Author: Author AIN

ಬಹುಭಾಷಾ ನಟಿ ಅಮಲಾ ಪೌಲ್ ಮುದ್ದು ಮಗುವಿನ ಆಗಮದ ನಿರೀಕ್ಷೆಯಲ್ಲಿದ್ದಾರೆ. ಇದೇ ಖುಷಿಯಲ್ಲಿ ನಟಿ ಪತ್ನಿಯೊಂದಿಗೆ ಲಿಪ್​ಲಾಕ್ ಮಾಡುತ್ತಿರುವ ಫೋಟೋ ಒಂದನ್ನು ಶೇರ್ ಮಾಡಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಜೋಡಿ ಮುದ್ದಾಗ ಲಿಪ್​ಲಾಪ್ ಫೋಟೋವನ್ನು ಸಾಮಾಜಿಕ ಜಾಲಾ ತಾಣದಲ್ಲಿ ಹಂಚಿಕೊಂಡಿದ್ದಾರೆ. ಫೋಟೋ ಶೇರ್ ಮಾಡಿದ ಅಮಲಾ ಪೌಲ್ ಅವರ ಪತಿ ಆ ಫೋಟೋಗೆ ಸ್ವರ್ಗದಲ್ಲಿ ಪ್ರೇಮಿಗಳು ಎನ್ನುವ ಕ್ಯಾಪ್ಶನ್ ನೀಡಿದ್ದಾರೆ. ಸದ್ಯ ಗರ್ಭಿಣಿಯಾಗಿರುವ ಪತ್ನಿ ಅಮಲಾ ಪೌಲ್ ಅವರ ಜೊತೆಯೇ ಇರುವ ಅಮಲಾ ಪತಿ ಹೆಂಡತಿಯನ್ನು ಸಾಕಷ್ಟು ಕೇರ್ ಮಾಡ್ತಿದ್ದಾರೆ. ಇತ್ತೀಚೆಗೆ ಅಮಲಾ ಪೌಲ್ ಪತಿಯೊಂದಿಗೆ ಇಶಾ ಫೌಂಡೇಷನ್ ಗೆ ಭೇಟಿ ನೀಡಿದ್ದಾರೆ. ಮಹಾಶಿವರಾತ್ರಿಯನ್ನು ಇಶಾ ಫೌಂಡೇಷನ್​ನಲ್ಲಿ ಕಳೆದಿರುವ ಜೋಡಿ ಅಲ್ಲಿನ ಸುಂದರ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಅಮಲಾ ಪೌಲ್ ಅವರು ಮದುವೆಯಾಗಿ ಕೆಲವೇ ದಿನಗಳಲ್ಲಿ ಪ್ರೆಗ್ನೆನ್ಸಿ ಅನೌನ್ಸ್ ಮಾಡಿದ್ದರು. ಅವರು ಗರ್ಭಿಣಿಯಾದ ನಂತರವೇ ತುಂಬಾ ಸರಳವಾದ ಸಮಾರಂಭದಲ್ಲಿ ಆಪ್ತರ ಸಮ್ಮುಖದಲ್ಲಿ ಜಗತ್ ದೇಸಾಯಿ ಅವರನ್ನು ವಿವಾಹವಾಗಿದ್ದಾರೆ. ದಕ್ಷಿಣದ ನಟಿ ಅಮಲಾ…

Read More

ನಟಿ ಆಗಬೇಕೆಂಬ ಕನಸು ಕಂಡಿದ್ದ ಯುವತಿಯೊಬ್ಬಳು ಮೋಸದ ಜಾಲಕ್ಕೆ ಸಿಲುಕಿ ಲಕ್ಷ ಲಕ್ಷ ಕಳೆದುಕೊಂಡಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ಸೂಪರ್ ಸ್ಟಾರ್ ರಜನಿಕಾಂತ್ ಹೆಸರು ಹೇಳಿಕೊಂಡು ಕಾಸ್ಟಿಂಗ್ ಡೈರೆಕ್ಟರ್ ಸುರೇಶ್ ಕುಮಾರ್ ಎಂಬಾತ ಯುವತಿಯಿಂದ ಹಣ ಸುಲಿಗೆ ಮಾಡಿದ್ದಾನೆ. ರಜನಿಕಾಂತ್ ನಟನೆಯ ಹೊಸ ಸಿನಿಮಾ Thalaiver 171- code red ಪಾತ್ರವೊಂದು ಖಾಲಿ ಇದೆ ಎಂದು ಸುರೇಶ್ ಇನ್ಸ್ಟಾಗ್ರಾಂನಲ್ಲಿ ವಿಡಿಯೊವನ್ನು ಹಂಚಿಕೊಂಡಿದ್ದರು. ಇದನ್ನು ನೋಡಿ ಯುವತಿಯೊಬ್ಬಳು ಸುರೇಶ್ ಕುಮಾರ್‌ನನ್ನು ಸಂಪರ್ಕ ಮಾಡಿದ್ದಾಳೆ.  ನಂತರ ಕಾಸ್ಟಿಂಗ್‌ಗೆ ಇಷ್ಟು ಹಣ ಖರ್ಚಾಗುತ್ತೆ ಎಂದು ಸಬೂಬು ಹೇಳಿ, ಹಂತ ಹಂತವಾಗಿ 3,94,000 ರೂ. ಹಣವನ್ನು ದೋಚಿದ್ದಾನೆ. ಇತ್ತ ಯುವತಿಯಿಂದ ಹಣ ಸುಲಿಗೆ ಮಾಡಿ, ಅವಕಾಶವನ್ನು ಕೊಡದೆ, ಹಣವನ್ನೂ ವಾಪಾಸ್ ಕೊಡದೆ ಸುರೇಶ್ ಪರಾರಿ ಆಗಿದ್ದಾನೆ. ಇತ್ತ ಹಣವೂ ಇಲ್ಲದೆ ಅವಕಾಶವೂ ಇಲ್ಲದೇ ಮೋಸ ಹೋದ ಯುವತಿ ಕಂಗಲಾಗಿದ್ದು ಮೈಕೋಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ. ಆರೋಪಿಯ ವಿರುದ್ಧ ಐಟಿ ಆಕ್ಟ್ ನಡಿ ದೂರು ದಾಖಲಾಗಿದೆ.

Read More

ಮಾಜಿ ಐಪಿಎಸ್ ಅಧಿಕಾರಿ, ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ನಟನೆಯ ಮೊದಲ ಕನ್ನಡ ಸಿನಿಮಾ ‘ಅರಬ್ಬಿ’ಯ ಟ್ರೈಲರ್ ರಿಲೀಸ್ ಆಗಿದೆ. ಐಪಿಎಸ್ ಅಧಿಕಾರಿಯಾಗಿದ್ದ ಅಣ್ಣಾಮಲೈ ಸ್ವಯಂ ನಿವೃತ್ತಿ ಪಡೆದುಕೊಂಡ ಬಳಿಕ ಕನ್ನಡ ಸಿನಿಮಾ ಒಂದರಲ್ಲಿ ನಟಿಸಿದ್ದರು. ಇದೀಗ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು ಟ್ರೈಲರ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅರಬ್ಬಿ ಸಿನಿಮಾದಲ್ಲಿ ಅಣ್ಣಾಮಲೈ ಅವರದ್ದು ಪ್ರಮುಖ ಪಾತ್ರವಾಗಿದ್ದು ಕೆಲವು ಆಕ್ಷನ್ ದೃಶ್ಯಗಳಲ್ಲಿ ಸಹ ಕಾಣಿಸಿಕೊಂಡಿದ್ದಾರೆ. ಎರಡೂ ಕೈಗಳಿಲ್ಲದಿದ್ದರೂ ಈಜು ಸ್ಪರ್ಧೆಯಲ್ಲಿ ಭಾಗವಹಿಸಿ ಸಾಧನೆ ಮಾಡಿರುವ ಕನ್ನಡಿಗ ಕೆಎಸ್ ವಿಶ್ವಾಸ್ ಅವರ ಜೀವನದ ಬಗ್ಗೆ ನಿರ್ಮಿಸಲಾಗಿರುವ ‘ಅರಬ್ಬಿ’ ಸಿನಿಮಾದ ಟ್ರೈಲರ್ ಇದೀಗ ಬಿಡುಗಡೆ ಆಗಿದೆ. ಸಿನಿಮಾನಲ್ಲಿ ತಮ್ಮ ಪಾತ್ರದಲ್ಲಿ ತಾವೇ ನಟಿಸಿದ್ದಾರೆ ವಿಶ್ವಾಸ್. ಕೈಗಳು ಇಲ್ಲದ ಅವರು ಸಮಾಜದಲ್ಲಿ ಹೇಗೆ ಸಮಸ್ಯೆಗಳನ್ನು ಎದುರಿಸಿದರು. ಅದೆಲ್ಲವನ್ನೂ ಮೆಟ್ಟಿನಿಂತು ಹೇಗೆ ಮೇಲೆ ಬಂದರು, ಸಾಧನೆ ಮಾಡಿದರು. ಅವರಿಗೆ ಸ್ಪೂರ್ತಿ ಯಾರು? ಯಾರು ಸಹಾಯ ಮಾಡಿದವರು ಎಂಬ ವಿಷಯಗಳು ಈ ಸಿನಿಮಾ ಒಳಗೊಂಡಿದೆ. ‘ಅರಬ್ಬಿ’ ಸಿನಿಮಾನಲ್ಲಿ…

Read More

ಮುಸ್ಲಿಂಮರ ಪವಿತ್ರ ರಂಜಾನ್ ತಿಂಗಳಿನಲ್ಲಿ ಕರ್ತವ್ಯದಲ್ಲಿರುವ ಪೈಲಟ್ ಗಳು ಉಪವಾಸ ಮಾಡದಂತೆ ಪಾಕ್ ಏರ್‌ ಲೈನ್‌ ಸಂಸ್ಥೆಯ ಪೈಲಟ್‍ಗಳಿಗೆ ಹಾಗೂ ವಿಮಾನದ ಸಿಬ್ಬಂದಿಗಳಿಗೆ ಸೂಚನೆ ನೀಡಲಾಗಿದೆ. ಉಪವಾಸವಿದ್ದ ವೇಳೆ ವ್ಯಕ್ತಿಗಳಲ್ಲಿ ನಿರ್ಜಲೀಕರಣ, ಆಲಸ್ಯ ಮತ್ತು ನಿದ್ರೆಗೆ ಸಂಬಂಧಿಸಿದ ಸಮಸ್ಯೆಗೆ ಕಾರಣವಾಗಬಹುದು. ಆದ್ದರಿಂದ ಪೈಲಟ್ ಹಾಗೂ ಸಿಬ್ಬಂದಿ ಉಪವಾಸ ಮಾಡುವುದು ಬೇಡ  ಎಂಬ ವೈದ್ಯಕೀಯ ಸಲಹೆಯನ್ನು ಆಧರಿಸಿ ಈ ಸೂಚನೆ ನೀಡಲಾಗಿದೆ. ಕಾರ್ಪೋರೇಟ್ ಸುರಕ್ಷತಾ ನಿರ್ವಹಣೆ ಮತ್ತು ವಿಮಾನ ಸಿಬಂದಿ ವೈದ್ಯಕೀಯ ಕೇಂದ್ರವು ಈ ಶಿಫಾರಸನ್ನು ಅನುಮೋದಿಸಿದ್ದು ಪಾಕಿಸ್ತಾನ್ ಇಂಟರ್ ನ್ಯಾಷನಲ್ ಏರ್‌ ಲೈನ್‌ (ಪಿಐಎ)ನ ಪೈಲಟ್‍ಗಳು ಹಾಗೂ ಕ್ಯಾಬಿನ್ ಸಿಬಂದಿಗಳು ಕರ್ತವ್ಯದಲ್ಲಿರುವಾಗ ಉಪವಾಸ ನಡೆಸದಂತೆ ಸಲಹೆ ನೀಡಿದೆ. ಈ ಸಲಹೆಯನ್ನು ಆಧರಿಸಿ ಪಿಐಎ ತಕ್ಷಣ ಜಾರಿಯಾಗುವಂತೆ ಆದೇಶ ಜಾರಿಗೊಳಿಸಲಾಗಿದೆ.

Read More

ಗಗನಯಾತ್ರಿಗಳನ್ನು ಚಂದ್ರ ಮತ್ತು ಅದರಾಚೆಗೆ ಕರೆದೊಯ್ಯಲು ಅಭಿವೃದ್ಧಿ ಪಡಿಸಲಾದ ಎಲಾನ್ ಮಸ್ಕ್ ಅವರ ಸ್ಪೇಸ್‍ ಎಕ್ಸ್ ನ ಬಾಹ್ಯಾಕಾಶ ನೌಕೆ ಸ್ಟಾರ್‍ಶಿಪ್ ಟೆಕ್ಸಾಸ್‍ನ ಉಡಾವಣಾ ಕೇಂದ್ರದಿಂದ ಯಶಸ್ವಿಯಾಗಿ ಬಾಹ್ಯಾಕಾಶಕ್ಕೆ ಹಾರಿದಲು ಹಾರಿದ ಕೆಲವೇ ಕ್ಷಣಗಳಲ್ಲಿ ಸ್ಪೇಸ್‍ ಎಕ್ಸ್ ಜತೆಗಿನ ಸಂಪರ್ಕ ಕಡಿದುಕೊಂಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.. ಗುರುವಾರ ಹಿಂದು ಮಹಾಸಾಗರದ ಮೂಲಕ ಮರುಪ್ರವೇಶದ ಸಂದರ್ಭ ಸ್ಟಾರ್ ಶಿಪ್ ಜತೆಗಿನ ಸಂಪರ್ಕ ಕಡಿತಗೊಂಡಿದೆ ಎನ್ನಲಾಗುತ್ತಿದೆ.

Read More

ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ಇಂದಿನಿಂದ ಜಾರಿಗೆ ಬರುವಂತೆ ಪೆಟ್ರೋಲ್ ಮತ್ತು ಡೀಸೆಲ್‌ ದರ ಕಡಿತಗೊಳಿಸಿವೆ. ಲೋಕಸಭೆ ಚುನಾವಣೆ ಹೊತ್ತಲ್ಲೇ ತೈಲ ಬೆಲೆ ಇಳಿಕೆ ಮಾಡಿರುವುದು ಜನರಿಗೆ ನೆಮ್ಮದಿ ಮೂಡಿಸಿದೆ. ಪ್ರತಿ ಲೀಟರ್ ಪೆಟ್ರೋಲ್ ಹಾಗೂ ಡಿಸೆಲ್ ಬೆಲೆಯಲ್ಲಿ 2 ರೂಪಾಯಿ ಕಡಿತಗೊಳಿಸಿವೆ. ಈ ತಿಂಗಳ ಆರಂಭದಲ್ಲಿ ಅಡುಗೆ ಅನಿಲ ದರವನ್ನು ಕಡಿತ ಮಾಡಿ ಜನಸಾಮಾನ್ಯರಿಗೆ ಸಿಹಿ ಸುದ್ದಿ ನೀಡಿದ್ದ ಕೇಂದ್ರ ಸರ್ಕಾರ ಇದೀಗ ತೈಲ ಬೆಲೆಯನ್ನು ಇಳಿಸಿ ಮತ್ತಷ್ಟು ಖುಷಿ ನೀಡಿದೆ. ಲೋಕಸಭೆ ಚುನಾವಣಾ ಸಮೀಪದಲ್ಲಿ ಅಡುಗೆ ಅನಿಲ, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಇಳಿಕೆ ಮಾಡಿರುವುದು ಗಮನಾರ್ಹವಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಕಡಿತ ಮಾಡುತ್ತಿರುವ ಸುದ್ದಿಯನ್ನು ಪೆಟ್ರೋಲಿಯಂ ಸಚಿವಾಲಯ ತನ್ನ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದೆ. ಸಾಕಷ್ಟು ಸಮಯದ ಬಳಿಕ ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 100 ರೂಪಾಯಿಗಿಂತ ಕೆಳಗಿಳಿದಿದೆ. ಇಂದು ನಗರದಲ್ಲಿ ಪೆಟ್ರೋಲ್ ಬೆಲೆ 99.84 ರೂಪಾಯಿ ಇದೆ. ನಿನ್ನೆ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್…

Read More

ಗಾಝಾದಲ್ಲಿ ಆಹಾರದ ಸಹಾಯಕ್ಕಾಗಿ ಕಾಯುತ್ತಿದ್ದ ಶೆಲ್ ಮೇಲೆ ದಾಳಿ ಮಾಡಿದ ಪರಿಣಾಮ ಘಟನೆಯಲ್ಲಿ ಸುಮಾರು 20 ಜನರು ಮೃತಪಟ್ಟಿದ್ದು 155ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಪ್ಯಾಲೆಸ್ತೀನ್ ಎನ್ಕ್ಲೇವ್ನಲ್ಲಿರುವ ಆರೋಗ್ಯ ಸಚಿವಾಲಯ ತಿಳಿಸಿದೆ. ಘಟನೆಯು ಭೀಕರವಾಗಿದ್ದು ಶೆಲ್ ದಾಳಿಯಲ್ಲಿ ಇನ್ನಷ್ಟು ಅಧಿಕ ಸಾವು ನೋವುಗಳು ಸಂಭವಿಸಬಹುದು ಎಂದು ಅಲ್ ಶಿಫಾ ಆಸ್ಪತ್ರೆಯ ತುರ್ತು ಘಟಕದಲ್ಲಿ ಕೆಲಸ ಮಾಡುತ್ತಿರುವ ಡಾ.ಮೊಹಮ್ಮದ್ ಘ್ರಾಬ್ ಹೇಳಿದ್ದಾರೆ. ಗಾಝಾದ ಕುವೈತ್ ವೃತ್ತದಲ್ಲಿ ತಮ್ಮ ಹಸಿವನ್ನು ನೀಗಿಸಲು ಮಾನವೀಯ ಸಹಾಯಕ್ಕಾಗಿ ಕಾಯುತ್ತಿರುವ ನಾಗರಿಕರ ಗುಂಪನ್ನು ಗುರಿಯಾಗಿಸಿಕೊಂಡು ಇಸ್ರೇಲಿ ಆಕ್ರಮಿತ ಪಡೆಗಳು ದಾಳಿ ಮಾಡಿದ ಪರಿಣಾಮ ಈ ದುರಂತ ನಡೆದಿದೆ ಎಂದು ಪ್ರತ್ಯಕ್ಷ ದರ್ಶಿಗಳು ಮಾಹಿತಿ ನೀಡಿದ್ದಾರೆ.

Read More

ಭಾರತದಲ್ಲಿ ‘ಪೌರತ್ವ ತಿದ್ದುಪಡಿ ಕಾಯ್ದೆ’ ಜಾರಿಗೆ ಬಂದಿದೆ ಎಂಬ ಅಧಿಸೂಚನೆಯ ಬಗ್ಗೆ ಕಳವಳ ಇದೆ ಎಂದು ಅಮೆರಿಕ ತಿಳಿಸಿದೆ. ಮಾರ್ಚ್ 11ರಂದು ‘ಪೌರತ್ವ ತಿದ್ದುಪಡಿ ಕಾಯ್ದೆ’ ಕುರಿತು ಭಾರತ ಸರ್ಕಾರ ಅಧಿಸೂಚನೆ ಹೊರಡಿಸಿರುವ ಕುರಿತು ಕಳವಳ ಹೊಂದಿದ್ದೇವೆ ಎಂದು ಸ್ಟೇಟ್ ಡಿಪಾರ್ಟ್‌ಮೆಂಟ್ ವಕ್ತಾರ ಮ್ಯಾಥ್ಯೂ ಮಿಲ್ಲರ್ ಹೇಳಿದ್ದಾರೆ. ‘ಪೌರತ್ವ ತಿದ್ದುಪಡಿ ಕಾಯ್ದೆ’ ಕಾಯ್ದೆಯನ್ನು ಹೇಗೆ ಜಾರಿಗೊಳಿಸಲಾಗುತ್ತದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಧಾರ್ಮಿಕ ಸ್ವಾತಂತ್ರ್ಯಕ್ಕೆ ಗೌರವ ಹಾಗೂ ಕಾನೂನಿನ ಅಡಿಯಲ್ಲಿ ಎಲ್ಲ ಧರ್ಮಗಳನ್ನು ಸಮಾನವಾಗಿ ಪರಿಗಣಿಸುವುದು ಪ್ರಜಾಪ್ರಭುತ್ವದ ಮೂಲಭೂತ ತತ್ವಗಳಾಗಿವೆ ಎಂದು ಹೇಳಿದ್ದಾರೆ. ಭಾರತದಲ್ಲಿ ಸಿಎಎ ಜಾರಿಗೊಳಿಸಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಈ ಕಾಯ್ದೆಯು ಯಾವುದೇ ದಾಖಲೆಗಳು ಇಲ್ಲದೆ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಗಾನಿಸ್ತಾನದಿಂದ 2014ರ ಡಿಸೆಂಬರ್ 31ಕ್ಕೆ ಮೊದಲು ಭಾರತ ಪ್ರವೇಶಿಸಿದ ಮುಸ್ಲಿಮೇತರರಿಗೆ ಭಾರತದ ಪೌರತ್ವವನ್ನು ನೀಡುತ್ತದೆ. ಈ ಮೂರು ದೇಶಗಳಲ್ಲಿ ದೌರ್ಜನ್ಯಕ್ಕೆ ಗುರಿಯಾಗಿ ಭಾರತಕ್ಕೆ ಬಂದ ಹಿಂದೂ, ಸಿಖ್, ಜೈನ, ಬೌದ್ಧ, ಪಾರ್ಸಿ ಮತ್ತು ಕ್ರೈಸ್ತ ಸಮುದಾಯದವರಿಗೆ ಭಾರತದ…

Read More

ಉತ್ತರ ಚೀನಾದ ಶಾಂಕ್ಸಿ ಪ್ರಾಂತ್ಯದ ಕಲ್ಲಿದ್ದಲು ಗಣಿಯ ಭೂಗತ ಗೋದಾಮಿನಲ್ಲಿ ನಡೆದ ಅಪಘಾತದಲ್ಲಿ ಸಿಲುಕಿದ್ದ ಏಳು ಗಣಿ ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಝೊಂಗ್ಯಾಂಗ್ ಕೌಂಟಿಯ ಟಾವೊಯುವಾನ್ ಕ್ಸಿನ್ಲಾಂಗ್ ಕಲ್ಲಿದ್ದಲು ಕೈಗಾರಿಕಾ ನಿಗಮದಲ್ಲಿ ಘಟನೆ ನಡೆದಿದ್ದು ಇಂದು ಬೆಳಗ್ಗೆ 6.25ಕ್ಕೆ ಶವಗಳನ್ನು ಹೊರ ತೆಗೆಯಲಾಗಿದೆ. ಉಳಿದ ಕಾರ್ಮಿಕರ ರಕ್ಷಣಾ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಿನ್ನೆ ರಾತ್ರಿ ಗಣಿಗಾರರು ಅಸಮರ್ಪಕ ಕಲ್ಲಿದ್ದಲು ಫೀಡರ್ ಅನ್ನು ದುರಸ್ತಿ ಮಾಡುತ್ತಿದ್ದಾಗ ಗೋದಾಮಿನಲ್ಲಿನ ಕಲ್ಲಿದ್ದಲು ರಾಶಿ ಕುಸಿದು ಏಳು ಜನರು ಸಮಾಧಿಯಾಗಿದ್ದಾರೆ ಎಂದು ಗಣಿಯ ಮುಖ್ಯಸ್ಥ ಗಾವೊ ನೈಚುನ್ ತಿಳಿಸಿದ್ದಾರೆ.

Read More

ಕೆಜಿಎಫ್ ಚಿತ್ರದ ಬಳಿಕ ಯಶ್ ನಟನೆಯ ಟಾಕ್ಸಿಕ್ ಸಿನಿಮಾ ಸಾಕಷ್ಟು ಕುತೂಹಲ ಮೂಡಿಸಿದೆ. ಇದುವರೆಗೂ ಚಿತ್ರತಂಡ ಚಿತ್ರದ ಬಗ್ಗೆ ಯಾವುದೇ ಸುಳಿವು ಬಿಟ್ಟುಕೊಟ್ಟಿಲ್ಲ. ಇತ್ತೀಚೆಗೆ ನಟ ಯಶ್ ಗೋವಾದಲ್ಲಿ ಕಾಣಿಸಿಕೊಂಡಿದ್ದ ಟಾಕ್ಸಿಕ್ ಚಿತ್ರದ ಶೂಟಿಂಗ್ ನಡೆಯಲಿದೆ ಎಂಬ ಸುದ್ದಿ ಹರಡಿತ್ತು. ಇದೀಗ ಟಾಕ್ಸಿಕ್ ಸೆಟ್ ನಿಂದ ಕೆಲವೊಂದು ಫೋಟೋ ಹಾಗೂ ವಿಡಿಯೋ ಔಟ್ ಆಗಿದೆ. ಸೆಟ್​ನ ಫೋಟೋ ಹಾಗೂ ವಿಡಿಯೋಗಳನ್ನು ಕೆಲವರು ಲೀಕ್ ಮಾಡಿದ್ದಾರೆ. ಅಂದಹಾಗೆ ಇದು ಶೂಟಿಂಗ್​ ಹೌದೋ ಅಥವಾ ಇಲ್ಲವೋ ಎಂಬುದು ಇನ್ನೂ ಖಚಿತವಾಗಿಲ್ಲ. ಫ್ಯಾನ್ಸ್ ಇದು ಸೆಟ್​ನ ವಿಡಿಯೋ ಎಂದೇ ಹೇಳುತ್ತಿದ್ದಾರೆ. ಸದ್ಯ ವೈರಲ್ ಆಗಿರುವ ಫೋಟೋದಲ್ಲಿ ಯಶ್ ಕಾಣಿಸಿಕೊಂಡಿದ್ದಾರೆ. ‘ಕೆಜಿಎಫ್ 2’ ಬಳಿಕ ಯಶ್ ಅವರು ದೊಡ್ಡ ಬ್ರೇಕ್ ಪಡೆದರು. ಈ ಬ್ರೇಕ್​ನಲ್ಲೂ ತಾವು ಸಿನಿಮಾ ಕೆಲಸದಲ್ಲಿ ಬ್ಯುಸಿ ಇರೋದಾಗಿ ಹೇಳಿದ್ದರು. ನಂತರ ಮಲಯಾಳಂ ನಿರ್ದೇಶಕಿ ಗೀತು ಮೋಹನ್​ದಾಸ್ ಜೊತೆ ಸೇರಿ ಅವರು ‘ಟಾಕ್ಸಿಕ್’ ಸಿನಿಮಾ ಘೋಷಣೆ ಮಾಡಿದರು. ಈ ಚಿತ್ರದ ಬಗ್ಗೆ ಫ್ಯಾನ್ಸ್ ಸಾಕಷ್ಟು…

Read More