ಪ್ರಪಂಚದ ಅರ್ಧದಷ್ಟು ಪುರುಷರಿಗೆ ಈ ಬೋಳು ತಲೆ ಅಥವಾ ಕೂದಲು ಉದುರುವಿಕೆಯ ಸಮಸ್ಯೆ ಇದೆ. ಬೊಕ್ಕ ತಲೆಯಂತೂ ಪುರುಷರಿಗೆ ದೊಡ್ಡ ತಲೆನೋವು. ವಿಗ್ ಹಾಕಿಸಿಕೊಳ್ಳುವುದು, ಕಸಿ ಮಾಡಿಸಿಕೊಳ್ಳುವುದು ಸೇರಿ ಹಲವು ಟ್ರೀಟ್ಮೆಂಟ್ಗೆ ಒಳಗಾಗುತ್ತಿದ್ದಾರೆ ಆದರೆ ಇದು ಒಳ್ಳೆಯದಲ್ಲ.
ತಲೆ ಕೂದಲು ಪ್ರತಿಯೊಬ್ಬರಿಗೂ ಮುಖ್ಯವಾಗಿರುತ್ತದೆ. ಯಾಕೆಂದರೆ ಅದು ಅವರ ನೋಟವನ್ನೇ ಬದಲಾಯಿಸಿಬಿಡುತ್ತದೆ. ಕೂದಲು ನೇರವಾಗಿ ನೋಟದ ಮೇಲೆ ಪರಿಣಾಮ ಬೀರುತ್ತದೆ. ಇಂದಿನ ಕಾಲದಲ್ಲಿ ತಲೆಯಲ್ಲಿ ಕೂದಲು ಬಹಳ ಮುಖ್ಯವಾಗುತ್ತದೆ. ಕೂದಲು ಉದುರುವ ಸಮಸ್ಯೆ ಹೆಚ್ಚಿನವರನ್ನು ಕಾಡುತ್ತಿರುತ್ತದೆ. ಅದರ ಆರಂಭಿಕ ಲಕ್ಷಣಗಳನ್ನು ಗಮನಿಸದೇ ಇದ್ದಲ್ಲಿ ಕೂದಲು ಉದುರಿ ಬೋಳು ತಲೆಯಾಗುವುದಂತೂ ಖಂಡಿತ.
ಚಿಕ್ಕವಯಸ್ಸಿನಲ್ಲಿ ಕೂದಲು ಉದುರಲು ಹಲವಾರು ಕಾರಣಗಳಿವೆ. ಕೆಲಸದ ಒತ್ತಡ, ಸರಿಯಾದ ಪೋಷಣೆಯ ಕೊರತೆ ಮತ್ತು ನಿದ್ರೆಯ ಕೊರತೆಯಿಂದ ಕೂದಲು ಉದುರುವಿಕೆ ಉಂಟಾಗುತ್ತದೆ. ಈ ಸಮಸ್ಯೆಯಿಂದ ಪಾರಾಗಲು ಇಲ್ಲಿದೆ ಸಿಂಪಲ್ ಟಿಪ್ಸ್.. ಬನ್ನಿ ಹೆಚ್ಚಿನ ವಿವರ ತಿಳಿಯೋಣ…
ಈರುಳ್ಳಿ: ಇದರಲ್ಲಿರುವ ಸಲ್ಫರ್ ನಮ್ಮ ತಲೆಯಲ್ಲಿ ರಕ್ತ ಪರಿಚಲನೆ ಸುಧಾರಿಸಲು ತುಂಬಾ ಸಹಕಾರಿ. ಇದಕ್ಕಾಗಿ, ಈರುಳ್ಳಿಯ ಮೃದುವಾದ ಮಿಶ್ರಣವನ್ನು ಮಾಡಿ ಮತ್ತು ಅದರಿಂದ ರಸವನ್ನು ಹೊರತೆಗೆಯಿರಿ, ರಸಕ್ಕೆ ಎರಡು ಚಮಚ ಜೇನುತುಪ್ಪವನ್ನು ಸೇರಿಸಿ, ತಲೆಗೆ ಚೆನ್ನಾಗಿ ಮಸಾಜ್ ಮಾಡಿ.
ಹರಳೆಣ್ಣೆ : ಕ್ಯಾಸ್ಟರ್ ಆಯಿಲ್ ಬೋಳು ತಲೆಗೆ ರಾಮಬಾಣ. ಈ ಎಣ್ಣೆಯನ್ನು ಬೆರಳುಗಳ ಸಹಾಯದಿಂದ ನೆತ್ತಿಯ ಮೇಲೆ ಚನ್ನಾಗಿ ಮಸಾಜ್ ಮಾಡಿ. ಹೀಗೆ ಮಾಡುವುದರಿಂದ ಬೋಳು ತಲೆಯಲ್ಲಿಯೂ ಕೂದಲು ಹುಟ್ಟುತ್ತವೆ.. ಅಲ್ಲದೆ, ಕೂದಲು ಉದುರುವಿಕೆ ಸಮಸ್ಯೆಯೂ ದೂರವಾಗುತ್ತದೆ.
ಅಲೋವೆರಾ: ಅಲೋವೆರಾದಲ್ಲಿ ಅನೇಕ ಪೌಷ್ಟಿಕಾಂಶಗಳು ಅಡಗಿವೆ, ಇದು ನೈಸರ್ಗಿಕವಾಗಿ ಚರ್ಮ ಮತ್ತು ಕೂದಲಿನ ಸೌಂದರ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ಆದ್ದರಿಂದ ನಾವು ವಾರಕ್ಕೆ ಎರಡರಿಂದ ಮೂರು ಬಾರಿ ಅಲೋವೆರಾ ಜೆಲ್ ಅನ್ನು ತಲೆಗೆ ಹಚ್ಚಬೇಕು. ಈ ಮೂರು ಸಿಂಪಲ್ ಟಿಪ್ಸ್ ಪಾಲಿಸಿದರೆ ನಯವಾದ ಕೂದಲನ್ನು ಹೊಂದಬಹುದು.