ಬೆಂಗಳೂರು:- ಸಹಾಯಕ್ಕೆ ಬಂದವರ ಮೇಲೆ ಹಲ್ಲೆಗೆ ಯತ್ನಿಸಿದ ವ್ಯಕ್ತಿಗೆ ಮಾರಾಕಾಸ್ತ್ರದಿಂದ ಗ್ಯಾಂಗ್ ಒಂದು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಗರದ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯ ಮುನೇಶ್ವರ ನಗರದಲ್ಲಿ ನಿನ್ನೆ ರಾತ್ರಿ 11ಗಂಟೆ ಸುಮಾರಿಗೆ ಜರುಗಿದೆ.
IPL 2025: ಇಂದು ಐಪಿಎಲ್ ರೀಟೆನ್ಶನ್ ಪಟ್ಟಿ ರಿಲೀಸ್: ಅಭಿಮಾನಿಗಳ ಚಿತ್ತ ಬಿಸಿಸಿಐನತ್ತ!
ಅರುಣ್ ಎಂಬಾತನ ಮೇಲೆ ಮಾರಾಣಾಂತಿಕ ಹಲ್ಲೆ ನಡೆದಿದ್ದು, ಸಂಜೀವಿನಗರದ ನಿವಾಸಿಯಾಗಿರುವ ಅರುಣ್ ಹೆಗ್ಗನಹಳ್ಳಿಯಲ್ಲಿ ಮೊದಲು ಗಲಾಟೆ ಮಾಡಿಕೊಂಡಿದ್ನಂತೆ. ಮುನೇಶ್ವರ ನಗರ ಬಳಿ ಬರ್ತಿದ್ದಾಗ ಕೆಲ ಹುಡುಗರು ಅರುಣ್ ನನ್ನ ಫಾಲೋ ಮಾಡಿದ್ದಾರೆ.
ಈ ವೇಳೆ ಗಾಬರಿಯಲ್ಲಿ ಸಹಾಯಕ್ಕೆ ಬಂದ ಯುವಕರ ಮೇಲೆ ಅರುಣ್ ಹಲ್ಲೆಗೆ ಮುಂದಾಗಿದ್ದ. ಈ ವೇಳೆ ಅರುಣ್ ಮೇಲೆ ಮೂರ್ನಾಲ್ಕು ಜನ ಯುವಕರು ಲಾಂಗು ಮತ್ತು ಟೈಲ್ಸ್ ನಿಂದ ಹಲ್ಲೆ ಮಾಡಿದ್ದಾರೆ.
ತಕ್ಷಣ ಹೊಯ್ಸಳ ಸಿಬ್ಬಂದಿ ಸ್ಥಳಕ್ಕೆ ಹೋಗಿ ಗಾಯಾಳು ಅರುಣ್ ನನ್ನ ಆಸ್ಪತ್ರೆಗೆ ಸಾಗಿಸಿದ್ದಾರೆ. ಬ್ಯಾಡರಹಳ್ಳಿ ಠಾಣೆಯಲ್ಲಿ ಪ್ರಕರ ದಾಖಲು, ತನಿಖೆ ಮುಂದುವರಿದಿದೆ.