ಟಾಲಿವುಡ್ ಬ್ಯೂಟಿ ತಮನ್ನಾ ಭಾಟಿಯಾ ಸಿನಿಮಾಗಳಿಗಿಂತ ಹೆಚ್ಚಾಗಿ ಐಟಂ ಸಾಂಗ್ ಮೂಲಕವೇ ಸದ್ದು ಮಾಡ್ತಿದ್ದಾರೆ. ಜೈಲರ್ ಸಿನಿಮಾದ ಬಳಿಕ ನಟಿ ಮತ್ತೊಂದು ಸಿನಿಮಾದ ಸ್ಪೆಷಲ್ ಸಾಂಗ್ ಗೆ ಸೊಂಟ ಬಳುಕಿಸಿದ್ದಾರೆ.
ಈ ಮೊದಲು ‘ಕೆಜಿಎಫ್’, ‘ಜೈಲರ್’ ಮುಂತಾದ ಸಿನಿಮಾಗಳ ಸ್ಪೆಷಲ್ ಸಾಂಗ್ಗಳಲ್ಲಿ ಕುಣಿದಿದ್ದ ತಮನ್ನಾ ಇದೀಗ ‘ಸ್ತ್ರೀ 2’ ಸಿನಿಮಾದ ಐಟಂ ಸಾಂಗ್ನಲ್ಲಿ ಕಣ್ಮನ ಸೆಳೆಯುವಂತೆ ಡ್ಯಾನ್ಸ್ ಮಾಡಿದ್ದಾರೆ. ಈ ಸಿನಿಮಾದ ಮೇಲೆ ಪ್ರೇಕ್ಷಕರಿಗೆ ನಿರೀಕ್ಷೆ ಹೆಚ್ಚಾಗಲು ಈ ಸಾಂಗ್ ಕಾರಣ ಆಗಿದೆ.
ಈ ಹಿಂದೆ ರಜನಿಕಾಂತ್ ನಟನೆಯ ಜೈಲರ್ ಸಿನಿಮಾದಲ್ಲಿ ತಮನ್ನಾ ಸ್ಪೆಷಲ್ ಹಾಡಿಗೆ ಡ್ಯಾನ್ಸ್ ಮಾಡಿದ್ದರು.
ಅಮರ್ ಕೌಶಿಕ್ ಅವರು ‘ಸ್ತ್ರೀ 2’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ದಿನೇಶ್ ವಿಜನ್ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಈ ಸಿನಿಮಾಗೆ ಭರ್ಜರಿ ಪ್ರಚಾರ ನೀಡಲಾಗುತ್ತಿದೆಅಂತೆಯೇ ಈ ಸ್ತ್ರೀ 2 ನಲ್ಲೂ ತಮನ್ನಾ ಸೊಂಟ ಬಳುಕಿಸಿದ್ದು ಈ ಹಾಡು ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಆಗಸ್ಟ್ 15ರಂದು ‘ಸ್ತ್ರೀ 2’ ಸಿನಿಮಾ ಬಿಡುಗಡೆ ಆಗಲಿದೆ. ಈ ಚಿತ್ರದಲ್ಲಿ ಶ್ರದ್ಧಾ ಕಪೂರ್, ರಾಜ್ಕುಮಾರ್ ರಾವ್, ಅಪಾರಶಕ್ತಿ ಖುರಾನಾ, ಅಭಿಷೇಕ್ ಬ್ಯಾನರ್ಜಿ, ಪಂಕಜ್ ತ್ರಿಪಾಠಿ ಮುಂತಾದವರು ನಟಿಸಿದ್ದಾರೆ.
ಈಗ ತಮನ್ನಾ ಭಾಟಿಯಾ ಇವತ್ತಿನ ರಾತ್ರಿ ವಿಧ್ವಂಸದ ರಾತ್ರಿ.. ಅನ್ನೋ ಅರ್ಥದ ಹಾಡಿನಲ್ಲಿ ಕುಣಿದಿದ್ದಾರೆ. ಇದು ಕೂಡ ಕಾವಾಲಯ್ಯ ರೀತಿಯಲ್ಲೇ ಜನಪ್ರಿಯವಾಗಬಹುದು ಎನ್ನುವ ನಿರೀಕ್ಷೆ ಇಟ್ಟಿದ್ದಾರೆ.
2018ರಲ್ಲಿ ‘ಸ್ತ್ರೀ’ ಸಿನಿಮಾ ಬಂದಿತ್ತು. ಆ ಚಿತ್ರದಲ್ಲಿ ನೋರಾ ಫತೇಹಿ ಅವರು ಐಟಂ ಡ್ಯಾನ್ಸ್ ಮಾಡಿದ್ದರು. ಈಗ ಸೀಕ್ವೆಲ್ನಲ್ಲಿ ಆ ಅವಕಾಶ ತಮನ್ನಾ ಭಾಟಿಯಾಗೆ ಸಿಕ್ಕಿದೆ. ಸಿಕ್ಕ ಅವಕಾಶವನ್ನು ತಮನ್ನಾ ಅವರು ಚೆನ್ನಾಗಿ ಬಳಸಿಕೊಂಡಿದ್ದಾರೆ.