ಬಹುಭಾಷಾ ನಟಿ ಅಮಲಾ ಪೌಲ್ ಮುದ್ದು ಮಗುವಿನ ಆಗಮದ ನಿರೀಕ್ಷೆಯಲ್ಲಿದ್ದಾರೆ. ಇದೇ ಖುಷಿಯಲ್ಲಿ ನಟಿ ಪತ್ನಿಯೊಂದಿಗೆ ಲಿಪ್ಲಾಕ್ ಮಾಡುತ್ತಿರುವ ಫೋಟೋ ಒಂದನ್ನು ಶೇರ್ ಮಾಡಿದ್ದಾರೆ.
![Demo](https://ainlivenews.com/wp-content/uploads/2023/12/spoorthi-1.jpg)
ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಜೋಡಿ ಮುದ್ದಾಗ ಲಿಪ್ಲಾಪ್ ಫೋಟೋವನ್ನು ಸಾಮಾಜಿಕ ಜಾಲಾ ತಾಣದಲ್ಲಿ ಹಂಚಿಕೊಂಡಿದ್ದಾರೆ.
ಫೋಟೋ ಶೇರ್ ಮಾಡಿದ ಅಮಲಾ ಪೌಲ್ ಅವರ ಪತಿ ಆ ಫೋಟೋಗೆ ಸ್ವರ್ಗದಲ್ಲಿ ಪ್ರೇಮಿಗಳು ಎನ್ನುವ ಕ್ಯಾಪ್ಶನ್ ನೀಡಿದ್ದಾರೆ.
ಸದ್ಯ ಗರ್ಭಿಣಿಯಾಗಿರುವ ಪತ್ನಿ ಅಮಲಾ ಪೌಲ್ ಅವರ ಜೊತೆಯೇ ಇರುವ ಅಮಲಾ ಪತಿ ಹೆಂಡತಿಯನ್ನು ಸಾಕಷ್ಟು ಕೇರ್ ಮಾಡ್ತಿದ್ದಾರೆ.
ಇತ್ತೀಚೆಗೆ ಅಮಲಾ ಪೌಲ್ ಪತಿಯೊಂದಿಗೆ ಇಶಾ ಫೌಂಡೇಷನ್ ಗೆ ಭೇಟಿ ನೀಡಿದ್ದಾರೆ. ಮಹಾಶಿವರಾತ್ರಿಯನ್ನು ಇಶಾ ಫೌಂಡೇಷನ್ನಲ್ಲಿ ಕಳೆದಿರುವ ಜೋಡಿ ಅಲ್ಲಿನ ಸುಂದರ ಫೋಟೋಗಳನ್ನು ಶೇರ್ ಮಾಡಿದ್ದಾರೆ.
ಅಮಲಾ ಪೌಲ್ ಅವರು ಮದುವೆಯಾಗಿ ಕೆಲವೇ ದಿನಗಳಲ್ಲಿ ಪ್ರೆಗ್ನೆನ್ಸಿ ಅನೌನ್ಸ್ ಮಾಡಿದ್ದರು. ಅವರು ಗರ್ಭಿಣಿಯಾದ ನಂತರವೇ ತುಂಬಾ ಸರಳವಾದ ಸಮಾರಂಭದಲ್ಲಿ ಆಪ್ತರ ಸಮ್ಮುಖದಲ್ಲಿ ಜಗತ್ ದೇಸಾಯಿ ಅವರನ್ನು ವಿವಾಹವಾಗಿದ್ದಾರೆ.
ದಕ್ಷಿಣದ ನಟಿ ಅಮಲಾ ಪೌಲ್ ಅವರು ಇತ್ತೀಚೆಗೆ ಪತಿಯೊಂದಿಗೆ ಫೋಟೋಶೂಟ್ ಮಾಡಿಸಿಕೊಂಡಿದ್ದರು. ಸುಂದರವಾದ ವೈಟ್ ಡ್ರೆಸ್ ಧರಿಸಿ ನಟಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದರು.
ನಟಿ ಗರ್ಭಿಣಿಯಾದಾಗಿನಿಂದಲೂ ನಿರಂತರವಾಗಿ ಸೋಷಿಯಲ್ ಮೀಡಿಯಾ ಮೂಲಕ ಅಪ್ಡೇಟ್ ನೀಡುತ್ತಿದ್ದಾರೆ. ಸದ್ಯದಲ್ಲೇ ಮನೆಗೆ ಹೊಸ ಮಗುವಿನ ಆಗಮನದ ಖುಷಿಯಲ್ಲಿದೆ ಈ ಜೋಡಿ.
![](https://ainlivenews.com/wp-content/uploads/2024/01/Ad-Banner-copy-scaled.jpg)