ಕೆಲವೊಮ್ಮೆ ಮಕ್ಕಳು ಪೋಷಕರು ತಾವು ಕೇಳಿದ್ದು ಕೊಡಿಸಲು ನಿರಾಕರಿಸಿದ್ದಾಗ ಯಾವ ಮಟ್ಟಕ್ಕೆ ಬೇಕಾದರು ಹೋಗುತ್ತಾರೆ. ಅಂತೆಯೇ ಇಲ್ಲೊಬ್ಬ ಮಗಳು 680 ರೂಪಾಯಿ ಒಡವೆ ಕೊಳ್ಳಲು ತಾಯಿ ಹಣ ನೀಡದ ಕಾರಣ ತಾಯಿಯ 1.16 ಕೋಟಿ ಮೌಲ್ಯದ ಆಭರಣಗಳನ್ನು ಮಾರಿದ ಘಟನೆ ನಡೆದಿದೆ.
ತನ್ನ ಆಸೆ ಈಡೇರಿಸಿಕೊಳ್ಳಲು ಯುವತಿಯೊಬ್ಬರು 680ರೂ.ನ ಆಭರಣಕ್ಕಾಗಿ ತಾಯಿಯ 1.16 ಕೋಟಿ ರೂ. ಮೌಲ್ಯದ ಆಭರಣವನ್ನು ಮಾರಾಟ ಮಾಡಿರುವ ಘಟನೆ ಚೀನಾದಲ್ಲಿ ನಡೆದಿದೆ. 680 ರೂ.ಬೆಲೆಯ ಲಿಪ್ಸ್ಟಡ್ಸ್ ಖರೀದಿಸಲು ಕೋಟಿ ಮೌಲ್ಯದ ಆಭರಣವನ್ನು ಮಾರಿದ್ದಾಳೆ. ಆಕೆಯೇ ಈ ವಿಚಾರವನ್ನು ಬಾಯ್ಬಿಟ್ಟಿರಲಿಲ್ಲ. ಆಕೆಯ ತಾಯಿ ತನ್ನ ಆಭರಣ ಕಳುವಾಗಿದೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಳು.
ಮಗಳು ತಾಯಿಯ ಆಭರಣಗಳನ್ನು ನಕಲಿ ಎಂದು ತಿಳಿದು ಕಡಿಮೆ ಬೆಲೆ ಮಾರಾಟ ಮಾಡಿದ್ದಾಳೆ ಇದನ್ನು ತಿಳಿದು ತಾಯಿ ಆಘಾತಕ್ಕೊಳಗಾಗಿದ್ದಾಳೆ. ಆಕೆ ಅದನ್ನು ಮಾರಾಟ ಮಾಡಲು ಮುಂದಾಗಿದ್ದುದು ನನಗೆ ತಿಳಿದಿರಲಿಲ್ಲ, ಆ ದಿನ ಆಕೆಗೆ ಹಣದ ಅಗತ್ಯವಿತ್ತು, ಎಷ್ಟು ಬೇಕು ಎಂದು ಕೇಳಿದಾಗ 60 ಯುವಾನ್ ಎಂದು ಹೇಳಿದ್ದಳು, ಯಾರೋ ಲಿಪ್ ಸ್ಟಡ್ಸ್ ಧರಿಸಿರುವುದನ್ನು ನೋಡಿದ್ದೇನೆ ನನಗೂ ಬೇಕೆಂದು ಕೇಳಿದ್ದಳು.
ಪೊಲೀಸರು ಈ ವಿಷಯದ ಬಗ್ಗೆ ತನಿಖೆ ಆರಂಭಿಸಿದರು ಮತ್ತು ಮಾರುಕಟ್ಟೆ ಆಡಳಿತ ಮಂಡಳಿಯ ಸಹಯೋಗದೊಂದಿಗೆ ತನಿಖೆಯಲ್ಲಿ ತೊಡಗಿಸಿಕೊಂಡರು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಆಕೆ ಮಾರಾಟ ಮಾಡಿದ್ದ ಅಂಗಡಿಗೆ ಭೇಟಿ ಎಲ್ಲಾ ಆಭರಣಗಳನ್ನು ಮಹಿಳೆಗೆ ವಾಪಸ್ ನೀಡಿದರು.