ಬಳ್ಳಾರಿ : ಬಿಜೆಪಿ ರಾಷ್ಟ್ರಾಧ್ಯಕ್ಷ ಮನವೊಲಿಕೆಯ ಬಳಿಕ ಮಾಜಿ ಸಚಿವ ಶ್ರೀರಾಮುಲು ಶಾಂತವಾದಂತೆ ಕಾಣುತ್ತಿದೆ. ನಿನ್ನೆ ರೆಡ್ಡಿ ವಿರುದ್ದ ರೇಗಾಡಿದ್ದ ರಾಮುಲು ಬಾಯಲ್ಲಿಂದು ಪಾರ್ಟಿ, ಪಾರ್ಟಿ ಅಂತಾ ಪಾರ್ಟಿ ಮಂತ್ರ ಜಪಿಸುತ್ತಿದ್ದಾರೆ. ಬಳ್ಳಾರಿಯಲ್ಲಿ ಮಾತನಾಡಿದ ರಾಮುಲು, ನಿನ್ನೆ ಜೆಪಿ ನಡ್ಡಾ ದೂರವಾಣಿ ಮೂಲಕ ಅವರು ಮಾತಾಡಿದರು. ಅವರಿಗೆ ಏನಾಗಿದೆ ಅನ್ನೋದನ್ನ ಎಲ್ಲವನ್ನೂ ವಿವರಿಸಿದ್ದೇನೆ. ಕೋರದ ಕಮಿಟಿಯಲ್ಲಿ ರಾಧಾಮೋಹನ್ ಅಗರವಾಲ್ ಬಗ್ಗೆಯೂ ಹೇಳಿದ್ದೇನೆ. ರಾಮುಲು ನಿನ್ನ ಪರವಾಗಿ ನಾನಿದ್ದೀನಿ, ಯಾವುದೇ ಯೋಚನೆ ಮಾಡಬೇಡಿ. ಮುಂದೆ ದೆಹಲಿಗೆ ಬರೋದಿದ್ದರೆ ಬನ್ನಿ ಎಂದು ಹೇಳಿದ್ರು. ನಾನು ಬರ್ತೀನಿ ಎಂದು ಹೇಳಿದ್ದೀನಿ. ಸಹಾಯಕರ ಅಪಾಯಿಟ್ಮೆಂಡ್ ತಗೊಂಡ್ ಬರ್ತೀನಿ ಎಂದು ಹೇಳಿದ್ದೇನೆ. ಹಿಂದುಳಿದ ಸಮುದಾಯದ ಪರವಾಗಿ ನೀವಿದ್ದೀರಿ, ದೆಹಲಿಗೆ ಯಾವಾಗಾದ್ರೂ ಬನ್ನಿ. ಮೋದಿ, ಅಮಿತ್ ಶಾಗೆ ಸುದ್ದಿ ಮುಟ್ಟಿಸಿದ್ದೇವೆ. ನಿಮ್ಮ ಪರವಾಗಿ ನಾವಿದ್ದೇವೆ ಎಂದಿದ್ದಾರೆ.
ಮುಂದುವರೆದ ರೆಡ್ಡಿ, ರಾಮುಲು ಫೈಟ್ : ಇಬ್ಬರ ಮನೆಯ ನಡುವಿದ್ದ ಗೇಟ್ ಬಂದ್..!
ಇನ್ನೂ ಜೋಶಿಯವರು ಸಹ ಕಾಲ್ ಮಾಡಿ, ನಡ್ಡಾ ಜೊತೆ ಮಾತನಾಡುವಂತೆ ಹೇಳಿದ್ರು. ಅಷ್ಟೊತ್ತಿಗೆ ನಡ್ಡಾ ಕಾಲ್ ಮಾಡಿದ್ದರು. ನಿಮಗೆ ನೋವಾಗಿದೆ ಅನ್ನೋದು ಗೊತ್ತಾಗಿದೆ. ಅಗರ್ವಾಲ್ ಸಹಿತ ತಮ್ಮ ಮಾತು ಹಿಂದಕ್ಕೆ ತಗೊಳ್ಳೋದಾಗಿ ಹೇಳಿದ್ದಾರೆ. ನೀವು ಪಾರ್ಟಿ ಬಿಡುವ ಬಗ್ಗೆ ಯೋಚನೆ ಮಾಡಬೇಡಿ ಎಂದು ಜೋಶಿ ಹೇಳಿದ್ರು. ವಿಜಯೇಂದ್ರ ನಿನ್ನೆ ನನ್ ಜೊತೆ ಮಾತಾಡಿದ್ರು. ನಿಮಗೆ ಈ ರೀತಿ ಆಗಿರೋದು ನೋವಾಗಿದೆ ಎಂದ್ರು. ಅಶೋಕ್ , ಬೊಮ್ಮಾಯಿ, ಸದಾನಂದ ಗೌಡರು ಮಾತಾಡಿದ್ದಾರೆ. ಎಲ್ಲರಿಗು ಸಹ ನನ್ನ ಮೇಲೆ ವಿಶ್ವಾಸ ಇದೆ. ನನ್ನ ಸುಧೀರ್ಘ ರಾಜಕೀಯ ಇತಿಹಾಸದಲ್ಲಿ ಬಿಜೆಪಿ ಸಾಧ್ಯ ಆದಷ್ಟು ಅಳಿಸು ಸೇವೆ ಸಲ್ಲಿಸಿದ್ದೀನಿ. ಹೀಗಾಗಿ ಅದನ್ನ ಗುರುತಿಸಿ ಮಾತನಾಡ್ತಿದ್ದಾರೆ ಎಂದರು.