ಅರ್ಜುನ್ ಸರ್ಜಾ ಮಗಳು ಐಶ್ವರ್ಯಾ ತಮಿಳು ನಟ ರಾಮಯ್ಯ ಅವರ ಪುತ್ರ ಉಮಾಪತಿ ರಾಮಯ್ಯ ಜೊತೆ ಹಸೆಮಣೆ ಏರಿದ್ದಾರೆ. ಜೂನ್ 10ರಂದು ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ನಟಿ ಮದುವೆಯ ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದಾರೆ.
ಐಶ್ವರ್ಯಾ ಅರ್ಜುನ್ ಕೆಂಪು ಬಣ್ಣದ ಸೀರೆಯಲ್ಲಿ ಮಿಂಚಿದರೆ, ಉಮಾಪತಿ ರಾಮಯ್ಯ ಪಂಚೆ ಶರ್ಟ್ ಶಲ್ಯ ಧರಿಸಿದ್ದರು.
ನಟಿ ಮದುವೆಯ ಫೋಟೋಸ್ ಶೇರ್ ಮಾಡಿ 10.06.2024 ಎಂದಷ್ಟೇ ಬರೆದಿದ್ದಾರೆ. ಅದರೊಂದಿಗೆ ಎವಿಲ್ ಐ ಎಮೋಜಿ ಹಾಕಿದ್ದಾರೆ. ದೃಷ್ಟಿಯಾಗದಂತೆ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಬಳಸುವ ಎಮೋಜಿ ಇದು.
ಉಂಗುರು ಹುಡುಕುವ ಶಾಸ್ತ್ರದ ಫೋಟೋವನ್ನು ಕೂಡಾ ನಟಿ ಶೇರ್ ಮಾಡಿದ್ದಾರೆ.
ಟಿವಿ ಕಾರ್ಯಕ್ರಮವೊಂದರಲ್ಲಿ ಪರಿಚಯವಾದ ಐಶ್ವರ್ಯಾ ಮತ್ತು ಉಮಾಪತಿ ಮೊದಲು ಸ್ನೇಹಿತರಾಗಿದ್ದರು. ಬಳಿಕ ಸ್ನೇಹ ಪ್ರೀತಿಗೆ ತಿರುಗಿತು. ಈ ವಿಚಾರವನ್ನು ಹಿರಿಯರ ಗಮನಕ್ಕೆ ತಂದಾಗ ಇಬ್ಬರ ಮನೆಯವರು ಮದುವೆಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಕಳೆದ ವರ್ಷ ಅಕ್ಟೋಬರ್ನಲ್ಲಿ ಅವರ ನಿಶ್ಚಿತಾರ್ಥ ಸಮಾರಂಭ ನಡೆದಿತ್ತು.
ಜೂನ್ 10 ರಂದು ಚೆನ್ನೈನ ಹನುಮಾನ್ ದೇವಸ್ಥಾನದಲ್ಲಿ ಕೆಲವೇ ಕೆಲವು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಇಬ್ಬರೂ ಮದುವೆ ನಡೆದಿದೆ. ಕನ್ನಡ ಸಿನಿಮಾಗಳಲ್ಲೂ ಮಿಂಚಿದ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರಿಗೆ ತೆಲುಗಿನಲ್ಲೂ ಒಳ್ಳೆಯ ಫಾಲೋಯಿಂಗ್ ಇದೆ. ತಮಿಳಿನಲ್ಲಿ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.
ಅರ್ಜುನ್ ಮಗಳು ಐಶ್ವರ್ಯಾ ನಾಯಕಿಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟರು. ಆದ್ರೆ ಆಕೆಗೆ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಸಿಗಲಿಲ್ಲ. ಇದುವರೆಗೆ ಐಶ್ವರ್ಯಾ ಅಭಿನಯದ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಯಶಸ್ಸು ಕಂಡಿಲ್ಲ. ಅರ್ಜುನ್ ಸರ್ಜಾ ಮಗಳು ಐಶ್ವರ್ಯಾ ಸರ್ಜಾ ಕೂಡ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ವಿಶಾಲ್ ಅಭಿನಯದ ಪಟ್ಟತ್ತು ಯಾನೈ ಚಿತ್ರದ ಮೂಲಕ ನಾಯಕಿಯಾಗಿ ಸಿನಿ ಲೋಕಕ್ಕೆ ಎಂಟ್ರಿ ಕೊಟ್ರು. ಬಳಿಕ ಕನ್ನಡದ ಪ್ರೇಮಬರಹ ಸಿನಿಮಾದಲ್ಲಿ ನಟಿಸಿದ್ದಾರೆ.
ಐಶ್ವರ್ಯಾ ಪತಿ ಉಮಾಪತಿ ಬೆಳ್ಳಿತೆರೆಯಲ್ಲಿ ನಾಯಕನಾಗಿ ಸದ್ದು ಮಾಡುತ್ತಿದ್ದಾರೆ. ಮನಿಯಾರ್ ಫ್ಯಾಮಿಲಿ, ತಿರುವಣಂ, ತಾನೆ ವಾಡಿ, ಅಡಗಪ್ಪತಟ್ಟು ಮನಜನಾಂಗಲೆ ಮುಂತಾದ ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ್ದರು.
ನಟ ಅರ್ಜುನ್ ಕೆಲವು ವರ್ಷಗಳ ಹಿಂದೆ ಸರ್ವೈವರ್ ಎಂಬ ರಿಯಾಲಿಟಿ ಗೇಮ್ ಶೋ ನಡೆಸಿಕೊಟ್ಟಿದ್ದರು. ಕಾರ್ಯಕ್ರಮದಲ್ಲಿ ಉಮಾಪತಿ ಕೂಡ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು. ಐಶ್ವರ್ಯಾ ಆಗಾಗ್ಗೆ ಶೋ ನೋಡಲು ಸೆಟ್ಗಳಿಗೆ ಭೇಟಿ ನೀಡುತ್ತಿದ್ದರು. ಎರಡೂ ಸಿನಿಮಾಗಳು ನಟಿಗೆ ಹೇಳಿಕೊಳ್ಳುವ ಸಕ್ಸಸ್ ನೀಡಿಲಿಲ್ಲ ಬಳಿಕ ಬಣ್ಣದ ಲೋಕದಿಂದ ದೂರದ ಐಶ್ವರ್ಯಾ, ನಟ ತಂಬಿ ರಾಮಯ್ಯ ಪುತ್ರ ಉಮಾಪತಿ ಜೊತೆ ಪ್ರೀತಿಬಿದ್ದಿದ್ರು. ಇಬ್ಬರ ಸ್ನೇಹ ಪ್ರೀತಿಯಾಗಿ ಇದೀಗ ಮದುವೆ ಮೂಲಕ ಜೋಡಿ ಒಂದಾಗುತ್ತಿದೆ.