ಮೈಸೂರು : ತಮ್ಮ ಮೇಲೆ ಕ್ರಮ ಕೈಗೊಳ್ಳಲು ಧಂ ಬೇಕು ಎಂಬ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಹೇಳಿಕೆಗೆ ಹೆಚ್ ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಅವರು ದೊಡ್ಡವರು ಇದ್ದಾರೆ ಪಾರ್ಟಿಯಲ್ಲಿ ಆ ಬಗ್ಗೆ ತೀರ್ಮಾನ ಕೈ ಗೊಳ್ಳುತ್ತೇವೆ. ನಮ್ಮ ಶಕ್ತಿ ಅಮೇಲೆ ತೋರಿಸುತ್ತೀವಿ ಎಂದು ಟಾಂಗ್ ನೀಡಿದ್ದಾರೆ.
ಇನ್ನೂ ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ವಿಚಾರವಾಗಿ ಪ್ರತಿಕ್ರಿಯಿಸಿ, ಒಂದು ತಿಂಗಳಿನಿಂದ ಈ ಸಮಸ್ಯೆ ಇದೆ. ಜನರು ಹಳ್ಳಿ ಹಳ್ಳಿಯನ್ನ ಬಿಟ್ಟು ಹೋಗುತ್ತಿದ್ದಾರೆ. ಇಡೀ ರಾಜ್ಯದಲ್ಲಿ ಈ ಸಮಸ್ಯೆ ಇದೆ.ಮೈಕ್ರೋ ಫೈನಾನ್ಸ್ ಜನ ಸಾಮಾನ್ಯರ ಮೇಲೆ ಕಿರುಕುಳ ಕೊಡುತ್ತಿದ್ದಾರೆ. ಸರ್ಕಾರ ಕ್ರಮ ತೆಗೆದುಕೊಳ್ಳುತ್ತಿಲ್ಲ. ಜನರಿಗೆ ಮಾನಸಿಕ ಸ್ಥೈರ್ಯ ತುಂಬುವ ಕೆಲಸ ಮಾಡುತ್ತಿಲ್ಲ ಎಂದು ಕಿಡಿಕಾರಿದ್ರು.
ನಿನ್ನೆ ರೆಡ್ಡಿ ವಿರುದ್ಧ ಗುಡುಗು, ಇಂದು ಪಾರ್ಟಿ ಮಂತ್ರ ; ಶಾಂತವಾದ ಶ್ರೀರಾಮುಲು
ರಾಜ್ಯದಲ್ಲಿ ಅಷ್ಟು ಬಾಣಂತಿಯರ ಸಾವು ಆಗಿದೆ. ಏನು ಕ್ರಮ ಆಗಿದೆ. ಕಳಪೆ ಔಷಧಿಯ ಬಗ್ಗೆ ಏನು ಕ್ರಮ ತೆಗದುಕೊಂಡಿದ್ದೀರಾ.? ಕೇವಲ ಕುರ್ಚಿಗಾಗಿ ಚರ್ಚೆ ಆಗುತ್ತಿದೆ. ಎಷ್ಟು ದಿನ ಇರ್ತೀರಾ ಅನ್ನುವುದು ಮುಖ್ಯವಲ್ಲ.ದೇವರಾಜ ಅರಸು ಅವರಿಗೆ ಸರಿ ಸಮಾನಗಿ ಅಂಥ ಸಿದ್ದರಾಮಯ್ಯ ಹೇಳ್ತಾರೆ. ಇನ್ನೂ ಐದು ವರ್ಷ ನೀವೇ ಅಧಿಕಾರದಲ್ಲಿರಿ. ಜನರಿಗೆ ಕೊಡುತ್ತಿರುವ ಸಾಲದ ಹೊರೆಯನ್ನ ಕಡಿಮೆ ಮಾಡಿ. 2 ಸಾವಿರದಿಂದ ಬಡವರನ್ನ ಆರ್ಥಿಕವಾಗಿ ಬೆಳಸುತ್ತೇವೆ ಅಂತೀರುವುದು ಇದೇನಾ..? ಎಂದ್ ಪ್ರಶ್ನಿಸಿದರು. 2018ರಲ್ಲಿ ಖುಣಮುಕ್ತ ಕಾಯ್ದೆ ಜಾರಿಗೆ ತಂದಿದ್ದೇನೆ. ವಿಧಾನಸಭೆಯಲ್ಲಿ ಬಿಲ್ ಸಹ ಪಾಸ್ ಆಗಿದೆ. ರಾಷ್ಟ್ರಪತಿಗಳ ಬಳಿಗೆ ನಾನೇ ಹೋಗಿ ಅಂಕಿತ ತೆಗದುಕೊಂಡು ಬಂದೆ. ಆದರೆ ಬಿಲ್ ಏನಾಯ್ತು..? ಬಂಡೆಪ್ಪ ಕಾಶಂಪ್ಪೂರು ಕೇರಳಕ್ಕೆ ಕಳುಹಿಸಿ ಈ ಬಗ್ಗೆ ಸಾಕಷ್ಟು ಮಾಹಿತಿ ಕಲೆ ಹಾಕಿದೆ. ಮಂಡ್ಯ ಜಿಲ್ಲೆಯಲ್ಲಿ 60 ರಲ್ಲಿ 14ಕ್ಕೆ ಮಾತ್ರ ಲೈಸೆನ್ಸ್ ಪಡೆದಿರುವ ಮೈಕ್ರೋ ಫೈನಾನ್ಸ್ ಇದೆ. ದಾವೋಸ್ ಗೆ ಹೋಗಲು ಬಜೆಟ್ ಪ್ರಿಪರೇಷನ್ ಮಾಡುತ್ತಿದ್ದೇನೆ ಎಂದು ಸಿಎಂ ಹೇಳಿದ್ದಾರೆ. ಎಲ್ಲ ರಾಜ್ಯದ ಪ್ರಮುಖರು ದಾವೋಸ್ ಗೆ ಹೋಗಿ ಬಂಡಾವಳ ತರುತ್ತಿದ್ದಾರೆ. ನೀವು ಏನ್ ಮಾಡುತ್ತಾ ಇದ್ದೀರಾ..? ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಶ್ರೀರಾಮಲು ಮತ್ತು ಜನಾರ್ದನ ರೆಡ್ಡಿ ಕಲಹ ಬಿಜೆಪಿಯ ಆಂತರಿಕ ಕಲಹದ ಬಗ್ಗೆ ಮಾತನಾಡಿ, ಬಿಜೆಪಿಯಲ್ಲಿ ಏನು ನಡೆಯುತ್ತಿದೆ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ. ಇಬ್ಬರು ಒಂದು ಕಾಲದಲ್ಲಿ ಆತ್ಮೀಯ ಸ್ನೇಹಿತರು ಅಣ್ಣತಮ್ಮಂದಿರಕ್ಕಿಂತ ಚೆನ್ನಾಗಿದ್ದವರು. ಇಬ್ಬರ ಜಗಳವನ್ನ ಬಿಜೆಪಿಯ ನಾಯಕರೇ ಕುಳಿತು ಪರಿಹರಿಸಬೇಕು. ಈ ಬಗ್ಗೆ ನಾನು ಬಿಜೆಪಿ ನಾಯಕರಿಗೆ ಮನವಿ ಮಾಡುತ್ತೇನೆ. ಶ್ರೀರಾಮಲು ನನ್ನ ಅಭಿಪ್ರಾಯದಲ್ಲಿ ಕಾಂಗ್ರೆಸ್ ಗೆ ಹೋಗುವುದಿಲ್ಲ ಎಂದರು.