Author: Author AIN

ನಕಲಿ ಖಾತೆಗಳ ಮೂಲಕ ಹೆಣ್ಣು ಮಕ್ಕಳ ಮತ್ತು ಸೆಲೆಬ್ರಿಟಿಗಳ ಮಾನ ಹರಾಜು ಮಾಡಿದವರ ವಿರುದ್ಧ ‘ಬಿಗ್‌ ಬಾಸ್‌’ ಖ್ಯಾತಿಯ ಸುಷ್ಮಾ ವೀರ್ ದೂರು ದಾಖಲಿಸಿದ್ದಾರೆ. ತಾವು ಆಡದ ಮಾತನ್ನು ತಿರುಚಿ ಟ್ರೋಲ್ ಮಾಡಿದ್ದಕ್ಕೆ ಸೈಬರ್ ಠಾಣೆಗೆ ಮತ್ತು ಮಹಿಳಾ ಆಯೋಗಕ್ಕೆ ಸುಷ್ಮಾ ವೀರ್ ದೂರು ನೀಡಿದ್ದಾರೆ.  ಇತ್ತೀಚೆಗೆ ಸುಷ್ಮಾ ವೀರ್ ಯೂಟ್ಯೂಬ್‌ ವೊಂದಕ್ಕೆ ಸಂದರ್ಶನ ನೀಡಿದ್ದರು. ಈವೇಳೆ ತಾವು ಆಡದ ಮಾತನ್ನು ತಿರುಚಿ ಟ್ರೋಲ್ ಮಾಡಿದ್ದಾರೆ. ಅವರವರ ಪೇಜ್‌ಗಳ ಲೈಕ್ ಹಾಗೂ ಲಾಭಕ್ಕಾಗಿ ಮಾನಹಾನಿ ಮಾಡಿದ್ದಾರೆ ಎಂದು ಸೈಬರ್ ಠಾಣೆ ಮತ್ತು ಮಹಿಳಾ ಆಯೋಗಕ್ಕೆ ನಟಿ ದೂರು ದಾಖಲಿಸಿದ್ದಾರೆ. ಈ ಮೂಲಕ ಟ್ರೋಲಿಗರ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದ್ದಾರೆ.

Read More

ಬಾಲಿವುಡ್‌ ಡ್ರಾಮಾ ಕ್ವೀನ್ ರಾಖಿ ಸಾವಂತ್ ಕಳೆದ ಕೆಲ ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅನಾರೋಗ್ಯದ ಕಾರಣದಿಂದಾಗಿ ರಾಖಿ ಸಾವಂತ್ ಮುಂಬೈನ ಆಸ್ಪತ್ರೆಗೆ ದಾಖಲಾಗಿದ್ದು, ಬಳಿಕ ಆಕೆಗೆ ಹಲವು ಕಾಯಿಲೆಗಳಿರುವುದು ಗೊತ್ತಾಗಿದೆ. ಹೃದಯ ಸಮಸ್ಯೆ ಜೊತೆಗೆ ಕಿಡ್ನಿ ತೊಂದರೆಯಿಂದಲೂ ನಟಿ ಬಳಲುತ್ತಿದ್ದಾರೆ ಎನ್ನಲಾಗುತ್ತಿದೆ. ಅಷ್ಟೇ ಅಲ್ಲ ಹೊಟ್ಟೆಯಲ್ಲಿ 10 ಸೆಂ.ಮೀ ಗಡ್ಡೆ ಇದ್ದು, ಬಳಿಕ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಇದೀಗ ಶಸ್ತ್ರಚಿಕಿತ್ಸೆಯ ನಂತರ ರಾಖಿಯ ಮೊದಲ ವೀಡಿಯೊ ಹೊರಬಿದ್ದಿದೆ. ಅದರಲ್ಲಿ ಅವರು ನೋವಿನಿಂದ ನರಳುತ್ತಿರುವುದನ್ನು ಕಾಣಬಹುದಾಗಿದೆ. ರಾಖಿಯ ಈ ವೀಡಿಯೊವನ್ನು ಆಕೆಯ ಮಾಜಿ ಪತಿ ರಿತೇಶ್ ಅವರು ತಮ್ಮ ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ರಾಖಿ ಆಸ್ಪತ್ರೆಯ ಬಟ್ಟೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಶಸ್ತ್ರಚಿಕಿತ್ಸೆಯ ನಂತರ ರಾಖಿಗೆ ನಡೆಯಲು ಕಷ್ಟಪಡುತ್ತಿದ್ದಾರೆ. ನೋವಿನಿಂದ ಬಳಲುತ್ತಿರುವ ನಟಿಯನ್ನು ಆಸ್ಪತ್ರೆಯ ಸಿಬ್ಬಂದಿ ನಡೆಯಲು ಪ್ರಯತ್ನಿಸಿದಾಗ ಆಕೆ ನೋವಿನಿಂದ ಸಂಕಟ ಪಡುತ್ತಿದ್ದಾರೆ. ಅಲ್ಲದೇ ನರ್ಸ್ ಅವರಿಗೆ ಮೊದಲು ನೇರವಾಗಿ ನಿಲ್ಲಲು ಮತ್ತು ನಂತರ ನಿಧಾನವಾಗಿ ನಡೆಯಲು ಪ್ರಯತ್ನಿಸುವಂತೆ ಹೇಳುವುದು ವೀಡಿಯೋದಲ್ಲಿ ಕೇಳುತ್ತದೆ.…

Read More

ಎವರೆಸ್ಟ್ ಪರ್ವತ ಏರುವ ಸಂದರ್ಭ ತೀವ್ರ ಅಸ್ವಸ್ಥಗೊಂಡಿದ್ದ ಭಾರತದ ಪರ್ವತಾರೋಹಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವುದಾಗಿ ನೇಪಾಳದ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ವಾರ ಪರ್ವತವನ್ನು ಏರುವ ಪ್ರಯತ್ನದಲ್ಲಿ ತೀವ್ರ ಅಸ್ವಸ್ಥಗೊಂಡಿದ್ದ 46 ವರ್ಷದ ಬನ್ಸೀಲಾಲ್‍ರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇದರೊಂದಿಗೆ ಈ ವರ್ಷದ ಪರ್ವತಾರೋಹಣ ಸೀಸನ್ ಆರಂಭಗೊಂಡಂದಿನಿಂದ ಸಾವನ್ನಪ್ಪಿದ ಪರ್ವತಾರೋಹಿಗಳ ಸಂಖ್ಯೆ 8ಕ್ಕೇರಿದೆ ಎಂದು ಅಧಿಕಾರಿ ಹೇಳಿದ್ದಾರೆ.

Read More

ಸ್ಯಾಂಡಲ್‌ವುಡ್ ನಟ ಶರಣ್ ಸದ್ಯ ಸಿನಿಮಾ ಕೆಲಸಗಳಿಗೆ ಬ್ರೇಕ್ ನೀಡಿ ಪತ್ನಿಯೊಂದಿಗೆ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಇತ್ತೀಚೆಗೆ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದ ಶರಣ್ ದಂಪತಿ ಇದೀಗ ಮಂಗಳೂರಿನ ಸ್ವಾಮಿ ಕೊರಗಜ್ಜ ದೈವ ದೇವಸ್ಥಾನ ಮತ್ತು ಕಟೀಲು ದುರ್ಗಾಪರಮೇಶ್ವರಿ ಸನ್ನಿಧಿಗೆ ಭೇಟಿ ನೀಡಿದ್ದಾರೆ. ಪತ್ನಿ ಜೊತೆ ದೇವರ ಸನ್ನಿಧಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕಟೀಲು ದುರ್ಗಾಪರಮೇಶ್ವರಿ ಮತ್ತು ಸ್ವಾಮಿ ಕೊರಗಜ್ಜನ ಪವಿತ್ರ ಸನ್ನಿಧಿಯಲ್ಲಿ ಎಂದು ನಟ ಶರಣ್ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಇತ್ತೀಚೆಗೆ ಶರಣ್, ಆಶಿಕಾ ರಂಗನಾಥ್ ನಟನೆಯ ‘ಅವತಾರ ಪುರುಷ 2’ ಸಿನಿಮಾ ರಿಲೀಸ್ ಆಗಿತ್ತು. ಛೂ ಮಂತರ್ ಸೇರಿದಂತೆ ಕೆಲ ಪ್ರಾಜೆಕ್ಟ್‌ಗಳು ಸದ್ಯದಲ್ಲೇ ರಿಲೀಸ್ ಆಗಲಿದೆ. ನಟ ಶರಣ್‌ ದಂಪತಿ ಸಮೇತ ಭೇಟಿಯಾಗಿ ದೇವಿಗೆ ಪೂಜೆ ಸಲ್ಲಿಸಿದ್ದಾರೆ. ತನ್ನ ಮುಂದಿನ ಸಿನೆಮಾಗಳ ಯಶಸ್ಸಿಗಾಗಿಯೂ ಪ್ರಾರ್ಥನೆ ಸಲ್ಲಿಸಿದ್ದಾರೆ.

Read More

ಇಂದು ರೆಬೆಲ್ ಸ್ಟಾರ್ ಅಂಬರೀಶ್ ಅವರ ಹುಟ್ಟುಹಬ್ಬ. ಈ ದಿನ ಅಂಬರೀಶ್ ಅವರ ಲಕ್ಷಾಂತರ ಅಭಿಮಾನಿಗಳಿಗೆ ಸಂಭ್ರಮದ ದಿನ. ಈ ಹಿನ್ನೆಲೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂಬರೀಶ್ ಅವರ ವಿಶೇಷ ಪೋಸ್ಟರ್ ರಿಲೀಸ್ ಮಾಡಿ ಶುಭಕೋರಿದ್ದಾರೆ. ಎಕ್ಸ್‌ ಖಾತೆಯಲ್ಲಿ ವಿಶೇಷವಾಗಿ ಅಂಬರೀಶ್ ಅವರಿಗೆ ದರ್ಶನ್ ವಿಶ್ ಮಾಡಿದ್ದಾರೆ.  ನಮ್ಮೆಲ್ಲರ ಅಚ್ಚುಮೆಚ್ಚಿನ ಸಹೃದಯಿ, ರೆಬೆಲ್ ಸ್ಟಾರ್ ಅಂಬಿ ಅಪ್ಪಾಜಿರವರ ಹುಟ್ಟುಹಬ್ಬದ ಪ್ರಯುಕ್ತ ಮೂಡಿಬಂದಿರುವ CDP ಬಿಡುಗಡೆ ಮಾಡಲು ಅವಕಾಶ ಮಾಡಿಕೊಟ್ಟ ಅಭಿಮಾನಿ ಸಮೂಹಕ್ಕೆ ಧನ್ಯವಾದಗಳು. ನಮ್ಮ ನಿಷ್ಠೆಯ ಕೆಲಸ-ಕಾರ್ಯಗಳಲ್ಲಿ ಸದಾ ಬೆನ್ನೆಲುಬಾಗಿ ಅಂಬಿ ಅಪ್ಪಾಜಿ ನಮ್ಮೊಂದಿಗೆ ಜೀವಂತವಾಗಿದ್ದಾರೆ ಎಂದು ದರ್ಶನ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಈ ಮೂಲಕ ಅಂಬರೀಶ್‌ ಹುಟ್ಟುಹಬ್ಬಕ್ಕೆ ದರ್ಶನ್ ವಿಶ್ ಮಾಡಿದ್ದಾರೆ. ಅಂಬರೀಶ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅವರ ಸ್ಮಾರಕಕ್ಕೆ ಅಭಿಮಾನಿಗಳು ಭೇಟಿ ನೀಡಲಿದ್ದಾರೆ. ಅಂಬಿ ಸ್ಮಾರಕಕ್ಕೆ ವಿಶೇಷ ಪೂಜೆ ಸಲ್ಲಿಸಲಿದ್ದು ವಿವಿಧ ಕಾರ್ಯಕ್ರಮಗಳನ್ನು ಅಭಿಮಾನಿಗಳು ಹಮ್ಮಿಕೊಂಡಿದ್ದಾರೆ. ಅಲ್ಲದೆ ನಟಿ ಸುಮಲತಾ ಕೂಡ ಸ್ಮಾರಕಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

Read More

ರಫಾದಲ್ಲಿ ಇಸ್ರೇಲ್ ನಡೆಸಿದ ದಾಳಿಯನ್ನು ಖಂಡಿಸಿರುವ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್, ಈ ದಾಳಿಯು “ಈ ಮಾರಣಾಂತಿಕ ಸಂಘರ್ಷದಿಂದ ಆಶ್ರಯ ಪಡೆಯುತ್ತಿದ್ದ ಹಲವಾರು ಮುಗ್ಧ ನಾಗರಿಕರನ್ನು ಕೊಂದಿದೆ” ಎಂದಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಗುಟೆರೆಸ್, “ಈ ಮಾರಣಾಂತಿಕ ಸಂಘರ್ಷದಿಂದ ಆಶ್ರಯ ಪಡೆಯುತ್ತಿದ್ದ ಹಲವಾರು ಮುಗ್ಧ ನಾಗರಿಕರನ್ನು ಕೊಂದ ಇಸ್ರೇಲ್ ನ ಕ್ರಮಗಳನ್ನು ನಾನು ಖಂಡಿಸುತ್ತೇನೆ. ಗಾಜಾದಲ್ಲಿ ಸುರಕ್ಷಿತ ಸ್ಥಳವಿಲ್ಲ. ಈ ಭಯಾನಕತೆ ನಿಲ್ಲಬೇಕು ಎಂದರು. ಸ್ಥಳಾಂತರಗೊಂಡ ಜನರ ಶಿಬಿರದ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಕನಿಷ್ಠ 45 ಜನರು ಸಾವನ್ನಪ್ಪಿದ್ದಾರೆ ಮತ್ತು 200 ಜನರು ಗಾಯಗೊಂಡಿದ್ದಾರೆ ಎಂದು ಗಾಝಾದ ಸರ್ಕಾರಿ ಮಾಧ್ಯಮ ಕಚೇರಿ ತಿಳಿಸಿದೆ ಎಂದು ಸಿಎನ್‌ಎನ್ ವರದಿ ಮಾಡಿದೆ. ದಾಳಿಯ ಸ್ವಲ್ಪ ಸಮಯದ ನಂತರ, ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) ಹಮಾಸ್ ಕಾಂಪೌಂಡ್ ಅನ್ನು ಗುರಿಯಾಗಿಸಿಕೊಂಡು ಇಬ್ಬರು ಹಿರಿಯ ಹಮಾಸ್ ಅಧಿಕಾರಿಗಳನ್ನು ಕೊಲ್ಲಲಾಗಿದೆ ಎಂದು ಘೋಷಿಸಿತು. ತಿಂಗಳುಗಳಲ್ಲಿ ಇಸ್ರೇಲಿ ನಗರ ಟೆಲ್ ಅವೀವ್…

Read More

ಮದುವೆ ದಿನ ಸುಂದರವಾಗಿ ಕಾಣಬೇಕು ಎಂಬ ಆಸೆ ಪ್ರತಿಯೊಬ್ಬರಿಗೂ ಇರುತ್ತೆ. ಅದೇ ಕಾರಣಕ್ಕೆ ಸಾಕಷ್ಟು ಹಣ ಖರ್ಚು ಮಾಡುತ್ತಾರೆ. ಆದರೆ ಕೆಲವರು ದುಭಾರಿ ಚಿಕಿತ್ಸೆಯ ಮೊರೆ ಹೋಗುತ್ತಾರೆ. ಇವುಗಳ ಕೆಲವೊಮ್ಮೆ ಜೀವಕ್ಕೆ ಮಾರಕವು ಹೌದು. ಲಾರಾ ಫೆರ್ನಾಂಡಿಸ್ ಕೋಸ್ಟಾ(31) ಎಂಬಾಕೆ ಮದುವೆಯ ದಿನ ಸುಂದರವಾಗಿ ಕಾಣಬೇಕು ಎಂಬ ಕಾರಣಕ್ಕೆ ಗ್ಯಾಸ್ಟ್ರಿಕ್ ಬಲೂನ್ ಸರ್ಜರಿ ಮೊರೆ ಹೋಗಿದ್ದಾಳೆ. ಲಾರಾ ತನ್ನ ಬಹುಕಾಲದ ಪ್ರಿಯಕರ ಮ್ಯಾಥ್ಯೂಸ್ ನೊಂದಿಗೆ ವಿವಾಹವಾಗಲು ಸೆಪ್ಟೆಂಬರ್ 7ರಂದು ದಿನ ನಿಗದಿಯಾಗಿತ್ತು. ಇನ್ನೇನು ಮದುವೆಗೆ ತಿಂಗಳುಗಳು ಬಾಕಿ ಇರುವಾಗ ತೂಕ ಇಳಿಸಿಕೊಳ್ಳಲು ಬಯಸಿದ್ದಾಳೆ. ಹೀಗಾಗಿ ಸುಮಾರು 8ಕೆಜಿ ತೂಕ ಕಳೆದುಕೊಳ್ಳಲು ಬಯಸಿದ್ದು, ಇದಕ್ಕಾಗಿ ಏಪ್ರಿಲ್ 26 ರಂದು ಬ್ರೆಜಿಲ್‌ನ ಬೆಲೊ ಹಾರಿಜಾಂಟೆಯ ಕ್ಲಿನಿಕ್‌ನಲ್ಲಿ ಹೊಟ್ಟೆಯೊಳಗೆ ‘ಗ್ಯಾಸ್ಟ್ರಿಕ್ ಬಲೂನ್’ ಸರ್ಜರಿ ಮಾಡಿಸಿಕೊಂಡಿದ್ದಾಳೆ. ಆದರೆ ಸರ್ಜರಿಯಾದ ಕೆಲ ದಿನಗಳ ಬಳಿಕ ಯುವತಿಯ ಆರೋಗ್ಯದಲ್ಲಿ ಏರುಪೇರಾಗಿದ್ದು, ಮೇ 01ರಂದು ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಆಕೆಯನ್ನು ಪರೀಕ್ಷಿಸಿ ಆಕೆಯ ಹೊಟ್ಟೆಯೊಳಗಿದ್ದ ಗ್ಯಾಸ್ಟ್ರಿಕ್ ಬಲೂನ್ ಹೊರ ತೆಗೆದಿದ್ದಾರೆ.…

Read More

ಟಾಲಿವುಡ್ ಸ್ಟಾರ್ ನಟ ಪವನ್ ಕಲ್ಯಾಣ್ ಸಕ್ರಿಯ ರಾಜಕೀಯಕ್ಕೆ ಎಂಟ್ರಿಕೊಟ್ಟು 16 ವರ್ಷಗಳಾಗಿದ್ದು, ಜನಸೇನಾ ಪಕ್ಷ ಪ್ರಾರಂಭಿಸಿ 10 ವರ್ಷಗಳಾಗಿವೆ. ಇಷ್ಟು ವರ್ಷಗಳಲ್ಲಿ ಮೊದಲ ಬಾರಿಗೆ ರಾಜಕೀಯವಾಗಿ ಪ್ರಭಾವ ಬೀರುವ ಸ್ಥಿತಿಗೆ ಪವನ್ ಕಲ್ಯಾಣ್ ತಲುಪಿದ್ದಾರೆ. ಈ ಬಾರಿ ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಪವನ್ ಕಲ್ಯಾಣ್ ಪ್ರಭಾವ ದೊಡ್ಡದಾಗಿದ್ದು, ಈ ಬಾರಿ ಟಿಡಿಪಿ-ಜನಸೇನಾ-ಬಿಜೆಪಿ ಮೈತ್ರಿ ಪಕ್ಷ ಗೆದ್ದರೆ ದೊಡ್ಡ ಹುದ್ದೆಯೇ ಪವನ್ ಪಾಲಾಗಲಿದೆ. ಪವನ್ ಕಲ್ಯಾಣ್ ಮೊದಲ ಚುನಾವಣಾ ಗೆಲುವು ಸಾಧಿಸುವ ಸಾಧ್ಯತೆಯೂ ದಟ್ಟವಾಗಿದೆ. ಆದರೆ ಪವನ್ ಅನ್ನು ಸೋಲಿಸಲು ನಡೆದ ಪ್ರಯತ್ನಗಳ ಬಗ್ಗೆ ನೀಡಲಾದ ಕೋಟ್ಯಂತರ ರೂಪಾಯಿಗಳ ಆಫರ್​ ಬಗ್ಗೆ ಮಾಜಿ ಶಾಸಕ ವರ್ಮಾ ಮಾತನಾಡಿದ್ದಾರೆ. ಪವನ್ ಕಲ್ಯಾಣ್ ಈ ಬಾರಿ ಪೀಠಾಪುರಂ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಈ ಕ್ಷೇತ್ರ ಟಿಡಿಪಿ ಮುಷ್ಠಿಯಲ್ಲಿತ್ತು. ಟಿಡಿಪಿಯ ಎಸ್​ವಿಎಸ್​ಎನ್ ವರ್ಮಾ ಈ ಹಿಂದೆ ಚುನಾವಣೆ ಗೆದ್ದು ಶಾಸಕರಾಗಿದ್ದರು. ಆದರೆ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಸೂಚನೆ ಮೇರೆಗೆ ಕ್ಷೇತ್ರವನ್ನು ಪವನ್ ಕಲ್ಯಾಣ್​ಗೆ…

Read More

ನಟಿ ರಶ್ಮಿಕಾ ಮಂದಣ್ಣ ಸ್ಟಾರ್ ಬ್ಯೂಟಿಯಾಗಿ ಮಿಂಚುತ್ತಿದ್ದಾರೆ. ಸದ್ಯ ಬಾಲಿವುಡ್ ಚಿತ್ರರಂಗದಲ್ಲಿ ಸದ್ದು ಮಾಡುತ್ತಿರುವ ರಶ್ಮಿಕಾ ಜೊತೆ ನಟಿಸಲು ಸ್ಟಾರ್ ನಿರ್ದೇಶಕರು ಕ್ಯೂ ನಲ್ಲಿ ನಿಂತಿದ್ದಾರೆ. ಆದರೆ ರಶ್ಮಿಕಾಗೆ ಮಾತ್ರ ಆ ಒಬ್ಬ ನಿರ್ದೇಶಕರ ಜೊತೆ ಕೆಲಸ ಮಾಡೋ ಮನಸಾಗಿದೆಯಂತೆ. ಇತ್ತೀಚೆಗೆ ವಿಜಯ್ ದೇವರಕೊಂಡ ಸಹೋದರ ಆನಂದ್ ದೇವರಕೊಂಡ ನಟನೆಯ ಸಿನಿಮಾ ‘ಗಂ ಗಂ ಗಣೇಶಾ’ ಈವೆಂಟ್​ಗೆ ಅತಿಥಿಯಾಗಿ ತೆರಳಿದ್ದರು. ಈ ವೇಳೆ ರಶ್ಮಿಕಾ ಅವರು ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಇದೇ ವೇಳೆ ಅವರು ‘ಬೇಬಿ’ ಸಿನಿಮಾ ಯಶಸ್ಸಿನ ಬಗ್ಗೆ ಮಾತನಾಡಿದ್ದಾರೆ. ಈ ಚಿತ್ರ ನಿರ್ದೇಶಕ ಸಾಯಿ ರಾಜೇಶ್ ನೀಲಂ ಜೊತೆ ಸಿನಿಮಾ ಮಾಡೋ ಬಯಕೆ ವ್ಯಕ್ತಪಡಿಸಿದ್ದಾರೆ. ‘ನಾನು ಬೇಬಿ ಸಿನಿಮಾ ನೋಡಿ ಕಣ್ಣೀರು ಹಾಕಿದೆ. ಅವರ ಜೊತೆ ಕೆಲಸ ಮಾಡಬೇಕು ಎನ್ನುವ ಬಯಕೆ ಇದೆ. ಸಾಯಿ ರಾಜೇಶ್ ನಿರ್ದೇಶನ ನಿಜಕ್ಕೂ ಮೆಚ್ಚಿಕೊಳ್ಳುವಂಥದ್ದು. ಅವರ ನಿರ್ದೇಶನದಲ್ಲಿ ಒಂದು ಸಂಕೀರ್ಣ ಪಾತ್ರವನ್ನು ಮಾಡುವ ಬಯಕೆ ನನ್ನದು’ ಎಂದಿದ್ದಾರೆ ರಶ್ಮಿಕಾ ಮಂದಣ್ಣ. ‘ಗಂ…

Read More

ಹಣಕಾಸಿನ  ನಿಯಮಗಳನ್ನು ಪ್ರತಿ ತಿಂಗಳ ಮೊದಲ ದಿನಾಂಕದಂದು ಬದಲಾವಣೆ ಯಾಗುತ್ತಿರುತ್ತದೆ. ಇದು ಸಾಕಷ್ಟು ಭಾರಿ ಜನರ ಜೇಬಿನ ಮೇಲೆ ಕತ್ತರಿ ಪ್ರಯೋಗ ಮಾಡುತ್ತವೆ. ಸದ್ಯ ಜೂನ್‌ ತಿಂಗಳು ಆರಂಭಕ್ಕೆ ಇನ್ನೂ ಕೆಲವೇ ದಿನ ಮಾತ್ರ ಭಾಕಿ ಇದ್ದು ಅನೇಕ ಹಣಕಾಸು ನಿಯಮಗಳು ಬದಲಾಗುತ್ತವೆ, ಡ್ರೈವಿಂಗ್ ಲೈಸೆನ್ಸ್ ಪಡೆಯಲು ನೀವು ಇನ್ನು ಮುಂದೆ ಆರ್ಟಿಒ ಕಚೇರಿಗೆ ಹೋಗಬೇಕಾಗಿಲ್ಲ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತಿಳಿಸಿದೆ. ಬದಲಾಗಿ, ಸರ್ಕಾರವು ಆ ಸಂಸ್ಥೆಗಳಿಗೆ ಪ್ರಮಾಣಪತ್ರಗಳನ್ನು ಸಹ ನೀಡುತ್ತದೆ. ಇದರೊಂದಿಗೆ, ಆರ್ಟಿಒಗೆ ಹೋಗಿ ಪರೀಕ್ಷೆ ನೀಡುವ ಬದಲು, ವ್ಯಕ್ತಿಯು ತನ್ನ ಚಾಲನಾ ಪರವಾನಗಿಯನ್ನು ಚಾಲನಾ ಶಾಲೆಯಿಂದಲೇ ಪಡೆಯಲು ಸಾಧ್ಯವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಆ ಸಂಸ್ಥೆಗಳಲ್ಲಿ ಈ ಪ್ರಮಾಣಪತ್ರಕ್ಕಾಗಿ ಪರೀಕ್ಷೆಯನ್ನು ತೆಗೆದುಕೊಳ್ಳಬೇಕಾಗುತ್ತದೆ ಮತ್ತು ಶುಲ್ಕವನ್ನು ಸಹ ಪಾವತಿಸಬೇಕಾಗುತ್ತದೆ. ಕಲಿಕಾ ಪರವಾನಗಿಗೆ 150 ರೂ., ಪರೀಕ್ಷೆಗೆ 50 ರೂ. ಅಂತಿಮ ಪರೀಕ್ಷೆಗೆ 300 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ, ಅದು ತೇರ್ಗಡೆಯಾಗುವವರೆಗೆ ಪ್ರತಿ ಬಾರಿಯೂ ಪಾವತಿಸಬೇಕಾಗುತ್ತದೆ.…

Read More