ಕೆಜಿಎಫ್ ಸಿನಿಮಾದ ಬಳಿಕ ಯಶ್ ನಟನೆಯ ಮುಂದಿನ ಚಿತ್ರ ಟಾಕ್ಸಿಕ್ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ದಾಸ್ ಆಕ್ಷನ್ ಕಟ್ ಹೇಳುತ್ತಿರುವ ಈ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಾಣ ಮಾಡುತ್ತಿವೆ. ಈ ಸಿನಿಮಾದಲ್ಲಿ ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಅಭಿನಯಿಸುತ್ತಾರೆ ಎಂಬ ಸುದ್ದಿ ಕೇಳಿ ಬಂದಿದ್ದು ಅದಕ್ಕೀಗ ಸ್ಪಷ್ಟನೆ ಸಿಕ್ಕಿದೆ. ‘ಟಾಕ್ಸಿಕ್’ ಚಿತ್ರದಲ್ಲಿ ನಟಿ ಕರೀನಾ ಕಪೂರ್ ಖಾನ್ ಅವರು ಯಶ್‌ಗೆ ಸಹೋದರಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಇದೆ. ಟಾಕ್ಸಿಕ್ ಚಿತ್ರವು ಸಹೋದರ ಮತ್ತು ಸಹೋದರಿ ನಡುವಿನ ಕಥೆಯಾಗಿದ್ದು, ಯಶ್ ಮತ್ತು ಕರೀನಾ ಇಲ್ಲಿ ಒಡಹುಟ್ಟಿದವರಾಗಿ ಕಾಣಿಸಿಕೊಳ್ಳಲಿದ್ದಾರೆ. ನಿರ್ದೇಶಕಿ ಗೀತು ಮೋಹನ್‌ದಾಸ್ ಅವರು ಕರೀನಾ ಅವರನ್ನೇ ಈ ಪಾತ್ರಕ್ಕೆ ಆಯ್ಕೆ ಮಾಡಿಕೊಳ್ಳಬೇಕು ಎಂದು ಬಹಳ ಆಸಕ್ತಿ ಹೊಂದಿದ್ದರು. ಸದ್ಯ ಮಾತುಕತೆಗಳು ಇನ್ನೂ ಚಾಲ್ತಿಯಲ್ಲಿದ್ದು ಕರೀನಾ ಕಡೆಯಿಂದ ಆಲ್ ಮೋಸ್ಟ್ ಗ್ರೀನ್ ಸಿಗ್ನಲ್ ಸಿಕ್ಕಿದೆಯಂತೆ. ಇನ್ನು, ಯಶ್ ಅವರಿಗೆ ‘ಟಾಕ್ಸಿಕ್’ ಸಿನಿಮಾದಲ್ಲಿ…
Author: Author AIN
ಬಿಗ್ ಬಾಸ್ ನ ಮಾಜಿ ಸ್ಪರ್ಧಿಗಳು ಒಬ್ಬರ ಹಿಂದೊಬ್ಬರಂತೆ ಸಮಸ್ಯೆಗೆ ಸಿಲುಕಿಕೊಳ್ಳುತ್ತಿದ್ದಾರೆ. ಬಿಗ್ ಬಾಸ್ ನ ಮಾಜಿ ಸ್ಪರ್ಧಿಗಳಾದ ಎಲ್ವಿಶ್ ಯಾದವ್ ಹಾಗೂ ವಿಜೇತ ಮುನಾವತ್ ಈಗಾಗಲೇ ಜೈಲಿಗೆ ಹೋಗಿ ಬಂದಿದ್ದಾರೆ. ಇದೀಗ ಬಿಗ್ ಬಾಸ್ ನ ಮತ್ತೋರ್ವ ಸ್ಪರ್ಧಿ ಖ್ಯಾತ ಯುಟ್ಯೂಬರ್ ಅನುರಾಗ್ ದೋಬಲ್ ಕೂಡ ಪೊಲೀಸರಿಂದ ಸಮಸ್ಯೆ ಎದುರಿಸಿದ್ದಾರೆ. ಅನುರಾಗ್ ಅವರ ಅತ್ಯಂತ ದುಬಾರಿ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದು ಮೂರು ಕೋಟಿ ದಂಡ ವಿಧಿಸಿದ್ದಾರೆ. ಯೂಟ್ಯೂಬರ್ ಅನುರಾಗ್ ದೋಬಲ್, ಯುಕೆ 07 ರೈಡರ್ ಹೆಸರಿನ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದು ಐಶಾರಾಮಿ ಕಾರು, ಬೈಕ್ಗಳನ್ನು ಖರೀದಿ ಮಾಡಿ ಚಲಾಯಿಸುತ್ತಾರೆ. ಸೆಲೆಬ್ರಿಟಿಗಳೊಟ್ಟಿಗೆ ಕಾರ್ನಲ್ಲಿ ರೈಡ್ ಸಹ ಹೋಗುತ್ತಾರೆ. ಐಪಿಎಲ್ ಸಮಯವಾದ್ದರಿಂದ ಐಪಿಎಲ್ನ ಸೆಲೆಬ್ರಿಟಿಗಳೊಟ್ಟಿಗೆ ವಿಡಿಯೋ ಮಾಡಲು ಚೆನ್ನೈಗೆ ತಮ್ಮ ದುಬಾರಿ ಲ್ಯಾಂಬೊರ್ಗಿನಿ ಕಾರನ್ನು ಅನುರಾಗ್ ದೋಬಲ್ ತಂದಿದ್ದರು. ಇಲ್ಲಿ ಕ್ರಿಕೆಟಿಗ ಸುರೇಶ್ ರೈನಾ ಜೊತೆ ವಿಡಿಯೋ ಮಾಡಿ ಇನ್ನೇನು ಹೊರಡಬೇಕಾದರೆ ಅವರ ಕಾರನ್ನು ಚೆನ್ನೈ ಪೊಲೀಸರು ಸೀಜ್ ಮಾಡಿದ್ದಾರೆ. ಸುಮಾರು 4…
ದಕ್ಷಿಣ ಅಮೆರಿಕ ಖಂಡದ ಎರಡನೇ ಅತಿದೊಡ್ಡ ಆರ್ಥಿಕತೆ ಎನಿಸಿದ ಅರ್ಜೆಂಟೀನಾ ಈಗ ಹಣದುಬ್ಬರದ ಸುಳಿಗೆ ಸಿಲುಕಿ ವಿಲವಿಲ ಒದ್ದಾಡುತ್ತಿದೆ. ಬೆಲೆ ಏರಿಕೆ ಅಲ್ಲಿನ ಜನರನ್ನು ಹೈರಾಣಗೊಳಿಸುತ್ತಿದೆ. ಇಂಥ ಸ್ಥಿತಿಯಲ್ಲಿ ಅರ್ಜೆಂಟೀನಾದ ಜನರು ಸಾಮಾನ್ಯ ಜೀವನ ನಡೆಸುವುದೇ ದುಬಾರಿಯಾಗಿದೆ. ಆರ್ಥಿಕ ಸ್ಥಿತಿಯಿಂದ ಹೈರಾಣಾಗಿರುವ ಸರ್ಕಾರ ಇದೀಗ ಹೊಸ ನಿರ್ಧರವೊಂದನ್ನು ತೆಗೆದುಕೊಂಡಿದೆ. ಆರ್ಥಿಕವಾಗಿ ಸ್ಥಿರವಾಗಿಲ್ಲದ ಅರ್ಜೆಂಟೀನಾ ಸರ್ಕಾರ ಆರ್ಥಿಕ ಸ್ಥಿತಿ ಸುಧಾರಿಸಲು ಸದ್ಯದಲ್ಲೇ 70 ಸಾವಿರ ಸರ್ಕಾರಿ ನೌಕರರನ್ನು ವಜಾಗೊಳಿಸಲು ನಿರ್ಧರಿಸಿದೆ. ಈ ಬಗ್ಗೆ ಬ್ಲೂಮ್ಬರ್ಗ್ ವರದಿ ಮಾಡಿದ್ದು, ಅಧ್ಯಕ್ಷ ಜೇವಿಯರ್ ಮಿಲೀ ಈ ಬಗ್ಗೆ ಸುಳಿವು ನೀಡಿದ್ದಾರೆ. ಸರ್ಕಾರಿ ನೌಕರರನ್ನು ವಜಾ ಗೊಳಿಸುವ ಮೂಲಕ ತಮ್ಮ ಆಕ್ರಮಣಕಾರಿ ಕಾರ್ಯತಂತ್ರವನ್ನು ಪ್ರದರ್ಶಿಸಿದ್ದಾರೆ ಎಂದು ಹೇಳಿದೆ. ಮಿಲೀ ಈ ಹೆಜ್ಜೆ ಪ್ರಭಾವಿ ಕಾರ್ಮಿಕ ಸಂಘಗಳಿಂದ ತೀವ್ರ ಪ್ರತಿರೋಧ ಎದುರಿಸುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ.
ಫ್ಲೋರಿಡ ದೇಶದಲ್ಲಿ 14 ವರ್ಷಕ್ಕಿಂತ ಕೆಳಗಿನ ವಯಸ್ಸಿನ ಮಕ್ಕಳು ಸಾಮಾಜಿಕ ಜಾಲತಾಣ ಬಳಸದಂತೆ ಹೊಸ ಕಾನೂನು ಜಾರಿಗೊಳಿಸಲಾಗಿದೆ. ಜೊತೆಗೆ 14 ಮತ್ತು 15 ವರ್ಷ ವಯಸ್ಸಿನ ಮಕ್ಕಳು ಸೋಶಿಯಲ್ ಮೀಡಿಯಾ ಬಳಸಲು ಪೋಷಕರ ಒಪ್ಪಿಗೆ ಪಡೆಯಬೇಕು ಎಂಬ ಕಾನೂನು ಜಾರಿಯಾಗಿದೆ. ಫ್ಲೋರಿಡಾ ಗವರ್ನರ್ ರಾನ್ ಡಿಸಾಂಟಿಸ್ 14 ವರ್ಷದೊಳಗಿನ ಅಪ್ರಾಪ್ತರಿಗೆ ಸೋಶಿಯಲ್ ಮೀಡಿಯಾ ಬಳಕೆ ನಿಷೇಧದ ಮಸೂದೆಗೆ ಸಹಿ ಹಾಕಿದ್ದಾರೆ. ಸಾಮಾಜಿಕ ಜಾಲತಾಣಗಳ ಬಳಕೆ ಅಪ್ರಾಪ್ತ ವಯಸ್ಸಿನ ಮಾನಸಿಕ ಆರೋಗ್ಯದ ಮೇಲೆ ನೇರ ಪ್ರಭಾವ ಬೀರುತ್ತದೆ. ಇದರಿಂದಲೇ ಈ ಹೊಸ ಕಾನುನೂ ಜಾರಿಗೊಳಿಸಲಾಗಿದೆ ಎಂದು ಡಿಸಾಂಟಿಸ್ ಹೇಳಿಕೆ ನೀಡಿರುವುದು ವರದಿಯಾಗಿದೆ. ನೂತನ ಕಾಯ್ದೆ ಪ್ರಕಾರ, ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ 14 ವರ್ಷದೊಳಗಿನ ಎಲ್ಲಾ ಮಕ್ಕಳ ಖಾತೆಗಳನ್ನು ಡಿಲೀಟ್ ಮಾಡುವಂತೆ ಸೂಚನೆ ನೀಡಲಾಗಿದೆ. NetChoice, Facebook ಮೆಟಾ ಪ್ಲಾಟ್‌ಫಾರ್ಮ್‌ಗಳು, TikTok ಮತ್ತು Snap ಅನ್ನು ಒಳಗೊಂಡಿರುವ ಟೆಕ್-ಇಂಡಸ್ಟ್ರಿ ಟ್ರೇಡ್ ಅಸೋಸಿಯೇಷನ್, ಕಳೆದ ಜೂನ್‌ನಲ್ಲಿ ಅರ್ಕಾನ್ಸಾಸ್ ಕಾನೂನನ್ನು ನಿಲ್ಲಿಸಲು ಮೊಕದ್ದಮೆ ಹೂಡಿತ್ತು. 40 ಕ್ಕೂ ಹೆಚ್ಚು…
ಇತ್ತೀಚಿನ ದಿನಗಳಲ್ಲಿ ವಯಸ್ಕರಿಗಿಂತ ಹೆಚ್ಚಾಗಿ ಮಕ್ಕಳು ಮೊಬೈಲ್ ಬಳಸುತ್ತಿದ್ದಾರೆ. ನಿತ್ಯ ಸಾಕಷ್ಟು ಸಮಯ ಮೊಬೈಲ್ ನಲ್ಲಿಯೇ ಮುಳುಗಿರುತ್ತಾರೆ. ದೊಡ್ಡವರಿಗಿಂತ ಚೆನ್ನಾಗಿ ಮೊಬೈಲ್ ಬಳಸುವುದನ್ನು ಮಕ್ಕಳು ಕಲಿತಿರುತ್ತಾರೆ. ಅದನ್ನ ಫೋಷಕರು ಪ್ರೆಸ್ಟಿಜ್ ರೀತಿಯಲ್ಲಿ ಬಿಂಬಿಸುತ್ತಾರೆ. ಆದರೆ ಮುಂದೆ ಅದೇ ಅಭ್ಯಾಸ ದೊಡ್ಡ ತಲೆ ನೋವಾಗಿ ಪರಿಣಮಿಸುತ್ತದೆ. ಇತ್ತೀಚೆಗೆ ನಡೆಸಿದ ಸಮೀಕ್ಷೆಯ ಪ್ರಕಾರ 5 ರಿಂದ 16 ವರ್ಷ ವಯಸ್ಸಿನ ಸುಮಾರು 60 ಪ್ರತಿಶತದಷ್ಟು ಮಕ್ಕಳು ಡಿಜಿಟಲ್ ವ್ಯಸನದ ಬಲಿಪಶುಗಳಾಗುವ ಎಲ್ಲಾ ಸಾಧ್ಯತೆಗಳಿವೆ. 1000 ಪೋಷಕರು ವರದಿ ಮಾಡಿದ ಮಕ್ಕಳ ವರ್ತನೆಯಿಂದ ಇದನ್ನು ಅಂದಾಜಿಸಲಾಗಿದೆ. ಮಕ್ಕಳು ಮೊಬೈಲ್ ನಲ್ಲೇ ಹೆಚ್ಚು ಸಮಯ ಕಳೆಯೋದ್ರಿಂದ ಕಳಪೆ ನಿದ್ರೆಯ ಗುಣಮಟ್ಟ, ಕಡಿಮೆ ದೈಹಿಕ ಚಟುವಟಿಕೆ, ಕಡಿಮೆ ಸಾಮಾಜಿಕ ಮತ್ತು ಶೈಕ್ಷಣಿಕ ಕಾರ್ಯಕ್ಷಮತೆ ಸೇರಿದಂತೆ ವಿವಿಧ ಅಪಾಯಗಳನ್ನು ಮೊಬೈಲ್‌ನಂತಹ ಡಿಜಿಟಲ್ ಮಾಧ್ಯಮಗಳ ಸ್ಕ್ರೀನ್ ಸೃಷ್ಟಿಸುತ್ತಿದೆ. ಆರೋಗ್ಯ ತಜ್ಞರು ದಿನಕ್ಕೆ 2-3 ಗಂಟೆಗಳ ಕಾಲ ಮಾತ್ರ ಮೊಬೈಲ್ ಬಳಸಲು ಶಿಫಾರಸು ಮಾಡುತ್ತಾರೆ. ಏಕೆಂದರೆ ಸ್ಕ್ರೀನ್ ಸಣ್ಣದಿರುವುದರಿಂದ ಇದು ಕಣ್ಣುಗಳ ಮೇಲೆ…
ಸ್ಯಾಂಡಲ್ವುಡ್ ನಟಿ ಅದಿತಿ ಪ್ರಭುದೇವ ತಾಯಿ ಆಗ್ತಿರುವ ಖುಷಿಯಲ್ಲಿದ್ದಾರೆ. ಇದೇ ಖುಷಿಯಲ್ಲಿ ನಟಿ ಅದ್ದೂರಿಯಾಗಿ ಫೋಟೋ ಶೂಟ್ ಮಾಡಿಸಿದ್ದಾರೆ. 2024ರ ಹೊಸ ವರ್ಷದ ದಿನದಂದು ತಾನು ತಾಯಿಯಾಗುತ್ತಿರುವ ಗುಡ್ ನ್ಯೂಸ್ ಹಂಚಿಕೊಂಡಿದ್ದ ನಟಿ ಇತ್ತೀಚೆಗೆ ಅದ್ದೂರಿಯಾಗಿ ಸೀಮಂತ ಶಾಸ್ತ್ರ ಮಾಡಿಸಿಕೊಂಡಿದ್ದರು. ಇದೀಗ ಚೆಂದದ ಫೋಟೋಶೂಟ್ ಮಾಡಿಸಿದ್ದಾರೆ. ರೆಡ್ ಅಂಡ್ ಗ್ರೀನ್ ಕಾಂಬಿನೇಷನ್ನ ಮೈಸೂರು ಸಿಲ್ಕ್ ಸೀರೆಯುಟ್ಟ ಅದಿತಿ ಪ್ರಭುದೇವ ಅಪ್ಪಟ ಉತ್ತರ ಕರ್ನಾಟಕದ ಚೆಲುವಂತೆ ರೆಡಿಯಾಗಿ ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ. ಕಾಸಿನ ಸರ, ಮೂಗುತಿ ತೊಟ್ಟ ಅದಿತಿಯ ಸೌಂದರ್ಯ ಇಮ್ಮಡಿಯಾಗಿದೆ. ಫೋಟೋಗಳನ್ನು ಸಾಮಾಜಿಕ ಜಾಲಾ ತಾಣದಲ್ಲಿ ಹಂಚಿಕೊಂಡಿರುವ ನಟಿ ಕೊನೆಗೂ ಈಡೇರಿದ ನನ್ನ ಪುಟ್ಟ ಆಸೆ ಎಂದು ಬರೆದುಕೊಂಡಿದ್ದಾರೆ. ಪತಿ ಜೊತೆ ಅದಿತಿ ಪ್ರಭುದೇವ ಫೋಟೋ ಶೂಟ್ ಮಾಡಿಸಿದ್ದು ಅವು ಸಾಮಾಜಿಕ ಜಾಲಾ ತಾಣದಲ್ಲಿ ವೈರಲ್ ಆಗಿದೆ. ಇತ್ತೀಚಿಗಷ್ಟೇ ಅದಿತಿ ಪ್ರಭುದೇವ ಅದ್ಧೂರಿಯಾಗಿ ಶ್ರೀಮಂತ ಶಾಸ್ತ್ರಕ್ಕೆ ಕೂಡ ಮಾಡಿಸಿಕೊಂಡ್ರು. ಕಾರ್ಯಕ್ರಮಕ್ಕೆ ಅನೇಕ ಸ್ಯಾಂಡಲ್ವುಡ್ ನಟ-ನಟಿಯರು ಕೂಡ ಆಗಮಿಸಿದ್ರು. ನಟ ಶರಣ್ ಕೂಡ…
ಇದೇ ಮೊದಲ ಬಾರಿಗೆ ಪ್ರತಿಷ್ಠಿತ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾಗವಹಿಸಲು ಸೌದಿ ಅರೇಬಿಯಾ ತಯಾರಿ ನಡೆಸುತ್ತಿದೆ. ಈ ಮೂಲಕ ಹೊಸ ಇತಿಹಾಸ ನಿರ್ಮಿಸಲು ಸೌದಿ ಸಜ್ಜಾಗಿದೆ. 27 ವರ್ಷದ ರೂಮಿ ಅಲ್ಕಹ್ತಾನಿ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಸೌದಿ ಅರೇಬಿಯಾವನ್ನು ಪ್ರತಿನಿಧಿಸುತ್ತಿದ್ದಾರೆ. ಈ ಮೂಲಕ ಸೌದಿ ಅರೇಬಿಯಾದ ಮಹಿಳಾ ಸಬಲೀಕರಣಕ್ಕೆ ಮಹತ್ವದ ಮೈಲಿಗಲ್ಲಾಗಲಿದೆ. ರೂಮಿ ಅಲ್ಕಹ್ತಾನಿ ಅವರು ಮಲೇಷ್ಯಾದಲ್ಲಿನ ಮಿಸ್ ಏಷ್ಯಾ ಮತ್ತು ಮಿಸ್ ಅರಬ್ ಪೀಸ್ ಸೇರಿದಂತೆ ವಿವಿಧ ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಸೌದಿ ಅರೇಬಿಯಾವನ್ನು ಪ್ರತಿನಿಧಿಸಿದ್ದರು. ಇದಲ್ಲದೇ ಮಿಸ್ ಮಿಡಲ್ ಈಸ್ಟ್ ಮತ್ತು ಮಿಸ್ ಅರಬ್ ವರ್ಲ್ಡ್ ಪೀಸ್ 2021 ರಂತಹ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ರೂಮಿ ತಾವು ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾಗವಹಿಸೋದಾಗಿ ತಿಳಿಸಿದ್ದಾರೆ. ಅರೇಬಿಕ್,ಇಂಗ್ಲಿಷ್, ಫ್ರೆಂಚ್ ಮತ್ತು ಬಹು ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡಬಲ್ಲ ರೂಮಿ ಅಲ್ಕಹ್ತಾನಿ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಅರಬ್ ರಾಷ್ಟ್ರವನ್ನು ಪ್ರತಿನಿಧಿಸುವ ಮೂಲಕ ವಿಶ್ವ ಸುಂದರಿ ಪಟ್ಟವನ್ನು ಮುಡಿಗೇರಿಸಿಕೊಳ್ಳುವ ನಿರೀಕ್ಷೆಯಿದೆ ಎಂದು ಸ್ಥಳೀಯ ಮಾಧ್ಯಮಗಳ ವರದಿಯಲ್ಲಿ ಉಲ್ಲೇಖಿಸಿವೆ.
ಮುಂಬೈನಲ್ಲಿನ ಹುಕ್ಕಾ ಬಾರ್, ಹುಕ್ಕಾ ಪಾಪ್ಯೂಲರ್ ಮೇಲೆ ತಡರಾತ್ರಿ ದಾಳಿ ನಡೆಸಿದ್ದ ಪೊಲೀಸರು ಬಿಗ್ಬಾಸ್ ವಿಜೇತ ಮುನಾವರ್ ಫಾರೂಖಿ ಸೇರಿದಂತೆ ಇನ್ನೂ 14 ಮಂದಿಯನ್ನು ಬಂಧಿಸಿದ್ದರು. ಎಲ್ಲರ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬಳಿಕ ಎಲ್ಲರನ್ನೂ ಬಿಡುಗಡೆ ಮಾಡಿದ್ದಾರೆ. ಮಂಗಳವಾರ ರಾತ್ರಿ ಹುಕ್ಕಾ ಪಾಪ್ಯೂಲರ್ ಮೇಲೆ ಪೊಲೀಸರು ದಾಳಿ ನಡೆಸಿದ್ದು ಈ ವೇಳೆ ಬಿಗ್ಬಾಸ್ ಹಿಂದಿ ಸೀಸನ್ 17ರ ವಿಜೇತ, ಸ್ಟಾಂಡಪ್ ಕಮಿಡಿಯನ್ ಮುನಾವರ್ ಫಾರೂಖಿ ಸಹ ಸ್ಥಳದಲ್ಲಿದ್ದರು. ಅವರನ್ನೂ ಸೇರಿದಂತೆ ಅಲ್ಲಿದ್ದ 14 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ದಾಳಿಯ ವೇಳೆ 13,500 ಮೌಲ್ಯದ ಹುಕ್ಕಾ ಪಾಟ್ಗಳು, 4500 ರೂಪಾಯಿ ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪೊಲೀಸರು ದಾಳಿ ನಡೆಸಿದಾಗ ಹಲವಾರು ಮಂದಿ ಸಿಗರೇಟು ಹಾಗೂ ಹುಕ್ಕಾ ಸೇವನೆ ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ. ಜಾಮೀನು ನೀಡಲು ಅವಕಾಶವಿದ್ದ ಕಾರಣ ಅವರನ್ನು ಆ ನಂತರ ಬಿಟ್ಟು ಕಳುಹಿಸಿದ್ದಾರೆ. ಮುನಾವರ್ ಫಾರೂಖಿ ಜನಪ್ರಿಯ ಸ್ಟಾಂಡಪ್ ಕಮಿಡಿಯನ್. ಕೆಲ ವರ್ಷಗಳ ಹಿಂದೆ ಮುನಾವರ್ ಫಾರೂಖಿ…
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದು ಸ್ಪರ್ಧೆಗೆ ಇಳಿದಿದ್ದಾರೆ. ಶಿವರಾಜ್ ಕುಮಾರ್ ಪತ್ನಿಯ ಪರ ಪ್ರಚಾರ ಮಾಡುತ್ತಿದ್ದಾರೆ. ಶಿವರಾಜ್ ಕುಮಾರ್ ಪ್ರಭಾವಿ ವ್ಯಕ್ತಿ ಆಗಿರುವುದರಿಂದ ಅವರು ನಟಿಸಿದ ಸಿನಿಮಾ, ಜಾಹೀರಾತುಗಳ ಮೇಲೆ ನಿರ್ಬಂಧ ಹೇರುವಂತೆ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಕೆ ಆಗಿತ್ತು. ಸಿನಿಮಾಗಳ ಮೇಲೆ ಬ್ಯಾನ್ ಹೇರಲು ಸಾಧ್ಯವಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ. ಭಾರತೀಯ ಜನತಾ ಪಾರ್ಟಿಯ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಆರ್. ರಘು ಇತ್ತೀಚೆಗೆ ಚುನಾವಣಾ ಅಧಿಕಾರಿಗಳಿಗೆ ಪತ್ರ ಬರೆದಿದ್ದರು. ‘ಸಿನಿಮಾ ಮತ್ತು ವೈಯಕ್ತಿಕ ವರ್ಚಸ್ಸಿನ ಮೂಲಕ ಶಿವರಾಜ್ಕುಮಾರ್ ರಾಜ್ಯದಲ್ಲಿ ಪ್ರಭಾವ ಹೊಂದಿದ್ದಾರೆ. ಲೋಕಸಭಾ ಚುನಾವಣೆ ಮುಗಿಯುವ ತನಕ ಶಿವರಾಜ್ಕುಮಾರ್ ಅವರ ಸಿನಿಮಾ, ಬಿಲ್ಬೋರ್ಡ್, ಜಾಹೀರಾತು ಪ್ರದರ್ಶನ ಮಾಡದಂತೆ ಚಿತ್ರಮಂದಿರ, ಟಿವಿ ಚಾನೆಲ್, ಸೋಶಿಯಲ್ ಮೀಡಿಯಾ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಆದೇಶ ನೀಡಬೇಕು’ ಎಂದು ಮನವಿ ಮಾಡಿದ್ದರು. ರಘು ಮನವಿಗೆ ಚುನಾವಣಾ ಆಯೋಗ…
ಇಂದು ತೆಲುಗು ಚಿತ್ರರಂಗದ ಖ್ಯಾತ ನಟ ರಾಮ್ ಚರಣ್ ಗೆ ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ಪತ್ನಿ ಉಪಾಸನಾ ಹಾಗೂ ಅತ್ತೆಯೊಂದಿಗೆ ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ರಾಮ್ ಚರಣ್ ದಂಪತಿ ಆಗಾಗ ತಿಮ್ಮಪ್ಪನ ದರ್ಶನಕ್ಕೆ ಆಗಮಿಸುತ್ತಿರುತ್ತಾರೆ. ಅಂತೆಯೇ ಈ ಭಾರಿಯೂ ಶೂಟಿಂಗ್ ನ ಮಧ್ಯೆ ಬಿಡುವು ಮಾಡಿಕೊಂಡು ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ದೇವಸ್ಥಾನದಲ್ಲಿ ಮುಂಜಾನೆ ಪ್ರಾರ್ಥನೆ ಸೇವೆ, ಸುಪ್ರಭಾತ ಸೇವೆಯಲ್ಲಿ ಪಾಲ್ಗೊಂಡಿದ್ದಾರೆ. ಜನ್ಮದಿನದಂದೇ ನಟ ದೇವಸ್ಥಾನಕ್ಕೆ ಭೇಟಿ ಕೊಟ್ಟ ಫೋಟೋಗಳು ಎಲ್ಲೆಡೆ ವೈರಲ್ ಆಗಿದೆ. ರಾಮ್ ಚರಣ್ ದೇವಸ್ಥಾನಕ್ಕೆ ಬರುವ ವಿಷಯ ತಿಳಿದ ಭಕ್ತರು ಅವರನ್ನು ಸ್ವಾಗತಿಸಲು ಜಮಾಯಿಸಿದ್ದಾರೆ. ದೇವಸ್ಥಾನದಿಂದ ಹೊರಬರುತ್ತಿದ್ದಂತೆ ರಾಮ್ ಚರಣ್ ಮತ್ತು ಅವರ ಪತ್ನಿ ಉಪಾಸನಾ ಅವರನ್ನು ನೋಡಲು ಅಪಾರ ಸಂಖ್ಯೆಯ ಅಭಿಮಾನಿಗಳು ಮುಗಿಬಿದಿದ್ದಾರೆ. ರಾಮ್ ಚರಣ್ ಅವರು ಕೇಸರಿ ಬಣ್ಣದ ಶಾಲು ಹೊದ್ದುಕೊಂಡಿದ್ದರು. ನಟನ ಜೊತೆ ಅವರ ಪತ್ನಿ ಮಗಳನ್ನು ಎತ್ತಿಕೊಂಡಿದ್ದರು. ಉಪಾಸನಾ ಅವರು ಪಿಂಕು ಬಣ್ಣದ…