Author: Author AIN

ಕಳೆದ ಎರಡು ದಿನಗಳ ಹಿಂದೆ ಸಹಪಾಠಿಯಿಂದ ಭೀಕರವಾಗಿ ಕೊಲೆಯಾಗಿರುವ ಹುಬ್ಬಳ್ಳಿಯ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ್‌ ಹತ್ಯೆ ಪ್ರಕರಣದ ಕುರಿತು ನಟಿ ರಚಿತಾ ರಾಮ್‌ ಪ್ರತಿಕ್ರಿಯೆ ನೀಡಿದ್ದಾರೆ. ಕೊಲೆಗಾರನಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದ್ದಾರೆ. ಘಟನೆ ಕುರಿತು ಇನ್‌ಸ್ಟಾಗ್ರಾಂ ನಲ್ಲಿ ಬರೆದುಕೊಂಡಿರುವ ನಟಿ, ಈ ರೀತಿಯ ಕೃತ್ಯ ಮಾಡುವವರನ್ನು ಗಲ್ಲಿಗೇರಿಸುವ ಬದಲು ಅವರನ್ನು ಜನಸಾಮಾನ್ಯರ ಕೈಗೆ ಒಪ್ಪಿಸಿ ಎಂದು ಒತ್ತಾಯಿಸಿದ್ದಾರೆ. ಜಾತಿ, ಧರ್ಮ ಯಾವುದೇ ಆಗಿರಲಿ. ಮೊದಲು ನಾವು ಮಾನವರು. ನಾನು ಈ ಪೋಸ್ಟ್‌ ಹಾಕಲು ಕಾರಣ ಆಕೆಗೆ (ನೇಹಾ) ಆಗಿರುವ ಅನ್ಯಾಯ. ತಪ್ಪು ಯಾರೇ ಮಾಡಿದರು ತಪ್ಪೆ ಎಂದು ನಟಿ ಹೇಳಿದ್ದಾರೆ. ಸರ್ಕಾರಕ್ಕೆ ನನ್ನ ಒಂದು ಮನವಿ! ರಾಜಕೀಯ ಆಯಾಮದಲ್ಲಿ ಈ ವಿಷಯವನ್ನು ತರಬೇಡಿ. ಆಗಿರೋದು ಅನ್ಯಾಯ. ಈಗ ನ್ಯಾಯ ಬೇಕಾಗಿದೆ ಅಷ್ಟೆ. ಈ ರೀತಿಯ ಕೃತ್ಯ ಮಾಡುವವರನ್ನು ಗಲ್ಲಿಗೇರಿಸುವ ಬದಲು ಅವರನ್ನು ಜನಸಾಮಾನ್ಯರ ಕೈಗೆ ಒಪ್ಪಿಸಿ ಎಂದು ರಚಿತಾ ರಾಮ್ ಒತ್ತಾಯಿಸಿದ್ದಾರೆ.

Read More

ಸ್ಯಾಂಡಲ್ ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾದ ಕೆಲಸಗಳ ಜೊತೆಗೆ ಸದ್ಯ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ನಟ ದರ್ಶನ್ ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಮತಯಾಚನೆ ಮಾಡಿದ್ದರು. ಇದೀಗ ಮತ್ತೋರ್ವ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡಲು ದರ್ಶನ್ ಒಪ್ಪಿಕೊಂಡಿದ್ದಾರೆ. ಇಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಅವರ ಪರವಾಗಿ ದರ್ಶನ್ ಬಹೃತ್ ರೋಡ್ ಶೋ ನಡೆಸಲಿದ್ದಾರೆ. ರಾಜರಾಜೇಶ್ವರಿ ನಗರ ವಿಧಾನ ಸಭಾ ಕ್ಷೇತ್ರದ ಯಶವಂತರ ಪುರ ಮಾರ್ಕೆಟ್, ಲಗ್ಗೆರೆ ಸರ್ಕಲ್, ಕೊಟ್ಟಿಗೆ ಪಾಳ್ಯ ಮತ್ತು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಉತ್ತರಹಳ್ಳಿ, ವೀವರ್ಸ್ ಕಾಲೋನಿ, ಕೊಟ್ಟಿಗೆರೆ ವಾರ್ಡ್ ಗಳಲ್ಲಿ ಇಂದು ದರ್ಶನ್ ರೋಡ್ ಶೋನಲ್ಲಿ ಭಾಗಿಯಾಗಲಿದ್ದಾರೆ. ಇನ್ನೂ ದರ್ಶನ್ ಸುಮಲತಾ ಅವರನ್ನು ಬಿಟ್ಟು ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದು ಸಾಕಷ್ಟು ಸುದ್ದಿಯಾಗಿತ್ತು. ಸ್ವತಃ ಸುಮಲತಾ ಅವರೇ ಸ್ಟಾರ್ ಚಂದ್ರು ಪರ ಪ್ರಚಾರಕ್ಕೆ…

Read More

ಆಂಧ್ರಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ನಾಮಪತ್ರ ಸಲ್ಲಿಕೆ ಭರದಿಂದ ಸಾಗುತ್ತಿದ್ದು, ಖ್ಯಾತ ತೆಲುಗು ಚಿತ್ರನಟ ಹಾಗೂ ಹಿಂದೂಪುರಂ ತೆಲುಗು ದೇಶಂ ಪಕ್ಷದ ಶಾಸಕ ನಂದಮೂರಿ ಬಾಲಕೃಷ್ಣ ಮತ್ತೊ ಇದೇ ಕ್ಷೇತ್ರದಿಂದ ಸ್ಪರ್ಧಿಸುತ್ತಿತ್ತಿದ್ದಾರೆ. ಈ ಹಿಂದೆ ಎರಡು ಭಾರಿ ಬಾಲಕೃಷ್ಣ ಹಿಂದೂಪುರಂ ಕ್ಷೇತ್ರದಿಂದ ಗೆದ್ದಿದ್ದಾರೆ. ಬಾಲಯ್ಯ ಹಿಂದೂಪುರಂ ಮತ್ತು ರಾಯಲಸೀಮಾ ಜಿಲ್ಲೆಗಳಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಬಾಲಕೃಷ್ಣ ಶುಕ್ರವಾರ ಸಾಕಷ್ಟು ಸಂಖ್ಯೆಯ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿದ್ದಾರೆ. ಬಾಲಕೃಷ್ಣ ಪತ್ನಿ ವಸುಂಧರಾ ಅವರೊಂದಿಗೆ ಹಿಂದೂಪುರಂ ಆರ್‌ಡಿಒ ಕಚೇರಿಗೆ ತೆರಳಿ ಚುನಾವಣಾ ಅಧಿಕಾರಿಗೆ ನಾಮಪತ್ರ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ನಂದಮೂರಿ ಬಾಲಕೃಷ್ಣ ಚುನಾವಣಾ ಅಫಿಡವಿಟ್‌ನಲ್ಲಿ ತಮ್ಮ ಆಸ್ತಿ ಮತ್ತು ಸಾಲವನ್ನು ಬಹಿರಂಗಪಡಿಸಿದ್ದಾರೆ. ಬಾಲಕೃಷ್ಣ ಅಫಿಡವಿಟ್​ನಲ್ಲಿ 81.63 ಕೋಟಿ ಎಂದು ಘೋಷಿಸಿಕೊಂಡಿದ್ದಾರೆ. ಇನ್ನು ಬಾಲಯ್ಯ ಪತ್ನಿ ವಸುಂಧರಾ ಅವರ ಆಸ್ತಿ 140 ಕೋಟಿ 38 ಲಕ್ಷ 83 ಸಾವಿರ ಎಂದು ಅಫಿಡವಿಟ್​ನಲ್ಲಿ ತಿಳಿಸಿದ್ದಾರೆ. ಚುನಾವಣಾ ದಾಖಲೆಯಲ್ಲಿ ತಮಗೆ 9 ಕೋಟಿ ಸಾಲವಿದೆ ಬಾಲಯ್ಯ ತಿಳಿಸಿದ್ದಾರೆ.…

Read More

ಕಚೇರಿಯ ಸಿಬ್ಬಂದಿಗಳು ಪ್ರತಿಭಟನೆ ನಡೆಸಿದ ಕಾರಣಕ್ಕೆ ಪ್ರತಿಭಟನಾನಿರತರನ್ನು ಸೇವೆಯಿಂದ ವಜಾಗೊಳಿಸಿದ ಘಟನೆ ಗೂಗಲ್‌ ಕಚೇರಿಯಲ್ಲಿ ನಡೆದಿದೆ. ಸಮಸ್ಯೆಗಳು ಹಾಗೂ ರಾಜಕೀಯ ವಾಗ್ವಾದಗಳಿಗೆ ಕಚೇರಿಯಲ್ಲಿ ಸ್ಥಳವಿಲ್ಲ ಎಂದು ಗೂಗಲ್‌ ಸಿಇಒ ಸುಂದರ್‌ ಪಿಚ್ಚೈ ಹೇಳಿದ್ದಾರೆ. ಇಸ್ರೇಲ್‌ ನೊಂದಿಗೆ ಗೂಗಲ್‌ 1.2 ಶತಕೋಟಿ ಮೌಲ್ಯದ ಒಪ್ಪಂದಗಳಿಗೆ ಸಹಿ ಮಾಡಿತ್ತು. ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ 28 ಮಂದಿಯನ್ನು ಕೆಲಸದಿಂದ ಕಿತ್ತೊಗೆಯಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಸುಂದರ್‌ ಪಿಚ್ಚೈ, ಇದು ಕೇವಲ ವ್ಯವಹಾರ. ಈ ವಿಷಯದಲ್ಲಿ ಸಹೋದ್ಯೋಗಿಗಳಿಗೆ ತೊಂದರೆ ನೀಡಲು ಹಾಗೂ ಅಸುರಕ್ಷಿತ ವಾತಾವರಣ ಮೂಡಿಲು ಯಾರಿಗೂ ಅವಕಾಶವಿಲ್ಲ ಎಂದರು.

Read More

ಇಂಡೋನೇಷ್ಯಾದ ರುವಾಂಗ್ ಪರ್ವತದಲ್ಲಿ ಎರಡು ದಿನಗಳ ಹಿಂದೆ ಜ್ವಾಲಾಮುಖಿ ಸ್ಟೋಟಗೊಂಡಿದ್ದು, ಇಲ್ಲಿಯವರೆಗೆ ಪರ್ವತದ ತಪ್ಪಲಿನಲ್ಲಿದ್ದ ಸುಮಾರು 1,200ಕ್ಕೂ ಹೆಚ್ಚು ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಪರ್ವತಕ್ಕೆ ಸಮುದ್ರ ಹೊಂದಿಕೊಂಡಿರುವದರಿಂದ ಸುನಾಮಿ ಸಂಭವಿಸುವ ಸಾಧ್ಯತೆ ಹೆಚ್ಚಿದೆ. ಅಲ್ಲದೇ ಪರ್ವತದ ಸುತ್ತಮುತ್ತ ಬಿಸಿ ಬೂದಿ ಹರಡುವ ಸಾಧ್ಯತೆಯೂ ಇದೆ. ಜ್ವಾಲಾಮುಖಿಗೆ ಬಂಡೆಗಳು ಜಾರುವ ಸಂಭವವನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ. ಆದ್ದರಿಂದ ಜನರನ್ನು ಸ್ಥಳಾಂತರ ಮಾಡಲಾಗಿದೆ ಎಂದು ಅವರು ಹೇಳಿದರು. ಶುಕ್ರವಾರ ಮಧ್ಯಾಹ್ನದಿಂದ ಕನಿಷ್ಠ ಮೂರು ಬಾರಿ ಸ್ಟೋಟಗೊಂಡಿದೆ. ಲಾವಾ ಹಾಗೂ ಬಿಸಿ ಬೂದಿ 1,200 ಮೀಟರ್ ಎತ್ತರಕ್ಕೆ ಚಿಮ್ಮಿದೆ ಎಂದು ಇಂಡೋನೇಷ್ಯಾದ ಜ್ವಾಲಾಮುಖಿ ಅಧ್ಯಯನ ಕೇಂದ್ರ ತಿಳಿಸಿದೆ. ‘ಜ್ವಾಲಾಮುಖಿ ಬೂದಿಯು ಪಶ್ಚಿಮ, ವಾಯುವ್ಯ, ಈಶಾನ್ಯ ಮತ್ತು ಆಗ್ನೇಯ ದಿಕ್ಕುಗಳಿಗೆ ಹರಡುತ್ತಿದೆ ಎಂದು ಉಪಗ್ರಹ ಚಿತ್ರಗಳಿಂದ ತಿಳಿದುಬಂದಿದೆ. ಜ್ವಾಲಾಮುಖಿ ಕುರಿತ ಬೆಳವಣಿಗೆಗಳ ಬಗ್ಗೆ ನಾವು ಮೇಲ್ವಿಚಾರಣೆ ಮಾಡುತ್ತಿದ್ದೆವೆ. ಸುರಕ್ಷತಾ ಕ್ರಮ, ಪುನರ್ವಸತಿ ಬಗ್ಗೆಯೂ ಕಾಳಜಿ ವಹಿಸಲಾಗಿದೆ’ ಎಂದು ಇಂಡೋನೇಷ್ಯಾದ ಸಾರಿಗೆ ಸಚಿವಾಲಯದ ಪ್ರಕಟಣೆಯಲ್ಲಿ ತಿಳಿಸಿದೆ. ಗುರುವಾರ…

Read More

ಹುಬ್ಬಳ್ಳಿ ಕಾಲೇಜೀನಲ್ಲಿ ನಡೆದ ಕಾರ್ಪೊರೇಟರ್ ಮಗಳ ಬರ್ಬರ ಹತ್ಯೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆಗೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಇದೀಗ ಹತ್ಯೆಯ ಕುರಿತು ಸ್ಯಾಂಡಲ್‌ವುಡ್ ನಟ ಧ್ರುವ ಸರ್ಜಾ ಪ್ರತಿಕ್ರಿಯೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನೇಹಾ ಸಾವಿನ ಬಗ್ಗೆ ಧ್ರುವ ಸರ್ಜಾ ಪ್ರತಿಕ್ರಿಯೆ ನೀಡಿದ್ದಾರೆ. ಸಹೋದರಿ ನೇಹಾ ಹಿರೇಮಠ್ ಹತ್ಯೆ ಅತ್ಯಂತ ಹೀನ ಕೃತ್ಯ. ಕ್ಯಾಂಪಸ್‌ನಲ್ಲಿ ಹತ್ಯೆ ನಿಜಕ್ಕೂ ಆತಂಕ ಮೂಡಿಸುತ್ತದೆ. ಸರ್ಕಾರ ಶೀಘ್ರದಲ್ಲೇ ತ್ವರಿತಗತಿ ನ್ಯಾಯಾಲಯದಲ್ಲಿ ಈ ಕೇಸ್ ತೀರ್ಪು ಬರಲು ವರ್ಗಾಯಿಸಬೇಕು. ಹಾಗೂ ಇದನ್ನ ಎಲ್ಲಾ ಆಯಮದಲ್ಲೂ ತನಿಖೆ ನಡೆಸಿ ಅಪರಾಧಿಗೆ ಅತ್ಯುಗ್ರ ಶಿಕ್ಷೆ ನೀಡುವಂತಾಗಬೇಕು ಎಂದು ನಟ ಧ್ರುವ ಸರ್ಜಾ ಹೇಳಿದ್ದಾರೆ. ಏ.18ರಂದು ಹುಬ್ಬಳ್ಳಿ- ಧಾರಾವಾಡ ಮಹಾನಗರ ಪಾಲಿಕೆ ಕಾರ್ಪೊರೇಟರ್ ಅವರ ಪುತ್ರಿ ಹತ್ಯೆ ನಡೆದಿತ್ತು. ನೇಹಾ ಹತ್ಯೆಗೈದ ಆರೋಪಿ ಫಯಾಜ್ ಬಂಧನವಾಗಿದ್ದು ಆರೋಪಿಗೆ ಉಗ್ರ ಶಿಕ್ಷೆ ನೀಡುವಂತೆ ಒತ್ತಾಯ ಕೇಳಿ ಬಂದಿದೆ.

Read More

ಈ ಹಿಂದೆ ಶಿವರಾಜ್ ಕುಮಾರ್ ಹಾಗೂ ಭಾವನಾ ಮೆನನ್ ಜೋಡಿಯಾಗಿ ಟಗರು, ಭಜರಂಗಿ 2 ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಎರಡು ಸಿನಿಮಾಗಳು ಹಿಟ್ ಆಗಿದ್ದವು. ಇದೀಗ ಮತ್ತೆ ಈ ಜೋಡಿ ತೆರೆ ಮೇಲೆ ಕಾಣಿಸಿಕೊಳ್ಳಲು ರೆಡಿಯಾಗಿದ್ದಾರೆ. ಸದ್ಯ ನಟಿ ಭಾವನಾ ಕನ್ನಡದ ಜೊತೆಗೆ ಮಲಯಾಳಂ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡದ ಹೊಸ ಸಿನಿಮಾದಲ್ಲಿ ನಟಿಸುವ ಬಗ್ಗೆ ಸ್ವತಃ ಸಂದರ್ಶನವೊಂದರಲ್ಲಿ ಭಾವನಾ ಮಾಹಿತಿ ನೀಡಿದ್ದಾರೆ. ಬಹುನಿರೀಕ್ಷಿತ ‘ಉತ್ತರಕಾಂಡ’ ಚಿತ್ರದಲ್ಲಿ ಶಿವಣ್ಣ ಜೊತೆ ತೆರೆಹಂಚಿಕೊಳ್ಳುವ ಬಗ್ಗೆ ಸಿಹಿಸುದ್ದಿ ನೀಡಿದ್ದಾರೆ.  ಜನವರಿಯಲ್ಲಿ ‘ಉತ್ತರಕಾಂಡ’ ಚಿತ್ರದಲ್ಲಿ ಪಾತ್ರಕ್ಕಾಗಿ ತಮ್ಮನ್ನು ಸಂಪರ್ಕಿಸಿರೋದಾಗಿ ತಿಳಿಸಿದ್ದಾರೆ. ಏಪ್ರಿಲ್‌ನಲ್ಲಿ ಶೂಟಿಂಗ್ ಅಂದಿದ್ದರು. ನನ್ನ ಭಾಗದ ಚಿತ್ರೀಕರಣ ಮೇನಲ್ಲಿ ಶುರುವಾಗಲಿದೆ ಎಂದು ನಟಿ ಮಾಹಿತಿ ನೀಡಿದ್ದಾರೆ. ‘ಉತ್ತರಕಾಂಡ’ ಚಿತ್ರದಲ್ಲಿ ಶಿವರಾಜ್‌ಕುಮಾರ್ ಅವರ ಪತ್ನಿಯ ಪಾತ್ರದಲ್ಲಿ ಭಾವನಾ ನಟಿಸಿಲಿದ್ದಾರೆ ಎನ್ನಲಾಗುತ್ತಿದೆ. 20 ದಿನಗಳ ಕಾಲ ಭಾವನ ಪಾತ್ರದ ಶೂಟಿಂಗ್ ನಡೆಯಲಿದೆ ಎನ್ನಲಾಗುತ್ತಿದೆ. ಶಿವಣ್ಣ ಮತ್ತು ಡಾಲಿ ನಟನೆಯ ಈ ಸಿನಿಮಾದ ಚಿತ್ರೀಕರಣ ಸದ್ಯ ಬಿಜಾಪುರದಲ್ಲಿ ಭರದಿಂದ ನಡೆಯುತ್ತಿದೆ.…

Read More

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ದಂಪತಿಗೆ ಸೇರಿದ ಸುಮಾರು 97 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಏ.18ರಂದು ಇಡಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಜಪ್ತಿ ಮಾಡಿದ ಆಸ್ತಿಯಲ್ಲಿ ಮುಂಬೈನ ಪ್ರತಿಷ್ಠಿತ ಜುಹುವಿನಲ್ಲಿರುವ ಅಪಾರ್ಟ್ ಮೆಂಟ್ ಕೂಡ ಸೇರಿದೆ. ಇಡಿ ದಾಳಿ ಬಳಿಕ ರಾಜ್ ಕುಂದ್ರಾ-ಶಿಲ್ಪಾ ಶೆಟ್ಟಿ ದಂಪತಿ ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ನಿಮಗೆ ಅಗೌರವ ತೋರುತ್ತಿರುವಾಗಲೂ ಶಾಂತವಾಗಿ ಇರುವುದನ್ನು ಕಲಿಯುವುದು ಒಂದು ಬೇರೆ ರೀತಿಯ ಬೆಳವಣಿಗೆ ಎಂದು ರಾಜ್ ಕುಂದ್ರಾ ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇಡಿ ದಾಳಿ ಮಾಡಿದ ಬಳಿಕ ಅವರ ಕಡೆಯಿಂದ ಬಂದಿರುವ ಮೊದಲ ಪ್ರತಿಕ್ರಿಯೆ ಇದಾಗಿದೆ. ಸಾಯಿ ಬಾಬ ದೇವರ ಫೋಟೋ ಶೇರ್‌ ಮಾಡಿ ದೇವರಿಗೆ ಶರಣು ಎಂಬರ್ಥದಲ್ಲಿ ಶಿಲ್ಪಾ ಶೆಟ್ಟಿ ಪೋಸ್ಟ್‌ ಮಾಡಿದ್ದಾರೆ. 2022ರ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದಿ ಅಡಿ ಇಡಿ ಪ್ರಕರಣವನ್ನು ದಾಖಲಿಸಿದ್ದು, ಜಾರಿ ನಿರ್ದೇಶನಾಲಯವು 97.97 ಕೋಟಿ ರೂಪಾಯಿ ಮೊತ್ತದ ಸ್ಥಿರ ಹಾಗೂ ಚರಾಸ್ತಿಯನ್ನು…

Read More

ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಜಪಾನ್‌ಗೆ ಭೇಟಿ ನೀಡಿ ಬಂದಿದ್ದಾರೆ. ಜಪಾನ್ ನಲ್ಲಿ ನಡೆದ ಅನಿಮಿ ಅವಾರ್ಡ್ ಕಾರ್ಯಕ್ರಮದಲ್ಲಿ ಭಾಗವಹಿಸಲು ನಟಿ ತೆರಳಿದ್ದರು. ಈ ಹಿಂದೆ ಜಪಾನ್ ಗೆ ಭೇಟಿ ನೀಡಿದ್ದ ಫೋಟೋವನ್ನು ಹಂಚಿಕೊಂಡಿದ್ದ ನಟಿ ಇದೀಗ ಇದೀಗ ಜಪಾನ್ ಸುತ್ತಾಟ ಮತ್ತು ತುಂಟಾಟದ ವಿಡಿಯೋ ತುಣುಕನ್ನು ಶೇರ್ ಮಾಡಿದ್ದಾರೆ. ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಸಿನಿ ಜರ್ನಿ ಆರಂಭಿಸಿದ ನಟಿ ಬಳಿಕ ಟಾಲಿವುಡ್ ಹಾಗೂ ಬಾಲಿವುಡ್ ನಲ್ಲಿ ಸ್ಟಾರ್ ನಟಿಯಾಗಿ ಮಿಂಚುತ್ತಿದ್ದಾರೆ. ರಶ್ಮಿಕಾ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿದೆ, ಕೈ ಹಾಕಿದ ಸಿನಿಮಾಗಳೆಲ್ಲಾ ಹಿಟ್ ಆಗುತ್ತಿವೆ. ಅದರಲ್ಲೂ ಪುಷ್ಪ ಹಾಗೂ ‘ಅನಿಮಲ್’ ಸಿನಿಮಾ ಬಂದ ಮೇಲಂತೂ ರಶ್ಮಿಕಾ ಖ್ಯಾತಿ ಮತ್ತಷ್ಟು ಹೆಚ್ಚಿದೆ. ಈ ಹಿಂದೆ ಜಪಾನ್‌ಗೆ ಹೋಗೋದು ನನ್ನ ಬಾಲ್ಯದ ಕನಸು ಎಂದು ನಟಿ ಹೇಳಿದ್ದರು. ಹಾಗಾಗಿ ಜಪಾನ್ ಸ್ಥಳದ ವಿಶೇಷ ವಿಡಿಯೋ ಹಂಚಿಕೊಂಡಿದ್ದಾರೆ. ಒಬ್ಬ ನಟಿ ಎಂಥ ಹೋಟೆಲ್‌ನಲ್ಲಿ ಇರುತ್ತಾರೆ. ಏನೇನು ತಿನ್ನುತ್ತಾರೆ. ಜನರ ಜೊತೆ ಹೇಗೆ ಬೆರೆಯುತ್ತಾರೆ.…

Read More

ಸೀತಾ ರಾಮ ಸಿನಿಮಾದ ಬಳಿಕ ನಟಿ ಮೃಣಾಲ್ ಠಾಕೂರ್ ಗೆ ಭೇಡಿಕೆ ಹೆಚ್ಚಾಗಿದೆ. ಮೃಣಾಲ್ ನಟಿಸುತ್ತಿರುವ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಹಿಟ್ ಆಗುತ್ತಿವೆ. ಈ ಮಧ್ಯೆ ಬಿಟೌನ್ ಖ್ಯಾತ ನಿರ್ದೇಶಕ ಕಮ್ ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ ಸಿನಿಮಾದಲ್ಲಿ ಹೀರೋಯಿನ್ ಆಗಿ ಅದೃಷ್ಟ ಕುಲಾಯಿಸಿದೆ. ಬಾಲಿವುಡ್‌ನ ಖ್ಯಾತ ನಟ ಸಿದ್ಧಾಂತ್ ಚತುರ್ವೇದಿಗೆ ಮೃಣಾಲ್ ನಾಯಕಿಯಾಗಿದ್ದಾರೆ. ಮುಂದಿನ ವಾರದಿಂದ ಸಿನಿಮಾದ ಚಿತ್ರೀಕರಣ ಶುರುವಾಗಲಿದೆ. ಸದ್ಯ ಸಿನಿಮಾ ವರ್ಕ್ಶಾಪ್‌ನಲ್ಲಿ ನಟಿ ಭಾಗಿಯಾಗುತ್ತಿದ್ದಾರೆ. ಪಾತ್ರದ ತಯಾರಿಯಲ್ಲಿ ಮೃಣಾಲ್ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಮೃಣಾಲ್‌ರನ್ನು ಆಫೀಸ್‌ಗೆ ಕರೆಸಿ ಕಥೆ ಬಗ್ಗೆ ಚರ್ಚೆಸಿದ್ದರು ಬನ್ಸಾಲಿ ಟೀಮ್. ಅಷ್ಟು ಸುಲಭವಾಗಿ ಯಾರಿಗೂ ಮಣೆ ಹಾಕದ ನಿರ್ದೇಶಕ ಸಂಜಯ್ ಈಗ ಮೃಣಾಲ್ ನಟನೆಯನ್ನು ಮೆಚ್ಚಿ ಮುಂದಿನ ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ. ಸಿನಿಮಾದಲ್ಲಿ ಉತ್ತಮ ಪಾತ್ರವನ್ನೇ ಮೃಣಾಲ್‌ಗೆ ನೀಡಿದ್ದಾರೆ. ಸೀತಾರಾಮಂ, ಹಾಯ್ ನಾನಾ, ಫ್ಯಾಮಿಲಿ ಸ್ಟಾರ್ ಚಿತ್ರದ ಸಕ್ಸಸ್ ಬಳಿಕ ಮೃಣಾಲ್ ಸ್ಟಾರ್ ನಿರ್ದೇಶಕನ ಜೊತೆ ಕೈ ಜೋಡಿಸಿದ್ದು ಈ ಭಾರಿಯೂ ಮತ್ತೊಂದು…

Read More