Author: Author AIN

ಮಂಡ್ಯ:  ರೈತರ ಪರ ಎನ್ನುವ ದೇವೇಗೌಡರು ನಬಾರ್ಡ್‌ ಮೊತ್ತ ಇಳಿಕೆ ಬಗ್ಗೆ ಯಾಕೆ ಪ್ರಶ್ನೆ ಮಾಡುತ್ತಿಲ್ಲ ಎಂದು ಸಚಿವ ಚಲುವರಾಯಸ್ವಾಮಿ ಪ್ರಶ್ನಿಸಿದ್ದಾರೆ. ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದ ಎನ್ ಡಿಎ ರೈತರ ಪರ ಅಂತ ಹೇಳುತ್ತಾರೆ. ರಾಜ್ಯದ ಅಭಿವೃದ್ಧಿ, ಜನಪರವಾದ ಕಾರ್ಯಕ್ರಮ ಮಾಡಿಲ್ಲ. ಅವರು ಐದು‌ ಗ್ಯಾರಂಟಿಗೆ  ಸರಿಸಮಾನವಾದ ಒಂದು ಕಾರ್ಯಕ್ರಮ ಕೊಟ್ಟರೇ ನಾವು ಒಪ್ಪುತ್ತೇವೆ. ಕೇಂದ್ರದಿಂದ ಅಕ್ಕಿ ಕೊಡದೇ ರಾಜಕಾರಣ ಮಾಡಿದರು ಎಂದು ಕಿಡಿಕಾರಿದರು.  ನಬಾರ್ಡ್ ನಿಂದ 2340 ಕೋಟಿ ಅನುದಾನ ಕೊಟ್ಟಿದ್ದಾರೆ. ಇದು ರೈತರ ಮೇಲೆ ಎಫೆಕ್ಟ್ ಆಗುತ್ತದೆ. ಅನುದಾನವನ್ನು 58 ಪರ್ಸೆಂಟ್ ಇಳಿಸಿದ್ದಾರೆ.  ಕುಮಾರಸ್ವಾಮಿ ಬಿಡಿ ಹೇಗೆ ಬೇಕೊ ಹಾಗೇ ಮಾತನಾಡುತ್ತಾರೆ. ದೇವೇಗೌಡರು ಮೋದಿ ವಿರುದ್ಧ ಯಾಕೆ ಮಾತನಾಡುತ್ತಿಲ್ಲ. ರೈತರ ಪರ ಅನ್ನುವವರು ನಬಾರ್ಡ್ ನಿಂದ ಇಷ್ಟು ಹಣ ಕಡಿಮೆ ಬಂದಿದೆ ಎಂದು ಕೇಳುತ್ತಿಲ್ಲ ಎಂದು ಪ್ರಶ್ನಿಸಿದರು. ಸುಮಲತಾ ಅವರು ಎಂಪಿಯಾಗಿ ಐದು ವರ್ಷ ಬಹಳ ಕೆಲಸ ಮಾಡಿದ್ದಾರೆ. ಇದೀಗ ಹೋರಾಟ ಮಾಡಲಿ, ಹೋರಾಟ ಮಾಡದೇ…

Read More

ತೆಲುಗು ಸಮುದಾಯದ ವಿರುದ್ಧ ನಾಲಿಗೆ ಹರಿಬಿಟ್ಟ ಕಾರಣಕ್ಕೆ ನಟಿ ಹಾಗೂ ಬಿಜೆಪಿ ವಾಕ್ತಾರೆ ಕಸ್ತೂರಿ ಶಂಕರ್ ಅವರನ್ನು ಅರೆಸ್ಟ್ ಮಾಡಲಾಗಿತ್ತು. ಚೆನ್ನೈ ಕೋರ್ಟ್​ ನಿರ್ದೇಶನದಂತೆ ಪೊಲೀಸರು ನಟಿಯನ್ನು ಹೈದರಾಬಾದ್​​ನಲ್ಲಿ ಅರೆಸ್ಟ್ ಮಾಡಿ ಚೆನ್ನೈಗೆ ಕರೆತಂದಿದ್ದರು. ಕಸ್ತೂರಿ ಶಂಕರ್ ಅವರನ್ನೂ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಈ ಬಗ್ಗೆ ವಿಚಾರಣೆ ನಡೆಸಿದ ಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿದೆ. ಜಾಮೀನು ಪಡೆದು ಹೊರಗೆ ಬರುತ್ತಿದ್ದಂತೆ ಅವರ ಬೆಂಬಲಿಗರು ಶಾಲು ಹೊದಿಸಿ ಶುಭಾಶಯ ಕೋರಿದ್ದಾರೆ. ಕೋರ್ಟ್ ಆವರಣದಲ್ಲಿಯೇ ಒಂದಷ್ಟು ಜನ ಆಕೆಯನ್ನು ಶಾಲು ಹೊದಿಸಿ ಅಭಿನಂದಿಸಿದ್ದಾರೆ. ಇದೇ ವೇಳೆ ಮಾತನಾಡಿದ ಕಸ್ತೂರಿ ಶಂಕರ್​, ಬಿರುಗಾಳಿಯಂತೆ ನನ್ನನ್ನು ಬದಲಾಯಿಸಿದವರಿಗೆ ಧನ್ಯವಾದ. ಕೆಲವರು ನನ್ನನ್ನ ಜೈಲು ಸೇರುವಂತೆ ಮಾಡಿದರು. ನನ್ನದು ಸಣ್ಣ ಧ್ವನಿ ಆದ್ರೆ ಈಗ ಚಂಡಮಾರುತವಾಗಿ ಬದಲಾಗಿದೆ ಅಂತ ಕಸ್ತೂರಿ ಶಂಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Read More

ಹಾವೇರಿ : ತೀವ್ರ ಕುತೂಹಲ ಕೆರಳಿಸಿರುವ ಉಪಚುನಾವಣಾ ಫಲಿತಾಂಶ ನಾಳೆ ಹೊರಬೀಳಲಿದೆ. ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲೂ ನಾಳೆ ಮತ ಎಣಿಕೆ ನಡೆಯಲಿದ್ದು, ಸಕಲ ಸಿದ್ಧತೆ ಮಾಡಲಾಗಿದೆ.  ದೇವಗಿರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದ್ದು, ಹಾವೇರಿ ಜಿಲ್ಲಾಡಳಿತ ಪೂರ್ವ ತಯಾರಿ ನಡೆಸಿದೆ. ಶಿಗ್ಗಾಂವಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಭರತ್‌ ಬೊಮ್ಮಾಯಿ ಸ್ಪರ್ಧಿಸಿದ್ದು, ಕಾಂಗ್ರೆಸ್‌ ನಿಂದ ಯಾಸೀರ್ ಖಾನ್ ಪಠಾಣ್‌ ಸ್ಪರ್ಧಿಸಿದ್ದಾರೆ. https://ainlivenews.com/couple-murder-in-chikkamagalur-elderly-couple-killed-by-relative/ ಭರತ ಬೊಮ್ಮಾಯಿ ಎದುರಾಳಿಯಾಗಿದ್ದ ಕೈ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್‌ ಗೆಲುವಿನ  ಮೂಲಕ ಬೊಮ್ಮಾಯಿ ಕುಟುಂಬಕ್ಕೆ ಸೋಲಿನ ರುಚಿ ತೋರಿಸಬೇಕೆಂದು ಸಚಿವ ಸತೀಶ್ ಜಾರಕಹೊಳಿ ನೇತೃತ್ದ ಇಡೀ ತಂಡವೇ ಶಿಗ್ಗಾಂವಿಯಲ್ಲಿ ಬೀಡುಬಿಟ್ಟಿತ್ತು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್‌ ಸೇರಿದಂತೆ ಘಟಾನುಘಟಿ ನಾಯಕರು ಯಾಸೀರ್‌ ಖಾನ್‌ ಪಠಾಣ್‌ ಪರ ಪ್ರಚಾರ ಮಾಡಿದ್ದರು. ಶಿಗ್ಗಾಂವಿ ಮತಕ್ಷೇತ್ರದಲ್ಲಿ ಶೇ.88.48ರಷ್ಟು ಮತದಾನ ನಡೆದಿತ್ತು. ಈಗಾಗಲೇ ಎವಿಎಂ ಮಷಿನ್‌ಗಳಲ್ಲಿ ಅಭ್ಯರ್ಥಿಗಳ ಭವಿಷ್ಯ ಭದ್ರವಾಗಿದ್ದು, ಅಭ್ಯರ್ಥಿಗಳ ಎದೆಯಲ್ಲಿ ಢವಢವ ಶುರುವಾಗಿದೆ.

Read More

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಎ2 ಆರೋಪಿ ದರ್ಶನ್ ಗೆ ಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಆರು ವಾರಗಳ ಕಾಲ ಜಾಮೀನು ನೀಡಲಾಗಿದ್ದು ಅದರಲ್ಲಿ ಮೂರು ವಾರ ಮುಗಿದು ಹೋಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುದ ದರ್ಶನ್ ಗೆ ಇದೀಗ ಮತ್ತೊಂದು ಶಾಕ್ ಎದುರಾಗಿದೆ. ಮಧ್ಯಂತರ ಜಾಮೀನು ಸಿಕ್ಕ ಖುಷಿಯಲ್ಲಿರುವ ದರ್ಶನ್ ಮತ್ತೆ ಟೆನ್ಷನ್ ಆಗಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ವಿರುದ್ಧ ಮತ್ತೊಂದು ಪ್ರಬಲ ಸಾಕ್ಷಿ ಬೆಳಕಿಗೆ ಬಂದಿದೆ. ರೇಣುಕಾ ಸ್ವಾಮಿ ಶವದ ಮುಂದೆ ದರ್ಶನ್ ನಿಂತಿರುವ ಚಿತ್ರ ಇದೀಗ ಪೊಲೀಸರಿಗೆ ಲಭ್ಯವಾಗಿದ್ದುಅದನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಪಟ್ಟಣಗೆರೆ ಶೆಡ್​ನಲ್ಲಿ ರೇಣುಕಾ ಸ್ವಾಮಿ ನಿಧನ ಹೊಂದಿದಾಗ ದರ್ಶನ್ ಆ ಸ್ಥಳದಲ್ಲಿ ಇರಲಿಲ್ಲ ಎಂಬ ವಾದ ಈ ಹಿಂದೆ ಕೇಳಿ ಬಂದಿತ್ತು. ದರ್ಶನ್, ರೇಣುಕಾ ಸ್ವಾಮಿಗೆ ಕೋಪದಲ್ಲಿ ಹೊಡೆದು ಅಲ್ಲಿಂದ ಹೊರಟು ಹೋದರು ಎನ್ನಲಾಗಿತ್ತು. ಆದರೆ ಈಗ ಪೊಲೀಸರಿಗೆ ಲಭ್ಯವಾಗಿರುವ ಫೋಟೋದಲ್ಲಿ ರೇಣುಕಾ ಸ್ವಾಮಿ ಶವದ ಮುಂದೆ ದರ್ಶನ್ ಹಾಗೂ…

Read More

ಬಾಲಿವುಡ್ ನಟಿ, ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಮಧ್ಯೆ  ಮನಸ್ತಾಪ ಮೂಡಿದೆ. ಇದೇ ಕಾರಣಕ್ಕೆ ಇಬ್ಬರು ದೂರ ದೂರ ವಾಸವಾಗಿದ್ದು ಸದ್ಯದಲ್ಲೇ ಡಿವೋರ್ಸ್ ಪಡೆದುಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇಬ್ಬರು ಮಧ್ಯೆ ಎಲ್ಲವೂ ಸರಿ ಇಲ್ಲ ಎಂಬ ಸುದ್ದಿ ಶುರುವಾಗಿ ಕೆಲ ತಿಂಗಳೆ ಕಳೆದಿದೆ. ಆದರೆ ಇದುವರೆಗೂ ಐಶ್ ಅಥವಾ ಬಚ್ಚನ್ ಕುಟುಂಬವಾಗಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರಲಿಲ್ಲ.ಇದೀಗ ಅಮಿತಾಭ್ ಬಚ್ಚನ್ ಈ ಬಗ್ಗೆ ಕೊನೆಗೂ ಮೌನ ಮುರಿದಿದ್ದಾರೆ. ಅಮಿತಾಭ್ ಬಚ್ಚನ್ ಇದೀಗ ಹೊಸ ಬ್ಲಾಗ್ ಬರೆದುಕೊಂಡಿದ್ದಾರೆ. ಇದರಲ್ಲಿ ಅವರು ವದಂತಿಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ‘ನಾನು ಕುಟುಂಬದ ಬಗ್ಗೆ ಮಾತನಾಡುವುದು ಕಡಿಮೆ. ಏಕೆಂದರೆ ಅದು ಖಾಸಗಿ ವಿಚಾರ. ಊಹಾಪೋಹಗಳು ಯಾವಾಗಲೂ ಊಹಾಪೋಹಗಳೇ. ಪರಿಶೀಲನೆ ಮಾಡದೇ ಇರುವ ವಿಚಾರ ಅಸತ್ಯವೇ’ ಎಂದಿದ್ದಾರೆ. ‘ಈ ರೀತಿಯ ಸುದ್ದಿಗಳಿಂದ ಕೆಲವರಿಗೆ ಲಾಭ ಆಗಬಹುದು. ಆದರೆ, ನನ್ನ ಗಮನ ಕುಟುಂಬದ ಮೇಲೆ ಇರುತ್ತದೆ. ಐಶ್ವರ್ಯಾ ಹಾಗೂ ಅಭಿಷೇಕ ಸಂಸಾರದಲ್ಲಿ ಸಮಸ್ಯೆ…

Read More

ನೆರೆಯ ಪಾಕಿಸ್ತಾನವು ಪದೇ ಪದೇ ನಾಚಿಕೆಗೇಡಿಕ ಕೆಲಸವನ್ನು ಮಾಡುವ ಮೂಲಕ ಇತರ ದೇಶಗಳಿಂದ ಛೀಮಾರಿ ಹಾಕಿಸಿಕೊಳ್ಳುತ್ತಿದೆ. ಇದೀಗ ತನ್ನ ದೇಶಕ್ಕಾಗಿ ಪ್ರಾಣ ಕೊಟ್ಟ ಸೈನಿಕರ ಮೃತದೇಹವನ್ನು ಕತ್ತೆಗಳ ಮೇಲೆ ಹೊತ್ತೊಯ್ಯುವ ಮೂಲಕ ಮತ್ತೆ ಟೀಕೆಗೆ ಗುರಿಯಾಗಿದೆ. ಭಯೋತ್ಪಾದಕರ ವಿರುದ್ಧದ ಹೋರಾಟದಲ್ಲಿ ಮೃತಪಟ್ಟ ಯೋಧರಿಗೆ ಗೌರವಯುತ ಬೀಳ್ಕೊಡುಗೆ ನೀಡುವುದು ಸಾಮಾನ್ಯ. ಆದರೆ ಪಾಕಿಸ್ತಾನ ಸರ್ಕಾರಕ್ಕೆ ಮಾತ್ರ ಮೃತದೇಹಗಳನ್ನು ಸರಿಯಾಗಿ ತೆಗೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ. ಪಾಕಿಸ್ತಾನದ ಆಡಳಿತವು ಖೈಬರ್ ಪಖ್ತುಂಖ್ವಾದಲ್ಲಿ ಸೈನಿಕರ ದೇಹಗಳನ್ನು ಕತ್ತೆಗಳ ಮೇಲೆ ಸಾಗಿಸಿದ್ದು ಈ ವಿಡಿಯೋ ವೈರಲ್ ಆಗಿದೆ. ಪಾಕಿಸ್ತಾನದ ಬಲೂಚಿಸ್ತಾನ ಮತ್ತು ಖೈಬರ್ ಪಖ್ತುಂಖ್ವಾ ಪ್ರದೇಶಗಳಲ್ಲಿ ಕಳೆದ ಒಂದು ತಿಂಗಳಲ್ಲಿ ಪಾಕಿಸ್ತಾನ ಸೇನೆಯ 100ಕ್ಕೂ ಹೆಚ್ಚು ಸೈನಿಕರು ಹತರಾಗಿದ್ದಾರೆ. ಭಯೋತ್ಪಾದಕರ ವಿರುದ್ಧ ಹೋರಾಡುವಾಗ ಈ ಸೈನಿಕರು ಸಾವನ್ನಪ್ಪಿದ್ದು ಪಾಕಿಸ್ತಾನಿ ಸೇನೆಯು ಈ ಎಲ್ಲಾ ಅಂಕಿಅಂಶಗಳನ್ನು ಮರೆಮಾಡಲು ಪ್ರಯತ್ನಿಸುತ್ತಿದೆ. ಈ ಬಾರಿಯೂ ಪಾಕಿಸ್ತಾನಿ ಸೇನೆ ಅದನ್ನೆ ಮಾಡಲು ಮುಂದಾಗಿತ್ತು. ಆದರೆ ವಿಡಿಯೋ ವೈರಲ್ ನಿಂದಾಗಿ ವಿಷಯ ಜಗಜ್ಜಾಹಿರಾಗಿದೆ. ಭಯೋತ್ಪಾದಕರು ಪಾಕಿಸ್ತಾನ…

Read More

ತಮಿಳು ಚಿತ್ರರಂಗದ ಸ್ಟಾರ್ ನಟ ಧನುಷ್ ವಿರುದ್ಧ ನಟಿ ನಯನತಾರಾ ಪಬ್ಲಿಕ್ ನಲ್ಲೇ ಹರಿಹಾಯ್ದಿದ್ದಾರೆ.  ನೆಟ್‌ಫ್ಲಿಕ್ಸ್ ಸಾಕ್ಷ್ಯಚಿತ್ರ ‘ನಯನತಾರಾ: ಬಿಯಾಂಡ್ ದಿ ಫೇರಿಟೇಲ್’ ವಿವಾದದ ಕುರಿತು ನಯನತಾರಾ ಸೋಷಿಯಲ್ ಮೀಡಿಯಾದಲ್ಲಿ ಸುಧೀರ್ಘ ಪತ್ರ ಬರೆದು ಕಿಡಿಕಾರಿದ್ರ. 3 ಸೆಕೆಂಡ್ ವಿಡಿಯೋಗಾಗಿ ಧನುಷ್​ 10 ಕೋಟಿ ಕೇಳಿದ್ರು ಎಂದು ನಟಿ ಆರೋಪಿಸಿದ್ದಾರೆ. ಈ ವಿವಾದ ಭಾರೀ ಸದ್ದು ಮಾಡಿತ್ತು. ಸಾಕ್ಷ್ಯ ಚಿತ್ರದ ವಿವಾದದ ಬಳಿಕ ಒಂದೇ ಕಾರ್ಯಕ್ರಮದಲ್ಲಿ ನಯನತಾರಾ ಹಾಗೂ ನಟ ಧನುಷ್ ಮುಖಾಮುಖಿ ಆಗಿದ್ದಾರೆ.  ನಟಿ ನಯನತಾರಾ, ನಟ ಧನುಷ್‌ ಮೇಲೆ ಸಾಕಷ್ಟು ಆರೋಪಗಳನ್ನ ಮಾಡಿದ್ರು. ಪುಟ್ಟಗಟ್ಟಲೆ ಬರೆದು ಧನುಷ್ ಮೇಲಿನ ಕೋಪವನ್ನು ಹೊರ ಹಾಕಿದ್ದರು. ಆದ್ರೆ ನಯನತಾರಾ ಆರೋಪಕ್ಕೆ ನಟ ಧನುಷ್ ಯಾವುದೇ ಉತ್ತರ ನೀಡಿಲ್ಲ. ಧನುಷ್ ಪರ ವಕೀಲರು ಕೂಡ ನಟ ಧನುಷ್​ ಅವರೇ ಎಲ್ಲದ್ದಕ್ಕೂ ಉತ್ತರ ಕೊಡ್ತಾರೆ ಎಂದ್ರು. ಇದೀಗ ಒಂದೇ ಕಾರ್ಯಕ್ರಮದಲ್ಲಿ ಧನುಷ್​, ನಯನತಾರಾ ಕಾಣಿಸಿಕೊಂಡಿದ್ದಾರೆ. ವಿವಾದದ ಬಳಿಕ ಮೊದಲ ಬಾರಿಗೆ ನಯನತಾರಾ, ಧನುಷ್ ಒಂದೇ ಕಾರ್ಯಕ್ರಮದಲ್ಲಿ…

Read More

ಸಾಕಷ್ಟು ಮಂದಿಗೆ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹೋಗಬೇಕು ಅನ್ನೋ ಆಸೆ ಇರುತ್ತೆ. ಆದರೆ ಕೆಲವರಿಗೆ ಮಾತ್ರ ಇದರ ಸಹವಾಸವೇ ಬೇಡ ಎನ್ನುತ್ತಾರೆ. ಯಾಕಂದ್ರೆ ಮನೆಯ ಹೊರಗೆ ಸಂಪಾದಿಸಿದ ಗೌರವ ಮನೆಯಲ್ಲಿ ಸಿಗಲ್ಲ ಅನ್ನೋದು ಹಲವರ ವಾದ. ಇದೀಗ ಬಿಗ್ ಬಾಸ್ ಮನೆಯಲ್ಲಿ ತಮಗೆ ಅಸಭ್ಯವಾಗಿ ಬೈದರು, ಮನೆಯಲ್ಲಿ ಗೌರವ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಮನೆಯಿಂದ ಹೊರ ಹೋಗಲು ಗೋಲ್ಡ್ ಸುರೇಶ್ ನಿರ್ಧಾರ ಮಾಡಿದ್ದಾರೆ. 50 ದಿನ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿಕೊಟ್ಟಿರುವ ರಜತ್ ಮನೆಗೆ ಬರ್ತಿದ್ದಂಗೆ ಕಿರಿಕ್ ಮಾಡ್ಕೊಂಡಿದ್ದಾರೆ. ಗೋಲ್ಡ್ ಸುರೇಶ್ ಗೆ ‘ವೇಸ್ಟ್​ ನನ್​ ಮಗ’ ಎಂದು ​ ಬೈಯ್ದಿದ್ದಾರೆ. ಜೊತೆಗೆ ಕೆಲವು ಅವಾಚ್ಯ ಪದಗಳಿಂದಲೂ ನಿಂದಿಸಿದ್ದಾರೆ. ಟಾಸ್ಕ್ ಆಡುವಾಗ ಗೋಲ್ಡ್ ಸುರೇಶ್ ಮತ್ತು ರಜತ್ ನಡುವೆ ಕಿರಿಕ್ ಆಯಿತು. ಇಬ್ಬರೂ ಪರಸ್ಪರ ಬೈಯ್ದುಕೊಂಡರು. ಆದರೆ ರಜತ್ ಅವರ ಮಿತಿ ಮೀರಿ, ಅವಾಚ್ಯ ಪದಗಳನ್ನು ಬಳಸಿದರು. ಇದರಿಂದ ಕೋಪಗೊಂಡ ಸುರೇಶ್ಕ್ಯಾಮೆರಾ ಎದುರು ಬಂದು ಬಿಗ್​ ಬಾಸ್​ಗೆ ದೂರು ನೀಡಿದರು. ‘ಇಂಥ…

Read More

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ಬಂಧನದ ವಾರೆಂಟ್ ಜಾರಿಗೊಳಿಸಿದೆ. ಗಾಜಾದಲ್ಲಿನ ಯುದ್ಧ ಹಾಗೂ 2023 ರ ಅಕ್ಟೋಬರ್ ನಲ್ಲಿ ನಡೆದ ಘರ್ಷಣೆಗಳಲ್ಲಿ ಯುದ್ಧಾಪರಾಧ ಹಾಗೂ ಮಾನವಕುಲ ಮೇಲೆ ಅಪರಾಧ ನಡೆದಿದೆ ಎಂಬ ಆರೋಪದ ಮೇಲೆ ನೆತನ್ಯಾಹು ಹಾಗೂ ಅವರ ಮಾಜಿ ರಕ್ಷಣಾ ಸಚಿವ ಗ್ಯಾಲಂಟ್ ಮತ್ತು ಹಮಾಸ್ ಅಧಿಕಾರಿಗಳ ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ಬಂಧನ ವಾರೆಂಟ್ ಹೊರಡಿಸಿದೆ. ಈ ನಿರ್ಧಾರ ನೆತನ್ಯಾಹು ಮತ್ತು ಇತರರನ್ನು ಅಂತಾರಾಷ್ಟ್ರೀಯವಾಗಿ ಬೇಕಾಗಿರುವ ಶಂಕಿತರನ್ನಾಗಿ ಪರಿವರ್ತಿಸುತ್ತದೆ, ಅವರನ್ನು ಮತ್ತಷ್ಟು ಪ್ರತ್ಯೇಕಿಸುವ ಸಾಧ್ಯತೆಯಿದೆ ಮತ್ತು 13 ತಿಂಗಳ ಸಂಘರ್ಷವನ್ನು ಕೊನೆಗೊಳಿಸಲು ಕದನ ವಿರಾಮದ ಮಾತುಕತೆಯ ಪ್ರಯತ್ನಗಳನ್ನು ಸಂಕೀರ್ಣಗೊಳಿಸುತ್ತದೆ. ಆದರೆ ಇಸ್ರೇಲ್ ಮತ್ತು ಅದರ ಪ್ರಮುಖ ಮಿತ್ರರಾಷ್ಟ್ರವಾದ ಯುನೈಟೆಡ್ ಸ್ಟೇಟ್ಸ್ ನ್ಯಾಯಾಲಯದ ಸದಸ್ಯರಲ್ಲದ ಕಾರಣ ಬಂಧನ ವಾರೆಂಟ್ ನ ಪ್ರಾಯೋಗಿಕ ಪರಿಣಾಮಗಳು ಸೀಮಿತವಾಗಬಹುದು ಎಂದು ಹೇಳಲಾಗುತ್ತಿದೆ. ನೆತನ್ಯಾಹು ಮತ್ತು ಇತರ ಇಸ್ರೇಲಿ ನಾಯಕರು ICC ಮುಖ್ಯ ಪ್ರಾಸಿಕ್ಯೂಟರ್ ಕರೀಮ್ ಖಾನ್ ಅವರ ವಾರಂಟ್‌ಗಳ…

Read More

ರೇಣುಕಾಸ್ವಾಮಿ ಕೊಲೆ ಕೇಸ್ ನ ಎ2 ಆರೋಪಿ ದರ್ಶನ್ ಗೆ ಸದ್ಯ ಮಧ್ಯಂತರ ಜಾಮೀನು ಮಂಜೂರು ಮಾಡಲಾಗಿದೆ. ಆರು ವಾರಗಳ ಕಾಲ ಜಾಮೀನು ನೀಡಲಾಗಿದ್ದು ಈಗಾಗಲೇ 3 ವಾರ ಕಳೆದು ಹೋಗಿದೆ. ಬೆನ್ನು ನೋವಿಂದ ಬಳಲುತ್ತಿರುವ ದರ್ಶನ್, ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮಧ್ಯೆ ನಿನ್ನೆ ಹೈಕೋರ್ಟ್ ನಲ್ಲಿ ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆದಿದ್ದು ವಿಚಾರಣೆಯನ್ನು ಮತ್ತೆ ಮುಂದಾಡಲಾಗಿದೆ. ಇತ್ತ ದರ್ಶನ್​ ಕೇಸ್ ಬಗ್ಗೆ ಮಾತಾಡಿದ ಗೃಹ ಸಚಿವ ಪರಮೇಶ್ವರ್ ದರ್ಶನ್​ಗೆ ಬೇಲ್​ ಕೊಡಬಾರದು ಎಂದಿದ್ದಾರೆ. ನಟ ದರ್ಶನ್​ ಕೇಸ್ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವ ಜಿ ಪರಮೇಶ್ವರ್​, ದರ್ಶನ್ ಅವರು ಚಿಕಿತ್ಸೆ ಪಡೆಯಲೆಂದು ಮಧ್ಯಂತರ ಜಾಮೀನು ಪಡೆದು ಹೊರಗೆ ಬಂದಿದ್ದಾರೆ. 3 ವಾರಗಳ ಕಾಲಾವಕಾಶದಲ್ಲಿ ಚಿಕಿತ್ಸೆ ಪಡೆದು ಮತ್ತೆ ದರ್ಶನ್​ ಜೈಲು ಸೇರಬೇಕಾಗುತ್ತದೆ ಎಂದು ಪರಮೇಶ್ವರ್ ಹೇಳಿದ್ರು. ಅದಕ್ಕೂ ಮುನ್ನ ಮತ್ತೆ ದರ್ಶನ್​ ಬೇಲ್ ಕೇಳಬಹುದು, ವಿಚಾರಣೆ ನಡೆಯಬಹುದು.  ನಾವು ಕೂಡ ದರ್ಶನ್​ಗೆ…

Read More