ರಾಯಚೂರು : ಬ್ಯಾಟರಿ ಬಿಸಿಯಾಗಿ ಟ್ರಕ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕಪಗಲ್ ಬಳಿ ಘಟನೆ ನಡೆದಿದೆ. ಟ್ರಕ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ರಿಂದಾಗಿ ಚಾಲಕ ಮತ್ತು ನಿರ್ವಾಹಕ ಟ್ರಕ್ ಬಿಟ್ಟು ಓಡಿಹೋಗಿದ್ದಾನೆ. ಇನ್ನೂ ಬೆಂಕಿಯ ಕೆನ್ನಾಲಿಗೆ ಟ್ರಕ್ ಮುಂಭಾಗ ಸುಟ್ಟು ಭಸ್ಮವಾಗಿದೆ. ಟ್ರಕ್ ಗೆ ಬೆಂಕಿ ಕಾಣಿಸಿಕೊಂಡಿದ್ದರಿಂದ ಕೆಲಕಾಲ ರಾಯಚೂರು- ಮಾನ್ವಿ ಮಾರ್ಗದ ರಸ್ತೆ ಸಂಚಾರ ಬಂದ್ ಆಗಿತ್ತು. ಬೆಂಕಿ ಅನಾಹುತದ ಬಗ್ಗೆ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.