ಈಗ ಸೋಷಿಯಲ್ ಮೀಡಿಯಾದಲ್ಲಿ ಎಲ್ಲೇ ನೋಡಿದ್ರು ಮಹಾಕುಂಭದ ಮೋನಾಲಿಸಾಳದ್ದೇ ಫೋಟೋ. ಆಕೆಯ ಕಣ್ಣೀಗೆ, ಮುಗ್ದ ನಗುವಿನ ಕೋಟ್ಯಾಂತರ ಮಂದಿ ಫಿದಾ ಆಗಿದ್ದಾರೆ.
ಮಧ್ಯಪ್ರದೇಶದ ಇಂದೋರ್ ನ ಈ ಮೋನಾಲಿಸಾ ಕುಂಭಮೇಳದಲ್ಲಿ ರುದ್ರಾಕ್ಷಿ ಮಾರಲು ಬಂದಿದ್ದಳು. ಆದ್ರೆ, ಈಗ ಆಕೆಯ ಫೋಟೋಗಳು ಹಾಗೂ ವೀಡಿಯೊಗಳು ನಿರಂತರವಾಗಿ ಅಂತರ್ಜಾಲದಲ್ಲಿ ವೈರಲ್ ಆಗುತ್ತಿವೆ. ಯುವತಿ ಯಾರು ಮತ್ತು ಆಕೆಯ ಇತಿಹಾಸದ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳಲು ಜನರು ಬಯಸುತ್ತಿದ್ದಾರೆ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಆಕೆಯ ಬಗ್ಗೆ ಸಾಕಷ್ಟು ಮಂದಿ ಹುಡುಕಾಟ ನಡೆಸುತ್ತಿದ್ದಾರೆ.
ಮೋನಾಲಿಸಾ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲು, ಆಕೆಯನ್ನು ಸಂದರ್ಶನ ಮಾಡಲು ಸಾಕಷ್ಟು ಜನ ಮುಗಿ ಬಿದ್ದಿದ್ದಾರೆ. ಹೀಗಾಗಿ ಈಕೆ ರುದ್ರಾಕ್ಷಿ ಮಾರುವುದನ್ನು ನಿಲ್ಲಿಸಿ ಆಕೆಯನ್ನು ಕುಟುಂಬಸ್ಥರು ಇಂದೋರ್ ಗೆ ಕಳುಹಿಸಿದ್ದಾರೆ. ಆದರೆ ಈಕೆಯ ಹಿಂದೆ ಬಿದ್ದಿರುವವರ ಸಂಖ್ಯೆ ಮಾತ್ರ ಕೊಂಚವೂ ಕಮ್ಮಿಯಾಗಿಲ್ಲ.
ಇದೀಗ ಈ ಮೋನಾಲಿಸಾಗೆ ಬಿಗ್ ಆಫರ್ ಒಂದು ಬಂದಿದೆ. ಹೌದು, ಬಾಲಿವುಡ್ ಚಿತ್ರರಂಗದ ಖ್ಯಾತ ನಿರ್ದೇಶಕ ಸನೋಜ್ ಮಿಶ್ರಾ ಅವರು ಮೋನಾಲಿಸಾಗೆ ಚಿತ್ರವೊಂದರಲ್ಲಿ ನಟಿಸುವಂತೆ ಆಫರ್ ಮಾಡಲಿದ್ದಾರೆ ಎನ್ನಲಾಗಿದೆ. ಈ ಕುರಿತು ಶೀಘ್ರದಲ್ಲೇ ಮೊನಾಲಿಸಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರಂತೆ.
ಮಧ್ಯಪ್ರದೇಶದ ಇಂದೋರ್ನಿಂದ ಪ್ರಯಾಗ್ರಾಜ್ ಮಹಾಕುಂಭ ಮೇಳಕ್ಕೆ ಬಂದಿದ್ದ ಮೊನಾಲಿಸಾ, ರುದ್ರಾಕ್ಷಿ ಮಾರಾಟ ಮಾಡುವಾಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆಕೆಯ ನೀಲಿ ಕಣ್ಣುಗಳು ಮತ್ತು ಸರಳತೆಯಿಂದಾಗಿ ಜನರು ಅವಳನ್ನು ‘ಮೋನಾಲಿಸಾ’ ಎಂದು ಕರೆಯಲು ಪ್ರಾರಂಭಿಸಿದರು. ಮೊನಾಲಿಸಾ ಅವರ ಸೌಂದರ್ಯ ಮತ್ತು ಆಕರ್ಷಕ ವ್ಯಕ್ತಿತ್ವ ಜಾತ್ರೆಗೆ ಬಂದ ಜನರ ಗಮನ ಸೆಳೆದಿದೆ.
ಮಾಹಿತಿ ಪ್ರಕಾರ, ಈ ಯುವತಿ ವಿದ್ಯಾವಂತಳಲ್ಲ ಮಾತ್ರವಲ್ಲ ಶಾಲೆಗೂ ಹೋಗಿಲ್ಲ. ಬಾಲ್ಯದಿಂದಲೂ ಮಣಿ ಸರಗಳನ್ನು ಮಾರುತ್ತಾ ಪೋಷಕರಿಗೆ ಸಹಾಯ ಮಾಡುತ್ತಿದ್ದಳು. ಆದರೆ ಮೊನಾಲಿಸಾ ಅವರ ಅದೃಷ್ಟ ಶೀಘ್ರದಲ್ಲೇ ಬದಲಾಗಲಿದ್ದು, ಬಾಲಿವುಡ್ ನಿರ್ದೇಶಕ ಸನೋಜ್ ಮಿಶ್ರಾ ಅವರನ್ನು ಶೀಘ್ರದಲ್ಲೇ ಭೇಟಿಯಾಗಲಿದ್ದಾರೆ ಎನ್ನಲಾಗುತ್ತಿದೆ.