ಬೆಳಗಾವಿ : ರಾಜ್ಯದಲ್ಲಿ ಫೈನಾನ್ಸ್ ಕಿರುಕುಳದ ಬಗ್ಗೆ ಎರಡು ತಿಂಗಳ ಒಳಗೆ ಪರಿಹಾರ ಕಂಡು ಕೊಳ್ಳುತ್ತೇವೆ ಎಂದು ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವ್ರು, ಸುಮಾರು ಕಡೆ ಕಿರುಕುಳ ಕೊಡುವ ವರದಿಗಳು ಬರ್ತಿವೆ. ತೊಂದರೆ ಕೊಟ್ಟರೆ ದೂರು ದಾಖಲು ಮಾಡುವಂತೆ ತಿಳಿಸಿದ್ದೇವೆ. ಫೈನಾನ್ಸ್ ಕಿರುಕುಳದ ಬಗ್ಗೆ ಗೊಂದಲ ಇದೆ. ಸಾಲ ಪಡೆಯೋದು, ಕಿರುಕುಳ ಕೋಡೊದು ಬೇರೆ ವಿಚಾರ. ಆದರೆ ಸಬ್ಸಿಡಿ ಹೆಸರಿನಲ್ಲಿ ಸಾವಿರಾರು ಜನರಿಗೆ ಸಾಲ ಕೊಟ್ಟಿದ್ದಾರೆ. ಹಣ ತುಂಬುವ ವಿಚಾರದಲ್ಲಿ ಈಗ ಸಂಘರ್ಷ ಆರಂಭವಾಗಿದೆ. ಈಗಾಗಲೇ ಡಿಸಿ ನೇತೃತ್ವದಲ್ಲಿ ಒಂದು ಸಭೆ ನಡೆಸಿದ್ದೇನೆ. ಎರಡು ತಿಂಗಳ ಸಮಯ ಕೇಳಿದ್ದೇವೆ, ಏನಾದರೂ ಅದಕ್ಕೆ ಪರಿಹಾರ ಹುಡುಕುತ್ತೇವೆ. ಒಂದು ತಿಂಗಳಲ್ಲಿ ಏನು ಸಾಧ್ಯವೋ ಅದಕ್ಕೆ ಪರಿಹಾರಕ್ಕೆ ಮಾಡುತ್ತೇವೆ.
ಬೆಳಗಾವಿಯಲ್ಲಿ ಮತ್ತೊಂದು ಅಮಾನವೀಯ ಘಟನೆ: ಬಾಣಂತಿ ಮನೆ ಸೀಜ್ ಮಾಡಿದ ಫೈನಾನ್ಸ್ ದುರುಳರು!
ಇನ್ನೂ ಶಿರೂರನಲ್ಲಿ ಕೂಡ ಮಹಿಳೆ ಆತ್ಮಹತ್ಯೆ ಪ್ರಕರಣ ನಡೆದಿದೆ, ದೂರು ದಾಖಲು ಮಾಡಲು ಹೇಳಿದ್ದೇನೆ. ಮಧ್ಯವರ್ತಿಗಳ ಜತೆಗೆ ಫೈನಾನ್ಸ್ ನವರು ಭಾಗಿದಾರರಾಗಿದ್ದಾರೆ ಎಂಬ ಆರೋಪವಿದೆ. ಮಧ್ಯವರ್ತಿಗಳಿಗೆ ಹಣ ಕೊಟ್ಟಿದ್ದಾರೆ, ಪೊಲೀಸ್ ತನಿಖೆಗೆ ಸೂಚನೆ ಕೊಟ್ಟಿದ್ದೇನೆ. ವರದಿ ಬಂದ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದರು. ತಾರಿಹಾಳದಲ್ಲಿ ಒಂದು ತಿಂಗಳ ಬಾಣಂತಿ ಮನೆಯಿಂದ ಹೊರಹಾಕಿ ಮನೆ ಹರಾಜಿಗಿಟ್ಟ ಪ್ರಕರಣ ಸಂಬಂಧಿಸಿದಂತೆ ಕುಟುಂಬಸ್ಥರು ದೂರು ಕೊಟ್ಟರೆ, ಫೈನಾನ್ಸ್ ನವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದರು.
ಇನ್ನೂ ಶ್ರೀರಾಮಲು ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯಿಸಿ, ಚರ್ಚೆಯಲ್ಲಿ ಇದೆ, ನಮಗೂ ಅದರ ಬಗ್ಗೆ ಸ್ಪಷ್ಟವಾಗಿ ಮಾಹಿತಿ ಇಲ್ಲ. ಬೆಂಗಳೂರು ಹೋಗಿ ಸಂಪೂರ್ಣ ಮಾಹಿತಿ ಪಡೆಯುವೆ. ಪೂರ್ಣ ಪ್ರಮಾಣದಲ್ಲಿ ಏನು ಬೆಳವಣಿಗೆ ಆಗಿದೆ ಗೊತ್ತಿಲ್ಲ. ಟಿವಿಯಲ್ಲಿ ನೋಡಿದ್ದೇನೆ ಅಷ್ಟೇ. ಬೆಂಗಳೂರಿಗೆ ಹೋದ ಬಳಿಕ ಪೂರ್ಣ ಮಾಹಿತಿ ಪಡೆದು ಮಾತನಾಡುತ್ತೇನೆ ಎಂದರು.