ಬೀದರ್ : ಮಹಿಳಾ ಸಂಘಗಳಲ್ಲಿ ಮಾಡಿದ್ದ ಸಾಲ ತೀರಿಸಲಾಗದೇ ಮಹಿಳೆ ನೇಣಿಗೆ ಶರಣಾಗಿದ್ದಾಳೆ. ಬೀದರ್ ಜಿಲ್ಲೆಯ ಹುಲಸೂರು ತಾಲೂಕಿನ ಗಡಿಗೌಡಗಾಂವ್ ಗ್ರಾಮದಲ್ಲಿ ಘಟನೆ ನಡೆದಿದೆ. ಗಡಿಗೌಡಗಾಂವ್ ಗ್ರಾಮದ ರೇಷ್ಮಾ ಸುನೀಲ್ ಸೂರ್ಯವಂಶಿ (25) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ರೇಷ್ಮಾ ಪತಿ ಕುಡುಕನಾಗಿದ್ದು, ಕೆಲಸ ಮಾಡುತ್ತಿರಲ್ಲ. ರೇಷ್ಣಾ ಸುಮಾರು 6ಕ್ಕೂ ಅಧಿಕ ಸಂಘಗಳಲ್ಲಿ ಮೂರು ಲಕ್ಷಗಳಷ್ಟು ಸಾಲ ಮಾಡಿ, ಮನೆಯ ಶೆಡ್ ಹಾಕಿಸಿದ್ದಳು. ಆದರೆ ಸಾಲ ತೀರಿಸಲಾಗದೇ ಮನನೊಂದು ನೇಣು ಬಿಗಿದುಕೊಂಡಿದ್ದಾಳೆ. ಈ ಸಂಬಂಧ ಹುಲಸೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇನ್ಸ್ಟಾದಲ್ಲಿ ಯುವಕನ ಪರಿಚಯ, ಪ್ರೀತಿ ; ಪತಿ ಬಿಟ್ಟು ಬಂದವಳ ಕಥೆ ಏನಾಯ್ತು..?