ಸುಂದರವಾಗಿ ಕಾಣಲು ಯಾರಿಗೆ ತಾನೇ ಇಷ್ಟವಿಲ್ಲ? ಚಿಕ್ಕವರಿಂದ ಹಿಡಿದು ಮುದುಕರವರೆಗೂ ಎಲ್ಲರೂ ಯೌವನದಿಂದಿರಲು ಬಯಸುತ್ತಾರೆ. ಅದಕ್ಕಾಗಿ ಅವರು ಹಲವಾರು ಪ್ರಯತ್ನಗಳನ್ನು ಮಾಡುತ್ತಾರೆ. ಕೆಲವರು ಮಾರುಕಟ್ಟೆಯಲ್ಲಿ ಸಿಗುವ ವಸ್ತುಗಳನ್ನು ದುಬಾರಿ ಬೆಲೆ ತೆತ್ತು ಖರೀದಿಸಿ ಮುಖಕ್ಕೆ ಹಚ್ಚಿಕೊಳ್ಳುತ್ತಾರೆ. ಆದರೆ, ಅವುಗಳಲ್ಲಿ ರಾಸಾಯನಿಕಗಳು ಬೆರೆತಿರುವುದರಿಂದ ನಿಮ್ಮ ಮುಖದ ಸೌಂದರ್ಯವನ್ನು ಇನ್ನಷ್ಟು ಹಾಳುಮಾಡುತ್ತದೆ. ಆದ್ದರಿಂದ ಅವುಗಳನ್ನು ಬಿಟ್ಟು ನಮ್ಮ ಮನೆಯಲ್ಲಿ ಸುಲಭವಾಗಿ ಸಿಗುವ ಇವುಗಳನ್ನ ನಿಮ್ಮ ಮುಖವನ್ನು ಹೊಳೆಯುವಂತೆ ಮಾಡುತ್ತವೆ ಎಂದು ನಿಮಗೆ ತಿಳಿದಿದೆಯೇ.
ಬೇಸಿಗೆಯಲ್ಲಿ ರಾತ್ರಿ ಸ್ನಾನ ಮಾಡ್ತೀರಾ!? ಹಾಗಿದ್ರೆ ಇದನ್ನು ತಿಳಿಯಿರಿ!
ನಿಮ್ಮ ಮುಖದ ತ್ವೆಚೆಯನ್ನ ಮೃದುವಾಗಿ ಮತ್ತು ತೇವಾಂಶದಿಂದ ಇರಿಸಿಕೊಳ್ಳಲು ನೀವು ದುಬಾರಿ ಸ್ಕಿನ್ ಕೇರ್ ಕ್ರೀಮ್ಗಳನ್ನು ಹಚ್ಚುವ ಅಗತ್ಯವಿಲ್ಲ. ಈ ಕೆಳಗಿನ ಸಲಹೆಗಳನ್ನು ಪಾಲಿಸುವ ಮೂಲಕ ಚರ್ಮಕ್ಕೆ ಪ್ರಯೋಜನಕಾರಿಯಾಗುವುದರ ಜೊತೆಗೆ, ಕೆಲವು ನೈಸರ್ಗಿಕವಾಗಿ ದೊರೆಯುವ ಪದಾರ್ಥಗಳನ್ನು ಬಳಸುವ ಮೂಲಕ ನಿಮ್ಮ ಚರ್ಮವನ್ನು ಆರೋಗ್ಯಕರವಾಗಿಡಬಹುದು.
ಕೆಲವು ಜನರಿಗೆ ವಿಶೇಷವಾಗಿ ಸ್ನಾನದ ನಂತರ ಅವರ ಚರ್ಮವು ಒಣಗುತ್ತದೆ ಮತ್ತು ನಿರ್ಜೀವವಾಗುತ್ತದೆ. ಅಂತಹ ಜನರು ಕೆಲವು ಮನೆ ಮದ್ದುಗಳನ್ನು ಬಳಸುವ ಮೂಲಕ ತಮ್ಮ ಮುಖವನ್ನು ನೈಸರ್ಗಿಕವಾಗಿ ತೇವಾಂಶದಿಂದ ಇರಿಸಿಕೊಳ್ಳಬಹುದು. ಆ ಸಲಹೆಗಳನ್ನು ನೋಡೋಣ.
ಮುಖಕ್ಕೆ ಜೇನುತುಪ್ಪ ಹಚ್ಚಿದ್ರೆ ಏನಾಗುತ್ತೆ?
ಜೇನುತುಪ್ಪವು ನಿಮ್ಮ ಚರ್ಮವನ್ನು ನೈಸರ್ಗಿಕವಾಗಿ ಹೈಡ್ರೀಕರಿಸಲು ಸಹಾಯ ಮಾಡುತ್ತದೆ. ಇದು ನಿಮ್ಮ ಚರ್ಮಕ್ಕೆ ಪರಿಣಾಮಕಾರಿಯಾಗಿ ಹೊಳಪನ್ನು ತರುತ್ತದೆ. ಇದು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇವು ಚರ್ಮವನ್ನು ಡೀಪ್ ಆಗಿ ಹೈಡ್ರೇಟ್ ಮಾಡುತ್ತವೆ. ಸ್ನಾನ ಮಾಡುವ ಮೊದಲು, ನಿಮ್ಮ ಕೈಗಳಿಗೆ ಕೆಲವು ಹನಿಗಳನ್ನು ಹಚ್ಚಿ ಮಸಾಜ್ ಮಾಡಿ. ಇದು ನಿಮ್ಮ ಚರ್ಮವನ್ನು ಆಳವಾಗಿ ಸ್ವಚ್ಛಗೊಳಿಸುತ್ತದೆ
ನಿಂಬೆ ರಸ
ನಿಂಬೆ ರಸವು ಚರ್ಮಕ್ಕೆ ತುಂಬಾ ಸಹಾಯಕವಾಗಿದೆ. ಇದರ ವಿಟಮಿನ್ ಸಿ ಗುಣಗಳು ಚರ್ಮವನ್ನು ಬಿಗಿಗೊಳಿಸಲು ಸಹಾಯ ಮಾಡುತ್ತದೆ. ನೀವು ಮಾಡಬೇಕಾಗಿರುವುದು ಇಷ್ಟೇ, ನಿಂಬೆ ರಸವನ್ನು ನಿಮ್ಮ ಮುಖಕ್ಕೆ 5 ರಿಂದ 10 ನಿಮಿಷಗಳ ಕಾಲ ಹಚ್ಚಿ ನಂತರ ಶುದ್ಧ ನೀರಿನಿಂದ ತೊಳೆಯಿರಿ. ಇದು ಚರ್ಮವನ್ನು ಬಿಗಿಗೊಳಿಸುತ್ತದೆ
ಆಲಿವ್ ಎಣ್ಣೆ
ಸ್ನಾನ ಮಾಡುವ ಮೊದಲು ಮುಖಕ್ಕೆ ಆಲಿವ್ ಎಣ್ಣೆಯನ್ನು ಹಚ್ಚುವುದರಿಂದ ಚರ್ಮ ಮೃದು ಮತ್ತು ಕಾಂತಿಯುತವಾಗುತ್ತದೆ. ಇದು ಚರ್ಮದಲ್ಲಿನ ವಯಸ್ಸಾದ ಲಕ್ಷಣಗಳನ್ನು ಸಹ ಕಡಿಮೆ ಮಾಡುತ್ತದೆ. ಆದಾಗ್ಯೂ, ನಿಮ್ಮ ಚರ್ಮವು ಸೂಕ್ಷ್ಮ ಅಥವಾ ಎಣ್ಣೆಯುಕ್ತವಾಗಿದ್ದರೆ, ಈ ಎಣ್ಣೆಯನ್ನು ಬಳಸಬೇಡಿ.
ಟೊಮೆಟೊ ರಸ:-
ನೀವು ಟೊಮೆಟೊ ರಸವನ್ನು ನಿಮ್ಮ ಚರ್ಮಕ್ಕೆ ಹಚ್ಚಬಹುದು. ಇದು ಹಾನಿಕಾರಕ ಸೂರ್ಯನ ಕಿರಣಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ, ಚರ್ಮಕ್ಕೆ ತಾಜಾತನ ಮತ್ತು ದೃಢತೆಯನ್ನು ನೀಡುತ್ತದೆ. ಇದು ಕಲೆಗಳನ್ನು ತೆಗೆದುಹಾಕಲು ಸಹ ಉಪಯುಕ್ತವಾಗಿದೆ.
ಕಡಲೆ ಹಿಟ್ಟು:
ಇದು ಪೂರ್ವಜರಿಂದಲೂ ಬಳಕೆಯಲ್ಲಿದೆ. ಹಿಂದಿನ ದಿನಗಳಲ್ಲಿ ಸಾಬೂನು, ಶಾಂಪೂಗಳಿಗೆ ಪರ್ಯಾಯವಾಗಿ ಕಡಲೆಹಿಟ್ಟು ಹಚ್ಚಿ ತಲೆ ಸ್ನಾನ ಮಾಡುತ್ತಿದ್ದರು ಎಂಬುದು ಗೊತ್ತೆ? ಸ್ನಾನ ಮಾಡುವ ಮೊದಲು ಕಡಲೆಹಿಟ್ಟು ಮತ್ತು ಅರಿಶಿನದ ಫೇಸ್ ಪ್ಯಾಕ್ ಅನ್ನು ಹಚ್ಚುವುದರಿಂದ ನಿಮ್ಮ ಚರ್ಮವು ಚೆನ್ನಾಗಿ ಎಫ್ಫೋಲಿಯೇಟ್ ಆಗುತ್ತದೆ. ಅರಿಶಿನವು ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ. ಇವು ಚರ್ಮವನ್ನು ಸೋಂಕುಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ.