Author: Author AIN

ಉದ್ಯಮಿ, ಸ್ಯಾಂಡಲ್ ವುಡ್ ನಿರ್ಮಾಪಕ ಸೌಂದರ್ಯ ಜಗದೀಶ್ ಕಳೆದ ಎರಡು ದಿನಗಳ ಹಿಂದೆ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉದ್ಯಮದಲ್ಲಿ ನಷ್ಟು ಅನುಭವಿಸಿದ್ದರು ಎನ್ನಲಾಗಿದೆ. ದೂರು ಕೊಡುವಾಗ ಕುಟುಂಬಸ್ಥರು ಆತ್ಮಹತ್ಯೆ ವಿಚಾರದಲ್ಲಿ ಗುಟ್ಟುಬಿಟ್ಟುಕೊಟ್ಟಿಲ್ಲ. ಅಲ್ಲದೆ ಜಗದೀಶ್ ಮಾನಸೀಕವಾಗಿ ಬಳಲುತ್ತಿದ್ದರು ಎಂದು ಹೇಳಿದ್ದಾರೆ. ಕಟುಂಬಸ್ಥರ ಹೇಳಿಕೆ ಸಾಕಷ್ಟು ಅನುಮಾನಗಳನ್ನು ಹುಟ್ಟಿಹಾಕಿದೆ. ಹೀಗಾಗಿ ಪೊಲೀಸರು ಎಲ್ಲಾ ಆಯಾಮದಲ್ಲೂ ತನಿಖೆ ಆರಂಭಿಸಿದ್ದಾರೆ.  ‘ಸೌಂದರ್ಯ ಕನ್ಸಟ್ರಕ್ಷನ್ಸ್’ ಹೆಸರಿನಲ್ಲಿ ಮೂರು ಜನ ಪಾಲು ದಾರರೊಂದಿಗೆ ಜಗದೀಶ್ ಕಂಪನಿ ಆರಂಭಿಸಿದ್ದರು. ದೊಡ್ಡ ಮಟ್ಟದಲ್ಲಿ ಲೇಔಟ್ ಹಾಗೂ ಅಪಾರ್ಮೆಂಟ್ ಮಾಡಲು ಮುಂದಾಗಿದ್ದರು. ಇದರಲ್ಲಿ ಸೌಂದರ್ಯ ಜಗದೀಶ್ ಸಾಕಷ್ಟು ಹಣ ಹೂಡಿದ್ದರು. ಆದರೆ, ಕೋವಿಡ್ ಬಳಿಕ ಲಾಸ್ ಆಗಿದ್ದರಿಂದ ಮನನೊಂದಿದ್ದರು ಎನ್ನಲಾಗಿದೆ. ಬಿಸ್ನೆಸ್ ಮಾಡ್ತೀನಿ ಎಂದು ಬಂದವರು ಮೋಸ ಮಾಡಿದರೇ ಎನ್ನುವ ಅನುಮಾನ ಶುರುವಾಗಿದೆ. SBI ಹಾಗೂ IDBI ಬ್ಯಾಂಕ್​ನಿಂದ ಸೌಂದರ್ಯ ಜಗದೀಶ್ ಕೊಟ್ಯಾಂತರ ರೂಪಾಯಿ ಸಾಲ ಪಡೆದಿದ್ದರಂತೆ. ಇದೇ ಸಾಲದ ಹಣವನ್ನು ಬಿಸಿನೆಸ್​ನಲ್ಲಿ ಹಾಕಿ ಕೈಸುಟ್ಟುಕೊಂಡಿರೋ ಬಗ್ಗೆ ಪೊಲೀಸರಿಗೆ ಮಾಹಿತಿ…

Read More

ಇರಾನ್‌ ವಿರುದ್ಧ ಪ್ರತೀಕಾರದ ಕ್ರಮ ಬೇಡ ಎಂದು ಇಸ್ರೇಲ್‌ಗೆ ಜಗತ್ತಿನ ಹಲವು ರಾಷ್ಟ್ರಗಳು ಒತ್ತಡ ಹೇರಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬ್ರಿಟನ್‌ ಗೃಹ ಸಚಿವ ಡೇವಿಡ್‌ ಕ್ಯಾಮರೂನ್‌ ಇರಾನ್‌ ಮೇಲೆ ಇಸ್ರೇಲ್‌ ನಡೆಸುವ ದಾಳಿಗೆ ಬೆಂಬಲ ಇಲ್ಲ ಎಂದಿದ್ದಾರೆ. ಫ್ರಾನ್ಸ್‌ ಅಧ್ಯಕ್ಷ ಇಮಾನ್ಯುವೆಲ್‌ ಮ್ಯಾಕ್ರನ್‌ ಕೂಡ ಪ್ರತೀಕಾರದ ಕ್ರಮ ಸಲ್ಲದು. ಈ ಬಗ್ಗೆ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರಿಗೆ ಮನವರಿಕೆ ಮಾಡಿಕೊಡುವುದಾಗಿ ಹೇಳಿದ್ದಾರೆ. ಸಿರಿಯಾದಲ್ಲಿ ತನ್ನ ರಾಯಭಾರ ಕಚೇರಿ ಮೇಲೆ ನಡೆದಿದ್ದ ದಾಳಿಗೆ ಇಸ್ರೇಲ್‌ ಕಾರಣವೆಂದು ಆರೋಪಿಸಿ ರುವ ಇರಾನ್‌ ರವಿವಾರ ಆ ದೇಶದ ಮೇಲೆ ದಾಳಿ ನಡೆಸಿತ್ತು. ಇಸ್ರೇಲ್‌ ಮೇಲೆ ದಾಳಿ ನಡೆಸುವುದಾಗಿ ಇರಾನ್‌ ನಮಗೆ ಮೊದಲೇ ಮಾಹಿತಿ ನೀಡಿಲ್ಲ. ಯುದ್ಧ ಆರಂಭವಾದ ಅನಂತರ ನಮ್ಮನ್ನು ಸಂಪರ್ಕಿಸಿದರು ಎಂದು ಅಮೆರಿಕ ಆರೋಪಿಸಿದೆ. ರವಿವಾರ ಮಾತನಾಡಿದ್ದ ಇರಾನ್‌ ಸಚಿವರು, ಅಮೆರಿಕಕ್ಕೆ ದಾಳಿ ಬಗ್ಗೆ ಮಾಹಿತಿ ನೀಡಲಾಗಿತ್ತು ಎಂದಿದ್ದರು. ಕೂಡಲೇ ಎರಡೂ ರಾಷ್ಟ್ರಗಳು ಕದನ ವಿರಾಮ ಘೋಷಿಸಬೇಕು. ಇರಾನ್‌ ವಶದಲ್ಲಿರುವ…

Read More

ತಮಿಳು ನಟಿ ಮಹಾಲಕ್ಷ್ಮೀ ಎರಡನೇ ಮದುವೆಯಾದ ಬಳಿಕ ಸಖತ್ ಸುದ್ದಿಯಲ್ಲಿದ್ದಾರೆ. ನಿರ್ಮಾಪಕ ರವೀಂದ್ರ ಅವರನ್ನು ಮದುವೆಯಾದ ನಟಿ ಪತಿಯ ಗಾತ್ರದಿಂದ ಸಖತ್ ಟ್ರೋಲ್ ಗೆ ಒಳಗಾಗಿದ್ದರು. ಎಷ್ಟೋ ಟ್ರೋಲ್ ಆದ್ರೂ ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಜೋಡಿ ಜೀವನವನ್ನು ಎಂಜಾಯ್ ಮಾಡ್ತಿದ್ದರು. ಆದರೆ ಇತ್ತೀಚೆಗೆ ಮಹಾಲಕ್ಷ್ಮಿ ಹಾಗೂ ರವೀಂದ್ರ ಜೀವನದಲ್ಲಿ ಬಿರುಗಾಳಿ ಎದ್ದಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಮೊದಲೇ ಮದುವೆ ಆಗಿದ್ದ ಮಹಾಲಕ್ಷ್ಮಿ ವಿಚ್ಛೇದನದ ನಂತರ ಮಹಾಲಕ್ಷ್ಮಿ ರವೀಂದ್ರ ಚಂದ್ರಶೇಖರನ್ ಅವರನ್ನು ವಿವಾಹವಾದ್ರು. ಮದುವೆಯ ನಂತರ ಮಹಾಲಕ್ಷ್ಮಿ ಅವರಿಬ್ಬರ ರೋಮ್ಯಾಂಟಿಕ್ ಫೋಟೋಗಳನ್ನು ಆಗಾಗ ಹಂಚಿಕೊಳ್ತಿದ್ರು. ಆದ್ರೆ ಇತ್ತೀಚಿಗೆ ರವೀಂದ್ರ ಚಂದ್ರಶೇಖರ್​  ಪತ್ನಿ ಜೊತೆಗಿನ ಯಾವುದೇ ಫೋಟೋಗಳನ್ನು ಕೂಡ ಹಂಚಿಕೊಂಡಿಲ್ಲ. ಒಂಟಿಯಾಗಿರುವ ಫೋಟೋಗಳನ್ನೇ ರವೀಂದ್ರ ಚಂದ್ರಶೇಖರನ್​ ಶೇರ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ನಾನು ನನ್ನೊಳಗೆ ಏನನ್ನೋ ತುಂಬಾ ಮಿಸ್ ಮಾಡಿಕೊಳ್ತಿದ್ದೇನೆ ಎಂದು ಬರೆದಿದ್ದಾರೆ. ಈ ಪೋಸ್ಟ್ ನೋಡಿದ ನೆಟ್ಟಿಗರು ಮಹಾಲಕ್ಷ್ಮಿ ಜೊತೆ ರವೀಂದ್ರ ಮುನಿಸಿಕೊಂಡಂತಿದೆ ಎಂದು ಕಮೆಂಟ್ ಮಾಡಿದ್ದಾರೆ. ​ ಸಾಮಾನ್ಯವಾಗಿ ಈ ಜೋಡಿ…

Read More

ಫೆ.14ರಂದು ಆತ್ಮಹತ್ಯೆಗೆ ಶರಣಾಗಿರುವ ಸ್ಯಾಂಡಲ್ ವುಡ್ ನಿರ್ಮಾಪಕ ಹಾಗೂ ಉದ್ಯಮಿ ಸೌಂದರ್ಯ ಜಗದೀಶ್ ಅವರ ಸಮಾಧಿಗೆ 3ನೇ ದಿನವಾದ ಇಂದು ಹಾಲು ತುಪ್ಪು  ಕಾರ್ಯವನ್ನು ಅವರ ಕುಟುಂಬಸ್ಥರು ನೆರವೇರಿಸಿದ್ದಾರೆ. ಜಗದೀಶ್ ಪತ್ನಿ ಶಶಿರೇಖ ಹಾಗೂ ಪುತ್ರ ಸ್ನೇಹಿತ್ ಹಾಗೂ ಕುಟುಂಬದ ಸದಸ್ಯರು ಹಿರಿಸಾವೆಗೆ ತೆರಳಿದ್ದು, 3ನೇ ದಿನದ ಕಾರ್ಯವನ್ನು ಪೂರೈಸಿದ್ದಾರೆ. ಭಾನುವಾರ ಬೆಳ್ಳಂಬೆಳಗ್ಗೆ ಆತ್ಮಹತ್ಯೆಗೆ ಶರಣಾಗುವ ಮೂಲಕ ಇಡೀ ಕುಟುಂಬಕ್ಕೆ ಶಾಕ್ ನೀಡಿದ್ದರು. ಅವರ ಅಗಲಿಕೆ ಕುಟುಂಬಕ್ಕೆ ಮಾತ್ರವಲ್ಲ, ಅಭಿಮಾನಿಗಳಲ್ಲ ಅಪಾರ ದುಃಖ ನೀಡಿದೆ. ಸಿನಿಮಾ ಮತ್ತು ನಾನಾ ಉದ್ಯಮಗಳಲ್ಲಿ ತೊಡಗಿಕೊಂಡಿದ್ದ ಸೌಂದರ್ಯ ಜಗದೀಶ್, ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಕುಟುಂಬ ಪೊಲೀಸರ ಮುಂದೆ ಹೇಳಿರುವ ಹೇಳಿಕೆಯಲ್ಲಿ ಜಗದೀಶ್ ಅವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಇತ್ತೀಚೆಗೆ ಸೌಂದರ್ಯ ಜಗದೀಶ್ ಅವರ ಅತ್ತೆ ಮೃತಪಟ್ಟಿದ್ದು ಆ ಬಳಿಕ ಜಗದೀಶ್ ಮಾನಸಿಕವಾಗಿ ಕುಗ್ಗಿದ್ದರು. ಇದೇ ಕಾರಣಕ್ಕಾಗಿ ಕೆಲವು ದಿನಗಳಿಂದ ಔಷಧಿ ತೆಗೆದುಕೊಳ್ಳುತ್ತಿದ್ದು ಇದೀಗ ಆತ್ಮಹತ್ಯೆಗೆ ಮುಂದಾಗಿದ್ದಾರೆ.

Read More

ಭಾರೀ ಮಳೆಯಿಂದಾಗಿ ಒಮಾನ್ ನಲ್ಲಿ ಪ್ರವಾಹ ಉಂಟಾಗಿದ್ದು, ಘಟನೆಯ್ಲಿ ಒಟ್ಟು 17 ಜನರು ಮೃತಪಟ್ಟಿದ್ದಾರೆ. ಭಾರಿ ಮಳೆಯ ವೇಳೆ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ವಾಹನವು ಅಪಘಾತಕ್ಕೀಡಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಸ್ಸಿನಲ್ಲಿದ್ದ ಚಾಲಕ ಮತ್ತು ಮಕ್ಕಳು ಸಾವನ್ನಪ್ಪಿದ್ದಾರೆ. ಒಮಾನ್ ನ ಉತ್ತರ ಅಲ್ ಶರ್ಕಿಯಾ ಪ್ರಾಂತ್ಯವು ಹೆಚ್ಚು ಹಾನಿಗೊಳಗಾಗಿದೆ. ಪ್ರವಾಹ ಪೀಡಿತ ಪ್ರದೇಶಗಳಿಂದ ನಾಗರಿಕರನ್ನು ಸ್ಥಳಾಂತರಿಸಲು ರಾಯಲ್ ಒಮಾನ್ ಪೊಲೀಸರು ಮತ್ತು ಒಮಾನ್ ಸೇನೆಯನ್ನು ನಿಯೋಜಿಸಲಾಗಿದೆ ಎಂದು ಒಮಾನ್ ನ ಸರ್ಕಾರಿ ಸುದ್ದಿ ಸಂಸ್ಥೆ ತಿಳಿಸಿದೆ. ಏತನ್ಮಧ್ಯೆ, ದುಬೈನಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಗಂಟೆಗೆ 70 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸಲಿದ್ದು, ಮಳೆ ಮತ್ತು ಆಲಿಕಲ್ಲು ಮಳೆಯಾಗಲಿದೆ ಎಂದು ರಾಷ್ಟ್ರೀಯ ಹವಾಮಾನ ಕೇಂದ್ರ ಎಚ್ಚರಿಕೆ ನೀಡಿದೆ.

Read More

2023ರಲ್ಲಿ ತೆರೆಕಂಡ ಪಠಾಣ್ ಸಿನಿಮಾದ ಮೂಲಕ ನಟ ಶಾರುಖ್ ಖಾನ್ ಭರ್ಜರಿಯಾಗಿ ಕಂಬ್ಯಾಕ್ ಮಾಡಿದ್ದಾರೆ. ಬಾಕ್ಸ್ ಆಫೀಸ್ ನಲ್ಲಿ ಪಠಾಣ್ ಕೋಟಿ ಕೋಟಿ ಕಲೆಕ್ಷನ್ ಮಾಡಿದೆ. ಕಿಂಗ್ ಖಾನ್ ದೊಡ್ಡ ಪರದೆಯಲ್ಲಿ ದರ್ಶನ ನೀಡುವುದು 2025ರಲ್ಲಿ. ಅವರ ಮುಂದಿನ ಸಿನಿಮಾ ಹೆಸರು ‘ಕಿಂಗ್​’ ಎಂದು ಹೇಳಲಾಗುತ್ತಿದ್ದು, ಈ ಸಿನಿಮಾದಲ್ಲಿ ಶಾರುಖ್ ಪುತ್ರಿ ಸುಹಾನಾ ಖಾನ್ ಕೂಡ ನಟಿಸಲಿದ್ದಾರೆ. ಈ ಚಿತ್ರದ ಬಜೆಟ್​ ಬರೋಬ್ಬರಿ 200 ಕೋಟಿ ರೂಪಾಯಿ ಎನ್ನಲಾಗುತ್ತಿದೆ. ಈ ಹಿಂದೆ ‘ದಿ ಆರ್ಚೀಸ್’ ಸಿನಿಮಾದಲ್ಲಿ ಸುಹಾನಾ ಖಾನ್ ನಟಿಸಿದ್ದರು. ಅದು ಒಟಿಟಿಯಲ್ಲಿ ರಿಲೀಸ್ ಆಗಿತ್ತು. ಈಗ ‘ಕಿಂಗ್’ ಚಿತ್ರದಲ್ಲಿ ಶಾರುಖ್ ಜೊತೆ ನಟಿಸುವ ಮೂಲಕ ಸುಹಾನಾ ಬೆಳ್ಳಿಪರದೆಗೆ ಎಂಟ್ರಿ ಕೊಡುತ್ತಿದ್ದಾರೆ. ಮಗಳ ಮೊದಲ ಚಿತ್ರ ಅದ್ಧೂರಿಯಾಗಿರಬೇಕು ಎಂಬ ಕಾರಣಕ್ಕೆ 200 ಕೋಟಿ ರೂ. ಬಜೆಟ್‌ನಲ್ಲಿ ಹಣ ಸುರಿಯಲು ಶಾರುಖ್ ಖಾನ್ ಮುಂದಾಗಿದ್ದಾರೆ. ಈ ಸಿನಿಮಾಗೆ ಸುಜಯ್ ಘೋಶ್ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ಕೂಡ ಭರದಿಂದ ಸಾಗುತ್ತಿದೆ. ಕಲಾವಿದರ ಆಯ್ಕೆ ಕೂಡ…

Read More

ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಮುಂಬೈಯ ಬಾಂದ್ರಾದ ನಿವಾಸದೆದುರು ಏಪ್ರಿಲ್ 14ರಂದು ನಡೆದ ಗುಂಡಿನ ದಾಳಿಗೆ ಸಂಬಂಧಪಟ್ಟಂತೆ ಮಹತ್ವದ ಸುಳಿವು ಸಿಕ್ಕಿದೆ. ಬೈಕ್‌ನಲ್ಲಿ ಬಂದು ಗುಂಡು ಹಾರಿಸಿದ ಹೋಗಿದ್ದ ಇಬ್ಬರು ಶಂಕಿತರನ್ನು ಮುಂಬೈ ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಏ.14ರಂದು ಮುಂಜಾನೆ 5 ಗಂಟೆ ಸುಮಾರಿಗೆ ಸಲ್ಮಾನ್ ಖಾನ್ ಮನೆ ಹೊರಗೆ ಗುಂಡಿನ ಸದ್ದು ಕೇಳಿ ಬಂದಿತ್ತು. ಇದೀಗ ಈ ದಾಳಿಯಲ್ಲಿ ತಮ್ಮದೇ ಕೈವಾಡವಿದೆ ಎಂದು ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಸಹೋದರ ಅನ್ಮೋಲ್ ಬಿಷ್ಣೋಯ್ ಹೇಳಿಕೊಂಡಿದ್ದರು. ಅನ್ಮೋಲ್ ಈಗ ಅಮೆರಿಕದಲ್ಲಿದ್ದು, ಸಲ್ಮಾನ್ ಮನೆಯ ಹೊರಗೆ ನಡೆದ ಗುಂಡಿನ ದಾಳಿ ಹೊಣೆ ಹೊತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದರು. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಸಿಸಿಟಿವಿ ದೃಶ್ಯದಲ್ಲಿ ಕಾಣಿಸಿಕೊಂಡ 2 ಶೂಟರ್‌ಗಳನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಅನ್ಮೋಲ್‌ನ ಫೇಸ್‌ಬುಕ್ ಪೇಜ್‌ನಲ್ಲಿ, ಈ ಘಟನೆ ಟ್ರೈಲರ್ ಮಾತ್ರ. ಇದಕ್ಕಿಂತಲೂ ಭೀಕರ ಪರಿಣಾಮವನ್ನು ಮುಂದೆ ಎದುರಿಸಬೇಕಾಗುತ್ತದೆ ಎಂದು ಸಲ್ಮಾನ್ ಖಾನ್‌ಗೆ ಎಚ್ಚರಿಕೆ…

Read More

ಡಾ.ರಾಜ್ ಕುಮಾರ್ ಕುಟುಂಬದ ಕುಡಿ ಯುವ ರಾಜ್ ಕುಮಾರ್ ನಟನೆಯ ಯುವ ಸಿನಿಮಾ ಇತ್ತೀಚೆಗೆ ತೆರೆಕಂಡಿದೆ. ಸಿನಿಮಾ ಹಿಟ್ ಆಗಿದ್ದು ಗಲ್ಲಪೆಟ್ಟಿಗೆ ಭರ್ತಿಯಾಗಿದೆ. ಇದೀಗ ಚಿತ್ರತಂಡ ನಟ ಕಿಚ್ಚ ಸುದೀಪ್ ಗಾಗಿ ಸ್ಪೆಷಲ್ ಶೋ ಆಯೋಜನೆ ಮಾಡಿತ್ತು. ಅದಕ್ಕಾಗಿ ಚಿತ್ರತಂಡಕ್ಕೆ ಸುದೀಪ್ ಧನ್ಯವಾದ ತಿಳಿಸಿದ್ದಾರೆ. ತಮಗಾಗಿ ಸ್ಪೆಷಲ್ ಶೋ ಆಯೋಜನೆ ಮಾಡಿದ್ದಕ್ಕೆ ಹೊಂಬಾಳೆ ಫಿಲ್ಮ್ಸ್ ಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಅಲ್ಲದೇ, ಯುವರಾಜ್ ಕುಮಾರ್ ಅವರಿಗೆ ಉತ್ತಮ ಭವಿಷ್ಯವಿದೆ ಎಂದು ಹಾರೈಸಿದ್ದಾರೆ. ವಿಶೇಷ ಪ್ರದರ್ಶನವನ್ನು ಸುದೀಪ್ ಮನೆಯಲ್ಲೇ ಆಯೋಜನೆ ಮಾಡಲಾಗಿದ್ದು, ನಿರ್ದೇಶಕ ಸಂತೋಷ್ ಆನಂದ್ ರಾಮ್, ಯುವ ಹಾಗೂ ಕಾರ್ತಿಕ್ ಸೇರಿದಂತೆ ಹಲವರು ಭಾಗಿಯಾಗಿದ್ದರು. ವಿಶ್ವವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತಹ ಕೆ.ಜಿ.ಎಫ್, ಕಾಂತಾರ, ರಾಜಕುಮಾರ ದಂತಹ ಯಶಸ್ವಿ ಚಿತ್ರಗಳ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ಲಾಂಛದಡಿಯಲ್ಲಿ ವಿಜಯ್ ಕಿರಗಂದೂರ್ ನಿರ್ಮಿಸಿರುವ, ಸಂತೋಷ್ ಆನಂದರಾಮ್ ನಿರ್ದೇಶನದಲ್ಲಿ ಯುವ ರಾಜಕುಮಾರ್ ನಾಯಕರಾಗಿ ನಟಿಸಿರುವ ಮೊದಲ ಚಿತ್ರ “ಯುವ” ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಈ ಮೂಲಕ…

Read More

ನೇಪಾಳದ ಹಲವು ಸಂಸ್ಥೆಗಳಿಗೆ ಭಾರತವು 35 ಆಂಬುಲೆನ್ಸ್‌ ಹಾಗೂ 66 ಶಾಲಾ ಬಸ್‌ಗಳನ್ನು ನೀಡಿದೆ.  ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳ ಸೌಕರ್ಯಗಳನ್ನು ಹೆಚ್ಚಿಸಲು ಈ ಉಡುಗೊರೆ ನೀಡಲಾಗಿದೆ. ನೇಪಾಳದ ಭಾರತೀಯ ರಾಯಭಾರಿ ನವೀನ್‌ ಶ್ರೀವಾಸ್ತವ ಅವರು ವಾಹನಗಳನ್ನು ನೇಪಾಳದ ಅಧಿಕಾರಿಗಳಿಗೆ ಹಸ್ತಾಂತರಿಸಿದರು. 1994ರಿಂದ ಈವರೆಗೆ ಭಾರತ ನೇಪಾಳಕ್ಕೆ ಸುಮಾರು 1,009 ಆಂಬುಲೆನ್ಸ್‌ಗಳು ಮತ್ತು 300 ಶಾಲಾ ಬಸ್‌ಗಳನ್ನು ಉಡುಗೊರೆಯಾಗಿ ನೀಡಿದೆ.

Read More

ಸಿಂಗಾಪುರದ ಪ್ರಧಾನಿ ಲೀ ಸೀನ್ ಲೂಂಗ್ ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದು ಉತ್ತರಾಧಿಕಾರಿ ಲಾರೆನ್ಸ್ ವಾಂಗ್ ಅವರಿಗೆ ಅಧಿಕಾರವನ್ನ ಹಸ್ತಾಂತರಿಸುವುದಾಗಿ ಘೋಷಿಸಿದ್ದಾರೆ. 51 ವರ್ಷದ ವಾಂಗ್ ಪ್ರಸ್ತುತ ಸಿಂಗಾಪುರದ ಉಪ ಪ್ರಧಾನಿ ಮತ್ತು ಹಣಕಾಸು ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.  ಪ್ರಧಾನಿ ಕಚೇರಿಯ ವೆಬ್ಸೈಟ್ನಲ್ಲಿ ಪೋಸ್ಟ್ ಮಾಡಿದ ಹೇಳಿಕೆಯಲ್ಲಿ, ಲೀ ನಾಯಕತ್ವದ ಪರಿವರ್ತನೆಯನ್ನ “ಮಹತ್ವದ ಕ್ಷಣ” ಎಂದಿದ್ದಾರೆ. “ನಾನು ಮೇ 15, 2024ರಂದು ಪ್ರಧಾನಿ ಹುದ್ದೆಯನ್ನು ತ್ಯಜಿಸುತ್ತೇನೆ ಮತ್ತು ಉಪ ಪ್ರಧಾನಿ ಲಾರೆನ್ಸ್ ವಾಂಗ್ ಅದೇ ದಿನ ಮುಂದಿನ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಲಾರೆನ್ಸ್ ಮತ್ತು… ಜನರ ವಿಶ್ವಾಸವನ್ನು ಗಳಿಸಲು ತಂಡವು ಶ್ರಮಿಸಿದೆ, ವಿಶೇಷವಾಗಿ ಸಾಂಕ್ರಾಮಿಕ ಸಮಯದಲ್ಲಿ” ಎಂದು ಬರೆದುಕೊಂಡಿದ್ದಾರೆ.

Read More