ಹಿರಿಯ ನಟಿ ಲಕ್ಷ್ಮಿ ಇಂದಿಗೂ ಲಕ್ಷಾಂತರ ಅಭಿಮಾನಿಗಳ ನೆಚ್ಚಿನ ನಟಿ. ಲಕ್ಷ್ಮಿ ನಟಿಸಿರುವ ಅದೇಷ್ಟೋ ಸಿನಿಮಾಗಳು ಇಂದಿಗೂ ಕನ್ನಡ ಸಿನಿ ಪ್ರೇಕ್ಷಕರಿಗೆ ಅಚ್ಚುಮೆಚ್ಚು. ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ನಟಿಯ ರಿಯಲ್ ಲೈಫ್ ನಲ್ಲಿ ಮಾತ್ರ ಸಾಕಷ್ಟು ವಿವಾದಗಳೇ ಕೇಳಿ ಬಂದಿತ್ತು.
80ರ ದಶಕದಲ್ಲಿ ಬಹು ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದ ಲಕ್ಷ್ಮಿ ‘ಜೂಲಿ’ ಸಿನಿಮಾ ರಿಲೀಸ್ ಆದ ಬಳಿಕ ಜೂಲಿ ಲಕ್ಷ್ಮಿ ಅಂತಲೇ ಪ್ರಸಿದ್ಧರಾದರು.
ಹಿಂದಿ ಭಾಷೆಯೊಂದನ್ನು ಬಿಟ್ಟು ಸೌತ್ ಸಿನಿರಂಗದಲ್ಲಿ ಲಕ್ಷ್ಮಿ ನಟಿಸಿ ಖ್ಯಾತಿ ಗಳಿಸಿದ್ದಾರೆ. ಲಕ್ಷ್ಮಿ ನಟಿಸಿರುವ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯ ಬಹುತೇಕ ಸಿನಿಮಾಗಳು ಸೂಪರ್ ಹಿಟ್ ಆಗಿವೆ.
1968ರಲ್ಲಿ ಡಾ.ರಾಜ್ ಕುಮಾರ್ ಅಭಿನಯದ ಗೋವಾದಲ್ಲಿ ಸಿ.ಐ.ಡಿ 999 ಚಿತ್ರದ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟರು. ಕನ್ನಡ ಸಿನಿ ಪ್ರೇಮಿಗಳ ಮನಗೆದ್ದರು. ನಾ ನಿನ್ನ ಮರೆಯಲಾರೆ ಮತ್ತು ಒಲವು ಗೆಲವು, ಚಂದನಗೊಂಬೆ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ಲಕ್ಷ್ಮಿ ನಟಿಸಿದ್ದಾರೆ.
ಸಿನಿಮಾ ಹಿನ್ನಲೆ ಕುಟುಂಬದಿಂದ ಸಿನಿ ಕ್ಷೇತ್ರಕ್ಕೆ ಕಾಲಿಟ್ಟ ನಟಿ ತಮ್ಮ ನಟನೆ ಮತ್ತು ಸೌಂದರ್ಯದ ಮೂಲಕ ಬಹುಬೇಗನೆ ಯಶಸ್ಸು ಕಂಡರು. ನಂತರ ಭಾಸ್ಕರನ್ ಎಂಬುವವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇವರಿಗೆ ಐಶ್ವರ್ಯಾ ಎಂಬ ಮಗಳು ಕೂಡ ಜನಿಸಿದ್ದರು. ಆಕೆ ಕೂಡ ನಟಿಯಾಗಿ ಉತ್ತಮ ಹೆಸರು ಗಳಿಸಿದ್ದಾರೆ. ಆದರೆ ಭಾಸ್ಕರ್ ಜೊತೆಗಿನ ಮದುವೆ ಹೆಚ್ಚು ದಿನಗಳ ಕಾಲ ಉಳಿಯಲಿಲ್ಲ.
1974 ರಲ್ಲಿ ಮೊದಲ ಪತಿಯಿಂದ ವಿಚ್ಚೇದನ ಪಡೆದ ನಟಿ ಲಕ್ಷ್ಮಿ ಅವರು 1975 ರಲ್ಲಿ ಮಲಯಾಳಂ ಚಿತ್ರ ನಿರ್ಮಾಪಕ ಮತ್ತು ನಟ ಮೋಹನ್ ಶರ್ಮಾರವರನ್ನು ಮದುವೆಯಾದರು. 5 ವರ್ಷದ ದಾಂಪತ್ಯದ ನಂತರ ವಿಚ್ಚೇದನ ಪಡೆದುಕೊಂಡರು.
ಕೆಲ ವರ್ಷಗಳ ಹಿಂದೆ ಮೋಹನ್ ಶರ್ಮಾ ಲಕ್ಷ್ಮಿ ಜೊತೆಗಿನ ಮದುವೆ ಬಗ್ಗೆ ಮಾತಾಡಿದ್ರು. ಇಬ್ಬರು ಒಮ್ಮೆ ಶಾಪಿಂಗ್ ಮಾಡಲು ಹೊರಗೆ ಹೋಗಿ ಇಡೀ ದಿನ ಸುತ್ತಾಡಿದ್ವಿ. ಶಾಪಿಂಗ್ಗಾಗಿ ಎಲ್ಲೆಂದರಲ್ಲಿ ಕರೆದುಕೊಂಡು ಹೋದೆ. ಲಕ್ಷ್ಮಿಯೇ ನನಗೆ ಪ್ರಪೋಸ್ ಮಾಡಿದ್ಲು ನನಗೆ ಏನು ಹೇಳಬೇಕು ಎಂದು ತಿಳಿಯಲಿಲ್ಲ. ನಿಮ್ಮ ಜೊತೆ ನಾಯಿಯಂತೆ ಇರುವೆ ಎಂದಳು ನಟಿ ಲಕ್ಷ್ಮಿ, ಬಳಿಕ ಬೆಳಿಗ್ಗೆ ಲಕ್ಷ್ಮಿಗೆ ಕರೆ ಮಾಡಿದೆ. ನಾವು ಯಾಕೆ ಮದುವೆಯಾಗಬೇಕು ಎಂದು ಕೇಳಿದಳು. ಬಳಿಕ ಮದುವೆಯಾದೆ ಆದ್ರೆ ನಮ್ಮ ಸಂಬಂಧ ಹೆಚ್ಚು ದಿನ ಉಳಿಯಲಿಲ್ಲ ಎಂದು ಮೋಹನ್ ಶರ್ಮಾ ಹೇಳಿದ್ರು.
ಮೋಹನ್ ಶರ್ಮಾ ಅವರಿಂದ ದೂರವಾದ ಬಳಿಕ 1987ರಲ್ಲಿ ಚಿತ್ರ ನಿರ್ದೇಶಕ ಶಿವಚಂದ್ರನ್ ಜೊತೆ ವಿವಾಹವಾದ್ರು. ಮೂರು ಮದುವೆಯಾದ ನಟಿ ಲಕ್ಷ್ಮಿ ಭಾರೀ ಟೀಕೆಗೆ ಗುರಿಯಾಗಿದ್ದಾರೆ. ಲಕ್ಷ್ಮಿ ಬಗ್ಗೆ ಅನೇಕ ಟ್ರೋಲ್ ಆದವು. ಆದರೆ ಯಾವುದಕ್ಕೂ ಅಂಜದ ನಟಿ ಲಕ್ಷ್ಮಿ ಎಲ್ಲವನ್ನು ಎದುರಿಸಿ ದೈರ್ಯವಾಗಿ ನಿಂತಿದ್ದಾರೆ.
ಶಿವಚಂದ್ರನ್ ಅವರನ್ನು ಮದುವೆಯಾದ ಬಳಿಕ ಲಕ್ಷ್ಮಿ ಒಂದು ಹೆಣ್ಣು ಮಗುವನ್ನು ದತ್ತು ಪಡೆದರು. ಮೂರನೇ ಪತಿ ಶಿವಚಂದ್ರನ್ ಜೊತೆ ಖುಷಿಯಿಂದ ಬಾಳ್ವೆ ನಡೆಸುತ್ತಿದ್ದೇನೆ ಎಂದು ನಟಿ ಲಕ್ಷ್ಮಿ ಹೇಳಿದ್ರು. ಮೂರು ಮದುವೆಯಾದ ಲಕ್ಷ್ಮಿ ಮೂರನೇ ಪತಿಯ ಜೊತೆ ನೆಮ್ಮದಿಯ ಬದುಕು ಕಂಡು ಕೊಂಡಿದ್ದಾರೆ.