ಬಾಲಿವುಡ್ ನಟಿ ಸದ್ಯ ಹಾಲಿವುಡ್ ಚಿತ್ರರಂಗದಲ್ಲಿ ಸೆಟಲ್ ಆಗಿರುವ ನಟಿ ಪ್ರಿಯಾಂಕಾ ಚೋಪ್ರಾ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಪ್ರಿಯಾಂಕ ಚೋಪ್ರಾ ಸಹೋದರನ ಎಂಗೇಜ್‌ಮೆಂಟ್ ಸಂಭ್ರಮದಲ್ಲಿ ಭಾಗಿಯಾಗಿದ್ದು ಎಂಗೇಜ್ ಮೆಂಟ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿದೇಶದಲ್ಲಿ ಸೆಟಲ್ ಆಗಿರುವ ಪ್ರಿಯಾಂಕಾ ಚೋಪ್ರಾ ಕಳೆದ ಕೆಲದಿನಗಳ ಹಿಂದೆ ಪತಿ ಹಾಗೂ ಮಗಳು ಜೊತೆ ಭಾರತಕ್ಕೆ ಆಗಮಿಸಿದ್ದಾರೆ. ಬ್ಯಾಕ್ ಟು ಬ್ಯಾಕ್ ಕಾರ್ಯಕ್ರಮಗಳಿಗೆ ನಟಿ ಹಾಜರಾಗುತ್ತಿದ್ದಾರೆ. ಆಭರಣ ಮಳಿಗೆ ಚಾಲನೆ, , ಅಂಬಾನಿ ಕುಟುಂಬದ ಪಾರ್ಟಿ, ಮನ್ನಾರಾ ಚೋಪ್ರಾ ಬರ್ತ್‌ಡೇ ಸೆಲೆಬ್ರೇಶನ್‌ಗಳಲ್ಲಿ ನಟಿ ಭಾಗಿಯಾಗಿದ್ದು ಇದೀಗ ಸಹೋದರನ ಎಂಗೇಜ್ ಮೆಂಟ್ ನಲ್ಲಿ ಭಾಗಿಯಾಗಿದ್ದಾರೆ. ಪ್ರಿಯಾಂಕ ಚೋಪ್ರಾ ಸಹೋದರ ಸಿದ್ಧಾರ್ಥ್ ಚೋಪ್ರಾ ಎಂಗೇಜ್‌ಮೆಂಟ್ ಮುಂಬೈನಲ್ಲಿ ಅದ್ಧೂರಿಯಾಗಿ ಜರುಗಿದೆ. ಬಹುಕಾಲದ ಗೆಳತಿ ನೀಲಂ ಜೊತೆ ಸಿದ್ಧಾರ್ಥ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ವೇಳೆ, ಪ್ರಿಯಾಂಕಾ ಪತಿ ನಿಕ್ ಹಾಗೂ ಮಗಳು ಮಾಲ್ತಿ ಜೊತೆ ಹಾಜರಾಗಿದ್ದಾರೆ.
Author: Author AIN
ಟಾಲಿವುಡ್ ನಟ ವಿಜಯ್ ದೇವರಕೊಂಡ ಹಾಗೂ ಮೃಣಾಲ್ ಠಾಕೂರ್ ಫ್ಯಾಮಿಲಿ ಸ್ಟಾರ್ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾದ ಪ್ರಚಾರದ ವೇಳೆ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ವಿಜಯ್ ನಟಿ ಮೃಣಾಲ್ ಅವರ ತುಟಿ, ಕಣ್ಣು ಮತ್ತು ಮೂಗಿನ ಬಗ್ಗೆ ವರ್ಣನೆ ಮಾಡಿದ್ದಾರೆ. ಅಲ್ಲದೆ ಮೃಣಾಲ್ ಸೌಂದರ್ಯಕ್ಕೆ ಫಿದಾ ಆಗಿರೋದಾಗಿ ಹೇಳಿದ್ದಾರೆ. ಮೃಣಾಲ್‌ಗೆ ಚಿಕ್ಕ ವಯಸ್ಸಿನಿಂದಲೂ ನಟನೆ ಎಂದರೆ ತುಂಬಾ ಇಷ್ಟ. ಭಾಷೆ ತಿಳಿಯದಿದ್ದರೂ ಅದನ್ನು ಅರಿತು ಚೆನ್ನಾಗಿ ನಟಿಸುತ್ತಾರೆ. ಅದು ನನಗೆ ಹಲವು ಬಾರಿ ಅಚ್ಚರಿ ಮೂಡಿಸಿದೆ ಎಂದು ಮೃಣಾಲ್ ಬಗ್ಗೆ ವಿಜಯ್ ಹೇಳಿದ್ದಾರೆ. ನಿರ್ದೇಶಕರು ಏನೇ ಹೇಳಿದ್ದರು ಅದನ್ನು ಅರ್ಥ ಮಾಡಿಕೊಂಡು ನಟಿಸುವ ಸಾಮಾರ್ಥ್ಯ ಅವರಿಗಿದೆ. ಬ್ಯೂಟಿ ಅವರಿಗೆ ದೇವರು ಕೊಟ್ಟ ಕೊಡುಗೆ. ಮೃಣಾಲ್ ಕಣ್ಣು, ಮೂಗು, ತುಟಿ ಎಲ್ಲವೂ ಅವರಿಲ್ಲಿರುವ ಅದ್ಭುತ ಎಂದು ವಿಜಯ್ ದೇವರಕೊಂಡ ಹೇಳಿದ್ದಾರೆ. ವಿಜಯ್ ಮೃಣಾಲ್ ಅವರನ್ನು ಹೊಗಳಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆ ರಶ್ಮಿಕಾ ಮಂದಣ್ಣ ಕಥೆಯೇನು? ಎಂದು ನೆಟ್ಟಿಗರು ವಿಜಯ್ ಕಾಲೆಳೆದಿದ್ದಾರೆ.
ಬಾಲಿವುಡ್ ನಟಿ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಮಧ್ಯೆ ಎಲ್ಲವು ಸರಿ ಇಲ್ಲ. ಈ ಜೋಡಿ ಡಿವೋರ್ಸ್ ಪಡೆದುಕೊಳ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ತಮ್ಮ ಕುಟುಂಬದ ಮುದ್ದಿನ ಸೊಸೆಯ ಬಗ್ಗೆ ಈಗಾಗಲೇ ನಟ ಅಮಿತಾಬ್ ಬಚ್ಚನ್ ಹಾಗೂ ಜಯಾ ಬಚ್ಚನ್ ಹಾಡಿ ಹೊಗಳಿದ್ದಾರೆ. ಆದರೆ ಅಮಿತಾಭ್ ಬಚ್ಚನ್ ಅವರ ಪುತ್ರಿ ಶ್ವೇತಾ ಅವರಿಗೆ ಐಶ್ವರ್ಯ ರೈ ಕಂಡರೆ ಹೊಟ್ಟೆ ಉರಿ ಎಂಬ ಸುದ್ದಿ ಸಾಕಷ್ಟು ಸಮಯದಿಂದ ಕೇಳಿ ಬಂದಿದೆ. ಅಭಿಷೇಕ್ ಬಚ್ಚನ್ ಅವರು ಐಶ್ವರ್ಯಾರನ್ನು ಮದುವೆಯಾಗುವುದನ್ನು ಶ್ವೇತಾ ಬಯಸಿರಲಿಲ್ಲವಂತೆ. ಅಭಿಷೇಕ್ ಅವರು ತಮ್ಮ ಮಾಜಿ ಗೆಳತಿ ಕರಿಷ್ಮಾ ಕಪೂರ್ ಅವರನ್ನು ಮದುವೆಯಾಗಬೇಕು ಎನ್ನುವುದು ಅವರ ಆಸೆಯಾಗಿತ್ತು. ಇವರಿಬ್ಬರ ಸಂಬಂಧ ಅವರಿಗೆ ಇಷ್ಟವಿತ್ತು. ಏಕೆಂದರೆ ಶ್ವೇತಾ ಯಾವಾಗಲೂ ಕರಿಷ್ಮಾ ಅವರನ್ನು ಪರಿಪೂರ್ಣ ಬಚ್ಚನ್ ಬಹು ಎಂದು ಪರಿಗಣಿಸುತ್ತಿದ್ದರು. ಅಭಿಷೇಕ್ ಕಪೂರ್ ಕುಟುಂಬದ ಅಳಿಯನಾಗಬೇಕೆಂದು ಅವರು ಬಯಸಿದ್ದರು. ಅಭಿಷೇಕ್ ಅವರು ಐಶ್ವರ್ಯರನ್ನು ಮದುವೆಯಾಗುವ ಪಟ್ಟು ಹಿಡಿದಾಗ, ಆ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮನೆಯವರ…
‘ಗಾಜಾದ ಶಿಫಾ ಆಸ್ಪತ್ರೆಯಲ್ಲಿ ನಿಯೋಜಿಸಿದ್ದ ತನ್ನ ಯೋಧರನ್ನು ಇಸ್ರೇಲ್ ಹಿಂದಕ್ಕೆ ಕರೆಯಿಸಿಕೊಂಡಿದೆ’ ಎಂದು ಪ್ಯಾಲೆಸ್ಟೀನ್ ನಾಗರಿಕರು ತಿಳಿಸಿದ್ದಾರೆ. ‘ಕಳೆದ ಎರಡು ವಾರಗಳಿಂದ ಇಸ್ರೇಲ್ ಸೇನೆ ಆಸ್ಪತ್ರೆ ಮೇಲೆ ದಾಳಿ ನಡೆಸಿದ್ದು, ಅನೇಕರನ್ನು ಹತ್ಯೆ ಮಾಡಿದೆ’ ಎಂದೂ ಅವರು ದೂರಿದ್ದಾರೆ. ‘ಕಳೆದ ಆರು ತಿಂಗಳ ಯುದ್ಧದಲ್ಲಿ ಶಿಫಾ ಆಸ್ಪತ್ರೆ ಮೇಲೆ ನಡೆಸಿದ ದಾಳಿ ನಮ್ಮ ಅತ್ಯಂತ ಯಶಸ್ವಿ ಕಾರ್ಯಾಚರಣೆಗಳಲ್ಲಿ ಒಂದಾಗಿದೆ. ಈ ದಾಳಿಯ ಸಂದರ್ಭದಲ್ಲಿ ಹಮಾಸ್ ಮತ್ತು ಇತರ ಸಂಘಟನೆಗಳ ಉಗ್ರರನ್ನು ಕೊಂದಿದ್ದೇವೆ’ ಎಂದು ಇಸ್ರೇಲ್ ಸೇನೆ ಹೇಳಿಕೊಂಡಿದೆ. ‘ಹಮಾಸ್ ಮತ್ತು ಇಸ್ಲಾಮಿಕ್ ಜಿಹಾದ್ ಉಗ್ರ ಸಂಘಟನೆಗಳು ಆಸ್ಪತ್ರೆಯಲ್ಲೇ ತಮ್ಮ ಉತ್ತರ ಭಾಗದ ಮುಖ್ಯ ಕಚೇರಿಯನ್ನು ಸ್ಥಾಪಿಸಿದ್ದವು. ಆಸ್ಪತ್ರೆಯಲ್ಲಿ ನಡೆದ ವಿನಾಶಕ್ಕೆ ಹಮಾಸ್ ಉಗ್ರರೇ ಕಾರಣ’ ಎಂದು ಸೇನೆಯ ವಕ್ತಾರ ರೇರ್ ಅಡ್ಮಿರಲ್ ಡೇನಿಯಲ್ ಹಗಾರಿ ತಿಳಿಸಿದ್ದಾರೆ. ‘ದಾಳಿ ವೇಳೆ ನಮ್ಮ ಯೋಧರು 900 ಶಂಕಿತ ಭಯೋತ್ಪಾದಕರನ್ನು ಬಂಧಿಸಿದ್ದಾರೆ. ಜತೆಗೆ, ವಿವಿಧ ಕರೆನ್ಸಿಯ 30 ಲಕ್ಷ ಅಮೆರಿಕನ್ ಡಾಲರ್ ಮತ್ತು ಶಸ್ತ್ರಾಸ್ತ್ರಗಳನ್ನು ಸಹ…
ಫೋನ್‌ಪೇ ಅಪ್ಲಿಕೇಶನ್ ಬಳಕೆದಾರರು ಇದೀಗ UPI ಅನ್ನು ಬಳಸಿಕೊಂಡು UAEಯ ಟರ್ಮಿನಲ್‌ಗಳಲ್ಲಿ ಪಾವತಿಗಳನ್ನು ಮಾಡಬಹುದು ಎಂದು ತಿಳಿಸಿದ್ದು, ಯುಎಇಯಲ್ಲಿರುವ ಭಾರತೀಯ ವಲಸಿಗರಿಗೆ ವಹಿವಾಟಿನ ಸುಲಭ ಮತ್ತು ಅನುಕೂಲತೆಯನ್ನು ಹೆಚ್ಚಿಸುವ ಗುರಿಯೊಂದಿಗೆ ಇದನ್ನು ಜಾರಿ ತಂದಿದೆ. PhonePe ಅಪ್ಲಿಕೇಶನ್ ಬಳಕೆದಾರರು ಇದೀಗ UPI ಅನ್ನು ಬಳಸಿಕೊಂಡು Mashreq ನ NEOPAY ಟರ್ಮಿನಲ್‌ಗಳಲ್ಲಿ ಪಾವತಿಗಳನ್ನು ಮಾಡಬಹುದಾಗಿದೆ ಮತ್ತು ಚಿಲ್ಲರೆ ಅಂಗಡಿಗಳು, ಊಟದ ಮಳಿಗೆಗಳು ಮತ್ತು ಪ್ರವಾಸಿ ಸ್ಥಳಗಳಲ್ಲಿ ಬಳಸಿಕೊಳ್ಳಬಹುದಾಗಿದೆ. QR ಕೋಡ್ ಅನ್ನು ಸ್ಕ್ಯಾನ್ ಕೂಡ ಮಾಡಬಹುದಾಗಿದೆ. ಖಾತೆಯ ಡೆಬಿಟ್ INR ನಲ್ಲಿ ಮತ್ತು ಕರೆನ್ಸಿ ವಿನಿಮಯ ದರವನ್ನು ತೋರಿಸಲಾಗುತ್ತದೆ. ಯುಎಇಯಲ್ಲಿರುವ ಭಾರತೀಯ ವಲಸಿಗರಿಗೆ ವಹಿವಾಟಿನ ಸುಲಭ ಮತ್ತು ಅನುಕೂಲತೆಯನ್ನು ಹೆಚ್ಚಿಸುವ ಗುರಿಯನ್ನು ಇದು ಹೊಂದಿದೆ. NPCI ಇಂಟರ್ನ್ಯಾಷನಲ್ ಪೇಮೆಂಟ್ಸ್ ಲಿಮಿಟೆಡ್ ನೊಂದಿಗೆ ಮಶ್ರೆಕ್ ಅವರ ಪಾಲುದಾರಿಕೆಯ ಮೂಲಕ ಇದನ್ನು ಜಾರಿತರಲಾಗಿದೆ. Mashreq ಯುಪಿಐ ಅಪ್ಲಿಕೇಶನ್‌ಗಳನ್ನು ಪಾವತಿ ಸಾಧನವಾಗಿ ಸ್ವೀಕರಿಸಲು NEOPAY ಟರ್ಮಿನಲ್‌ಗಳನ್ನು ಸಕ್ರಿಯಗೊಳಿಸಿದ್ದು, ಭಾರತೀಯ ಪ್ರಯಾಣಿಕರು ವಹಿವಾಟುಗಳಿಗಾಗಿ UPI ಅನ್ನು ಬಳಸಲು ಅನುಮತಿಸಿದೆ.…
ಲೋಕಸಭಾ ಚುನಾವಣೆಗೆ ಹಿನ್ನೆಲೆಯಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ವಿವಿಧ ಕ್ಷೇತ್ರದ 4 ಪ್ರಮುಖ ವ್ಯಕ್ತಿಗಳನ್ನು ರಾಯಭಾರಿಯಾಗಿ ನಿಯೋಜನೆ ಮಾಡಲಾಗಿದೆ. ಖ್ಯಾತ ನಟ, ನಿರ್ದೇಶಕ ರಮೇಶ್ ಅರವಿಂದ್, ಬಿಗ್ ಬಾಸ್ ಸ್ಪರ್ಧಿ ನೀತು ವನಜಾಕ್ಷಿ ಸೇರಿದಂತೆ ನಾಲ್ವರನ್ನು ಜಿಲ್ಲಾ ಚುನಾವಣಾಧಿಕಾರಿ ಮತ್ತು ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರಾಯಭಾರಿಗಳ ನೇಮಕ ಮಾಡಿದ್ದಾರೆ. ಮತದಾನ ಮಾಡುವ ಸಲುವಾಗಿ ನಗರದ ಜನತೆಗೆ ಹುಮ್ಮಸ್ಸು ತುಂಬಿಸುವ ಸಲುವಾಗಿ ಹಾಗೂ ಚುನಾವಣಾ ಹಬ್ಬಕ್ಕಾಗಿ ಈ 4 ಪ್ರಮುಖ ವ್ಯಕ್ತಿಗಳು ರಾಯಭಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಬೆಂಗಳೂರು ನಗರದಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ‘ನಮ್ಮ ಬೆಂಗಳೂರು ಐಕಾನ್ಸ್’ ಹೆಸರಿನಲ್ಲಿ ನಟ, ರಮೇಶ್ ಅರವಿಂದ್, ನಟಿ ಹಾಗೂ ರೂಪದರ್ಶಿ ನೀತು ವನಜಾಕ್ಷಿ, ಬ್ಯಾಡ್ಮಿಂಟನ್ ಆಟಗಾರ ಅನುಪ್ ಶ್ರೀಧರ್ ಹಾಗೂ ಟೇಬಲ್ ಟೆನ್ನಿಸ್ ಆಟಗಾರ್ತಿ ಅರ್ಚನಾ ಜಿ ಕಾಮತ್ ರಾಯಭಾರಿ ಆಗಿ ಆಯ್ಕೆಯಾಗಿದ್ದಾರೆ.
ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ನಟ ಶಿವರಾಜ್ ಕುಮಾರ್ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಶೀವಣ್ಣ ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಬಳಲುತ್ತಿದ್ದು ಇದೇ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಡಿಸ್ಚಾರ್ಜ್ ಆದ ನಂತರ ಚುನಾವಣೆ ಪ್ರಚಾರಕ್ಕೆ ತೆರಳೋ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಲೋಸಕಭಾ ಚುನಾವಣೆಯ ಪ್ರಚಾರ ಮತ್ತು ಬಿಡುವಿಲ್ಲದ ಚಿತ್ರೀಕರಣದಿಂದಾಗಿ ಸುಸ್ತಾಗಿದ್ದ ನಟ ಶಿವರಾಜ್ ಕುಮಾರ್ ವೈದ್ಯರ ಸಲಹೆ ಮೇರೆಗೆ ಒಂದು ದಿನ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿ ಚಿಕಿತ್ಸೆ ಪಡೆದಿದ್ದಾರೆ. ನಿನ್ನೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಇಂದು ಮನೆಗೆ ವಾಪಸ್ಸಾಗಿದ್ದಾರೆ. ನಿನ್ನೆ ಚಿಕಿತ್ಸೆ ಪಡೆದು ಇಂದು ಬೆಳಿಗ್ಗೆ ಮನೆಗೆ ತೆರಳಲಿದ್ದಾರೆ ಶಿವರಾಜ್ ಕುಮಾರ್. ಚಿಕಿತ್ಸೆ ನಂತರ ಶಿವರಾಜ್ ಕುಮಾರ್ ಆರಾಮಾಗಿದ್ದಾರೆ. ಯಾವುದೇ ಆತಂಕ ಪಡುವಂಥದ್ದು ಇಲ್ಲ ಎಂದು ಶಿವಣ್ಣ ಆಪ್ತರು ತಿಳಿಸಿದ್ದಾರೆ.
ಬಾಲಿವುಡ್ ನಟಿಯರಾದ ಕರೀನಾ ಕಪೂರ್ ಖಾನ್, ಕೃತಿ ಸನೋನ್ ಹಾಗೂ ಟಬು ನಟನೆಯ ‘ಕ್ರೂ’ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಮೂವರು ಮಹಿಳಾ ಮಣಿಗಳು ನಟಿಸಿರುವ ಕ್ರೂ ಸಿನಿಮಾ ತೆರೆಕಂಡ ಮೂರು ದಿನದಲ್ಲಿ ಒಟ್ಟು ₹62.53 ಕೋಟಿ ಗಳಿಸುವ ಮೂಲಕ ದಾಖಲೆ ನಿರ್ಮಿಸಿದೆ. ಕ್ರೂ ಸಿನಿಮಾದ ಪ್ರೊಡಕ್ಷನ್ ಹೌಸ್ ಬಾಲಾಜಿ ಮೋಷನ್ ಪಿಕ್ಚರ್ಸ್, ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಕ್ರೂ ಚಿತ್ರದ ಕಲೆಕ್ಷನ್ ಅಪ್‌ಡೇಟ್ಸ್ ಅನ್ನು ಹಂಚಿಕೊಂಡಿದೆ. ಕ್ರೂ ಸಿನಿಮಾ ಬಿಡುಗಡೆಯಾದ ಮೂರು ದಿನಗಳಲ್ಲಿ ₹62.53 ಕೋಟಿ ಗಳಿಸಿದೆ ಎಂದು ತಿಳಿಸಿದೆ. ಮಾರ್ಚ್ 29 ರಂದು ಬಿಡುಗಡೆಯಾದ ಕ್ರೂ ಚಿತ್ರವು ಕಾಮಿಡಿ, ಕಳ್ಳತನ ಸೇರಿದಂತೆ ವಿಭಿನ್ನ ಕಥೆಯನ್ನು ಹೊಂದಿದೆ. ರಾಜೇಶ್ ಎ ಕೃಷ್ಣನ್ ನಿರ್ದೇಶನ ಮಾಡಿದ್ದು, ಬಾಲಾಜಿ ಮೋಷನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ಮೂಡಿಬಂದಿದೆ.
ಭಾರತೀಯ ರೈಲ್ವೆಯಲ್ಲಿ ಆನ್‌ಲೈನ್ ಸೇವೆಗಳು ಇದ್ದರೂ ಕ್ಯೂಆರ್ ಕೋಡ್ ಸೇವೆ ಇರಲಿಲ್ಲ. ಅದರಲ್ಲೂ ಟಿಕೆಟ್ ಬುಕ್ಕಿಂಗ್‌ಗೆ ಪ್ರಯಾಣಿಕರು ಕ್ಯೂರ್‌ಆರ್ ಕೋಡ್ ಸೇವೆ ಆರಂಭಿಸುವಂತೆ ಒತ್ತಾಯಿಸುತ್ತಲೇ ಇದ್ದರು. ಆದರೆ ರೈಲ್ವೆ ಇದನ್ನು ಆರಂಭಿಸಲು ಮೀನ ಮೇಷ ಎಣಿಸುತ್ತಲೇ ಇತ್ತು. ಇದೀಗ ಗ್ರಹಕರ ಮನವಿಗೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು ರೈಲ್ವೆ ಆನ್ ಲೈನ್ ಪಾವತಿಗೆ ಕ್ಯೂಆರ್ ಕೋಡ್ ಆರಂಭಿಸಲಾಗಿದೆ. ರೈಲ್ವೆ ಪ್ರಯಾಣಕ್ಕೆ ಪರ್ಯಾಯ ಇಲ್ಲದೇ ಇದ್ದುದರಿಂದ ಜನ ಇರುವ ಸೌಲಭ್ಯವನ್ನೇ ಬಳಸಿಕೊಂಡು ಮುಂಗಡ ಟಿಕೆಟ್ ಇಲ್ಲವೇ ದಿನದ ಪ್ರಯಾಣದ ಟಿಕೆಟ್ ಪಡೆದು ಸಂಚರಿಸುತ್ತಿದ್ದರು. ಈಗ ಭಾರತೀಯ ರೈಲ್ವೆ ಕೂಡ ಒಂದು ಹೆಜ್ಜೆ ಮುಂದೆ ಹೋಗಿ ಕ್ಯೂಆರ್ ಕೋಡ್ ಸೇವೆಯನ್ನು ಟಿಕೆಟ್ ಬುಕ್ಕಿಂಗ್ ಸೇವೆಗೆ ಆರಂಭಿಸಿದೆ. ಕೆಲವು ರೈಲ್ವೆ ನಿಲ್ದಾಣಗಳಲ್ಲಿ ಪ್ರಾಯೋಗಿಕವಾಗಿ ಕ್ಯೂಆರ್ ಕೋಡ್ ಬಳಸುವ ಸೇವೆ ಆರಂಭಿಸಲಾಗಿತ್ತು. ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ಬಂದಿದ್ದರಿಂದ ಇದನ್ನು ದೇಶಾದ್ಯಂತ ಜಾರಿಗೊಳಿಸಲು ಭಾರತೀಯ ರೈಲ್ವೆ ಮುಂದಾಗಿದೆ. ಏಪ್ರಿಲ್ 1ರಿಂದಲೇ ಕ್ಯೂಆರ್ ಕೋಡ್ ಸೇವೆಯು ಆರಂಭಗೊಂಡಿದೆ. ಬರೀ ಟಿಕೆಟ್ ಮಾತ್ರವಲ್ಲದೇ…
‘ನ್ಯಾಷನಲ್ ಕ್ರಶ್’ ರಶ್ಮಿಕಾ ಮಂದಣ್ಣ ನಾಳೆ ತಮ್ಮ 28ನೇ ಹುಟ್ಟುಹಬ್ಬವನ್ನು ಸೆಲೆಬ್ರೇಟ್ ಮಾಡ್ತಿದ್ದಾರೆ. ಕನ್ನಡದ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ರಾತ್ರಿ ಬೆಳಗಾಗೋದ್ರಲ್ಲಿ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡ ರಶ್ಮಿಕಾ ಸದ್ಯ ಪರಭಾಷೆಯಲ್ಲಿ ಮಿಂಚುತ್ತಿದ್ದಾರೆ. ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ರಶ್ಮಿಕಾ ಬರ್ತಡೇಗಾಗಿ ಫ್ಯಾನ್ಸ್ ಕಾಯ್ತಿದ್ದಾರೆ. ರಶ್ಮಿಕಾ ಮಂದಣ್ಣ ಹುಟ್ಟುಹಬ್ಬದ ಪ್ರಯುಕ್ತ ರಶ್ಮಿಕಾ ನಟನೆಯ ಬಹುನಿರೀಕ್ಷಿತ ‘ದಿ ಗರ್ಲ್‌ಫ್ರೆಂಡ್’ ಚಿತ್ರದ ಮೊದಲ ಟೀಸರ್ ರಿಲೀಸ್ ಆಗಲಿದೆ. ಅಲ್ಲು ಅರವಿಂದ್ ಮತ್ತು ಇತರರು ಸೇರಿ ನಿರ್ಮಾಣ ಮಾಡುತ್ತಿರುವ ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಜೊತೆಗೆ ಕನ್ನಡದ ನಟ ದೀಕ್ಷಿತ್ ಶೆಟ್ಟಿ ಕೂಡ ಬಣ್ಣ ಹಚ್ಚಿದ್ದಾರೆ. ರಾಹುಲ್ ರವೀಂದ್ರನ್ ನಿರ್ದೇಶನದ ‘ದಿ ಗರ್ಲ್‌ಫ್ರೆಂಡ್’ ಸಿನಿಮಾದ ಕಥೆ ಏನು ಎಂಬುದು ಯಾರಿಗೂ ತಿಳಿದಿಲ್ಲ. ಇದು ಯಾವ ಥರದ ಸಿನಿಮಾ? ಇದರಲ್ಲಿ ರಶ್ಮಿಕಾ ಮಂದಣ್ಣ ಪಾತ್ರವೇನು ಎಂಬುದು ರಿಲೀಸ್ ಆಗಲಿರುವ ಟೀಸರ್‌ನಿಂದ ಗೊತ್ತಾಗಲಿದೆ. ಅದಕ್ಕಾಗಿ ಫ್ಯಾನ್ಸ್ ಕಾತುರದಿಂದ ಕಾಯುತ್ತಿದ್ದಾರೆ. ದಿ ಗರ್ಲ್ ಫ್ರೆಂಡ್ ಸಿನಿಮಾವು ಬಹುಭಾಷೆಯಲ್ಲಿ ತೆರೆಗೆ ಬರುತ್ತಿದ್ದು, ಎಲ್ಲ…