ತುಮಕೂರು: ಗೃಹ ಸಚಿವರ ಮನೆಯ ಫ್ರಿಡ್ಜ್ ಬಾಗಿಲು ತೆಗೆದು ವಾನರ (ಕೋತಿ) ಹಾಲು ಕುಡಿದ ಘಟನೆ ತುಮಕೂರಿನ ಸಿದ್ದಾರ್ಥ ನಗರದಲ್ಲಿರುವ ಮನೆಯಲ್ಲಿ ನಡೆದಿದೆ. ಗೃಹ ಸಚಿವರು ಮನೆಯಲ್ಲಿ ಜನರಿಂದ ಅಹವಾಲು ಸ್ವೀಕರಿಸುತ್ತಿದ್ದ ವೇಳೆ ಮನೆಗೆ ಬಂದ ಕೋತಿ, ನೇರವಾಗಿ ಮನೆ ಒಳಗೆ ನುಗ್ಗಿದೆ. ಸಿದಾ ಫ್ರಿಡ್ಜ್ ಬಾಗಿಲು ತೆಗೆದು ಹಾಲಿನ ಪಾಕೇಟ್ ತೆಗೆದುಕೊಂಡ ಮನೆ ಮೆಟ್ಟಿಲ ಮೇಲೆ ಕುಳಿತು ಹಾಲು ಕುಡಿದಿದೆ.
ಕೋತಿ ಓಡಿಸಲು ಮುಂದಾದ ಭದ್ರತಾ ಸಿಬ್ಬಂದಿಯನ್ನು ಗೃಹಸಚಿವರು ತಡೆದು ಕೋತಿ ಓಡಿಸಬೇಡಿ ಎಂದಿದ್ದಾರೆ. ನಂತರ ಹಾಲು ಕುಡಿದು ಕೋತಿ ಹೊರ ನಡೆದಿದೆ. ಈ ದೃಶ್ಯವನ್ನು ಮೊಬೈಲ್ ನಲ್ಲಿ ತುಮಕೂರು ನಗರ ಡಿವೈಎಸ್ ಚಂದ್ರಶೇಖರ್ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.