ಮಹಾನಟಿ ಖ್ಯಾತಿಯ ನಟಿ ಕೀರ್ತಿ ಸುರೇಶ್ ಮದುವೆಯ ಕೆಲವು ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ. ಪತಿಯ ಜೊತೆಗಿರುವ ರೊಮ್ಯಾಂಟಿಕ್ ಫೋಟೊವನ್ನು ಕೀರ್ತಿ ಸುರೇಶ್ ಹಂಚಿಕೊಂಡಿದ್ದಾರೆ.
ಕೀರ್ತಿ ಸುರೇಶ್ ಮದುವೆ ವೇಳೆ ನಡೆದ ಮ್ಯೂಸಿಕಲ್ ನೈಟ್ ಕಾರ್ಯಕ್ರಮದ ಫೋಟೋಗಳನ್ನು ಕೀರ್ತಿ ಸುರೇಶ್ ಹಂಚಿಕೊಂಡಿದ್ದಾರೆ. ಪತಿಯ ಜೊತೆ ಕೀರ್ತಿ ಸುರೇಶ್ ಕೂಡ ಸಖತ್ ಸ್ಟೆಪ್ಸ್ ಹಾಕಿದ್ದಾರೆ.
ಮದುವೆಯ ಮ್ಯೂಸಿಕಲ್ ಕಾರ್ಯಕ್ರಮಕ್ಕೆ ನಟಿ ಕೀರ್ತಿ ಸುರೇಶ್, ವೈಟ್ ಹಾಗೂ ಗೋಲ್ಡ್ ಕಲರ್ ಕಾಂಬಿನೇಷನ್ ಲೆಹಂಗಾದಲ್ಲಿ ಮಿಂಚುತ್ತಿದ್ದಾರೆ. ಮಲಯಾಳಂ ಟ್ರೆಡಿಷನಲ್ ಟಚ್ ನೀಡುವ ಡ್ರೆಸ್ ಧರಿಸಿ ಮಿಂಚಿದ್ದಾರೆ.
ಮಹಾನಟಿ ಸಖತ್ ಬ್ಯೂಟಿಫುಲ್ ಆಗಿ ಕಾಣಿಸಿಕೊಂಡಿದ್ದಾರೆ. ಬ್ಯೂಟಿ ಅಂದ್ರೆ ಕೀರ್ತಿನೇ ಅಂತ ನೆಟ್ಟಿಗರು ಕಮೆಂಟ್ ಮಾಡ್ತಿದ್ದಾರೆ. ನಟಿಯ ಫೋಟೋಗಳಿಗೆ ಲೈಕ್ಗಳ ಸುರಿಮಳೆ ಆಗಿದೆ. ಹೊಸ ಜೋಡಿಯ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ.
ಡಿಸೆಂಬರ್ 12 ರಂದು ತಮ್ಮ ಬಹುಕಾಲದ ಗೆಳೆಯ ಆಂಟೋನಿ ಜೊತೆ ನಟಿ ಕೀರ್ತಿ ಸುರೇಶ್ ಹೊಸ ಬಾಳಿಗೆ ಕಾಲಿಟ್ರು. ಗೋವಾದಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ಮದುವೆ ಸಮಾರಂಭ ನಡೆಯಿತು. ಮೂರು ದಿನಗಳ ಹಿಂದಷ್ಟೇ ಈ ಕಪಲ್ ಕ್ರಿಶ್ಚಿಯನ್ ಸಂಪ್ರದಾಯದಂತೆ ಉಂಗುರ ಬದಲಿಸಿಕೊಂಡು ಸತಿ ಪತಿಗಳಾಗಿದ್ದರು.