ಬೆಳಗಾವಿ:- ಗಡಿನಾಡು ಬೆಳಗಾವಿಯಲ್ಲಿ ಮತ್ತೊಂದು ಖಾಸಗಿ ಫೈನಾನ್ಸ್ ನಿಂದ ಅಮಾನವೀಯ ಕೃತ್ಯ ನಡೆದಿದ್ದು ಬಾಣಂತಿಯಿದ್ದ ಮನೆ ಸೀಜ್ ಮಾಡಿದ ಘಟನೆ ಬೆಳಗಾವಿ ತಾಲೂಕಿನ ತಾರಿಹಾಳ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಸಾಲ ಕಟ್ಟದಕ್ಕೆ ಖಾಸಗಿ ಫೈನಾನ್ಸ್ ಸಿಬ್ಬಂದಿಯಿಂದ ಬಾಣಂತಿ ಸಮೇತ ಮನೆಯಿಂದ ಹೊರಕ್ಕೆ ಸೀಜ್ ಮಾಡಿದ ಹಿನ್ನೆಲೆಯಲ್ಲಿ ಫೈನಾನ್ಸ್ ಕಿರುಕುಳಕ್ಕೆ ನೊಂದು ಬಡಕುಟುಂಬ ಬಿಕ್ಕಿಕಣ್ಣೀರಿಟ್ಟಿದ್ದಾರೆ.
National Girl Child Day 2025: ಇಂದು ‘ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ’: ಇಲ್ಲಿದೆ ಇತಿಹಾಸ ಮತ್ತು ಮಹತ್ವ
ಮೈಕ್ರೋ ಫೈನಾನ್ಸ್ ನವರಿಂದ ಸಾಲ ಪಡೆದಿದ್ದೆ. ಅದನ್ನು ಮರಳಿ ಹಿಂದಿರುಗಿಸಿದರೂ ನಮ್ಮ ಮನೆ ಸೀಜ್ ಮಾಡಿ ಹೊರ ಹಾಕಿದ್ದಾರೆ ಎಂದು ನಿಂಗಪ್ಪ ಅಳಲು ತೋಡಿಕೊಂಡರು.
ಬೆಳಗಾವಿ ತಾಲೂಕಿನ ತಾರಿಹಾಳ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಪಡೆದುಕೊಂಡ ಸಾಲಕ್ಕಿಂತ ಹೆಚ್ಚು ಬಡ್ಡಿ ತುಂಬಿದ್ದೇನೆ. ಆದರೂ ನಮ್ಮ ಮನೆಯನ್ನು ಹೇಳದೆ ಕೇಳದೆ ಸೀಜ್ ಮಾಡಿ ನಮ್ಮ ಕುಟುಂಬ ಹೊರ ಹಾಕಿದ್ದಾರೆ ಎಂದು ಆರೋಪಿಸಿದರು.
ಮನೆಯಲ್ಲಿ ನನ್ನ ಮಗಳು ಒಂದು ತಿಂಗಳ ಹಿಂದೆ ಹೆರಿಗೆ ಆಗಿದೆ. ‘ಬಾಣಂತಿ ಇದ್ದಾಳೆ ಎಂದರು ಫೈನಾನ್ಸ್ ನವರು ಮನೆ ಸೀಜ್ ಮಾಡಿ ನಮ್ಮನ್ನು ಹೊರ ಹಾಕಿದ್ದಾರೆ ಎಂದು ಸುವರ್ಣ ಲೋಹಾರ್ ಆರೋಪಿಸಿದರು.
ಮನೆಯಲ್ಲಿ ಹೆಣ್ಣು ಮಕ್ಕಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಸಾಲ ಮರುಳಿಸಲು ಸಮಯಾವಕಾಶ ಕೇಳಿದರೂ ನೀಡದೆ ಮನೆಯ ಸಾಮಗ್ರಿಗಳನ್ನು ಹೊರ ಹಾಕಿದ್ದಾರೆ ಎಂದು ಆರೋಪಿಸಿದರು.