ಧಾರವಾಡ :ಬಾಡಿಗೆ ಮನೆಯಲ್ಲಿ ಒಂಟಿಯಾಗಿ ವಾಸವಾಗಿದ್ದ ಗೃಹಿಣಿ ನೇಣಿಗೆ ಶರಣಾಗಿರುವ ಘಟನೆ ಧಾರವಾಡದ ಶ್ರೀನಗರ 1ನೇ ಕ್ರಾಸ್ ನಲ್ಲಿ ನಡೆದಿದೆ. ಶ್ವೇತಾ ಗುದಗಾಪುರ(24) ನೇಣಿಗೆ ಶರಣಾದ ಗೃಹಿಣಿ. ಆದರೆ ಎರಡು ವರ್ಷಗಳ ಹಿಂದೆ ಇನ್ಸ್ಟಾದ ಮೂಲಕ ಧಾರವಾಡ ಮೂಲದ ಯುವಕನ ಪರಿಚಯವಾಗಿದೆ. ಆ ಬಳಿಕ ಇಬ್ಬರ ಸ್ನೇಹ ಪ್ರೀತಿಗೆ ತಿರುಗಿದ್ದು, ಆ ಯುವಕನನ್ನು ನಂಬಿ ಶ್ವೇತ ಎರಡು ವರ್ಷಗಳ ಹಿಂದೆಯೇ ಪತಿಯಿಂದ ದೂರಾಗಿದ್ದು, ಡಿವೋರ್ಸ್ ನೋಟಿಸ್ ಕೂಡ ಕಳಿಸಿದ್ದಾಳೆ.
ಕಳೆದ ಒಂದು ವರ್ಷದಿಂದ ಪತಿಯನ್ನು ಬಿಟ್ಟು ಧಾರವಾಡಕ್ಕೆ ಬಂದು ವಾಸವಾಗಿದ್ದರು. ಧಾರವಾಡದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಓದಿಕೊಳ್ಳುತ್ತಿರೋದಾಗಿ ಹೇಳಿ ಬಾಡಿಗೆ ಮನೆಯಲ್ಲಿ ಏಕಾಂಗಿಯಾಗಿ ವಾಸ ಮಾಡುತ್ತಿದ್ದರು. ಆದರೆ ಇಂದು ಏಕಾಏಕಿ ನೇಣಿಗೆ ಶರಣಾಗಿದ್ದಾಳೆ. ಸ್ಥಳಕ್ಕೆ ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.