ಇಡೀ ವಿಶ್ವದ ಕ್ರಿಕೆಟ್ ಅಭಿಮಾನಿಗಳು ಕಾದು ಕುಳಿತಿದ್ದ ಗಳಿಗೆ ಬಂದೇ ಬಿಡ್ತು. ಇಂದು ಐಪಿಎಲ್ ರೀಟೆನ್ಶನ್ ಪಟ್ಟಿ ರಿಲೀಸ್ ಆಗಲಿದ್ದು, ಅಭಿಮಾನಿಗಳ ಚಿತ್ತ ಬಿಸಿಸಿಐನತ್ತ ನೆಟ್ಟಿದೆ.
ನಮ್ಮ ಸರ್ಕಾರದ ವಿರುದ್ಧ ವಿಪಕ್ಷಗಳು ಸುಳ್ಳು ಸುದ್ದಿ ಹರಡಿಸುತ್ತಿವೆ: HK ಪಾಟೀಲ್!
ತಾವು ಉಳಿಸಿಕೊಂಡ ಹಾಗೂ ತಾವು ಕೈ ಬಿಟ್ಟ ಆಟಗಾರರ ಪಟ್ಟಿಯನ್ನು ಐಪಿಎಲ್ನ 10 ತಂಡಗಳ ಮಾಲೀಕರು ಸಂಜೆ 4:30 ರಿಂದ 5:30 ಗಂಟೆ ಒಳಗೆ ಪ್ರಕಟಿಸಲಿದ್ದಾರೆ. ಜಿಯೋ ಸಿನಿಮಾದಲ್ಲಿ ನೇರ ಪ್ರಸಾರ ಕಾರ್ಯಕ್ರಮ ನಡೆಯಲಿದೆ. ಈ ಬಾರಿ ಬಿಸಿಸಿಐ 6 ಆಟಗಾರರನ್ನು ಮಾತ್ರ ಉಳಿಸಿಕೊಳ್ಳಲು ಅವಕಾಶ ನೀಡಿದ್ದು, ರೀಟೆನ್ಶನ್ ಪಾಲಿಸಿ ಕೆಲವು ತಂಡಗಳಿಗೆ ಕಬ್ಬಿಣದ ಕಡಲೆ ಆಗಿದೆ. ತಂಡದಲ್ಲಿ ಬಹುತೇಕ ಸ್ಟಾರ್ ಆಟಗಾರರು ಇದ್ದು ಕೇವಲ ಆರು ಜನರನ್ನು ಉಳಿಸಿಕೊಳ್ಳುವುದು ದೊಡ್ಡ ಸವಾಲಾಗಿದೆ.
ಐಪಿಎಲ್ನ ಎಲ್ಲಾ ಫ್ರಾಂಚೈಸಿಗಳು ಇಂದು ಉಳಿಸಿಕೊಳ್ಳಬಹುದಾದ ಆಟಗಾರರ ಪಟ್ಟಿ ಬಿಡುಗಡೆ ಮಾಡಲು ಇಂದು ಕೊನೆಯದಿನವಾಗಿದೆ.
ಇನ್ನು ತಂಡದಲ್ಲಿ ಉಳಿಸಿಕೊಳ್ಳುವ ಆಟಗಾರರ ಬಗ್ಗೆ ಈಗಾಗಲೇ ಮಾರ್ಗ ಸೂಚಿಯನ್ನು ಬಿಡುಗಡೆ ಮಾಡಿದೆ. ಅಂದರೆ ಆರು ಜನರನ್ನು ಉಳಿಸಿಕೊಳ್ಳುವ ತಂಡದಲ್ಲಿ ಗರಿಷ್ಠ ಇಬ್ಬರು ವಿದೇಶಿ ಆಟಗಾರನಿಗೆ ಉಳಿಸಿಕೊಳ್ಳುವ ಅವಕಾಶ ಇದ್ದು, ಇಬ್ಬರು ಅನ್ ಕ್ಯಾಪ್ಡ್ ಪ್ಲೇಯರ್ಗಳನ್ನು ತಂಡ ಉಳಿಸಿಕೊಳ್ಳಬಹುದು. ಅಲ್ಲದೇ ಮಾಲೀಕರು ರೈಟ್ ಟು ಮ್ಯಾಚ್ ಕಾರ್ಡ್ ಅವಕಾಶದ ಲಾಭವನ್ನು ಸಹ ಐಪಿಎಲ್ ಹರಾಜಿನಲ್ಲಿ ಪಡೆಯಬಹುದು. ಕೇವಲ ಒಂದು ಕಾರ್ಡ್ ಬಳಕೆಗೆ ಮಾತ್ರ ಅವಕಾಶ ನೀಡಲಾಗಿದೆ.
ಬಿಸಿಸಿಐ ಆಟಗಾರರಿಗೆ ಎಷ್ಟು ಹಣವನ್ನು ನೀಡಬೇಕು ಎಂಬುದನ್ನು ಸಹ ಸ್ಪಷ್ಟವಾಗಿದೆ ತಿಳಿಸಿದೆ. ಮೊದಲ ಮತ್ತು 4ನೇ ಆಯ್ಕೆಯ ಆಟಗಾರನಿಗೆ ತಲಾ 18 ಕೋಟಿ ರೂ. ನೀಡಬಹುದಾಗಿದೆ. 2 ಮತ್ತು 5ನೇ ಆಯ್ಕೆಯ ಆಟಗಾರನಿಗೆ ತಲಾ 14 ಕೋಟಿ ರೂ. ಹಾಗೂ 3ನೇ ಆಯ್ಕೆಯ ಆಟಗಾರನಿಗೆ 11 ಕೋಟಿ ರೂ. ನೀಡಿ ತಂಡದಲ್ಲಿ ಉಳಿಸಿಕೊಳ್ಳಬಹುದಾಗಿದೆ. ಅಲ್ಲದೇ ಅನ್ ಕ್ಯಾಪ್ಡ್ ಆಟಗಾರರಿಗೆ 4 ಕೋಟಿ ನೀಡಿ ತಂಡದಲ್ಲಿ ಉಳಿಸಿಕೊಳ್ಳಬಹುದಾಗಿದೆ.