ಗಲ್ಫ್ ಆಫ್ ಅಡೆನ್ನಲ್ಲಿ ಹಡಗೊಂದರ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ದಾಳಿಯ ಹಿಂದೆ ಯೆಮೆನ್ನ ಹುಥಿ ಬಂಡುಕೋರರ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ.
ಬ್ರಿಟೀಷ್ ಮಿಲಿಟರಿಯ ಸಂಯುಕ್ತಸಂಸ್ಥಾನ ಸಮುದ್ರ ವಹಿವಾಟು ಕೇಂದ್ರವು ದಾಳಿಯ ಬಗ್ಗೆ ಮಾಹಿತಿ ನೀಡಿದ್ದು, ‘ದಕ್ಷಿಣ ಯೆಮೆನ್ನ ಅಡೆನ್ ಕರಾವಳಿಯಲ್ಲಿ ದಾಳಿ ನಡೆದಿದ್ದು, ಯಾವುದೇ ರೀತಿಯ ಹಾನಿ ಮತ್ತು ಗಾಯಗಳಾಗಿರುವ ಬಗ್ಗೆ ವರದಿಯಾಗಿಲ್ಲ’ ಎಂದು ಸೆಂಟ್ರಲ್ ಕಮಾಂಡ್ ತಿಳಿಸಿದೆ.
ಹುಥಿ ಬಂಡುಕೋರರು ಈವರೆಗೆ ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ. ಆದರೆ ಸಾಮಾನ್ಯವಾಗಿ ಹುಥಿ ಬಂಡುಕೋರರು ದಾಳಿ ನಡೆಸಿ ತುಂಬಾ ಸಮಯದ ಬಳಿಕ ತಮ್ಮ ಕೈವಾಡದ ಬಗ್ಗೆ ಘೋಷಣೆ ಮಾಡುತ್ತಾರೆ.
ಅಡೆನ್ನಲ್ಲಿ ನಡೆಯುವ ಇಂಧನ ಮತ್ತು ಸರಕು ಸಾಗಾಣೆಗೆ ಅಡ್ಡಿಪಡಿಸುವ ಉದ್ದೇಶದಿಂದ ಹುಥಿ ಬಂಡುಕೋರರು ಪದೇ ಪದೇ ಡ್ರೋನ್ ಮತ್ತು ಮಿಸೈಲ್ ದಾಳಿಯನ್ನು ನಡೆಸುತ್ತಿದ್ದಾರೆ. ಈ ಬಾರಿ ನಡೆದ ದಾಳಿಯು ಹುಥಿ ಬಂಡುಕೋರರ ಕೃತ್ಯವೇ ಎಂದು ಹೇಳಲಾಗುತ್ತಿದೆ.