ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಮಿಂಚುತ್ತಿರುವ ನಟಿ ಹಾಗೂ ಗಾಯಕಿ ಚೈತ್ರಾ ಆಚಾರ ದಿನದಿಂದ ದಿನಕ್ಕೆ ಸಿಕ್ಕಾಪಟ್ಟೆ ಬೋಲ್ಡ್ ಆಗುತ್ತಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಹಾಟ್ ಹಾಟ್ ಫೋಟೋಗಳನ್ನು ಶೇರ್ ಮಾಡುವ ನಟಿ ಇದೀಗ ಮತ್ತಷ್ಟು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಇದೀಗ ಚೈತ್ರಾರ ಲುಕ್ ಬಾಲಿವುಡ್ ಬೆಡಗಿಯರ ರೇಂಜ್ ನಲ್ಲಿದೆ.
ತಮ್ಮ ಉತ್ತಮ ಅಭಿನಯದಿಂದಲೇ ನಟಿ ಚೈತ್ರಾ ಆಚಾರ್ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ವಿಶೇಷ ಪಾತ್ರಗಳ ಮೂಲಕ ನಟಿ ಚೈತ್ರಾ ಆಚಾರ ಪ್ರೇಕ್ಷಕರ ಮನಗೆದ್ದಿದ್ದಾರೆ. ಜೊತೆಗೆ ಆಗಾಗ ಬೋಲ್ಡ್ ಫೋಟೋಶೂಟ್ ಮೂಲಕ ಚೈತ್ರಾ ಆಚಾರ್ ಸುದ್ದಿ ಆಗುತ್ತಿರುತ್ತಾರೆ.
ಮಹಿರಾ ಸಿನಿಮಾದ ಮೂಲಕ ನಟನೆಗೆ ಎಂಟ್ರಿ ಕೊಟ್ಟ ಚೈತ್ರಾ ಆಚಾರ ಬಳಿಕ ತಲೆ ದಂಡ, ಗಿಲ್ಕಿ, ಅದೃಶ್ಯ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಟೋಬಿ ಮತ್ತು ಸಪ್ತಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ಅದ್ಭುತವಾಗಿ ನಟಿಸುವ ಮೂಲಕ ಗಮನ ಸೆಳೆದಿದ್ದಾರೆ.
ನಟಿ ಚೈತ್ರಾ ಅಧ್ಬುತ ಗಾಯಕಿ ಕೂಡ ಹೌದು, ಇವರು ಗರುಡ ಗಮನ ವೃಷಭ ವಾಹನ ಚಿತ್ರದ ಸೋಜುಗಾದ ಸೂಜು ಮಲ್ಲಿಗೆ ಹಾಡು ಹಾಡುವ ಮೂಲಕ ಫಿಲಂಫೇರ್ ಅವಾರ್ಡ್ ಸಹ ಪಡೆದಿದ್ದರು. ಆದರೆ ಈ ನಟಿ ಹೆಚ್ಚು ಸುದ್ದಿಯಾಗಿದ್ದು ಮಾತ್ರ ತಮ್ಮ ಹಾಟ್ ನೆಸ್ ನಿಂದಲೇ.
ಇತ್ತೀಚೆಗೆ ವೈಟ್ ಕಲರ್ ಸ್ಟೈಲಿಶ್ ಡ್ರೆಸ್ ಧರಿಸಿದ ಚೈತ್ರಾ ಜೆ ಆಚಾರ್, ಕಿವಿಗೆ ಚೆಂದದ ಕಿವಿಯೋಲೆ ತೊಟ್ಟು, ಕೈಯಲ್ಲಿ ಪುಟ್ಟ ಹ್ಯಾಂಡ್ ಬ್ಯಾಗ್ ಹಿಡಿದು ಬೋಲ್ಡ್ ಆಗಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಚೈತ್ರಾ ಟಾಪ್ ಡ್ರೆಸ್ ಫುಲ್ ಡೀಪಾಗಿದ್ದು, ಫೋಟೋಗಳಲ್ಲಿ ನಟಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.
ಈ ಹಿಂದೆ ತಮ್ಮ ಬೋಲ್ಡ್ ಫೋಟೋಗಳಿಗೆ ನೆಟ್ಟಿಗರು ಕೆಟ್ಟದಾಗಿ ಕಾಮೆಂಟ್ ಮಾಡಿದ್ದರಿಂದ ಕೋಪಗೊಂಡಿದ್ದ ಚೈತ್ರಾ, ಕ್ಲಾಸ್ ಕೂಡ ತೆಗೆದುಕೊಂಡಿದ್ರು. ಆದ್ರೆ ಬೋಲ್ಡ್ ಫೋಟೋ ಶೂಟ್ ಮಾಡಿಸೋದು ಮಾತ್ರ ಕಡಿಮೆ ಮಾಡಿಲ್ಲ. ಕೆಟ್ಟ ಕಾಮೆಂಟ್ ಗಳಿಂದ ದೂರ ಉಳಿಯಲು ಕಾಮೆಂಟ್ ಸೆಕ್ಷನ್ ರಿಸ್ಟ್ರಿಕ್ಟ್ ಮಾಡಿದ್ದಾರೆ ನಟಿ.
ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ಟೋಬಿ ಚೆಲುವೆ ಚೈತ್ರಾ ಆಚಾರ್ ಇದೀಗ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನಟಿಯ ಫೋಟೋಗೆ ಲೈಕ್ಗಳ ಸುರಿಮಳೆ ಆಗಿದೆ. ಬಾಲಿವುಡ್ ನಟಿಯರಿಗಿಂತ ಕಡಿಮೆ ಇಲ್ಲದಂತೆ ಚೈತ್ರಾ ಫೋಟೋಶೂಟ್ನಲ್ಲಿ ಮಿಂಚಿದ್ದಾರೆ.
ಚೈತ್ರಾ ಆಚಾರ್ ಸದ್ಯ ಉತ್ತರಕಾಂಡ ಚಿತ್ರ ಮಾಡುತ್ತಿದ್ದಾರೆ. ಇದರಲ್ಲಿ ಲಚ್ಚಿ ಅನ್ನುವ ವಿಭಿನ್ನ ರೋಲ್ ಮಾಡುತ್ತಿದ್ದಾರೆ. ಉತ್ತರ ಕರ್ನಾಟಕದ ಹೆಣ್ಣುಮಗಳಾಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ.