ಗದಗ :-ಜಿಲ್ಲೆಯ ಲಕ್ಷ್ಮೇಶ್ವರದ ಐತಿಹಾಸಿಕ ಸೋಮನಾಥ ದೇವಾಲಯದಲ್ಲಿ ನಡೆಯುವ ಮೂರು ದಿನಗಳ ಪುಲಿಗೆರೆ ಉತ್ಸವ್ವಕ್ಕೆ ಚಾಲನೆಯನ್ನ ನೀಡಲಾಯಿತು.
22 ಬ್ಯಾಂಕ್ನಲ್ಲಿ ಬರೋಬ್ಬರಿ ಹತ್ತು ಕೋಟಿ ಸಾಲ – ಒಂದೇ ಫ್ಯಾಮಿಲಿಯ 6 ಮಂದಿ ಅರೆಸ್ಟ್!
ಭಾರತಿಯ ವಿದ್ಯಾಭವನ ಜಂಟಿ ನಿರ್ದೇಶಕಿ ನಾಗಲಕ್ಷ್ಮಿ ಕೆ ರಾವ್, ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಕಮಿಟಿ ಅಧ್ಯಕ್ಷ ಚಂಬಣ್ಣ ಬಾಳಿಕಾಯಿ ಅವರು ಪಲ್ಲಕ್ಕಿಯಲ್ಲಿ ಸೋಮೇಶ್ವರ ದೇವರ ಉತ್ಸವ ಮೂರ್ತಿಗೆ ಪುಷ್ಪ ಅರ್ಪಿಸಿ ಚಾಲನೆಯನ್ನ ನೀಡಿದ್ರು. ಇನ್ಫೋಸಿಸ್ ಪ್ರತಿಷ್ಠಾನ ವತಿಯಿಂದ ಭಾರತೀಯ ವಿದ್ಯಾಭವನದ ಆಯೋಜನೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ರಾಜ್ಯದ ಹೆಸರಾಂತ ಸಂಗೀತ, ನೃತ್ಯ, ಚಿತ್ರ ಕಲಾವಿದರು ಭಾಗವಹಿಸಿ ಕಲೆಯನ್ನು ವ್ಯಕ್ತಪಡಿಸಲಿದ್ದಾರೆ.