ಗದಗ:– ಜಿಲ್ಲೆಯ ಮುಂಡರಗಿ ತಾಲೂಕಿನ ಹೈತಾಪುರ ಗ್ರಾಮದಲ್ಲಿ ಕೃಷಿ ಹೊಂಡದಲ್ಲಿ ಬಿದ್ದು ಮಹಿಳೆ ಹಾಗೂ ಮಗುವೊಂದು ಸಾವನ್ನಪ್ಪಿದ ಘಟನೆ ಜರುಗಿದೆ.
ಪ್ರಜ್ವಲ್ ವಿರುದ್ಧದ ಅಶ್ಲೀಲ ವಿಡಿಯೋ ಕೇಸ್: ಸಂತ್ರಸ್ತೆಯರ ನೆರವಿಗಾಗಿ ಸಹಾಯವಾಣಿ ಆರಂಭ!
34 ವರ್ಷದ ಗೀತಾ ಹೆಸರೂರೂ, ಹಾಗೂ 5 ವರ್ಷದ ಮನೋಜ್ ಕವಲೂರು ಮೃತ ದುರ್ದೈವಿಗಳು ಎನ್ನಲಾಗಿದೆ. ತಂಗಿ ಮಗನ ಜೊತೆ ನೀರು ತರಲು ಹೋಗಿದ್ದಾಗ ಮನೋಜ್ ಕೃಷಿಹೊಂಡಕ್ಕೆ ಕಾಲು ಜಾರಿ ಬಿದ್ದಿದ್ದಾನೆ. ಈ ವೇಳೆ ರಕ್ಷಣೆಗೆ ಹೋಗಿದ್ದ ಗೀತಾ ಕೂಡ ಸಾವನ್ನಪ್ಪಿದ್ದಾನೆ. ಶಾಲೆ ರಜೆ ಹಿನ್ನೆಲೆ ಮನೋಜ್ ದೊಡ್ಡಮ್ಮನ ಮನೆಗೆ ಬಂದಿದ್ದಾಗ ಈ ದುರ್ಘಟನೆ ನಡೆದಿದೆ. ಈ ಕುರಿತು ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ ಎಂದು ಹೇಳಲಾಗಿದೆ.