ಬಳ್ಳಾರಿ : ಒಂದು ಕಾಲದ ಕುಚುಕು ಗೆಳೆಯರಾದ ರೆಡ್ಡಿರಾಮುಲು ಇದೀಗ ಹಾವುಮುಂಗುಸಿಯಂತೆ ಕಚ್ಚಾಡುತ್ತಿದ್ದಾರೆ. ಅದರಲ್ಲೂ ಸಂಡೂರು ಚುನಾವಣೆಯ ಬಳಿಕವಂತೂ ಇಬ್ಬರ ಕಿತ್ತಾಟ ಜೋರಾಗಿದೆ. ಕೋರ್ ಕಮಿಟಿ ಸಭೆಯಿಂದ ಶ್ರೀರಾಮುಲು ಹೊರಬಂದಿದ್ದರು. ಬಳಿಕ ಸುದ್ದಿಗೋಷ್ಠಿ ನಡೆಸಿ ರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿದರು. ಇತ್ತ ರೆಡ್ಡಿ ಕೂಡ ಪ್ರತಿಯಾಗಿ ಸುದ್ದಿಗೋಷ್ಠಿ ನಡೆಸಿ ಕಿಡಿಕಾರಿದರು.
ಬೆಳಗಾವಿಯಲ್ಲಿ ಮತ್ತೊಂದು ಅಮಾನವೀಯ ಘಟನೆ: ಬಾಣಂತಿ ಮನೆ ಸೀಜ್ ಮಾಡಿದ ಫೈನಾನ್ಸ್ ದುರುಳರು!
ಇದೀಗ ವಾಕ್ಸಮರದ ನಡುವೆ ಶ್ರೀರಾಮುಲು ರೆಡ್ಡಿ ಮನೆಗೆ ಇದ್ದ ಗೇಟ್ ಬಂದ್ ಮಾಡಿಸಿದ್ದಾರೆ. ರಾಮುಲು ಮನೆಗೆ ಕೌಂಪೌಂಡ್ಗೆ ಇದ್ದ ಗೇಟ್ ಕ್ಲೋಸ್ ಮಾಡಿದ್ದು, ವಾಸ್ತು ಹೆಸರಲ್ಲಿ ಗೇಟ್ ಬಂದ್ ಮಾಡಿದ್ದಾರೆ. ಬಳ್ಳಾರಿಯ ಅವಂಬಾವಿಯಲ್ಲಿ ರಾಮುಲು ಹಾಗೂ ರೆಡ್ಡಿ ನಿವಾಸಗಳು ಅಕ್ಕಪಕ್ಕದಲ್ಲೇ ಇವೆ. ಇಬ್ಬರ ಮನೆಗೆ ನಡುವೆ 50 ಮೀಟರ್ ಅಂತರವಷ್ಟೇ ಇದ್ದು, ಕಾಲ್ನಡುಗೆಯಲ್ಲೇ ಓಡಾಡಬಹುದು. ಇಬ್ಬರೂ ನಡುವೆ ವೈಮನಸ್ಸು ಆಗ್ತಿದಂತೆ ಶ್ರೀರಾಮುಲು ವಾಸ್ತು ಸರಿಯಿಲ್ಲ ಅಂತಾ ಸೀಮೆಂಟ್ ಹಾಕಿ ಗೇಟ್ ಬಂದ್ ಮಾಡಿದ್ದಾರೆ.