಈ ಮೆಮೋರಿ ಕಾರ್ಡ್‌ ಪರಿಶೀಲಿಸಿದಾಗ ಹಲವು ಕೋಡ್‌ ವರ್ಡ್‌ ಸಿಕ್ಕಿದ್ದವು. ಈ ಕೋಡ್‌ ವರ್ಡ್‌ ಡಿಕೋಡ್‌ ಮಾಡಿದಾಗ ಆರೋಪಿಗಳ ಮಾಹಿತಿ ಸಿಗತೊಡಗಿತು ಎಂದು ಎನ್‌ಐಎ ಮೂಲಗಳು ತಿಳಿಸಿವೆ. https://ainlivenews.com/the-wife-pays-her-ex-husband-rs-10000-every-month-alimony-to-be-given-high-court-orders/ ಈ ಖಚಿತ ಮಾಹಿತಿಯನ್ನು ಆಧಾರಿಸಿ ತನಿಖೆಗೆ ಇಳಿದಾಗ ಆರೋಪಿಗಳು…

Read More

ವಿಜಯಪುರ: ಜಿಲ್ಲೆಯ ಕೆಲವೆಡೆ ಬಿಸಿಲಿನ ಬೇಗೆಯ ನಡುವೆಯೂ ವರುಣ ತಂಪೆರೆದಿದ್ದಾನೆ. ವಿಜಯಪುರ ನಗರ ಸೇರಿದಂತೆ ವಿವಿಧೆಡೆ ಗಾಳಿ ಸಹಿತ ಭಾರಿ ಹಾಗೂ ಕೆಲವೆಡೆ ಜಿಟಿ ಜಿಟಿ ಮಳೆಯಾಗಿದೆ. 42 ಡಿಗ್ರಿ ಬಿಸಿಲಿನಿಂದ ಕಂಗೆಟ್ಟ ಜನತೆಯಲ್ಲಿ ವರುಣ ಆಗಮನದಿಂದ ಹರ್ಷ ಉಂಟಾಗಿದೆ. ಕಳೆದ ಅರ್ಧ ಗಂಟೆಯಿಂದ ಮಳೆ ಬೀಳುತ್ತಲೇ ಇದೆ. ತಗ್ಗು ಪ್ರದೇಶಗಳಲ್ಲಿ ನೀರು ಹರಿಯುತ್ತಿದ್ದು, ನಗರದ ಪ್ರದೇಶದ ಜನತೆಗೆ ತಂಪು ತಂದು ಕೊಟ್ಟಿದೆ. ಭಾರೀ ಮಳೆಯ ಪರಿಣಾಮ ಕೆಲವೆಡೆ ವಿದ್ಯುತ್ ಸಂಚಾರ ಕಡಿತವಾಗಿದೆ.

Read More

ಬಳ್ಳಾರಿ: ಮೋದಿ ಅಲೆಯಿಂದ ಯಡಿಯೂರಪ್ಪ ಶಕ್ತಿಯಿಂದ ನಮಗೆ ಗೆಲುವಾಗುತ್ತೆ ಎಂದು ಬಿ ಶ್ರೀರಾಮುಲು ಹೇಳಿದ್ದಾರೆ. ನಾಮಪತ್ರ ಸಲ್ಲಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶದ ಪ್ರಧಾನಿ ಮೋದಿ 400 ಸ್ಥಾನ ಗೆಲ್ಲುವ ಗುರಿ ಹೊಂದಿದ್ದಾರೆ, ಅದರಲ್ಲಿ ಬಳ್ಳಾರಿ ಕ್ಷೇತ್ರವೂ ಒಂದು, ಈಗಾಗಲೇ ಎಲ್ಲ ಕಡೆ ಒಂದು ಸುತ್ತಿನ ಪ್ರಚಾರ ಮುಗಿಸಿದ್ದೇನೆ, ನಾಳೆಯುಂದ ಎರಡನೇ ಸುತ್ತಿನ ಪ್ರಚಾರ ಆರಂಭಿಸುವೆ, ಎಲ್ಲರು ಒಗ್ಗಟ್ಟಿನಿಂದ ನಾವು ಗೆಲ್ಲುತ್ತೇವೆ ಎಂದು ಹೇಳಿದರು. ಇನ್ನೂ ಕಳೆದ ಚುನಾವಣೇಲಿ ನಾನು ಸೋತಿದ್ದೆ, ಆದರೂ ಕೂಡ ಪಾರ್ಟಿ ನನಗೆ ಅವಕಾಶ ಕೊಟ್ಟಿದೆ. ನಾನು ಸೋತಿದ್ದಕ್ಕೆ ಎಲ್ಲರಿಗೂ ಅನುಕಂಪ ಇದೆ. ಜನಾರ್ಧನರ್ ರೆಡ್ಡಿಯವರು ಕೂಡ ನಮಗೆ ಒಟ್ಟಾಗಿದ್ದಾರೆ ಎಂದರು. ಜನಾರ್ಧನ್ ರೆಡ್ಡಿಯೇ ಶ್ರೀರಾಮುಲು ಸೋಲಿಸ್ತಾರೆ ಎಂದಿದ್ದ ಭೀಮಾನಾಯ್ಕ್ ಹೇಳಿಕೆಗೆ ಬಿ ಶ್ರೀರಾಮುಲು ತಿರುಗೇಟು ನೀಡಿದ್ದಾರೆ. ಯಾರು ಯಾರನ್ನು ಮನೆಗೆ ಕಳುಹಿಸ್ತಾರೆ ಗೊತ್ತಾಗುತ್ತೆ, ಇಂಡಿಯಾ ಒಕ್ಕೂಟ ಈಗಾಗಲೇ ಸೋತು ಹೋಗಿದೆ, ನಾವೆಲ್ಲ ಒಡೆದು ಹೋದ್ರೆ ಗೆಲ್ತಿವಿ ಅನ್ನೋ ಭ್ರಮೆ ಇತ್ತು, ಈಗ ನಾವು ಒಂದಾಗಿರೋದು ಅವರಿಗೆ…

Read More

ಬಳ್ಳಾರಿ: ತುಕಾರಾಂ ಪರ ನಾಮಪತ್ರ ಸಲ್ಲಿಸಿ ತೆರಳುವಾಗ ಕಾಂಗ್ರೆಸ್ ನಾಯಕರಿಗೆ ನೋಡಿ ಮೋದಿ ಮೋದಿ ಘೋಷಣೆ ಕೂಗಿದ ಪ್ರಸಂಗ ಬಳ್ಳಾರಿ ಜಿಲ್ಲಾಧಿಕಾರಿಗಳ ಕಚೇರಿ ಮುಂಬಾಗದಲ್ಲಿ ನಡೆಯಿತು. ತುಕಾರಾಂ ಪರ ನಾಮಪತ್ರ ಸಲ್ಲಿಸಿ ಸಚಿವ ನಾಗೇಂದ್ರ, ಎಂಬಿ ಪಾಟೀಲ್, ಜಮೀರ್ ಅಹ್ಮದ್ ಸೇರಿ ಇತರೆ ನಾಯಕರು ತೆರಳುತಿದ್ದರು, ಇದೇ ವೇಳೆ ಶ್ರೀರಾಮಲು ಪರ ನಾಮಪತ್ರ ಸಲ್ಲಿಸಲು ರೋಡ್ ಶೋ ಮೂಲಕ ಬಂದಿದ್ದ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ನಾಯಕರು ಬರುತಿದ್ದಂತೆ ಮೋದಿ ಮೋದಿ ಅಂತ ಘೋಷಣೆ ಕೂಗಿದ್ದಾರೆ. ನಂತರ ಬಿಜೆಪಿ ಕಾರ್ಯಕರ್ತರನ್ನ ಚದುರಿಸಿ ಕೈ ನಾಯಕರನ್ನ ಪೊಲೀಸರು ಕಳುಹಿಸಿಕೊಟ್ಟರು. ಜಿಲ್ಲಾ ಚುನಾವಣಾ ಅಧಿಕಾರಿಗಳ ಕಚೇರಿ ಮುಂದೆ ಭಾರೀ ಹೈಡ್ರಾಮಾ ನಡೆಯಿತು.

Read More

ಗದಗ: ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕಡಕೋಳ ಗ್ರಾಮದ ಗದಗ ಕ್ರೀಡಾಶಾಲೆಯ ವಿದ್ಯಾರ್ಥಿನಿ ಪವಿತ್ರಾ ಕುರ್ತಕೋಟಿ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿಯವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು. ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿ ಯಾಗಿದ್ದಾಗ ತನಗೆ ಸೈಕ್ಲಿಂಗ್ ಮಾಡಲು ಕ್ರೀಡಾ ಇಲಾಖೆಯಿಂದ 8.50 ಲಕ್ಷದ ಸೈಕಲ್ ಕೊಡಿಸಿದ್ದರಿಂದ ತಾನು ರಾಷ್ಟ್ರೀಯ ಮಟ್ಟದಲ್ಲಿ ಪದಕ ಪಡೆದು ಏಷಿಯನ್ ಚಾಂಪಿಯನ್ ಶಿಪ್ ನಲ್ಲಿ ಪಾಲ್ಗೊಳ್ಳಲು ಅವಕಾಶ ದೊರೆತಿದ್ದರಿಂದ, ಇಂದು ಗದಗನಲ್ಲಿ ಬೊಮ್ಮಾಯಿಯವರನ್ನು ಭೇಟಿ ಮಾಡಿ ತನ್ನ ಸಾಧನೆಗೆ ಸಹಾಯ ಮಾಡಿದ್ದಕ್ಕಾಗಿ ಧನ್ಯವಾದ ಸಲ್ಲಿಸಿದರು. ಈ ಸಂದರ್ಭದಲ್ಲಿ ಪವಿತ್ರಾ ಅವರ ಕೋಚ್ ಆನಂತ್ ದೇಸಾಯಿ, ಮಾಜಿ ಸಚಿವ ಸಿ.ಸಿ. ಪಾಟೀಲ್ ಹಾಜರಿದ್ದರು.

Read More