ಬಾಲಿವುಡ್ ನಟಿಯರಾದ ಕರೀನಾ ಕಪೂರ್ ಖಾನ್, ಕೃತಿ ಸನೋನ್ ಹಾಗೂ ಟಬು ನಟನೆಯ ‘ಕ್ರೂ’ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಮೂವರು ಮಹಿಳಾ ಮಣಿಗಳು ನಟಿಸಿರುವ ಕ್ರೂ ಸಿನಿಮಾ ತೆರೆಕಂಡ ಮೂರು ದಿನದಲ್ಲಿ ಒಟ್ಟು ₹62.53 ಕೋಟಿ ಗಳಿಸುವ ಮೂಲಕ ದಾಖಲೆ ನಿರ್ಮಿಸಿದೆ.
ಕ್ರೂ ಸಿನಿಮಾದ ಪ್ರೊಡಕ್ಷನ್ ಹೌಸ್ ಬಾಲಾಜಿ ಮೋಷನ್ ಪಿಕ್ಚರ್ಸ್, ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಕ್ರೂ ಚಿತ್ರದ ಕಲೆಕ್ಷನ್ ಅಪ್ಡೇಟ್ಸ್ ಅನ್ನು ಹಂಚಿಕೊಂಡಿದೆ. ಕ್ರೂ ಸಿನಿಮಾ ಬಿಡುಗಡೆಯಾದ ಮೂರು ದಿನಗಳಲ್ಲಿ ₹62.53 ಕೋಟಿ ಗಳಿಸಿದೆ ಎಂದು ತಿಳಿಸಿದೆ.
![Demo](https://ainlivenews.com/wp-content/uploads/2023/12/spoorthi-1.jpg)
ಮಾರ್ಚ್ 29 ರಂದು ಬಿಡುಗಡೆಯಾದ ಕ್ರೂ ಚಿತ್ರವು ಕಾಮಿಡಿ, ಕಳ್ಳತನ ಸೇರಿದಂತೆ ವಿಭಿನ್ನ ಕಥೆಯನ್ನು ಹೊಂದಿದೆ. ರಾಜೇಶ್ ಎ ಕೃಷ್ಣನ್ ನಿರ್ದೇಶನ ಮಾಡಿದ್ದು, ಬಾಲಾಜಿ ಮೋಷನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ಮೂಡಿಬಂದಿದೆ.
![](https://ainlivenews.com/wp-content/uploads/2024/01/Ad-Banner-copy-scaled.jpg)