Author: Author AIN

ಕೆಲ ಸಮಯದಿಂದ ಸೈಲೆಂಟ್ ಆಗಿದ್ದ ಮಹಾಮಾರಿ ಕೊರೋನಾ ಮತ್ತೆ ವಕ್ಕಿರಿಸಿಕೊಂಡಿದೆ. WHO ಪ್ರಕಾರ ಎಲ್ಲ ಮೂರೂ ಪ್ರಕರಣಗಳು ರಾಜಧಾನಿ ರಿಯಾದ್ ನಲ್ಲಿ ಕಂಡು ಬಂದಿದೆ. ಸೌದಿ ಒಂಟೆಗಳಿಂದ ಸೋಂಕು ಹರಡುತ್ತಿದ್ದು, ಮಧ್ಯಪ್ರಾಚ್ಯ ಉಸಿರಾಟದ ಸಿಂಡ್ರೋಮ್ ಹೊಂದಿರುವ ಜನರ ವಯಸ್ಸು 56 ರಿಂದ 60 ವರ್ಷ. ಈ ವರದಿಯು ವಿಶ್ವಾದ್ಯಂತ ಕೊರೊನಾ ವೈರಸ್ ಹರಡುವ ಬಗ್ಗೆ ಮತ್ತೊಮ್ಮೆ ಆತಂಕವನ್ನು ಮೂಡಿಸಿದೆ. ಇಡೀ ಜಗತ್ತನ್ನು ನಾಲ್ಕು ವರ್ಷಗಳ ಹಿಂದೆ ಭೀಕರವಾಗಿ ಕಾಡಿದ್ದ ಕೊರೋನಾ ವೈರಸ್ ಬಳಿಕ ನಂತರ ನಾನಾ ವೈರಸ್‌ಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತಿದೆ. ಇತ್ತೀಚೆಗೆ ಸೌದಿ ಅರೇಬಿಯಾದಲ್ಲಿ ಕೊರೊನಾ ವೈರಸ್‌ನ ಹೊಸ ರೂಪ ಬೆಳಕಿಗೆ ಬಂದಿದೆ. ಸೌದಿ ಅರೇಬಿಯಾದ ಆರೋಗ್ಯ ಸಚಿವಾಲಯವು ಈ ವಿಷಯವನ್ನು ವಿಶ್ವ ಆರೋಗ್ಯ ಸಂಸ್ಥೆಯ ಗಮನಕ್ಕೆ ತಂದಿದೆ. ಏಪ್ರಿಲ್ 10 ಮತ್ತು 17 ರ ನಡುವೆ ಈ ಅಪಾಯಕಾರಿ ವೈರಸ್​​ ಮಧ್ಯ-ಪ್ರಾಚ್ಯ ಉಸಿರಾಟದ ಸಿಂಡ್ರೋಮ್ ರೂಪದಲ್ಲಿ ಆ ದೇಶದಲ್ಲಿ ವೇಗವಾಗಿ ಹರಡುತ್ತಿದೆ. ಕೊರೋನಾ ವೈರಸ್‌ನ ಹೊಸ ರೂಪಾಂತರದ ಮೂರು ಪ್ರಕರಣಗಳು…

Read More

ಧಾರಾಕಾರ ಮಳೆ ಹಾಗೂ ಪ್ರವಾಹಕ್ಕೆ ಅಫ್ಘಾನಿಸ್ತಾನ  ದೇಶದ ಜನರು ತತ್ತರಿಸಿ ಹೋಗಿದ್ದಾರೆ. ಘಟನೆಯಲ್ಲಿ ಇದುವರೆಗೂ ಸುಮಾರು 200ಕ್ಕೂ ಅಧಿಕ ಜನರು ಸಾವನ್ನಪ್ಪಿರುವುದಾಗಿ ವಿಶ್ವಸಂಸ್ಥೆ ತಿಳಿಸಿದೆ. ಶುಕ್ರವಾರ ರಾತ್ರಿ ಆರಂಭವಾದ ಮಳೆಗೆ ಪ್ರವಾಹ ನುಗ್ಗಿದ ಪರಿಣಾಮ ಮಹಿಳೆಯರು, ಮಕ್ಕಳು ಸೇರಿದಂತೆ ನೂರಾರು ಮಂದಿ ಕೊನೆಯುಸಿರೆಳೆದಿದ್ದಾರೆ. ಹವಾಮಾನ ವೈಪರೀತ್ಯದಿಂದಾಗಿ ಅಫ್ಘಾನಿಸ್ತಾನದಲ್ಲಿ ಭಾರೀ ಮಳೆಯಾಗಿರುವುದಾಗಿ ವರದಿ ವಿವರಿಸಿದೆ. ಪ್ರವಾಹದಿಂದ ಸಾವನ್ನಪ್ಪಿರುವವರ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದ್ದಿರುವುದಾಗಿ ವಿಪತ್ತು ನಿರ್ವಹಣಾ ಮಂಡಳಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸಲು ಶೋಧ ಕಾರ್ಯ ನಡೆಯುತ್ತಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ. ಮಳೆ, ಪ್ರವಾಹದಿಂದ ನೂರಾರು ಜನರು ಮನೆ ಕಳೆದುಕೊಂಡಿದ್ದು, ಅವರಿಗಾಗಿ ತಾತ್ಕಾಲಿಕ ಟೆಂಟ್ಸ್‌, ಬ್ಲ್ಯಾಂಕೆಟ್‌, ಆಹಾರ ಒದಗಿಸಲಾಗಿದೆ. ಧಾರಾಕಾರ ಮಳೆ, ಪ್ರವಾಹದಿಂದ ಜನಜೀವನ ಅಸ್ತವ್ಯಸ್ತವಾಗಿದ್ದು, ಪ್ರವಾಹದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಪ್ರವಾಹದಿಂದಾಗಿ ಹಲವಾರು ಪ್ರದೇಶಗಳಲ್ಲಿ ಭಾರೀ ಆರ್ಥಿಕ ನಷ್ಟಕ್ಕೆ ಕಾರಣವಾಗಿದೆ ಎಂದು ವಿಪತ್ತು ನಿರ್ವಹಣಾ ಮಂಡಳಿಯ ಪ್ರಾಂತೀಯ ನಿರ್ದೇಶಕ ಮೊಹಮ್ಮದ್‌ ಅಕ್ರಮ್‌ ಅಕ್ಬರಿ ತಿಳಿಸಿರುವುದಾಗಿ ವರದಿಯಾಗಿದೆ.

Read More

ಒಂದು ಕಾಲದಲ್ಲಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದ್ದ ಬಾಲಿವುಡ್ ಸಿನಿಮಾಗಳು ಇದೀಗ ಮಂಕಾಗಿವೆ. ಹಿಂದಿಯ ಸಾಕಷ್ಟು ಸಿನಿಮಾಗಳು ನೆಲಕಚ್ಚುತ್ತಿದ್ದು ಹಾಕಿದ ಬಂಡವಾಳವು ಬರದೆ ಜನ ಪರದಾಡುವಂತಾಗಿದೆ. 2023ರಲ್ಲಿ ‘ಪಠಾಣ್’, ‘ಜವಾನ್’, ‘ಗದರ್ 2’ ರೀತಿಯ ಸಿನಿಮಾಗಳು ಗೆದ್ದಿದ್ದು ಬಿಟ್ಟರೆ ಮತ್ತಾವುದೇ ಚಿತ್ರ ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿಲ್ಲ. ಅದರಲ್ಲೂ ಅಕ್ಷಯ್ ಕುಮಾರ್ ಹಾಗೂ ಸಲ್ಮಾನ್ ಖಾನ್ ಸಿನಿಮಾಗಳು ಹೇಳ ಹೆಸರಿಲ್ಲದಂತಾಗುವಿದೆ. ಇದಕ್ಕೆಲ್ಲಾ ಕಾರಣವೇನು ಎಂಬುದನ್ನು ಬಾಲಿವುಡ್ ನಟ ಶ್ರೇಯಸ್ ತಲ್ಪಡೆ ತಿಳಿಸಿದ್ದಾರೆ. ಶ್ರೇಯಸ್ ತಲ್ಪಡೆ ಅವರು ಇತ್ತೀಚೆಗೆ ಆರೋಗ್ಯ ಸಮಸ್ಯೆಗಳನ್ನು ಎದುರಿಸಿದ್ದರು. ಸಾವಿನ ದವಡೆಯಿಂದ ಅವರು ಹೊರಬಂದರು. ಅವರಿಗೆ ಹೃದಯಘಾತ ಆಗಿತ್ತು. ಈಗ ಅವರ ನಟನೆಯ ‘ಕರ್ತಂ ಭೂಗ್ತಂ’ ಚಿತ್ರ ಮೇ 17ರಂದು ರಿಲೀಸ್ ಆಗುತ್ತಿದೆ. ಈ ಚಿತ್ರದಲ್ಲಿ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಅವರು ತಮ್ಮ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಹಲವು ಮಾಧ್ಯಮಗಳಿಗೆ ಅವರು ಸಂದರ್ಶನ ನೀಡುತ್ತಿದ್ದಾರೆ. ಈ ವೇಳೆ ಅವರು ಇಂಡಸ್ಟ್ರಿಯ ಇಬ್ಬರು ದೊಡ್ಡ ಸೂಪರ್‌ಸ್ಟಾರ್‌ಗಳ ಬಗ್ಗೆ ಮಾತನಾಡಿದ್ದಾರೆ.…

Read More

ಆಂದ್ರದಲ್ಲಿ ಚುನಾವಣಾ ಕಾವು ಜೋರಾಗಿದೆ. ಸಾಕಷ್ಟ ಸ್ಟಾರ್ ನಟರು ತಮ್ಮ ನೆಚ್ಚಿನ ಅಭ್ಯರ್ಥಿಯ ಪರ ಬೀದಿಗಿಳಿದು ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ತೆಲುಗು ಚಿತ್ರರಂಗದ ಸ್ಟಾರ್ ನಟ ಪವನ್ ಕಲ್ಯಾಣ್ ಸಿನಿಮಾಗಳ ಜೊತೆಗೆ ರಾಜಕೀಯದಲ್ಲೂ ಗುರುತಿಸಿಕೊಂಡಿದ್ದಾರೆ. ಪವನ್ ಕಲ್ಯಾಣ್ ಜನಸೇನಾ ಪಕ್ಷ ಸ್ಥಾಪಿಸಿ ಹತ್ತು ವರ್ಷವಾಗಿದೆ. ಕಳೆದ ಕೆಲವು ಚುನಾವಣೆಗಳಲ್ಲಿ ಪವನ್ ಕಲ್ಯಾಣ್​ಗೆ ನಿರೀಕ್ಷಿತ ಯಶಸ್ಸು ಸಿಕ್ಕಿರಲಿಲ್ಲ. ಆದರೆ ಈ ಬಾರಿಯ ಆಂಧ್ರ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳಲ್ಲಿ ಪವನ್ ಪಕ್ಷ ಛಾಪು ಮೂಡಿಸುವ ಸಾಧ್ಯತೆ ಇದೆ. ಪವನ್ ಕಲ್ಯಾಣ್​ಗೆ ಈ ಬಾರಿ ಇತರೆ ರಾಜಕೀಯ ಪಕ್ಷಗಳ ಜೊತೆಗೆ ಸಿನಿಮಾ ರಂಗದ ಸೆಲೆಬ್ರಿಟಿಗಳ ಬೆಂಬಲ ಜೋರಾಗಿಯೇ ದೊರೆತಿದೆ. ಈ ಹಿಂದೆ ಮುನಿಸಿಕೊಂಡಿದ್ದ ಅಣ್ಣ ಮೆಗಾಸ್ಟಾರ್ ಚಿರಂಜೀವಿ ಸಹ ಪವನ್ ಕಲ್ಯಾಣ್​ಗೆ ಬೆಂಬಲ ಸೂಚಿಸಿದ್ದಾರೆ. ಆದರೆ ಬೆಂಬಲ ಸೂಚಿಸಿದ ಕೆಲವೇ ದಿನಗಳಲ್ಲಿ ಚಿರಂಜೀವಿ ಯೂ-ಟರ್ನ್ ಹೊಡೆದರಾ ಎಂಬ ಅನುಮಾನ ಹುಟ್ಟಿಕೊಂಡಿದೆ. ಇತ್ತೀಚೆಗಷ್ಟೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಪ್ರಕಟಿಸಿದ್ದ ಮೆಗಾಸ್ಟಾರ್ ಚಿರಂಜೀವಿ, ಸಹೋದರ ಪವನ್…

Read More

ಅಶ್ಲೀಲ ವಿಡಿಯೋ ಪ್ರಕರಣದಿಂದ ಮನನೊಂದಿರುವ ಕಿರುತೆರೆ ನಟಿ ಜ್ಯೋತಿ ರೈ ನೋವಿನ ನಡುವೆಯೂ ಕಲಾವಿದರೊಬ್ಬರಿಗೆ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ. ತೆಲುಗಿನ ಜನಪ್ರಿಯ ಜನಪದ ಗಾಯಕ, ಪದ್ಮಶ್ರೀ ಪ್ರಶಸ್ತಿ ವಿಜೇತ ಮೊಗಿಲಯ್ಯ ಜೀವನ ನಿರ್ವಹಣೆಗಾಗಿ ಗಾರೆ ಕೆಲಸ ಮಾಡುತ್ತಿದ್ದರು. ಮುಗಿಲಯ್ಯ ಗಾರೆ ಕೆಲಸ ಮಾಡುತ್ತಿರುವ ಚಿತ್ರಗಳು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಮುಗಿಲಯ್ಯಗೆ ಒದಗಿ ಬಂದಿರುವ ಈ ಪರಿಸ್ಥಿತಿ ನೋಡಿ ಹಲವರು ಅಸಾಮಾಧಾನ ವ್ಯಕ್ತಪಡಿಸಿದ್ದರು. ಈಗ ನಟಿ ಜ್ಯೋತಿ ರೈ, ಮುಗಿಲಯ್ಯನ ನೆರವಿಗೆ ಧಾವಿಸಿದ್ದಾರೆ. ಅಕ್ಷಯ ತೃತೀಯದ ಪುಣ್ಯ ದಿನದಂದು ಪದ್ಮಶ್ರೀ ಮೊಗಿಲಯ್ಯ ಅವರಿಗೆ ನಾನು 50 ಸಾವಿರ ರೂಪಾಯಿಗಳ ಆರ್ಥಿಕ ನೆರವನ್ನು ನೀಡಿದೆ. ಮೊಗಿಲಯ್ಯ ಅಷ್ಟು ಜನಪ್ರಿಯರಾಗಿದ್ದರೂ ಸಹ ತಮ್ಮ ಖಾಸಗಿ ಜೀವನ ಹಾಗೂ ವೃತ್ತಿಯಲ್ಲಿ ಸಾಕಷ್ಟು ಸಮಸ್ಯೆಗಳನ್ನು ಅವರು ಎದುರಿಸುತ್ತಿದ್ದರು. ನಿನ್ನೆ ಅವರು ನಡೆಸಿದ ಸುದ್ದಿಗೋಷ್ಠಿಯಿಂದಾಗಿ ಅವರ ಕಷ್ಟಗಳು ನನಗೆ ತಿಳಿದು ಬಂತು. ಸದ್ಯಕ್ಕೆ ನಾನು ಸಹ ಕಷ್ಟದ ದಿನಗಳನ್ನು ಕಳೆಯುತ್ತಿದ್ದೇನೆ. ಆದರೆ ಅವರ ಕಷ್ಟ ಕೇಳಿದಾಗ…

Read More

ಬಾಲಿವುಡ್ ನಟಿ ರಶ್ಮಿಕಾ ಮಂದಣ್ಣ ಸದ್ಯ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಬ್ಯುಸಿಯಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸ್ಟಾರ್ ನಟರ ಸಿನಿಮಾಗಳಿಗೆ ಬಣ್ಣ ಹಚ್ಚುತ್ತಿರುವ ನಟಿ ಇದೀಗ ಬಾಲಿವುಡ್ ಬ್ಯಾಟ್ ಬಾಯ್ ಸಲ್ಮಾನ್ ಖಾನ್ ಜೊತೆ ನಟಿಸುತ್ತಿದ್ದಾರೆ. ಇದಕ್ಕಾಗಿ ನಟಿ ದುಬಾರಿ ಸಂಭಾವನೆಯನ್ನೇ ಪಡೆದಿದ್ದಾರೆ ಎನ್ನಲಾಗುತ್ತಿದೆ. ರಶ್ಮಿಕಾ ತಮ್ಮ ಮೊದಲ ಬಾಲಿವುಡ್​ ಸಿನಿಮಾದಲ್ಲಿಯೇ ಅಮಿತಾಬ್ ಬಚ್ಚನ್ ಜೊತೆ ನಟಿಸಿದ್ದರು. ಬಳಿಕ ರಣ್​ಬೀರ್ ಕಪೂರ್ ಜೊತೆ ನಟಿಸಿ ಬ್ಲಾಕ್ ಬಸ್ಟರ್ ನೀಡಿದರು. ಈಗ ಬಾಲಿವುಡ್​ನ ಟಾಪ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಜೊತೆಗೆ ನಟಿಸುತ್ತಿದ್ದಾರೆ. ಸಲ್ಮಾನ್ ಖಾನ್ ನಟಿಸಲಿರುವ ಮುಂದಿನ ಆಕ್ಷನ್ ಥ್ರಿಲ್ಲರ್ ಸಿನಿಮಾ ‘ಸಿಖಂಧರ್’ನಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಈ ಸಿನಿಮಾವನ್ನು ಭಾರತದ ಟಾಪ್ ನಿರ್ದೇಶಕರಲ್ಲಿ ಒಬ್ಬರಾದ ಎಆರ್ ಮುರುಗದಾಸ್ ನಿರ್ದೇಶನ ಮಾಡಲಿದ್ದಾರೆ. ನಿರ್ಮಾಣ ಮಾಡುತ್ತಿರುವುದು ಬಹುಕೋಟಿ ಬಜೆಟ್ ಸಿನಿಮಾಗಳನ್ನು ನೀಡಿರುವ ಸಾಜಿದ್ ನಾಡಿಯಾವಾಲಾ. ಈ ಸಿನಿಮಾದಲ್ಲಿ ರಶ್ಮಿಕಾ ನಾಯಕಿಯಾಗಿ ನಟಿಸಲು ಭಾರಿ ದೊಡ್ಡ ಸಂಭಾವನೆಯನ್ನೇ ಪಡೆಯುತ್ತಿದ್ದಾರೆ ಎನ್ನಲಾಗುತ್ತಿದೆ. ಸಲ್ಮಾನ್…

Read More

ಆ್ಯಪಲ್ ಕಂಪನಿಯ ವಸ್ತುಗಳನ್ನು ಬಳಸುವುದು ಎಂದರೆ ಸಾಕಷ್ಟು ಮಂದಿಗೆ ಅಚ್ಚು ಮೆಚ್ಚು. ಅದರಲ್ಲೂ ಸೆಲೆಬ್ರಿಟಿಗಳು ಬಹುತೇಕಾ ಮಂದಿ ದುಬಾರಿ ಬೆಲೆಯ ಆ್ಯಪಲ್​ ಕಂಪನಿಯ ಐಫೋನ್​, ಐಪ್ಯಾಡ್​ ಬಳಸುತ್ತಾರೆ. ಅಮೆರಿಕದ ಈ ಶ್ರೀಮಂತ ಕಂಪನಿಯ ವಿರುದ್ಧ ಈಗ ಅನೇಕ ಸೆಲೆಬ್ರಿಟಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಆ್ಯಪಲ್ ಐಪ್ಯಾಡ್ ವಿರುದ್ಧ ಬಾಲಿವುಡ್​ ನಟ ಹೃತಿಕ್​ ರೋಷನ್​ ಕೂಡ ಗರಂ ಆಗಿದ್ದಾರೆ. ಆ್ಯಪಲ್​ ಕಂಪನಿಯ ಒಂದು ಹೊಸ ಜಾಹೀರಾತನ್ನು ಅವರು ಖಾರವಾಗಿ ಖಂಡಿಸಿದ್ದಾರೆ. ಕೆಲವೇ ದಿನಗಳ ಹಿಂದೆ ಆ್ಯಪಲ್​ ಕಂಪನಿಯು ತಮ್ಮ ಹೊಸ ಐಪ್ಯಾಡ್​ನ ಜಾಹೀರಾತನ್ನು ಬಿಡುಗಡೆ ಮಾಡಿದೆ. ‘ಐಪ್ಯಾಡ್​ ಪ್ರೋ’ ಎಷ್ಟು ಪವರ್​ಫುಲ್ ಆಗಿದೆ ಎಂಬುದನ್ನು ತಿಳಿಸುವ ಸಲುವಾಗಿ ಈ ಜಾಹೀರಾತನ್ನು ಸಿದ್ಧಪಡಿಸಲಾಗಿದೆ. ಪುಸ್ತಕಗಳು, ಸಂಗೀತ ಸಾಧನಗಳು, ಟಿವಿ, ಗ್ರಾಮೋಫೋನ್​, ಗೊಂಬೆ, ಪೇಂಟಿಂಗ್ಸ್​, ಕಲಾಕೃತಿಗಳು, ಸ್ಪೀಕರ್​, ಕ್ಯಾಮೆರಾ ಮುಂತಾದ ವಸ್ತುಗಳನ್ನು ದೊಡ್ಡ ಕ್ರಶರ್​ ಮೂಲಕ ನಾಶಪಡಿಸುವ ದೃಶ್ಯ ಇದರಲ್ಲಿ ಇದೆ. ಆ ಎಲ್ಲ ಸಾಧನಗಳ ಕೆಲಸವನ್ನು ಕೇವಲ ಒಂದು ಐಪ್ಯಾಡ್​ ಮಾಡುತ್ತದೆ ಎಂಬುದನ್ನು ಗ್ರಾಹಕರಿಗೆ ತಿಳಿಸುವುದು ಈ ಜಾಹೀರಾತಿನ…

Read More

 ಕನ್ನಡದ ಹುಡುಗಿ ನಟಿ ರಶ್ಮಿಕಾ ಮಂದಣ್ಣ ಸದ್ಯ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಬ್ಯುಸಿಯಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ನಟಿ ಇದೀಗ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ಹೊಸ ಹೊಸ ಫೋಟೋಗಳನ್ನು ಯಾವಾಗ ಶೇರ್ ಮಾಡುತ್ತಾರೆ ಎಂದು ಅಭಿಮಾನಿಗಳು ಕಾಯ್ತಿರ್ತಾರೆ. ಸದ್ಯ ರಶ್ಮಿಕಾ ಶರ್ಟ್ ಬಟನ್ ಬಿಚ್ಚಿ ಫೋಟೋ ತೆಗೆಸಿದ್ದು ಅವುಗಳನ್ನು ಸಾಮಾಜಿಕ ಜಾಲಾ ತಾಣದಲ್ಲಿ ಶೇರ್ ಮಾಡಿದ್ದಾರೆ. ಸೌತ್ ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈಟ್ ಶರ್ಟ್​ ಧರಿಸಿರುವ ತುಂಬಾ ಸಿಂಪಲ್ ಲುಕ್ ಫೋಟೋಸ್ ಶೇರ್ ಮಾಡಿದ್ದು, ಅವು ಈಗ ವೈರಲ್ ಆಗುತ್ತಿವೆ. ಸಿಂಪ್ಲಿಸಿಟಿ ಲುಕ್​​ ಮೂಲಕ ನಟಿ ಮಸ್ತ್ ಆಗಿ ಮಿಂಚಿದ್ದಾರೆ. ನಟಿಯ ಕಿಲ್ಲಿಂಗ್ ಲುಕ್ ವೈರಲ್ ಆಗಿದೆ. ಫೋಟೋಸ್ ಇಲ್ಲಿವೆ. ನಟಿ ವೈಟ್ ಶರ್ಟ್ ಧರಿಸಿ ಬಟನ್ ಒಪನ್ ಮಾಡಿ ಪೋಸ್ ಕೊಟ್ಟಿದ್ದಾರೆ. ಅವರ ಸಿಂಪಲ್ ಮೇಕಪ್ ಮಾಡಿರುವ ಈ ಲುಕ್ ನೋಡಿ ಅವರ ಫ್ಯಾನ್ಸ್ ಫಿದಾ ಆಗಿಬಿಟ್ಟಿದ್ದಾರೆ. ನಟಿಯ ಸೌಂದರ್ಯವನ್ನು…

Read More

ತೆಲುಗಿನ ಖ್ಯಾತ ನಟ ನಂದಮೂರಿ ಕಲ್ಯಾಣ್ ರಾಮ್ ನಟನೆಯ ಹೊಸ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದ ಸೆಟ್​ಗೆ ಬೆಂಕಿ ಬಿದ್ದಿದ್ದು ಸುಮಾರು ನಾಲ್ಕು ಕೋಟಿ ರೂಪಾಯಿ ನಷ್ಟವಾಗಿದೆ. ಘಟನೆಯಲ್ಲಿ ಯಾವುದೇ ಗಾಯ ಅಥವಾ ಜೀವಹಾನಿ ಸಂಭವಿಸಿಲ್ಲ ಎಂದು ಚಿತ್ರತಂಡ ತಿಳಿಸಿದೆ. ಶಾರ್ಟ್ ಸರ್ಕ್ಯೂಟ್​ನಿಂದಾಗಿ ಈ ಅಗ್ನಿ ಅವಘಡ ಸಂಭವಿಸಿದೆ ಎನ್ನಲಾಗುತ್ತಿದ್ದು, ಸೆಟ್​ಗೆ ಬೆಂಕಿ ಬಿದ್ದಾಗ ಶೂಟಿಂಗ್ ನಡೆಯುತ್ತಿರಲಿಲ್ಲವಾದ್ದರಿಂದ ಯಾವುದೇ ಹಾನಿಯಾಗಿಲ್ಲ. ನಂದಮೂರಿ ಕಲ್ಯಾಣ್ ರಾಮ್ ಅವರು ಕ್ರೈಂ ಥ್ರಿಲ್ಲರ್ ಕತೆಯುಳ್ಳ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ಕಲ್ಯಾಣ್ ರಾಮ್ ಸಿಬಿಐ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಆಕ್ಷನ್ ದೃಶ್ಯಗಳ ಚಿತ್ರೀಕರಣ ಹಾಗೂ ಕೆಲವು ಕಚೇರಿ ದೃಶ್ಯಗಳ ಚಿತ್ರೀಕರಣವನ್ನು ಚಿತ್ರತಂಡ ಸೆಟ್​ನಲ್ಲಿ ಮಾಡುತ್ತಿತ್ತು. ಇದಕ್ಕಾಗಿ ಹೈದರಾಬಾದ್ ಹೊರವಲಯದಲ್ಲಿ ಒಂದೇ ಜಾಗದಲ್ಲಿ ಬೇರೆ ಬೇರೆ ಸೆಟ್​ಗಳನ್ನು ನಿರ್ಮಾಣ ಮಾಡಲಾಗಿತ್ತು. ಸೆಟ್ ನಿರ್ಮಾಣಕ್ಕೆ ಸುಮಾರು 4 ಕೋಟಿ ಖರ್ಚು ಮಾಡಲಾಗಿತ್ತು ಎನ್ನಲಾಗುತ್ತಿದೆ. ಈಗ ಆ ಬೃಹತ್ ಸೆಟ್​ ಬೆಂಕಿಗೆ ಆಹುತಿಯಾಗಿದೆ. ಸೆಟ್​ಗೆ ಬೆಂಕಿ ಬಿದ್ದಾಗ ಚಿತ್ರೀಕರಣ ನಡೆಯುತ್ತಿರಲಿಲ್ಲವಾದ್ದರಿಂದ…

Read More

ತೆಲುಗಿನ ಖ್ಯಾತ ನಟ, ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಬೆಂಬಲಕ್ಕೆ ತೆಲುಗಿನ ಮತ್ತೋರ್ವ ಖ್ಯಾತ್ ನಟ ಅಲ್ಲು ಅರ್ಜುನ್ ನಿಂತಿದ್ದಾರೆ. ಪವನ್ ಕಲ್ಯಾಣ್ ಸಮಾಜಸೇವೆಯನ್ನೂ ಶ್ಲ್ಯಾಘಿಸಿರುವ ಅಲ್ಲು ಅರ್ಜುನ್, ಪವನ್ ಕಲ್ಯಾಣ್ ಗೆಲುವಿಗೆ ಶ್ರಮಿಸುವುದಾಗಿ ಹೇಳಿದ್ದಾರೆ. ಆಂಧ್ರಪ್ರದೇಶದಲ್ಲಿ ಚುನಾವಣೆ ಕಾವು ಜೋರಾಗಿದ್ದು, ದಿನಕ್ಕೊಂದು ತಿರುವನ್ನೂ ಪಡೆದುಕೊಳ್ಳುತ್ತಿದೆ. ಅದರಲ್ಲೂ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸೋಲಿಗಾಗಿ ಸರ್ವ ಪಕ್ಷಗಳು ಒಂದಾಗಿವೆ. ಮೈತ್ರಿ ಪಕ್ಷಗಳನ್ನು ಬಲ ಪಡಿಸೋಕೆ ಏನೆಲ್ಲ ಕಸರತ್ತುಗಳನ್ನು ಮಾಡಲಾಗುತ್ತಿದೆ. ಜಗನ್ ಮೋಹನ್ ರೆಡ್ಡಿ ಪಕ್ಷವನ್ನು ಸೋಲಿಸಲು ಒಂದು ಕಡೆ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಟೊಂಕ ಕಟ್ಟಿ ನಿಂತಿದ್ದರೆ, ಪವನ್ ಬೆಂಬಲಕ್ಕೆ ಖ್ಯಾತ ನಟ ಚಿರಂಜೀವಿ ಕೂಡ ಇರುವುದಾಗಿ ತಿಳಿಸಿದ್ದಾರೆ. ಪವನ್ ಕಲ್ಯಾಣ್ ಬೆಂಬಲ ಕುರಿತಂತೆ ವಿಡಿಯೋವೊಂದನ್ನು ಮಾಡಿರುವ ಚಿರಂಜೀವಿ, ಒಳ್ಳೆಯ ಆಡಳಿತಕ್ಕಾಗಿ ಜನಸೇನಾ ಮತ್ತು ಮೈತ್ರಿಕೂಟವನ್ನು ಬೆಂಬಲಿಸುತ್ತಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಅಗತ್ಯವಿದ್ದರೆ ಪವನ್ ಕಲ್ಯಾಣ್ ಮತ್ತು ಅವರ ಪಕ್ಷದ ಪರವಾಗಿಯೂ ಪ್ರಚಾರಕ್ಕೆ ಬರುವುದಾಗಿ ಅವರು ಹೇಳಿಕೊಂಡಿದ್ದಾರೆ. ಮೇ 13ರಂದು…

Read More