Author: Author AIN

ಪಂಜಾಬಿ ಗಾಯಕ ಸಿಧು ಮೂಸೇವಾಲಾ ಹತ್ಯೆ ಪ್ರಕರಣದ ರೂವಾರಿ ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್‌ನನ್ನು ದಲ್ಲಾ ಲಖ್ಬೀರ್ ಗ್ಯಾಂಗ್‌ನ ಪ್ರತಿಸ್ಪರ್ಧಿ ಗ್ಯಾಂಗ್ ಸದಸ್ಯರು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಕ್ಯಾಲಿಫೋರ್ನಿಯಾದ ಹೋಟೆಲ್ ಫೇರ್‌ಮೌಂಟ್‌ನಲ್ಲಿ ಘಟನೆ ನಡೆದಿದೆ. ಗ್ಯಾಂಗ್‌ಸ್ಟರ್‌ ಗೋಲ್ಡಿ ಬ್ರಾರ್ ಕೆನಡಾದಲ್ಲಿನ 25 ಮೋಸ್ಟ್ ವಾಂಟೆಡ್‌ ವ್ಯಕ್ತಿಗಳಲ್ಲಿ ಒಬ್ಬನಾಗಿದ್ದ. 2022ರ ಮೇ 29 ರಂದು ಗೋಲ್ಡಿ ಬ್ರಾರ್‌ನ ಸೂಚನೆಯ ಮೇರೆಗೆ ಪಂಜಾಬಿ ಗಾಯಕ ಸಿಧು ಮೂಸೇವಾಲಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದ ಎನ್ನಲಾಗಿದೆ.

Read More

15 ವರ್ಷದ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಅಮೆರಿಕದ ಶಿಕ್ಷಕಿಯೊಬ್ಬರನ್ನು ಬಂಧಿಸಲಾಗಿದೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. 26 ವರ್ಷ ವಯಸ್ಸಿನ ರೇಗನ್ ಗ್ರೇ ಅವರನ್ನು ಬಂಧಿಸಲಾಗಿದೆ. ಲಿಟ್ಲ್ ರಾಕ್ ಇಮ್ಯಾನ್ಯುಯಲ್ ಬ್ಯಾಪ್ಟಿಸ್ಟ್ ಚರ್ಚ್ ನಲ್ಲಿ ಸ್ವಯಂಸೇವಕಿಯಾಗಿ ಕಾರ್ಯ ನಿರ್ವಹಿಸುವ ವೇಳೆ 2020ರಿಂದೀಚೆಗೆ 15 ವರ್ಷದ ಬಾಲಕನಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಳು ಎನ್ನುವುದು ಸಾಬೀತಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಮಗನ ಮೊಬೈಲ್ ಫೋನ್ ನಲ್ಲಿದ್ದ ಮೆಸೇಜ್ ಗಳನ್ನು ನೋಡಿದ ಬಳಿಕ ಬಾಲಕನ ಪೋಷಕರು ಮಹಿಳೆ ಬಗ್ಗೆ ಹಿರಿಯ ಪಾಸ್ಟರ್ ಗೆ ದೂರು ನೀಡಿದ್ದರು. ಬಾಲಕನಿಗೆ ನಗ್ನ ಚಿತ್ರಗಳನ್ನು ಹೇರಳವಾಗಿ ಕಳುಹಿಸುತ್ತಿದ್ದುದು ಕಂಡುಬಂದಿತ್ತು. ಲಿಟ್ಲ್ ರಾಕ್ ಕ್ರಿಶ್ಚಿಯನ್ ಅಕಾಡೆಮಿಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಮಹಿಳೆ, ಕೌನ್ಸಿಲಿಂಗ್ ವೇಳೆ ದೈಹಿಕ ಸಂಬಂಧವಾಗಿರಲಿಲ್ಲ ಎಂದು ಚರ್ಚ್ ಅಧಿಕಾರಿಗಳಿಗೆ ತಿಳಿಸಿದ್ದಳು. ಈ ವರ್ಷದ ಫೆಬ್ರುವರಿಯಲ್ಲಿ ಸ್ನ್ಯಾಪ್ ಚಾಟ್ ಮೂಲಕ 15 ವರ್ಷದ ಬಾಲಕನಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದುದು ದೃಢಪಟ್ಟಿದ್ದು ಇದೀಗ ಮಹಿಳೆಯನ್ನು ಬಂಧಿಸಲಾಗಿದೆ.

Read More

ಹರಿತವಾದ ಖಡ್ಗದಿಂದ ಅಪ್ರಾಪ್ತನನ್ನು ಕೊಂದು, ಹಲವರನ್ನು ಗಾಯಗೊಳಿಸಿದ್ದ 36 ವರ್ಷದ ವ್ಯಕ್ತಿಯನ್ನು ಕೊನೆಗೂ ಲಂಡನ್ ಮೆಟ್ರೋ ಪಾಲಿಟನ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಳಗಿನ ಹೊತ್ತು ಕಚೇರಿಗೆ ತೆರಳುವ ಒತ್ತಡದಲ್ಲಿದ್ದ ಜನರಿಗೆ ಈ ಘಟನೆ ಆಘಾತ ತಂದಿದೆ. ಕೂಡಲೇ ಪೊಲೀಸರಿಗೆ ಕರೆ ಮಾಡಿದ ಸಾರ್ವಜನಿಕರು ವ್ಯಕ್ತಿಯ ಬಗ್ಗೆ ಮಾಹಿತಿ ನೀಡಿದ್ದು ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು ಬಂಧಿಸುವ ಹೊತ್ತಿಗಾಗಲೇ ಆತ ತನ್ನ ಕತ್ತಿಯಿಂದ ಹಲವರ ಮೇಲೆ ದಾಳಿ ನಡೆಸಿದ್ದಷ್ಟೇ ಅಲ್ಲ, ತನ್ನನ್ನು ಬಂಧಿಸಲು ಬಂದಿದ್ದ ಇಬ್ಬರು ಪೊಲೀಸರ ಮೇಲೂ ದಾಳಿ ಮಾಡಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಈ ಘಟನೆಯಲ್ಲಿ ಒಟ್ಟು ಎಷ್ಟು ಮಂದಿಗೆ ಗಾಯವಾಗಿದೆ ಅನ್ನೋದ್ರ ಕುರಿತಾಗಿ ಇನ್ನಷ್ಟೇ ನಿಖರ ಮಾಹಿತಿ ಹೊರ ಬೀಳಬೇಕಿದೆ. ಈ ಘಟನೆ ಕುರಿತಾಗಿ ಮಾಹಿತಿ ನೀಡಿರುವ ಲಂಡನ್ ಆಂಬುಲೆನ್ಸ್‌ ಸೇವೆ, ತಾನು ಐವರು ಗಾಯಾಳುಗಳಿಗೆ ಚಿಕಿತ್ಸೆ ನೀಡಿರೋದಾಗಿ ಹೇಳಿದೆ. ಎಲ್ಲರನ್ನೂ ಆಸ್ಪತ್ರೆಗೆ ರವಾನಿಸಲಾಗಿದ್ದು, ಗಾಯಾಳಗಳ ಆರೋಗ್ಯ ಸ್ಥಿತಿ ಕುರಿತಾಗಿ ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ…

Read More

ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ‘ಕೂಲಿ’ ಸಿನಿಮಾ ತಂಡಕ್ಕೆ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ನೋಟಿಸ್ ನೀಡಿದ್ದಾರೆ. ಕೂಲಿ ಸಿನಿಮಾದಲ್ಲಿ ತಮ್ಮ ಸಂಗೀತ ಸಂಯೋಜನೆಯನ್ನು ಅನುಮತಿ ಇಲ್ಲದೇ ಬಳಸಿದ್ದಾರೆ ಎಂದು ನೋಟಿಸ್ ನಲ್ಲಿ ಉಲ್ಲೇಖಿಸಿದ್ದಾರೆ. ಕೂಲಿ ಸಿನಿಮಾಗೆ ಅನಿರುದ್ಧ ಸಂಗೀತ ಸಂಯೋಜನೆ ಮಾಡಿದ್ದು, ಇದರಲ್ಲಿ ಇಳಯರಾಜ ಅವರ ವಾ ವಾ ಪಾಕಂ ವಾ ಹಾಡನ್ನು ಮರುಸೃಷ್ಟಿಸಲಾಗಿದೆ. ಇದಕ್ಕೆ ತಮ್ಮ ಅನುಮತಿ ಪಡೆದುಕೊಂಡಿಲ್ಲ ಎಂದು ಇಳಯರಾಜ ಹೇಳಿಕೊಂಡಿದ್ದಾರೆ. ಹಾಗಾಗಿ ನಿರ್ಮಾಣ ಸಂಸ್ಥೆಗೆ ನೋಟಿಸ್ ನೀಡಲಾಗಿದೆ. ಕೂಲಿ ಚಿತ್ರದ ನಿರ್ದೇಶಕ ಲೋಕೇಶ್ ಕನಕರಾಜ್ ಪದೇ ಪದೇ ಇಂತಹ ತಪ್ಪುಗಳನ್ನು ಮಾಡುತ್ತಾರೆ ಎನ್ನುವ ಆರೋಪ ಹಿಂದಿನಿಂದಲೂ ಕೂಡ ಇದೆ. ಈ ಹಿಂದೆ ವಿಕ್ರಮ್ ಸಿನಿಮಾದಲ್ಲೂ ಅವರು ಇಳಯರಾಜ ಅವರು ಹಾಡನ್ನು ಬಳಸಿಕೊಂಡಿದ್ದರು. ಆಗಲೂ ಇಳಯರಾಜ ಗರಂ ಆಗಿದ್ದರು. ಈಗ ಮತ್ತೆ ಲೋಕೇಶ್ ಹಿಂದಿನ ತಪ್ಪನ್ನೇ ಮಾಡಿದ್ದಾರೆ.

Read More

ಅಂಗಮಾಲಿ ಡೈರೀಸ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ನಟಿ ಅನ್ನಾ ರಾಜನ್, ಇತ್ತೀಚೆಗೆ ಆವೇಶಂ ಚಿತ್ರದ ಹಾಡೊಂದಕ್ಕೆ ಹೆಜ್ಜೆ ಹಾಕಿ ಸದ್ದು ಮಾಡಿದ್ದರು. ಸೋಷಿಯಲ್ ಮೀಡಿಯಾದಲ್ಲಿ ನಟಿ ಈ ವಿಡಿಯೋವನ್ನು ಹಂಚಿಕೊಂಡಿದ್ದರು. ವಿಡಿಯೋ ಹಂಚಿಕೊಂಡ ನಟಿ, ನನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಎಲ್ಲ ಜನರಿಗೆ, ನಿಮ್ಮ ಕಾಳಜಿ ಮತ್ತು ವಿಶೇಷ ಪ್ರೀತಿಗೆ ಧನ್ಯವಾದ ಎಂದು ಹೇಳಿದ್ದ ಅನ್ನಾ, ಧಗಧಗಿಸುವ ಬಿಸಿಲಿನ ಕಾರಣಕ್ಕೆ, ಮನ ಬಿಚ್ಚಿ ಕುಣಿಯಲು ಸಾಧ್ಯವಾಗಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ನನಗೆ ಡ್ಯಾನ್ಸ್ ಅಂದರೆ ಅಷ್ಟಕಷ್ಟೇ ಎಂದಿದ್ದರು. ಮುಂದಿನ ಬಾರಿ ಇನ್ನೂ ಚೆನ್ನಾಗಿ ತಮ್ಮ ನೃತ್ಯ ಕಲೆಯನ್ನ ಪ್ರದರ್ಶಿಸುವುದಾಗಿಯೂ ಹೇಳಿದ್ದರು. ಅನ್ನಾ ಅವರನ್ನು ಸಾಕಷ್ಟು ಮಂದಿ ಟ್ರೋಲ್ ಮಾಡಿದ್ದಾರೆ.ಕುಣಿಯೋಕೆ ಬಾರದವರು ನೆಲ ಡೊಂಕು ಅಂದರಂತೆ, ಹಾಗಾಯಿತು ನಿಮ್ಮ ಕಥೆ ಅಂದಿದ್ದಾರೆ. ಇಷ್ಟ್ಯಾಕೇ ದಪ್ಪ ಆಗಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ. ದಪ್ಪ ಆಗುವುದು ಮಹಾ ಅಪರಾಧ ಎಂಬಂತೆ ಅನ್ನಾ ಅವರನ್ನ ಟೀಕಿಸಿದ್ದಾರೆ. ವ್ಯಂಗ್ಯ ಮಾಡಿದ್ದಾರೆ. ಈ ಕಾಮೆಂಟ್ ಗಳನ್ನು ನೋಡಿ ಕುಗ್ಗಿ…

Read More

ಅನುಪಮಾ ಧಾರವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಇಂದು ದೆಹಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶದಲ್ಲಿನ ಅಭಿವೃದ್ಧಿಯಿಂದಾಗಿ ನಾನು ಬಿಜೆಪಿಗೆ ಸೇರಿದ್ದೇನೆ ಎಂದು ನಟಿ ಹೇಳಿದರು. ಅಭಿವೃದ್ಧಿಯ ಈ ಮಹಾಯಜ್ಞವನ್ನು ನೋಡಿದಾಗ ನನಗೂ ಇದರಲ್ಲಿ ಪಾಲ್ಗೊಳ್ಳಬೇಕು ಎಂದು ಅನಿಸುತ್ತದೆ. ನಾನು ಏನೇ ಮಾಡಿದರೂ ಸರಿಯಾಗಿ, ಒಳ್ಳೆಯದನ್ನು ಮಾಡುವಂತೆ ನಿಮ್ಮೆಲ್ಲರ ಆಶೀರ್ವಾದ ಮತ್ತು ಬೆಂಬಲ ಬೇಕು ಎಂದು ಅವರು ಹೇಳಿದರು. ಪಕ್ಷದ ಮುಖಂಡರಾದ ವಿನೋದ್ ತಾವ್ಡೆ ಮತ್ತು ಅನಿಲ್ ಬಲುನಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಈ ಮಾರ್ಚ್​ನಲ್ಲಿ ರೂಪಾಲಿ ಪ್ರಧಾನಿ ಮೋದಿಯವರನ್ನು ಭೇಟಿಯಾಗಿದ್ದರು, ಬಳಿಕ ಇದು ನನ್ನ ಜೀವನದ ಅತ್ಯಂತ ಸ್ಮರಣೀಯ ದಿನ, ಎಂದೂ ಮರೆಯಲು ಸಾಧ್ಯವಾಗದು, ಮೋದಿಯವರನ್ನು ಭೇಟಿಯಾಗುವ ಕನಸು ನನಸಾಯಿತು ಎಂದು ಬರೆದುಕೊಂಡಿದ್ದರು. ಸಿನಿಮಾ ನಿರ್ದೇಶಕ ಅನಿಲ್ ಗಂಗೂಲಿ ಪುತ್ರಿ ರೂಪಾಲಿ ಗಂಗೂಲಿ ತನ್ನ ವೃತ್ತಿ ಜೀವನವನ್ನು 7ನೇ ವಯಸ್ಸಿನಲ್ಲಿ ಪ್ರಾರಂಭಿಸಿದರು. ಅವರು ತಮ್ಮ ತಂದೆಯ ಸಾಹೇಬ…

Read More

ಇತ್ತೀಚೆಗೆ ಸುರಿದ ಭಾರಿ ಮಳೆಗೆ ದಕ್ಷಿಣ ಚೀನಾದ ಹೆದ್ದಾರಿಯ ಒಂದು ಭಾಗ ಕುಸಿದು ಘಟನೆಯಲ್ಲಿ ಕನಿಷ್ಠ 19 ಜನರು ಸಾವನ್ನಪ್ಪಿದ್ದು, 30ಕ್ಕೂ ಅಧಕ ಜನರು ಗಾಯಗೊಂಡಿದ್ದಾರೆ. ಗಾಯಳುಗಳನ್ನು ರಕ್ಷಣಾ ಕಾರ್ಯಕರ್ತರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಘಟನೆಯಲ್ಲಿ ಕುಸಿತದಿಂದಾಗಿ ಒಟ್ಟು 18 ವಾಹನಗಳಿಗೆ ಅಪಘಾತವಾಗಿದೆ.ಇದರಲ್ಲಿ ಒಟ್ಟು 49 ಜನರು ಸೇರಿದ್ದಾರೆ, ಇದರಲ್ಲಿ ಹತ್ತೊಂಬತ್ತು ಜನರು ಸಾವನ್ನಪ್ಪಿದ್ದಾರೆ ಮತ್ತು ಮೂವತ್ತು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರಂಭಿಕ ವರದಿಯು ಎಲ್ಲಾ ಗಾಯಗಳು ಮಾರಣಾಂತಿಕವಲ್ಲ ಎಂದು ಸೂಚಿಸುತ್ತದೆ. ಚಾಯಾಂಗ್ ವಿಭಾಗದ ನಿರ್ಗಮನದಿಂದ ಸುಮಾರು 2 ಕಿಲೋಮೀಟರ್ ದೂರದಲ್ಲಿರುವ ಗುವಾಂಗ್ಡಾಂಗ್ನ ಮೇಡಾ ಎಕ್ಸ್ಪ್ರೆಸ್ವೇಯಲ್ಲಿ ಡಾಬು ಮತ್ತು ಫುಜಿಯಾನ್ ದಿಕ್ಕಿನಲ್ಲಿ ಕೆ 11 + 900 ಮೀ ಬಳಿ ಸುಮಾರು 2: 10 (ಜಿಎಂಟಿ + 8) ಬಳಿ ಕುಸಿತ ಸಂಭವಿಸಿದೆ. ಕುಸಿದ ರಸ್ತೆಯ ಮೇಲ್ಮೈ ಸುಮಾರು 17.9 ಮೀಟರ್ ಉದ್ದವಿದೆ ಮತ್ತು ಸುಮಾರು 184.3 ಚದರ ಮೀಟರ್ ಪ್ರದೇಶವನ್ನು ಒಳಗೊಂಡಿದೆ. ಒಟ್ಟಾರೆಯಾಗಿ, 18…

Read More

ಬಾಲಿವುಡ್ ಮಿಸ್ಟರ್ ಫರ್ಫೆಕ್ಷನಿಸ್ಟ್ ನಟ ಆಮೀರ್ ಖಾನ್ ಹಿಂದಿಯ ಸೂಪರ್ ಹಿಟ್ ಕಾಮಿಡಿ ಶೋ ಕಾಮಿಡಿ ವಿತ್ ಕಪೀಲ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಾಕಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲೂ ಲಾಲ್ ಸಿಂಗ್ ಚಡ್ಡಾ ಸಿನಿಮಾದ ಸೋಲಿನ ಹೊಣೆಯನ್ನೂ ಆಮೀರ್ ಹೊತ್ತುಕೊಂಡಿದ್ದಾರೆ. 2022ರಲ್ಲಿ ತೆರೆಕಂಡ ‘ಲಾಲ್​ ಸಿಂಗ್​ ಚಡ್ಡಾ’ ಸಿನಿಮಾದ ಮೇಲೆ ಆಮೀರ್ ಸಾಕಷ್ಟು ಭರವಸೆ ಇಟ್ಟುಕೊಂಡಿದ್ದರು. ಆ ಸಿನಿಮಾ ಹೀನಾಯವಾಗಿ ಸೋತಿತು. ಹಾಲಿವುಡ್​ನ ‘ಫಾರೆಸ್ಟ್​ ಗಂಪ್​’ ಚಿತ್ರವನ್ನು ಆಮಿರ್​ ಖಾನ್​ ಅವರು ಹಿಂದಿಗೆ ‘ಲಾಲ್​ ಸಿಂಗ್​ ಚಡ್ಡಾ’ ಶೀರ್ಷಿಕೆಯಲ್ಲಿ ರಿಮೇಕ್​ ಮಾಡಿದರು. ಆದರೆ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿತ್ತು. ‘ನಾನು ಆ ಸಿನಿಮಾದಲ್ಲಿ ನನ್ನ ಅಭಿನಯದ ಪಿಚ್​ ಸ್ವಲ್ಪ ಜಾಸ್ತಿ ಮಾಡಿಕೊಂಡಿದ್ದೆ. ಅದು ಸರಿಯಾಗಿ ಮೂಡಿಬರಲಿಲ್ಲ. ಅದರಿಂದಾಗಿ ಇಡೀ ಸಿನಿಮಾಗೆ ತೊಂದರೆ ಆಯಿತು. ಅದರ ಪೂರ್ತಿ ಭಾರ ನನ್ನ ಮೇಲೆ ಇತ್ತು. ನಾನೇ ತಪ್ಪು ಮಾಡಿದೆ’ ಎಂದು ಆಮಿರ್​ ಖಾನ್​ ಅವರು ಹೇಳಿದ್ದಾರೆ. ಅಲ್ಲದೇ ವೃತ್ತಿಜೀವನದಲ್ಲಿ ತಮ್ಮ…

Read More

ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಘಟನೆಯ ಕುರಿತು ಅನೇಕರು ಆಕ್ರೋಶ ಹೊರ ಹಾಕಿದ್ದಾರೆ. ಆತನಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ. ಇದೀಗ ಪ್ರಕರಣದ ಕುರಿತು ಕನ್ನಡ ಚಿತ್ರರಂಗ ಖ್ಯಾತ ನಿರ್ದೇಶಕ ಎಸ್.ನಾರಾಯಣ್ ಪ್ರತಿಕ್ರಿಯಿಸಿದ್ದಾರೆ. ಪ್ರಜ್ವಲ್ ಪ್ರಕರಣ ಮಾನವ ಕುಲಕ್ಕೆ ಕಳಂಕ. ನಾವು ನಾಗರೀಕ ಸಮಾಜದಲ್ಲಿ ಬದುಕುತ್ತಿದ್ದೇವೆ. ಇಂತಹ ಘಟನೆಗಳು ಆದಾಗ ನೋವಾಗುತ್ತದೆ. ಯಾರೇ ತಪ್ಪು ಮಾಡಲಿ ಅವರಿಗೆ ಶಿಕ್ಷೆ ಆಗಬೇಕು ಎಂದಿದ್ದಾರೆ. ಶಿವರಾಜ್ ಕುಮಾರ್ ನಟನೆಯ ಬಂಧು ಬಳಗ ಸಿನಿಮಾ ಸೇರಿದಂತೆ ನಾನಾ ಭಾಷೆಗಳ ಚಿತ್ರಗಳಲ್ಲಿ ನಟಿಸಿರುವ ಪೂನಂ ಕೌರ್ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಜ್ವಲ್ ರೇವಣ್ಣರಂಥ ನೀಚ ವ್ಯಕ್ತಿಗಳನ್ನು ಗೆಲ್ಲಿಸಬೇಕಾ ಎಂದು ಅವರು ಪ್ರಶ್ನೆ ಮಾಡಿದ್ದಾರೆ. ದೇಶದಾದ್ಯಂತ ಪ್ರಜ್ವಲ್ ಅವರದ್ದು ಎನ್ನಲಾದ ವಿಡಿಯೋಗಳು ಹರಿದಾಡುತ್ತಿವೆ. ಜೊತೆಗೆ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಘಟನೆಯ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. “ಪ್ರಜ್ವಲ್ ರೇವಣ್ಣ ಲೈಂಗಿಕ ಕಿರುಕುಳ ಅಪರಾಧದ ಬಗ್ಗೆ ಮೋದಿ ನಾಯಕತ್ವದ ಸರ್ಕಾರ ಸೈಲೆಂಟ್ ಆಗಿದ್ದಕ್ಕೆ ನಾವೇಕೆ ಶಾಕ್…

Read More

ನಟಿ ಮಾನ್ವಿತಾ ಕಾಮತ್ ತಾಯಿ ಮೆಚ್ಚಿದ ಹುಡುಗನೊಂದಿಗೆ ಇಂದು ಚಿಕ್ಕಮಗಳೂರಿನ ಕಳಸದಲ್ಲಿ ಸಪ್ತಪದಿ ತುಳಿದಿದ್ದಾರೆ. ಮೈಸೂರು ಹುಡುಗ ಅರುಣ್ ಕುಮಾರ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಎರಡು ಕುಟುಂಬದ ಸದಸ್ಯರು ಮತ್ತು ಸಿನಿಮಾ ರಂಗದ ಗಣ್ಯರು ಹಾಗೂ ಆಪ್ತರು ಮದುವೆ ಸಮಾರಂಭದಲ್ಲಿ ಭಾಗಿಯಾಗಿ ನವ ಜೋಡಿಗೆ ಶುಭ ಹಾರೈಸಿದ್ದಾರೆ. ಮೇ 1ರಂದು ಮಾನ್ವಿತಾ ಮದುವೆ ಕೊಂಕಣಿ ಸಂಪ್ರದಾಯದಂತೆ ನಡೆದಿದೆ, ಅದಕ್ಕೂ ಮುನ್ನ ಏಪ್ರಿಲ್‌ 29ರಂದು ಮೆಹೆಂದಿ ಹಾಗೂ 30ರಂದು ಸಂಗೀತ್‌ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ದುನಿಯಾ ಸೂರಿ ನಿರ್ದೇಶನದ ಸೂಪರ್‌ಹಿಟ್‌ ಚಿತ್ರ ‘ಕೆಂಡಸಂಪಿಗೆ’ ಮೂಲಕ ಸ್ಯಾಂಡಲ್‌ವುಡ್‌ ಪ್ರವೇಶಿಸಿದ ನಟಿ ಮಾನ್ವಿತಾ ಕಾಮತ್‌ ನಂತರ ಹಲವು ಯಶಸ್ವಿ ಚಿತ್ರಗಳಲ್ಲಿ ಅಭಿನಯಿಸಿದ್ದರು. ಶಿವರಾಜ್‌ಕುಮಾರ್‌ ನಟನೆಯ ‘ಟಗರು’ ಸಿನಿಮಾ ಅವರಿಗೆ ಮತ್ತಷ್ಟು ಹೆಸರು ತಂದುಕೊಟ್ಟಿತ್ತು. ಮಾನ್ವಿತಾ ಕಾಮತ್ ಹಾಗೂ ಅರುಣ್ ಮದುವೆ ಕೊಂಕಣಿ ಸಂಪ್ರದಾಯದಂತೆ ನಡೆದಿದೆ. ನಿನ್ನೆ ನವಜೋಡಿಯ ಅರಿಶಿನ ಶಾಸ್ತ್ರ, ಮೆಹಂದಿ ಮತ್ತು ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿದೆ. ಚಿಕ್ಕಮಗಳೂರಿನ ಕಳಸದಲ್ಲಿ ಮದುವೆಯ ಶಾಸ್ತ್ರಗಳು ನಡೆಯುತ್ತಿವೆ. ವಿವಾಹ…

Read More