Author: Author AIN

ಚುನಾವಣಾ ಬಾಂಡ್‌ ಯೋಜನೆ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಟ ಪ್ರಕಾಶ್ ರಾಜ್ ವಾಗ್ದಾಳಿ ನಡೆಸಿದ್ದಾರೆ. ಚುನಾವಣಾ ಬಾಂಡ್‌ ಯೋಜನೆ ಕುರಿತು ಎರಡು ಮೀಮ್‌ಗಳನ್ನು ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿರುವ ನಟ, ‘ಶ್ರೀ ಶ್ರೀ ಶ್ರೀ ವಿಶ್ವಗುರು.. ವಸೂಲಿಗುರು ಮಹಾಪ್ರಭುಗಳೇ.. ನಿಮ್ಮ ‘ಮನ್ ಕಿ ಬಾತ್‌’ ಕಾರ್ಯಕ್ರಮದಿಂದಾಗಿ ಯಾರಿಂದ ಎಷ್ಟು ವಸೂಲಿ ಮಾಡಿದ್ರಿ ಅಂತ ಹೇಳ್ತೀರಾ’ ಎಂದು ಲೇವಡಿ ಮಾಡಿದ್ದಾರೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೋದಿ ಅವರು ‘ದೇಣಿಗೆ ಪಡೆಯುತ್ತಿದ್ದಾರೋ ಅಥವಾ ದಂಧೆ ನಡೆಸುತ್ತಿದ್ದಾರೋ ಗೊತ್ತಿಲ್ಲ’ ಎಂದು ವ್ಯಂಗ್ಯಭರಿತ ಮೀಮ್‌ ಹಂಚಿಕೊಂಡಿದ್ದಾರೆ. ‘ಖುದ್ದು ₹12,000 ಕೋಟಿ ತಿಂದು ನಮಗೆ ಎರಡು ರೂಪಾಯಿ ಕೊಡ್ತಿದ್ದಾನೆ ಪಾಪಿ’ ಎಂದು ಮತ್ತೊಂದು ವ್ಯಂಗ್ಯ ಚಿತ್ರವನ್ನು ಪ್ರಕಾಶ್ ರಾಜ್ ಶೇರ್ ಮಾಡಿದ್ದಾರೆ.

Read More

ಗಲ್ಫ್‌ ಆಫ್‌ ಅಡೆನ್‌ನಲ್ಲಿ ಹಡಗೊಂದರ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ದಾಳಿಯ ಹಿಂದೆ ಯೆಮೆನ್‌ನ ಹುಥಿ ಬಂಡುಕೋರರ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ಬ್ರಿಟೀಷ್‌ ಮಿಲಿಟರಿಯ ಸಂಯುಕ್ತಸಂಸ್ಥಾನ ಸಮುದ್ರ ವಹಿವಾಟು ಕೇಂದ್ರವು ದಾಳಿಯ ಬಗ್ಗೆ ಮಾಹಿತಿ ನೀಡಿದ್ದು, ‘ದಕ್ಷಿಣ ಯೆಮೆನ್‌ನ ಅಡೆನ್‌ ಕರಾವಳಿಯಲ್ಲಿ ದಾಳಿ ನಡೆದಿದ್ದು, ಯಾವುದೇ ರೀತಿಯ ಹಾನಿ ಮತ್ತು ಗಾಯಗಳಾಗಿರುವ ಬಗ್ಗೆ ವರದಿಯಾಗಿಲ್ಲ’ ಎಂದು ಸೆಂಟ್ರಲ್‌ ಕಮಾಂಡ್ ತಿಳಿಸಿದೆ. ಹುಥಿ ಬಂಡುಕೋರರು ಈವರೆಗೆ ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ. ಆದರೆ ಸಾಮಾನ್ಯವಾಗಿ ಹುಥಿ ಬಂಡುಕೋರರು ದಾಳಿ ನಡೆಸಿ ತುಂಬಾ ಸಮಯದ ಬಳಿಕ ತಮ್ಮ ಕೈವಾಡದ ಬಗ್ಗೆ ಘೋಷಣೆ ಮಾಡುತ್ತಾರೆ. ಅಡೆನ್‌ನಲ್ಲಿ ನಡೆಯುವ ಇಂಧನ ಮತ್ತು ಸರಕು ಸಾಗಾಣೆಗೆ ಅಡ್ಡಿಪಡಿಸುವ ಉದ್ದೇಶದಿಂದ ಹುಥಿ ಬಂಡುಕೋರರು ಪದೇ ಪದೇ ಡ್ರೋನ್‌ ಮತ್ತು ಮಿಸೈಲ್‌ ದಾಳಿಯನ್ನು ನಡೆಸುತ್ತಿದ್ದಾರೆ. ಈ ಬಾರಿ ನಡೆದ ದಾಳಿಯು ಹುಥಿ ಬಂಡುಕೋರರ ಕೃತ್ಯವೇ ಎಂದು ಹೇಳಲಾಗುತ್ತಿದೆ.

Read More

ಬಾಲಿವುಡ್ ಹ್ಯಾಂಡ್ ಸಮ್ ಹೀರೋ ರಣಬೀರ್ ಕಪೂರ್ ತಮ್ಮ ಲುಕ್ ಹಾಗೂ ನಟನೆಯ ಮೂಲಕ ಕೋಟ್ಯಾಂತರ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ. ಈತನ ಬ್ಯೂಟಿಗೆ ಮನಸೋತ ಸ್ವೀಟ್ ಸುಂದರಿ ಆಲಿಯಾ ಭಟ್ ಆತನ ಕೈಹಿಡಿದಿದ್ದು ಈ ಜೋಡಿಗೆ ಮುದ್ದಾದ ಮಗುವಿದೆ. ಆದರೆ ಈ ಮಧ್ಯೆ ರಣಬೀರ್ ಗೆ ಆಳಿಯಾ ಎರಡನೇ ಹೆಂಡತಿ ಎಂಬ ಶಾಂಕಿಂಗ್ ಹೇಳಿಕೆಯನ್ನು ಸ್ವತಃ ರಣಬೀರ್ ನೀಡಿದ್ದರು. ರಣಬೀರ್ ತನ್ನ ಜೀವನದಲ್ಲಿ ಅನೇಕರೊಂದಿಗೆ ಡೇಟಿಂಗ್ ಮಾಡಿದ್ದಾನೆ. ದೀಪಿಕಾ ಪಡುಕೋಣೆ ಮತ್ತು ಕತ್ರಿನಾ ಕೈಫ್ ಅವರಂತಹ ದೊಡ್ಡ ಹೆಸರುಗಳೂ ರಣಬೀರ್ ಡೇಟಿಂಗ್ ಲೀಸ್ಟ್ ನಲ್ಲಿದೆ. ಆಲಿಯಾಗೂ ಮೊದಲು, ರಣಬೀರ್ ಕಪೂರ್ ಈ ಹಿಂದೆ ಒಮ್ಮೆ ಮದುವೆಯಾಗಿದ್ದರು ಎಂದು ನಟ ಸ್ವತಃ ಒಪ್ಪಿಕೊಂಡಿದ್ದಾರೆ.ಸಂದರ್ಶನವೊಂದರಲ್ಲಿ, ರಣಬೀರ್ ಕಪೂರ್ ಸ್ವತಃ ಆಸಕ್ತಿದಾಯಕ ಗೂಗಲ್ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಈ ಪ್ರಶ್ನೆಗಳಲ್ಲಿ ಒಂದು ಅವರ ಮಾಜಿ ಪತ್ನಿಗೆ ಸಂಬಂಧಿಸಿದೆ. ಈ ಬಗ್ಗೆ ನಟ ವಿವರಣೆಯನ್ನು ನೀಡಿದ್ದರು.. “ಇದು ಹುಚ್ಚು ಅಭಿಮಾನಕ್ಕೆ ಸಂಬಂಧಿಸಿದ ಘಟನೆ.. ನನ್ನ ಮೇಲಿನ ಪ್ರೀತಿ ಅಭಿಮಾನದಿಂದ…

Read More

ಗಾಝಾದ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಯಲ್ಲಿ ಗಾಝಾದ 13,000 ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ವಿಶ್ವಸಂಸ್ಥೆಯ ಮಕ್ಕಳ ಸಂಸ್ಥೆ ಹೇಳಿದೆ. ಇಲ್ಲಿನ ಅನೇಕ ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದು ಅವರಲ್ಲಿ “ಅಳಲು ಸಹ ಶಕ್ತಿಯಿಲ್ಲ” ಎಂದು ಕಳವಳ ವ್ಯಕ್ತಪಡಿಸಿದೆ. ದಾಳಿಯಲ್ಲಿ ಸಾವಿರಾರು ಜನರು ಗಾಯಗೊಂಡಿದ್ದಾರೆ ಅಥವಾ ಅವರು ಎಲ್ಲಿದ್ದಾರೆಂದು ನಾವು ನಿರ್ಧರಿಸಲು ಸಾಧ್ಯವಿಲ್ಲ. ಅವರು ಅವಶೇಷಗಳ ಅಡಿಯಲ್ಲಿ ಸಿಲುಕಿರಬಹುದು … ವಿಶ್ವದ ಬೇರೆ ಯಾವುದೇ ಸಂಘರ್ಷದಲ್ಲಿ ಮಕ್ಕಳಲ್ಲಿ ಸಾವಿನ ಪ್ರಮಾಣವನ್ನು ನಾವು ನೋಡಿಲ್ಲ” ಎಂದು ಯುನಿಸೆಫ್ ಕಾರ್ಯನಿರ್ವಾಹಕ ನಿರ್ದೇಶಕ ಕ್ಯಾಥರೀನ್ ರಸ್ಸೆಲ್ ತಿಳಿಸಿದ್ದಾರೆ. “ನಾನು ತೀವ್ರ ರಕ್ತಹೀನತೆ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ವಾರ್ಡ್ ಗಳಲ್ಲಿದ್ದೆ. ಇಡೀ ವಾರ್ಡ್ ಸಂಪೂರ್ಣವಾಗಿ ಶಾಂತವಾಗಿದೆ. ಏಕೆಂದರೆ ಮಕ್ಕಳು ಹಾಗೂ ಶಿಶುಗಳಲ್ಲಿ ಅಳಲು ಸಹ ಶಕ್ತಿಯೂ ಇಲ್ಲ.”ಎಂದಿದ್ದಾರೆ. ಈ ತಿಂಗಳ ಆರಂಭದಲ್ಲಿ ವಿಶ್ವಸಂಸ್ಥೆಯ ತಜ್ಞರು ಇಸ್ರೇಲ್ ಗಾಝಾದ ಆಹಾರ ವ್ಯವಸ್ಥೆಯನ್ನು ವ್ಯಾಪಕ “ಹಸಿವಿನ ಅಭಿಯಾನದ” ಭಾಗವಾಗಿ ನಾಶಪಡಿಸುತ್ತಿದೆ ಎಂದು ಹೇಳಿದ್ದರು. ಇಸ್ರೇಲ್ ಇದನ್ನು ತಿರಸ್ಕರಿಸಿತು. ಯುದ್ಧದಲ್ಲಿ…

Read More

ಕನ್ನಡದ ಹುಡುಗಿ, ಬಾಲಿವುಡ್ ಬೆಡಗಿ ನಟಿ ದೀಪಿಕಾ ಪಡುಕೋಣೆ ಗರ್ಭಿಣಿಯಾಗಿದ್ದು ಸದ್ಯ ಹೊಸ ಅತಿಥಿಯ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಈ ಮಧ್ಯೆ ದೀಪಿಕಾ ಎಲ್ಲಿ ಮಗುವಿಗೆ ಜನ್ಮ ನೀಡಲಿದ್ದಾರೆ ಎಂಬ ಸುದ್ದಿ ಹರಿದಾಡಿದ್ದು ಅದಕ್ಕೀಗ ಉತ್ತರ ಸಿಕ್ಕಿದೆ. ದೀಪಿಕಾ ತಮ್ಮ ತವರು ಮನೆಯಾದ ಬೆಂಗಳೂರಿನಲ್ಲಿಯೇ ಮಗುವಿಗೆ ಜನ್ಮ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ದೀಪಿಕಾ ಮಗು ಆಗುವವರೆಗೂ ಅವರು ತಮ್ಮ ಬಹುತೇಕ ಸಮಯವನ್ನು ಬೆಂಗಳೂರಿನಲ್ಲಿಯೇ ಕಳೆಯಲಿದ್ದಾರೆ. 14 ನವೆಂಬರ್ 2018ರಲ್ಲಿ ಮದುವೆಯಾದ ದೀಪಿಕಾ ಪಡುಕೋಣೆ ಹಾಗೂ ರಣ್ವೀರ್ ಸಿಂಗ್ ಮದುವೆಯಾದ ಆರು ವರ್ಷಗಳ ಬಳಿಕ ಪೋಷಕರಾಗುತ್ತಿದ್ದಾರೆ. ಇತ್ತೀಚೆಗಷ್ಟೆ ದೀಪಿಕಾ ಪಡುಕೋಣೆ ಗರ್ಭಿಣಿ ಆಗಿರುವ ವಿಷಯವನ್ನು ರಣ್ವೀರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆಲಿಯಾ ಭಟ್, ಕರೀನಾ ಕಪೂರ್ ಇನ್ನೂ ಹಲವು ತಾರೆಯರು ಮುಂಬೈನಲ್ಲಿಯೇ ತಾಯಿಯಾದರು. ಮುಂಬೈನ ಪ್ರತಿಷ್ಠಿತ ಆಸ್ಪತ್ರೆ ಕೋಕಿಲಾ ಬೆನ್​ನ ವೈದ್ಯರ ನೆರವನ್ನು ಪಡೆದುಕೊಂಡರು. ಆದರೆ ದೀಪಿಕಾ ಪಡುಕೋಣೆ ಇದೀಗ ಬೆಂಗಳೂರಿನಲ್ಲಿಯೇ ತಾಯಿಯಾಗಲು ನಿರ್ಧರಿಸಿದ್ದಾರೆ. ಇಲ್ಲಿನ ಪ್ರತಿಷ್ಠಿತ ಆಸ್ಪತ್ರೆ ಹಾಗೂ ವೈದ್ಯರುಗಳ ನೆರವನ್ನು ಪಡೆದುಕೊಳ್ಳಲಿದ್ದಾರೆ.…

Read More

ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅಧ್ಯಕ್ಷೀಯ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ್ದಾರೆ. ಶೇಕಡಾ 70 ರಷ್ಟು ಚುನಾವಣಾ ಪ್ರೋಟೋಕಾಲ್ಗಳನ್ನು ಸಂಸ್ಕರಿಸಿದ ಫಲಿತಾಂಶದ ಆಧಾರದ ಮೇಲೆ ಶೇಕಡಾ 87.17 ರಷ್ಟು ಮತಗಳನ್ನು ಪಡೆಯುವ ಮೂಲಕ ಜಯಭೇರಿ ಭಾರಿಸಿದ್ದಾರೆ ಎಂದು ರಷ್ಯಾ ಮೂಲದ ಟಾಸ್ ವರದಿ ಮಾಡಿದೆ. ಕಮ್ಯುನಿಸ್ಟ್ ಪಾರ್ಟಿ ಆಫ್ ದಿ ರಷ್ಯನ್ ಫೆಡರೇಶನ್ ಅಭ್ಯರ್ಥಿ ನಿಕೋಲಾಯ್ ಖರಿಟೊನೊವ್ ಶೇ 4.8ರಷ್ಟು ಮತಗಳನ್ನು ಪಡೆದು ಎರಡನೇ ಸ್ಥಾನ ಪಡೆದರೆ, ನ್ಯೂ ಪೀಪಲ್ಸ್ ಪಾರ್ಟಿ ಅಭ್ಯರ್ಥಿ ವ್ಲಾಡಿಸ್ಲಾವ್ ಡಾವಂಕೊವ್ ಶೇ 4.1ರಷ್ಟು ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದರು. ಲಿಬರಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ರಷ್ಯಾ (ಎಲ್ಡಿಪಿಆರ್) ಅಭ್ಯರ್ಥಿ ಲಿಯೋನಿಡ್ ಸ್ಲಟ್ಸ್ಕಿ ಕೇವಲ 3.15 ಪ್ರತಿಶತದಷ್ಟು ಮತಗಳನ್ನು ಪಡೆದಿದ್ದಾರೆ. ಭಾನುವಾರ ಸಂಜೆ 6 ಗಂಟೆಗೆ (ಮಾಸ್ಕೋ ಸಮಯ) ಪ್ರಾಥಮಿಕ ಮಾಹಿತಿಯ ಪ್ರಕಾರ, ಮಾರ್ಚ್ 15-17 ರಿಂದ ಮೂರು ದಿನಗಳಲ್ಲಿ ಮೊದಲ ಬಾರಿಗೆ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಮತದಾನದ ಪ್ರಮಾಣವು ಶೇಕಡಾ 74.22 ರಷ್ಟಿದೆ. 2018ರ ಚುನಾವಣೆಯಲ್ಲಿ…

Read More

ಖ್ಯಾತ ರಿಯಾಲಿಟಿ ಶೋ ಸರಿಗಮಪ ಸೀಸನ್ 20 ಮುಗಿದಿದೆ. ಈ ಸೀಸನ್ ನ ವಿನ್ನರ್ ಯಾರಾಗ್ತಾರೆ ಎನ್ನುವ ಪ್ರಶ್ನೆ ಹಲವರನ್ನು ಕಾಡಿತ್ತು. ಅದಕ್ಕೀಗ ಉತ್ತರ ಸಿಕ್ಕಿದ್ದು ಸರಿಗಮಪ ಸೀಸನ್ 20ರ ಕಿರೀಟವನ್ನು ದರ್ಶನ್ ಪಡೆದುಕೊಂಡಿದ್ದಾರೆ. ಈ ಹಿಂದೆಯೇ ನಡೆಯಬೇಕಿದ್ದ ಸರಿಗಮಪ ಫೀನಾಳೆ ಕಾರ್ಯಕ್ರಮ ಮುಂದೆ ಹೋಗಿದ್ದು ನಿನ್ನೆ ಕಾರ್ಯಕ್ರಮ ನಡೆದಿದೆ. ರಮೇಶ್​​ ಲಮಾಣಿ ಫಸ್ಟ್​ ರನರ್ ಅಪ್, ಡಾ.ಶ್ರಾವ್ಯಾ ರಾವ್ 2nd ರನ್ನರ್ ಅಪ್ ಆಗಿದ್ದಾರೆ. ತಮ್ಮ ಅದ್ಭುತ ಪ್ರತಿಭೆಯಿಂದ ಎಲ್ಲರ ಮನಗೆದ್ದು ಸರಿಗಮಪ ಸೀಸನ್ 20ರ ಗೆಲುವಿನ ಕಿರೀಟವನ್ನು ದರ್ಶನ್ ನಾರಾಯಣ್ ತೊಟ್ಟಿದ್ದಾರೆ. ಅರ್ಜುನ್ ಜನ್ಯ, ಹಂಸಲೇಖಾ ಹಾಗೂ ವಿಜಯ್ ಪ್ರಕಾಶ್​ ಕಾರ್ಯಕ್ರಮದಲ್ಲಿ ನಿರ್ಣಾಯಕರಾಗಿದ್ದರೆ, ಎಂದಿನಂತೆ ಅನುಶ್ರೀ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಸ್ಪರ್ಧೆಯಲ್ಲಿ ಗೆದ್ದವರಿಗೆ ನಗದು ಬಹುಮಾನವನ್ನು ನೀಡಲಾಗಿದೆ. ಫಿನಾಲೆ ಸಡಗರಕ್ಕೆ ಮೆರುಗು ಕೊಟ್ಟ ಅಪ್ಪು ಬರ್ತ್‌ಡೇ ಸಂಭ್ರಮ ಹೆಚ್ಚು ಜನರನ್ನು ಮುಟ್ಟಿತ್ತು. ಈ ದಿನವನ್ನು ವಿಶೇಷವಾಗಿ ಆಚರಿಸಲಾಯಿತು. ಪುನೀತ್​ ರಾಜ್​ಕುಮಾರ್​ ಅವರ ಕಟೌಟ್​ ನಿಲ್ಲಿಸಲಾಗಿತ್ತು ಯಾದಗಿರಿ ಜಿಲ್ಲಾ ಮೈದಾನದಲ್ಲಿ…

Read More

ಅರುಣಾಚಲ ಪ್ರದೇಶದ ಮೇಲಿನ ತನ್ನ ಹಕ್ಕನ್ನು ಮತ್ತೆ ಪುನರುಚ್ಚರಿಸಿರುವ ಚೀನಾ ಮಿಲಿಟರಿಯು, ಈ ಪ್ರದೇಶವು ಚೀನಾದ ಅವಿಭಾಜ್ಯ ಅಂಗ ಎಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಅರುಣಾಚಲ ಪ್ರದೇಶಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದಕ್ಕೆ ಬೀಜಿಂಗ್‌ ಆಕ್ಷೇಪ ವ್ಯಕ್ತಪಡಿಸಿದ್ದು ಇದನ್ನು ಭಾರತ ತಿರಸ್ಕರಿಸಿತ್ತು. ಇದರ ಬೆನ್ನಲ್ಲೇ ಚೀನಾ ಮಿಲಿಟರಿ ಈ ರೀತಿಯಾಗಿ ಪ್ರತಿಕ್ರಿಯಿಸಿದೆ. ‘ಝಾಂಗ್ನಾನ್‌ನ (ಟಿಬೆಟ್‌ಗೆ ಚೀನಾ ಇಟ್ಟಿರುವ ಹೆಸರು) ದಕ್ಷಿಣ ಭಾಗ (ಅರುಣಾಚಲ ಪ್ರದೇಶ) ಚೀನಾದ ಭೂ ಪ್ರದೇಶದ ಅವಿಭಾಜ್ಯ ಅಂಗ. ಅದನ್ನು ಭಾರತ ಅಕ್ರಮವಾಗಿ ತನ್ನದೆಂದು ಹೇಳುತ್ತಿದೆ. ಅದನ್ನು ಚೀನಾ ಎಂದಿಗೂ ಒಪ್ಪಿಕೊಳ್ಳುವುದಿಲ್ಲ ಮತ್ತು ಬಲವಾಗಿ ವಿರೋಧಿಸುತ್ತದೆ’ ಎಂದು ಚೀನಾದ ರಕ್ಷಣಾ ಸಚಿವಾಲಯದ ವಕ್ತಾರ ಕರ್ನಲ್‌ ಜಾಂಗ್‌ ಕ್ಸಿಯೋಗಾಂಗ್‌ ಹೇಳಿದ್ದಾರೆ. ಚೀನಾ ರಕ್ಷಣಾ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಪೋಸ್ಟ್‌ ಮಾಡಲಾದ ವರದಿಯ ಪ್ರಕಾರ, ಅರುಣಾಚಲ ಪ್ರದೇಶದ ಸೆಲಾ ಸುರಂಗದ ಮೂಲಕ ಭಾರತವು ತನ್ನ ಸೇನಾ ಸನ್ನದ್ಧತೆಯನ್ನು ಹೆಚ್ಚಿಸಿದ್ದಕ್ಕೆ ಜಾಂಗ್‌ ಪ್ರತಿಕ್ರಿಯಿಸಿದ್ದಾರೆ. ಅರುಣಾಚಲ ಪ್ರದೇಶವನ್ನು ‘ದಕ್ಷಿಣ ಟಿಬೆಟ್‌’ ಎಂದು ಚೀನಾ ಪ್ರತಿಪಾದಿಸುತ್ತದೆ. ಅಲ್ಲದೆ…

Read More

ಬಾಲಿವುಡ್ ಬ್ಯೂಟಿ ನಟಿ ಪ್ರಿಯಾಂಕಾ ಚೋಪ್ರಾ ಇತ್ತಿಚೆಗೆ ಕಾರ್ಯಕ್ರಮವೊಂದರಲ್ಲಿ ಧರಿಸಿದ್ದ ನೆಕ್ಲೇಸ್ ಸಖತ್ ಸುದ್ದಿಯಾಗಿದೆ. ಪಾರ್ಟಿಯೊಂದರಲ್ಲಿ ಭಾಗಿಯಾಗಿದ್ದ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ಧರಿಸಿದ್ದ ದುಬಾರಿ ನೆಕ್ಲೇಸ್ ಸಖತ್ ಹೈಲೈಟ್ ಆಗಿದೆ. 2 ದಿನಗಳ ಹಿಂದೆ ಪ್ರಿಯಾಂಕಾ ಚೋಪ್ರಾ ಮಗಳು ಮಾಲ್ತಿ ಮೇರಿಯೊಂದಿಗೆ ಭಾರತಕ್ಕೆ ಬಂದಿದ್ದರು. ಈ ವೇಳೆ ಇಟಾಲಿಯನ್ ಆಭರಣ ಬ್ರ್ಯಾಂಡ್ ಬಲ್ಗೇರಿಯ ಸ್ಟೋರ್ ಲಾಂಚ್ ಗಾಗಿ ಪ್ರಿಯಾಂಕಾ ಆಗಮಿಸಿದ್ದು, ಕಾರ್ಯಕ್ರಮದಲ್ಲೂ ಭಾಗಿಯಾಗಿದ್ರು. ಸ್ಟೋರ್ ಲಾಂಚ್ ಕಾರ್ಯಕ್ರಮದಲ್ಲಿ ನಟಿ ಪ್ರಿಯಾಂಕಾ ವೈಟ್ ಕಲರ್ ಡ್ರೆಸ್ ಗೆ ಬ್ಯೂಟಿಫುಲ್ ಸ್ನೇಕ್ ಡಿಸೈನ್ ಡೈಮಂಡ್ ನೆಕ್ಲೇಸ್ ಧರಿಸಿದ್ದರು. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪ್ರಿಯಾಂಕಾ ಚೋಪ್ರಾ, ಇಶಾ ಅಂಬಾನಿ ಅವರು ಆಯೋಜಿಸಿದ್ದ ಹೋಳಿ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಅಲ್ಲೂ ಪ್ರಿಯಾಂಕಾ ಚೋಪ್ರಾ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಪ್ರಿಯಾಂಕಾ ಧರಿಸಿದ್ದ ನೆಕ್ಲೇಸ್ ಚರ್ಚೆಗೆ ಕಾರಣವಾಗಿದೆ. ಹೋಳಿ ಪಾರ್ಟಿಯಲ್ಲಿ ಪ್ರಿಯಾಂಕಾ ಚೋಪ್ರಾ ಹೈ ಸ್ಲಿಟ್ ಸೀರೆಯನ್ನು ಧರಿಸಿದ್ದರು, ಜೊತೆ ದೇಸಿ…

Read More

ಯೂಟ್ಯೂಬರ್ ಹಾಗೂ ಬಿಗ್‌ ಬಾಸ್‌ ಒಟಿಟಿ ವಿನ್ನರ್‌ ಎಲ್ವಿಶ್‌ ಯಾದವ್‌ನನ್ನು ನೋಯ್ಡಾ ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಇತ್ತೀಚೆಗೆ, ನೋಯ್ಡಾ ಪೊಲೀಸರು ಹಾವಿನ ವಿಷದೊಂದಿಗೆ 5 ಜನರನ್ನು ಬಂಧಿಸಿದ್ದರು. ಕಳೆದ ವರ್ಷ, ನೋಯ್ಡಾ ಪೊಲೀಸರು ಸೆಕ್ಟರ್ 39 ರಲ್ಲಿ ಈ ಪ್ರಕರಣದ ಕುರಿತು ಎಫ್‌ಐಆರ್ ದಾಖಲಿಸಿದ್ದರು, ಇಂದು ಎಲ್ವಿಶ್ ಯಾದವ್ ಅವರನ್ನು ವಿಚಾರಣೆಗೆ ಕರೆಯಲಾಗಿತ್ತು. ಅದರ ಬೆನ್ನಲ್ಲಿಯೇ ಅವರನ್ನು ಬಂಧಿಸಲಾಗಿದೆ. ಸ್ವಲ್ಪ ಸಮಯದ ನಂತರ ಎಲ್ವಿಶ್ ಯಾದವ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ. ಘಟನೆ ಹಿನ್ನೆಲೆ : ಕಳೆದ ವರ್ಷ ನವೆಂಬರ್ 8 ರಂದು ನೋಯ್ಡಾ ಪೊಲೀಸರು ರೇವ್ ಪಾರ್ಟಿಯಲ್ಲಿ ಹಾವಿನ ವಿಷವನ್ನು ಬಳಸಿದ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಿದ್ದರು. ಯೂಟ್ಯೂಬರ್ ಎಲ್ವಿಶ್ ಯಾದವ್ ಕೂಡ ಈ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಪೊಲೀಸರು ಐವರನ್ನು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.

Read More