ಬಿಯರ್ ಇಲ್ಲದೆ ಯಾವುದೇ ಪಾರ್ಟಿಗಳು ಕಂಪ್ಲೀಟ್ ಆಗುವುದಿಲ್ಲ. ಕಾರ್ಪೊರೇಟ್ ಕಂಪನಿಗಳೂ ಈ ಸಂಸ್ಕೃತಿಯನ್ನು ಅನುಸರಿಸುತ್ತಿದೆ.
ಚಳಿಗಾಲದಲ್ಲಿ ಸೀಬೆಹಣ್ಣನ್ನು ಹೇಗೆ ತಿನ್ನಬೇಕು!? ಈ ಪ್ರಯೋಜನಕಾರಿ ವಿಷಯ ನೀವು ತಿಳಿಯಲೇಬೇಕು!
ಬಿಯರ್ ನಲ್ಲಿ ಇತರ ಆಲ್ಕೋಹಾಲ್ ಪಾನೀಯಗಳಿಗಿಂತ ಕಡಿಮೆ ಆಲ್ಕೋಹಾಲ್ ಅಂಶವಿದೆ. ಕೂಲ್ ಬಿಯರ್ ಗಳು ಶಾಖದಿಂದ ಉಪಶಮನ ನೀಡುವುದರಿಂದ ಸ್ವಾಭಾವಿಕವಾಗಿ ಬಿಯರ್ ಕುಡಿಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಬಹುತೇಕ ಮಂದಿ ವೀಕೆಂಡ್ ಬಂದರೆ ಸಾಕು ಪಬ್, ಬಾರ್, ಕ್ಲಬ್, ಟ್ರಾವೆಲಿಂಗ್ ಅಂತ ಜನ ಸ್ನೇಹಿತರೊಂದಿಗೆ ಹೊರಗೆ ಹೋಗಿ ಬಿಯರ್ ಪಾರ್ಟಿ ಮಾಡುತ್ತಾರೆ. ಆದರೆ ಬಿಯರ್ ಪ್ರಿಯರಿಗೆ ಇದೀಗ ಶಾಕಿಂಗ್ ನ್ಯೂಸ್ ಎದುರಾಗಿದೆ
ಹೆಚ್ಚಾಗಿ ಯಾರು ಬಿಯರ್ ಕುಡಿಯುತ್ತಾರೋ ಅವರಿಗೆ ಸೊಳ್ಳೆ ಕಚ್ಚುತ್ತದೆ ಎಂದು ಬಹುತೇಕ ಮಂದಿ ಹೇಳುತ್ತಿದ್ದಾರೆ. ಅದರಲ್ಲೂ ಮದ್ಯಪಾನ ಮಾಡುವವರಿಗೆ ಈ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ ಎಂದು ಜಪಾನ್ನ ಟೊಯಾಮಾ ವಿಶ್ವವಿದ್ಯಾಲಯದ ಬಯೋಡಿಫೆನ್ಸ್ ಮೆಡಿಸಿನ್ ವಿಭಾಗವು ಬಹಿರಂಗ ಪಡಿಸಿದೆ
ಬಿಯರ್ ಕುಡಿಯುವವರು ಸೊಳ್ಳೆಗಳಿಂದ ಕಚ್ಚುವ ಸಾಧ್ಯತೆ ಹೆಚ್ಚು. ಬಿಯರ್ ಕುಡಿಯುವುದರಿಂದ ಬಿಡುಗಡೆಯಾಗುವ C02 ದೇಹದ ಉಷ್ಣತೆಯ ಹೆಚ್ಚಳದೊಂದಿಗೆ ಸೊಳ್ಳೆಗಳನ್ನು ಆಕರ್ಷಿಸುತ್ತದೆ ಎಂದು ತಿಳಿದುಬಂದಿದೆ. ಇದರ ಪ್ರಕಾರ, ಬಿಯರ್ ಕುಡಿಯುವವರಿಗೆ ಸೊಳ್ಳೆಗಳು ಕಚ್ಚುವುದು ತಿಳಿದು ಬಂದಿದೆ
ಸದ್ಯ ಮಳೆಗಾಲ ಮತ್ತು ರೋಗಗಳು ಹರಡುವ ಸಮಯ. ಹಾಗಾಗಿ ಮಾದಕ ವ್ಯಸನಿಗಳು ಈ ಸಮಯದಲ್ಲಿ ಬಿಯರ್ನಿಂದ ದೂರವಿದ್ದರೆ ಉತ್ತಮ. ಏಕೆಂದರೆ ಮಳೆಗಾಲದಲ್ಲಿ ಸೊಳ್ಳೆಗಳ ಕಾಟದಿಂದ ಡೆಂಗ್ಯೂ, ಮಲೇರಿಯಾದಂತಹ ರೋಗಗಳು ಹರಡುತ್ತವೆ. ಹಾಗಾಗಿ ಮಳೆಗಾಲದಲ್ಲಿ ರೋಗಗಳು ಬರಬಾರದು ಎಂದು ನೀವು ಬಯಸುವುದಾದರೆ, ರೋಗಗಳನ್ನು ಹರಡುವ ಸೊಳ್ಳೆಗಳಿಂದ ಕಚ್ಚಿಸಿಕೊಳ್ಳುವುದನ್ನು ತಪ್ಪಿಸಬೇಕು. ಇದಕ್ಕಾಗಿ ಬಿಯರ್ ಕುಡಿಯದಿರುವುದು ಉತ್ತಮ ಎನ್ನಲಾಗಿದೆ.