Author: Author AIN

ರ್ಯಾಪರ್ ಚಂದನ್ ಶೆಟ್ಟಿ ಹಾಗೂ ನಟಿ ನಿವೇದಿತಾ ಗೌಡ ಸಂಸಾರದಲ್ಲಿ ಬಿರುಕು ಮೂಡಿದೆ ಎನ್ನಲಾಗಿದೆ. ಹಾಗಾಗಿ ಅವರು ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಇಂದೇ ಅವರು ಡಿವೋರ್ಸ್ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಬೇಕಿದೆ. 2017ರಲ್ಲಿ ಪ್ರಸಾರವಾದ ‘ಬಿಗ್​ ಬಾಸ್​ ಕನ್ನಡ ಸೀಸನ್​ 5’ ಶೋನಲ್ಲಿ ನಿವೇದಿತಾ ಗೌಡ ಮತ್ತು ಚಂದನ್​ ಶೆಟ್ಟಿ ಅವರು ಪರಸ್ಪರ ಪರಿಚಯ ಆಗಿದ್ದರು. ಅವರಿಬ್ಬರ ಸ್ನೇಹ ನಂತರ ಪ್ರೀತಿಯಾಗಿ ಬದಲಾಯಿತು. ಮೈಸೂರಿನ ಯುವ ದಸರಾ ವೇದಿಕೆಯಲ್ಲಿ ನಿವೇದಿತಾಗೆ ಚಂದನ್​ ಶೆಟ್ಟಿ ಅವರು ಪ್ರಪೋಸ್​ ಮಾಡಿದ್ದರು. ಬಳಿಕ ಇಬ್ಬರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಬಿಗ್ ಬಾಸ್ ಮನೆಯಲ್ಲಿ ಈ ಜೋಡಿ ಪ್ರೀತಿಸಿ, ಅಲ್ಲಿಂದ ವಾಪಸ್ಸು ಬಂದ ನಂತರ ಅದ್ಧೂರಿಯಾಗಿ ಮದುವೆಯಾಗಿದ್ದರು. ಈ ಇಬ್ಬರೂ ಅನ್ಯೋನ್ಯ ಜೀವನ ನಡೆಸುತ್ತಿದ್ದರು ಎನ್ನುವುದಕ್ಕೆ ಅವರೇ ಮಾಡಿಕೊಂಡಿದ್ದ ಹಲವಾರು ರೀಲ್ಸ್ ಸಾಕ್ಷಿಯಾಗಿದ್ದವು. ಆದರೆ, ಏಕಾಏಕಿ ಇಬ್ಬರೂ ನಿನ್ನೆಯಷ್ಟೇ ಡಿವೋರ್ಸ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಡಿವೋರ್ಸ್ ಕಾರಣ ತಿಳಿದುಕೊಂಡಿಲ್ಲ. ಆದರೆ, ಇಂದು…

Read More

ಬೆಂಗಳೂರಿ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ಭಾಗಿಯಾಗಿ ಸದ್ಯ ಬೆಂಗಳೂರು ಪೊಲೀಸರ ವಶದಲ್ಲಿರುವ ನಟಿ ಹೇಮಾ ಅವರಿಗೆ ಮತ್ತೊಂದು ಶಾಕ್ ಎದುರಾಗಿದೆ. ಮೂವಿ ಆರ್ಟಿಸ್ಟ್ ಅಸೋಸಿಯೇಷನ್ (ಮಾ) ನ ಪದಾಧಿಕಾರಿಯೂ ಆಗಿರುವ ಹೇಮಾ ಕೊಲ್ಲ ಅವರನ್ನು ಮಾ ಸಂಘದಿಂದ ಉಚ್ಛಾಟನೆ ಮಾಡಿ ಆದೇಶವನ್ನು ‘ಮಾ’ನ ಹಾಲಿ ಅಧ್ಯಕ್ಷ ಮಂಚು ವಿಷ್ಣು ಹೊರಡಿಸಿದ್ದಾರೆ. ಕೆಲವು ದಿನಗಳ ಹಿಂದಷ್ಟೆ ಈ ಬಗ್ಗೆ ಟ್ವೀಟ್ ಮಾಡಿದ್ದ ಮಂಚು ವಿಷ್ಣು, ಹೇಮಾ ಕೊಲ್ಲ ಪರವಾದ ನಿಲವು ತಳೆದಿದ್ದರು. ಹೇಮಾ ವಿರುದ್ಧ ಕೆಲವು ಷಡ್ಯಂತ್ರಗಳು ನಡೆಯುತ್ತಿವೆ. ಆಕೆ ಅಪರಾಧಿ ಎಂದು ನಿರ್ಧಾರವಾಗುವವರೆಗೆ ಹೇಮಾ ವಿರುದ್ಧ ನಿರ್ಣಯಕ್ಕೆ ಬರಬೇಡಿ, ಸಾಮಾಜಿಕ ಜಾಲತಾಣದಲ್ಲಿ ಏನೂ ನಿಂದನಾತ್ಮಕ ಪೋಸ್ಟ್​ಗಳನ್ನು ಹಂಚಿಕೊಳ್ಳಬೇಡಿ ಎಂದಿದ್ದರು. ಆದರೆ ಈಗ ಮಂಚು ವಿಷ್ಣು ಅವರೇ ಹೇಮಾ ಅವರನ್ನು ಕಲಾವಿದರ ಸಂಘದಿಂದ ಹೊರಹಾಕಿದ್ದಾರೆ. ಡ್ರಗ್ಸ್ ಪ್ರಕರಣದಲ್ಲಿ ಹೆಸರು ಕೇಳಿ ಬಂದಿರುವ ನಟಿ ಹೇಮಾರ ವಿರುದ್ಧ ಯಾವ ಕ್ರಮ ಕೈಗೊಳ್ಳಬೇಕು ಎಂದು ಪದಾಧಿಕಾರಿಗಳ ಸಲಹೆ ಪಡೆದು ಅಂತಿಮವಾಗಿ ಹೇಮಾರನ್ನು ಕಲಾವಿದರ…

Read More

‘ತೈವಾನ್‌ ಜೊತೆ ನಿಕಟ ಸಂಬಂಧ ಹೊಂದಲು ಭಾರತ ಎದುರು ನೋಡುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವುದಕ್ಕೆ ಚೀನಾ ಪ್ರತಿಭಟನೆ ದಾಖಲಿಸಿದೆ. ಅಲ್ಲದೆ ತೈವಾನ್‌ನ ರಾಜಕೀಯ ಲೆಕ್ಕಾಚಾರಗಳನ್ನು ನವದೆಹಲಿ ವಿರೋಧಿಸಬೇಕು ಎಂದೂ ಅದು ಆಗ್ರಹಿಸಿದೆ. ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಕ್ಕಾಗಿ ಮೋದಿ ಅವರಿಗೆ ತೈವಾನ್‌ ಅಧ್ಯಕ್ಷ ಲಾಯ್ ಚಿಂಗ್-ಟೆ ಅವರು ‘ಎಕ್ಸ್‌’ನಲ್ಲಿ ಅಭಿನಂದನಾ ಸಂದೇಶ ಕಳುಹಿಸಿದ್ದರು. ಅದಕ್ಕೆ ಮೋದಿ ಅವರು ಪ್ರತಿಕ್ರಿಯಿಸಿದ್ದರು. ‘ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣೆಯಲ್ಲಿ ವಿಜಯ ಸಾಧಿಸಿದ್ದಕ್ಕಾಗಿ ಅಭಿನಂದನೆಗಳು. ತೈವಾನ್‌ ಮತ್ತು ಭಾರತದ ಪಾಲುದಾರಿಕೆಯನ್ನು ಹೆಚ್ಚಿಸಲು ನಾವು ಎದುರು ನೋಡುತ್ತಿದ್ದೇವೆ. ಇಂಡೋಪೆಸಿಫಿಕ್‌ನಲ್ಲಿ ಶಾಂತಿ, ಸಮೃದ್ಧಿ ನೆಲೆಸಲು, ವ್ಯಾಪಾರ, ತಂತ್ರಜ್ಞಾನ ಮತ್ತು ಇತರ ವಲಯಗಳಲ್ಲಿ ಸಹಯೋಗವನ್ನು ವಿಸ್ತರಿಸಲು ಬಯಸುತ್ತಿರುವುದಾಗಿ’ ತೈವಾನ್‌ ಅಧ್ಯಕ್ಷ ಲಾಯ್ ಚಿಂಗ್-ಟೆ ಅವರು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಮೋದಿ ಅವರು, ‘ಅಭಿನಂದಿಸಿದ್ದಕ್ಕೆ ಧನ್ಯವಾದಗಳು. ನಿಕಟ ಸಂಬಂಧದ ಜತೆಗೆ ಪರಸ್ಪರ ಆರ್ಥಿಕ, ತಾಂತ್ರಿಕ ಪಾಲುದಾರಿಕೆಯಲ್ಲಿ ಕೆಲಸ ಮಾಡುವುದನ್ನು ಎದುರು ನೋಡುತ್ತಿದ್ದೇವೆ’ ಎಂದು…

Read More

ಉಕ್ರೇನ್ ಯುದ್ಧವನ್ನು ಪಾಶ್ಚಾತ್ಯ ರಾಷ್ಟ್ರಗಳು ಉಲ್ಬಣಗೊಳಿಸುವುದನ್ನು ಮುಂದುವರೆಸಿದರೆ, ಅದರಿಂದಾಗಿ ಅಂತರರಾಷ್ಟ್ರೀಯ ಬಾಂಧವ್ಯಗಳು ಸಂಪೂರ್ಣವಾಗಿ ನಾಶವಾಗಲಿದೆ. ಅಂತರರಾಷ್ಟ್ರೀಯ ಭದ್ರತೆಯನ್ನು ದುರ್ಬಲಗೊಳಿಸಲಿದೆ ಎಂದು ರಶ್ಯದ ಅಧ್ಯಕ್ಷ ವ್ಲಾದಿ ಮಿರ್ ಪುಟಿನ್ ಹೇಳಿದ್ದಾರೆ. ರಶ್ಯದ ಭೂಪ್ರದೇಶದ ಮೇಲೆ ಉಕ್ರೇನ್ ಸೇನೆ ಪಾಶ್ಚಾತ್ಯ ರಾಷ್ಟ್ರಗಳು ಪೂರೈಕೆ ಮಾಡಿದ ಶಸ್ತ್ರಾಸ್ತ್ರಗಳನ್ನು ಬಳಸುತ್ತಿರುವ ಹಿನ್ನೆಲೆಯಲ್ಲಿ ರಶ್ಯವು ಪಾಶ್ಚಾತ್ಯ ರಾಷ್ಟ್ರಗಳ ವಿರೋಧಿಗಳಿಗೆ ಶಸ್ತ್ರಾಸ್ತ್ರ ಪೂರೈಕೆ ಸೇರಿದಂತೆ ಅಸಾಮಾನ್ಯವಾದ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಮಾಸ್ಕೊ ಪರಿಶೀಲಿಸುತ್ತಿದೆಯೆಂದು ಅವರು ಹೇಳಿದರು. ಅಂತರರಾಷ್ಟ್ರೀಯ ಆರ್ಥಿಕ ವೇದಿಕೆ ನೇಪಥ್ಯದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ರಶ್ಯದೊಳಗೆ ಉಕ್ರೇನ್ ಇತ್ತೀಚೆಗೆ ನಡೆಸಿದ ದಾಳಿಯಲ್ಲಿ ಅಮೆರಿಕದ ಶಸ್ತ್ರಾಸ್ತ್ರಗಳನ್ನು ಬಳರುವುದನ್ನು ಅಮೆರಿಕದ ಸೆನೆಟರ್ ಹಾಗೂ ಪಾಶ್ಚಾತ್ಯ ಅಧಿಕಾರಿಯೊಬ್ಬರು ದೃಢಪಡಿಸಿದ ಬೆನ್ನಲ್ಲೆ ಪುಟಿನ್ ಈ ಪ್ರತಿಕ್ರಿಯೆ ನೀಡಿದ್ದಾರೆ. ” ಒಂದು ವೇಳೆ ಯಾವುದೇ ದೇಶವಾದರೂ ನಮ್ಮ ಪ್ರಾಂತದ ಮೇಲೆ ದಾಳಿ ನಡೆಸಲು ಯುದ್ಧವಲಯಕ್ಕೆ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡಿದ್ದೇ ಆದರೆ, ಆಂತಹ ದೇಶಗಳ ಸೂಕ್ಷ್ಮ ಸಂವೇದಿ ನೆಲೆಗಳ ವಿರುದ್ಧ ದಾಳಿಗಳನ್ನು ನಡೆಸಲು ಜಗತ್ತಿನ ಆ…

Read More

ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್ ಆಗಾಗ ಸುದ್ದಿಯಲ್ಲಿರುತ್ತಾರೆ. ಗೆಳೆಯ ಸುಕೇಶ್ ಚಂದ್ರಶೇಖರ್ ಜೊತೆಗಿನ ಸ್ನೇಹದಿಂದ ಸಾಕಷ್ಟು ನೋವು ಅನುಭವಿಸಿದ ನಟಿ ಇದೀಗ ಸಾಮಾಜಿಕ ಕೆಲಸದ ಮೂಲಕ ಗಮನ ಸೆಳೆದಿದ್ದಾರೆ. ಜೂನ್ 5 ವಿಶ್ವ ಪರಿಸರ ದಿನಾಚರಣೆ. ಈ ಸಂದರ್ಭದಲ್ಲಿ ಅನೇಕರು ಗಿಡಗಳನ್ನು ನೆಡುವ ಮೂಲಕ ಪರಿಸರ ರಕ್ಷಣೆಗೆ ಮುಂದಾಗಿದ್ದಾರೆ. ಇನ್ನೂ ಕೆಲವರು ಪರಿಸರವನ್ನು ಸ್ವಚ್ಛಗೊಳಿಸಿದ್ದಾರೆ. ಜಾಕ್ವೆಲಿನ್ ಕೂಡ ಇದೇ ರೀತಿಯ ಕೆಲಸ ಮಾಡಿದ್ದಾರೆ. ನಟಿ ಮುಂಬೈನಲ್ಲಿ ಸಮುದ್ರ ತೀರವನ್ನು ಸ್ವಚ್ಛ ಮಾಡುವ ಮೂಲಕ ಸೈ ಎನಿಸಿಕೊಂಡಿದ್ದಾರೆ. ‘ಬೀಚ್ ಪ್ಲೀಸ್ ಇಂಡಿಯಾ’ ಕಮ್ಯೂನಿಟಿಯ ಜೊತೆ ಸೇರಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ಸಮುದ್ರ ತೀರವನ್ನು ಸ್ವಚ್ಛಗೊಳಿಸಿದ್ದಾರೆ. ಈ ಫೋಟೋ ತೆಗೆದ ಫೋಟೋಗಳನ್ನು ನಟಿ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸಾಮಾಜ್ಯವಾಗಿ ಸೆಲೆಬ್ರಿಟಿಗಳು ಏನೇ ಮಾಡಿದರು ಅದನ್ನು ಅಭಿಮಾನಿಗಳು ಫಾಲೋ ಮಾಡುತ್ತಾರೆ. ಅಲ್ಲದೆ ಈ ರೀತಿ ಸ್ವಚ್ಛತೆ ಕಾರ್ಯದಲ್ಲಿ ಪಾಲ್ಗೊಂಡರೆ ಲಕ್ಷಾಂತರ ಅಭಿಮಾನಿಗಳಿಗೆ ಸ್ಫೂರ್ತಿಯಾಗುತ್ತದೆ. ಜಾಕ್ವೆಲಿನ್ ಫರ್ನಾಂಡಿಸ್​ಗೆ ಪ್ರಾಣಿಗಳ ಬಗ್ಗೆ ಅಪಾರ ಪ್ರೀತಿ ಇದೆ. ಸ್ವಚ್ಛತೆ…

Read More

ಡಾ.ವಿಷ್ಣುವರ್ಧನ್ ಸ್ಮಾರಕ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ 10 ಗುಂಟೆ ಜಾಗವನ್ನು ನೀಡಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಡಾ. ವಿಷ್ಣುವರ್ಧನ್ ಪುಣ್ಯಭೂಮಿ ಟ್ರಸ್ಟ್ ವತಿಯಿಂದ ಡಾ. ವಿಷ್ಣುವರ್ಧನ್ ಸ್ಮಾರಕ ಭವನ ನಿರ್ಮಾಣ ಮಾಡುವುದಕ್ಕೆ ಜಾಗವಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರದಿಂದ 10 ಗುಂಟೆ ಜಮೀನನ್ನು ಟ್ರಸ್ಟ್‌ಗೆ ನೀಡಿ ಸ್ಮಾರಕ ನಿರ್ಮಾಣಕ್ಕೆ ಅನುಕೂಲ ಮಾಡಿಕೊಡುವುದಕ್ಕೆ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿಗಳಾದ ಎನ್. ವಿ. ಅಂಜಾರಿಯಾ ಹಾಗೂ ಕೆ.ವಿ ಅರವಿಂದ್ ಅವರ ವಿಭಾಗೀಯ ಪೀಠವು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿದೆ. ಹೈಕೋರ್ಟ್‌ನಲ್ಲಿ ವಿಚಾರಣೆ ವೇಳೆ ವಾದ ಮಂಡಿಸಿದ ಅರ್ಜಿದಾರರದ ಪರ ವಕೀಲರು, ಡಾ.ವಿಷ್ಣುವರ್ಧನ್‌ ಮೇರು ನಟ ಆಗಿದ್ದು, ಅಪಾರ ಅಭಿಮಾನಿಗಳು ಅವರನ್ನು ಅರಾಧಿಸುತ್ತಾರೆ. ವಿಷ್ಣುವರ್ಧನ್ ಅವರ ಹುಟ್ಟಿದ ದಿನ ಹಾಗೂ ದೈವಾಧೀನರಾದ ದಿನದಂದು ಅವರಿಗೆ ಪೂಜೆ ಮಾಡುವ ಮೂಲಕ ಗೌರವ…

Read More

ವಿವಿಧ ಮುಸ್ಲಿಂ ಸಂಘಟನೆಗಳ ಮನವಿ ಮೇರೆಗೆ ಸರ್ಕಾರವು ರಾಜ್ಯದಲ್ಲಿ ಇಂದು ಬಿಡುಗಡೆ ಆಗಬೇಕಿದ್ದ ʻಹಮಾರೆ ಬಾರಾಹ್ʼ ಚಲನಚಿತ್ರ ಬಿಡುಗಡೆ ಮತ್ತು ಪ್ರಸಾರವನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ʻಹಮಾರೆ ಬಾರಹ್‌ʼ ಚಿತ್ರವನ್ನು ಈಗಾಗಲೇ ದೇಶಾದ್ಯಂತ ವಿವಿಧೆಡೆ ನಿಷೇಧಿಸಲಾಗಿದೆ. ಕಮಲ್ ಚಂದ್ರಾ ನಿರ್ದೇಶನದ ಅನ್ನು ಕಪೂರ್ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಹಮಾರೆ ಬಾರಾ’ ಮುಸ್ಲಿಂ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯದ ಕತೆಯನ್ನು ಒಳಗೊಂಡಿದೆ. ಸಿನಿಮಾದ ಟೀಸರ್ ಈಗಾಗಲೇ ಬಿಡುಗಡೆ ಆಗಿದ್ದು, ಗಮನ ಸೆಳೆದಿದೆ. ಮೌಲಾ ಒಬ್ಬ, ಮಹಿಳೆಯರು ಕೇವಲ ಪುರುಷರ ಭೋಗ ವಸ್ತುಗಳು, ಅವರಿಗೆ ಸ್ವಾತಂತ್ರ್ಯ ನೀಡುವಂತಿಲ್ಲ ಎಂಬಿತ್ಯಾದಿ ಭಾಷಣ ಮಾಡುತ್ತಿರುವ ದೃಶ್ಯದಿಂದ ಪ್ರಾರಂಭವಾಗುವ ಟೀಸರ್, ಮುಸ್ಲಿಂ ಮಹಿಳೆಯರ ಮೇಲೆ ಅವರ ಪತಿ ನಡೆಸುತ್ತಿರುವ ದೌರ್ಜನ್ಯದ ದೃಶ್ಯಗಳನ್ನು ತೋರಿಸಲಾಗಿದೆ. ಅಜರ್ ತಂಬೋಲ್ ಎಂಬುವರು, ಸಿನಿಮಾದ ಟೀಸರ್ ಅನ್ನು ಆಧರಿಸಿ ಸಿನಿಮಾದ ವಿರುದ್ಧ ಬಾಂಬೆ ಹೈಕೋರ್ಟ್​ನಲ್ಲಿ ಮೊಕದ್ದಮೆ ಹೂಡಿದ್ದರು. ಅರ್ಜಿ ವಿಚಾರಣೆ ಮಾಡಿದ ಬಾಂಬೆ ಹೈಕೋರ್ಟ್, ಜೂನ್ 14 ರವರೆಗೆ ಸಿನಿಮಾದ ಬಿಡುಗಡೆಗೆ ತಡೆ…

Read More

ಗಾಜಾದ ಶಾಲೆಯನ್ನು ಗುರಿಯಾಗಿಸಿ ಇಸ್ರೇಲ್‌ ನಡೆಸಿದ ವಾಯುದಾಳಿಯಲ್ಲಿ 33 ಮಂದಿ ಮೃತಪಟ್ಟಿದ್ದಾರೆ. ಮೃತರೆಲ್ಲ ಹಮಾಸ್‌ ಉಗ್ರರು ಎಂದು ಇಸ್ರೇಲ್‌ ಹೇಳಿರುವುದಾಗಿ ರಾಯಿಟರ್ಸ್‌ ವರದಿ ಮಾಡಿದೆ. ಆದರೆ, ಪ್ರಸ್ತುತ ನಡೆಯುತ್ತಿರುವ ಯುದ್ಧದಿಂದಾಗಿ ನೆಲೆ ಕಳೆದುಕೊಂಡಿರುವವರಿಗೆ ಶಾಲಾ ಆವರಣದಲ್ಲಿ ಆಶ್ರಯ ನೀಡಲಾಗಿತ್ತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಗಾಜಾದ ಕೇಂದ್ರ ಭಾಗದಲ್ಲಿರುವ ನುಸೀರತ್‌ನಲ್ಲಿ ಇರುವ ವಿಶ್ವಸಂಸ್ಥೆಯ ಶಾಲೆಯಲ್ಲಿ ಹಮಾಸ್‌ ಉಗ್ರರು ಅಡಗಿದ್ದರು. 8 ತಿಂಗಳ ಹಿಂದೆ (ಇಸ್ರೇಲ್‌ ಮೇಲೆ ನಡೆಸಲಾದ ದಾಳಿಯ ಭಾಗವಾಗಿರುವ ಹಮಾಸ್‌ ಬಂಡುಕೋರರು ಶಾಲಾ ಆವರಣದ ಉಗ್ರರ ನೆಲೆಯಲ್ಲಿ ಇದ್ದರು ಎಂದು ಇಸ್ರೇಲ್‌ ಪ್ರತಿಪಾದಿಸಿದೆ. ನಾಗರಿಕರ ಸಾವು-ನೋವು ಆಗದಂತೆ ವಾಯುದಾಳಿಗೂ ಮುನ್ನ ಎಚ್ಚರದ ಕ್ರಮ ಕೈಗೊಳ್ಳಲಾಗಿದೆ ಎಂದೂ ಹೇಳಿದೆ ಹಮಾಸ್‌ ಸರ್ಕಾರಿ ಮಾಧ್ಯಮ ಕೇಂದ್ರದ ನಿರ್ದೇಶಕ ಇಸ್ಮಾಯಿಲ್‌ ಅಲ್‌-ಥಾವಬ್ತಾ ಅವರು, ಇಸ್ಲೇಲ್‌ ಹೇಳಿಕೆಯನ್ನು ಅಲ್ಲಗಳೆದಿದ್ದಾರೆ. ‘ಸ್ಥಳಾಂತರಗೊಂಡಿದ್ದ ನಾಗರಿಕೆ ಮೇಲೆ ನಡೆಸಿದ ಕ್ರೂರ ದಾಳಿಯನ್ನು ಸಮರ್ಥಿಸಿಕೊಳ್ಳಲು ಕಪೋಲಕಲ್ಪಿತ ಕಥೆ ಕಟ್ಟಲಾಗುತ್ತಿದೆ’ ಎಂದು ಆರೋಪಿಸಿದ್ದಾರೆ. ಕದನ ವಿರಾಮಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಒತ್ತಡಗಳು ಹೆಚ್ಚಾಗುತ್ತಿದೆ.…

Read More

ಜರ್ಮನಿಯು ಅಫ್ಘಾನಿಸ್ತಾನ ಹಾಗೂ ಸಿರಿಯ ಸೇರಿದಂತೆ ದೇಶದಲ್ಲಿ ಆಶ್ರಯ ಪಡೆದಿರುವ ಕ್ರಿಮಿನಲ್ ಹಿನ್ನೆಲೆಯ ವಲಸಿಗರನ್ನು ಗಡಿಪಾರು ಮಾಡಲಿದೆಯೆಂದು ಚಾನ್ಸಲರ್ ಓಲಾಫ್ ಶೋಲ್ಝ್ ತಿಳಿಸಿದ್ದಾರೆ. ಜರ್ಮನ್ ಸಂಸತ್‌ನಲ್ಲಿ ಗುರುವಾರ ಭದ್ರತೆಯನ್ನು ಕೇಂದ್ರಬಿಂದುವಾಗಿಸಿ ಮಾಡಿದ ಭಾಷಣದಲ್ಲಿ ಈ ವಿಷಯವನ್ನು ಅವರು ತಿಳಿಸಿದರು.  ಕಳೆದ ವಾರ ಅಫ್ಘಾನ್ ವಲಸಿಗನೊಬ್ಬ ನಡೆಸಿದ ದಾಳಿಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಮೃತಪಟ್ಟ ಘಟನೆಯ ಬಳಿಕ ಈ ಕ್ರಮದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆಶ್ರಯ, ರಕ್ಷಣೆ ಕೋರಿ ಬಂದ ವ್ಯಕ್ತಿಯು ಅತ್ಯಂತ ಗಂಭೀರವಾದ ಅಪರಾಧಗಳನ್ನು ಎಸಗಿದಾಗ ನನಗೆ ಆಕ್ರೋಶ ಬರುತ್ತದೆ. ಇಂತಹ ಕ್ರಿಮಿನಲ್‌ಗಳನ್ನು ಗಡಿಪಾರು ಮಾಡಲಾಗುವುದು ಎಂದು ಚಾನ್ಸಲರ್ ಹೇಳಿದರು. 29 ವರ್ಷದ ಪೊಲೀಸ್ ಅಧಿಕಾರಿಯನ್ನು ಹತ್ಯೆಗೈದ ಆರೋಪಿಯು 25 ವರ್ಷದ ಅಫ್ಘಾನ್ ನಿರಾಶ್ರಿತನಾಗಿದ್ದು, ಆತ 2014ರಲ್ಲಿ ಆಶ್ರಯ ಕೋರಿ ಜರ್ಮನಿಗೆ ವಲಸೆ ಬಂದಿದ್ದ ಎನ್ನಲಾಗಿದೆ.

Read More

ಹಕ್ಕಿಜ್ವರಕ್ಕೆ ವಿಶ್ವದಲ್ಲೇ ಮೊದಲ ವ್ಯಕ್ತಿ ಮೆಕ್ಸಿಕೋದಲ್ಲಿ ಮೃತಪಟ್ಟಿದ್ದಾರೆ. ಕೊರೊನಾಗಿಂತ ಹೆಚ್ಚು ಅಪಾಯಕಾರಿ ಎಂದು ಹೇಳುತ್ತಿರುವ ಹಕ್ಕಿಜ್ವರಅನೇಕ ದೇಶಗಳಲ್ಲಿ ವೇಗವಾಗಿ ಹರಡುತ್ತಿದೆ. ಹಸುಗಳು ಮತ್ತು ಹಾಲಿನ ಮೂಲಕ ಮನುಷ್ಯರಿಗೆ ಹರಡುವ ಪ್ರಕರಣಗಳು ಅಮೆರಿಕದ ಅನೇಕ ನಗರಗಳಲ್ಲಿ ವರದಿಯಾಗಿದೆ. H5N1 ವೈರಸ್ ಅನ್ನು ಹಕ್ಕಿ ಜ್ವರ ಎಂದ ಕರೆಯಲಾಗುತ್ತಿದೆ. ಈ ತಿಂಗಳ ಆರಂಭದಲ್ಲಿ , ಆಂಧ್ರಪ್ರದೇಶ (ನೆಲ್ಲೂರು ಜಿಲ್ಲೆ), ಮಹಾರಾಷ್ಟ್ರ (ನಾಗ್ಪುರ ಜಿಲ್ಲೆ), ಜಾರ್ಖಂಡ್ (ರಾಂಚಿ ಜಿಲ್ಲೆ) ಮತ್ತು ಕೇರಳ (ಆಲಪ್ಪುಳ, ಕೊಟ್ಟಾಯಂ ಮತ್ತು ಪತ್ತನಂತಿಟ್ಟ ಜಿಲ್ಲೆಗಳು) ನಾಲ್ಕು ರಾಜ್ಯಗಳಿಗೆ ಎಚ್ಚರಿಕೆ ನೀಡಲಾಗಿದೆ. ಮೆಕ್ಸಿಕೋದಲ್ಲಿ 59 ವರ್ಷದ ವ್ಯಕ್ತಿಯೊಬ್ಬರು ಹಕ್ಕಿ ಜ್ವರದಿಂದ ಸಾವನ್ನಪ್ಪಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ  ತಿಳಿಸಿದೆ. ಆದಾಗ್ಯೂ, ವ್ಯಕ್ತಿಗೆ ಹೇಗೆ ಸೋಂಕು ತಗುಲಿತು ಎಂಬುದನ್ನು ಯುಎನ್ ಏಜೆನ್ಸಿ ಹೇಳಿಲ್ಲ. ಜ್ವರ, ಉಸಿರಾಟದ ತೊಂದರೆ ಮತ್ತು ಅತಿಸಾರದಂತಹ ರೋಗಲಕ್ಷಣಗಳಿಂದ ರೋಗಿಯನ್ನು ಏಪ್ರಿಲ್ 17 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗಿದೆ ಜೂ.5ರಂದು ಮೃತಪಟ್ಟಿದ್ದಾರೆ. ಮೆಕ್ಸಿಕೋದ ಆರೋಗ್ಯ ಸಚಿವಾಲಯವು ವ್ಯಕ್ತಿಯಿಂದ ವ್ಯಕ್ತಿಗೆ…

Read More