ವಾಷಿಂಗ್ಟನ್:- ಎಲಾನ್ ಮಸ್ಕ್ ಕಂಪನಿಯ ಕೆಂಪು ಬಣ್ಣದ ಟೆಸ್ಲಾ ಕಾರನ್ನು ಖರೀದಿಸಿದ್ದಾರೆ.
ನೀರು ಹಿಡಿಯಲು ಹೋದ ಮಹಿಳೆ ಕರೆಂಟ್ ಹೊಡೆದು ಸಾವು: ರೊಚ್ಚಿಗೆದ್ದ ಸ್ಥಳೀಯರಿಂದ ರಸ್ತೆತಡೆ ಪ್ರೊಟೆಸ್ಟ್!
ವೈರಲ್ ಆಗಿರುವ ವೀಡಿಯೊದಲ್ಲಿ ಮಸ್ಕ್ ಅವರು ಕಾರಿನ ವೈಶಿಷ್ಟ್ಯಗಳನ್ನು ಟ್ರಂಪ್ಗೆ ವಿವರಿಸಿದ್ದಾರೆ. ಇನ್ನೂ ಕಾರಿನ ಚಾಲಕನ ಸೀಟ್ನಲ್ಲಿ ಟ್ರಂಪ್ ಕುಳಿತಿದ್ದು, ಪಕ್ಕದ ಸೀಟ್ನಲ್ಲಿ ಮಸ್ಕ್ ಕುಳಿತಿದ್ದಾರೆ. ಆದರೆ ಟ್ರಂಪ್ ವಾಹನವನ್ನು ಚಾಲನೆ ಮಾಡಿ ಪರೀಕ್ಷಿಸಿಲ್ಲ.
ಮಂಗಳವಾರ ಮಸ್ಕ್ ಅವರೊಂದಿಗೆ ಪತ್ರಿಕಾಗೋಷ್ಠಿ ನಡೆಸಿದ್ದ ಟ್ರಂಪ್, ನನಗೆ ಕಾರನ್ನು ಓಡಿಸಲು ಇಷ್ಟ. ಆದರೆ ಕಾರನ್ನು ಓಡಿಸಲು ಅನುಮತಿ ಇಲ್ಲ. ನಾನು ಬಹಳ ಸಮಯದಿಂದ ಕಾರು ಓಡಿಸಿಲ್ಲ. ಆದರೆ ಕಾರನ್ನು ಶ್ವೇತಭವನದಲ್ಲಿ ಇರಿಸುತ್ತೇನೆ. ನನ್ನ ಸಿಬ್ಬಂದಿಗೆ ಅದನ್ನು ಬಳಸಲು ಬಿಡುತ್ತೇನೆ ಎಂದಿದ್ದರು. ಇನ್ನೂ ಟೆಸ್ಲಾ ವಿರುದ್ಧ ಪ್ರತಿಭಟಿಸುವ ಜನರನ್ನು ದೇಶೀಯ ಭಯೋತ್ಪಾದಕರು ಎಂದು ಹಣೆಪಟ್ಟಿ ಕಟ್ಟಬೇಕು ಎಂದು ಇದೇ ವೇಳೆ ಹೇಳಿದ್ದರು.