ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ರೈಲ್ವೇ ಇಲಾಖೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಹೀಗಾಗಿ ಕೆಲಸ ಮಾಡಲು ಇಚ್ಚಿಸುವ ನಿರುದ್ಯೋಗ ಯುವಕ, ಯುವತಿಯರು ಕೂಡಲೇ ಅಪ್ಲೈ ಮಾಡಬಹುದು. ಆಗ್ನೇಯ ರೈಲ್ವೆ ಅಪ್ರೆಂಟಿಸ್ ಹುದ್ದೆ ಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಅರ್ಜಿ ಭರ್ತಿ ಮಾಡಬಹುದು.
ಯಡಿಯೂರಪ್ಪರನ್ನ ಟೀಕೆ ಮಾಡಿದ್ರೆ ಪ್ರಚಾರ ಸಿಗುತ್ತೆ ಅಂದುಕೊಂಡ್ರೆ ಭ್ರಮೆ: ಬಿವೈ ವಿಜಯೇಂದ್ರ
ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಆಹ್ವಾನ : ಆಗ್ನೇಯ ರೈಲ್ವೆ ಅಪ್ರೆಂಟಿಸ್ ನೇಮಕಾತಿ 2024 ಅಭಿಯಾನದ ಅಡಿಯಲ್ಲಿ, 1785 ಹುದ್ದೆಗಳಿಗೆ ಅಭ್ಯರ್ಥಿಗಳ ಭರ್ತಿ ಮಾಡ್ತಿದೆ. ಆನ್ಲೈನ್ ನೋಂದಣಿ ಪ್ರಕ್ರಿಯೆಯು ನಿನ್ನೆ ಅಂದರೆ ನವೆಂಬರ್ 28, 2024 ರಂದು ಪ್ರಾರಂಭವಾಗಿದೆ. ಅರ್ಜಿ ಸಲ್ಲಿಸಲು ಡಿಸೆಂಬರ್ 27, 2024ರ ಸಂಜೆ 5 ಗಂಟೆಯವರೆಗೆ ಅವಕಾಶವಿದೆ.
ಅಭ್ಯರ್ಥಿಗಳ ವಿದ್ಯಾರ್ಹತೆ : ಹೆಚ್ಚುವರಿ ವಿಷಯಗಳನ್ನು ಹೊರತುಪಡಿಸಿ ಕನಿಷ್ಠ ಶೇಕಡಾ 50 ಅಂಕಗಳೊಂದಿಗೆ ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ ಅಥವಾ ಅದಕ್ಕೆ ಸಮನಾದ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಉತ್ತೀರ್ಣರಾಗಿರಬೇಕು. ಅಪ್ರೆಂಟಿಸ್ಶಿಪ್ ಮಾಡಬೇಕಾದ ಕ್ಷೇತ್ರದಲ್ಲಿ NCVT/SCVT ನೀಡುವ ಐಟಿಐ (ITI) ಪರೀಕ್ಷೆ ಪಾಸಾಗಿರುವ
ಪ್ರಮಾಣಪತ್ರವನ್ನು ಹೊಂದಿರಬೇಕು.
ವಯಸ್ಸಿನ ಮಿತಿ : ರೈಲ್ವೇ ಅಪ್ರೆಂಟಿಸ್ನ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 15 ವರ್ಷಗಳು ಮತ್ತು ಗರಿಷ್ಠ ವಯಸ್ಸು 24 ವರ್ಷಗಳು. ಅಭ್ಯರ್ಥಿಗಳ ವಯಸ್ಸನ್ನು ಜನವರಿ 1, 2024 ರ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ. ಕಾಯ್ದಿರಿಸಿದ ವರ್ಗಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.
ಆಯ್ಕೆ ಪ್ರಕ್ರಿಯೆ : ಅಭ್ಯರ್ಥಿಗಳಿಗೆ ಯಾವುದೇ ಪರೀಕ್ಷೆ ಇಲ್ಲ. ನೇರವಾಗಿ ಅಂಕಗಳ ಆಧಾರದ ಮೇಲೆ ಸಿದ್ಧಪಡಿಸಿದ ಮೆರಿಟ್ ಮೂಲಕ ರೈಲ್ವೆ ಅಪ್ರೆಂಟಿಸ್ಗೆ ಆಯ್ಕೆ ಮಾಡಲಾಗುತ್ತದೆ. ಶಾರ್ಟ್ಲಿಸ್ಟ್ ಮಾಡಿದ ಅಭ್ಯರ್ಥಿಗಳನ್ನು ಡಾಕ್ಯುಮೆಂಟ್ ಪರಿಶೀಲನೆಗಾಗಿ ಕರೆಯಲಾಗುವುದು.
ಅರ್ಜಿ ಸಲ್ಲಿಸುವ ವೆಬ್ ಸೈಟ್ : ಆಸಕ್ತ ಅಭ್ಯರ್ಥಿಗಳು rrcser.co.in ಮತ್ತು iroams.com ಗೆ ಭೇಟಿ ನೀಡಿ ಅಲ್ಲಿ ಅರ್ಜಿ ಸಲ್ಲಿಸಬೇಕು. ಮೊದಲು ಈ ವೆಬ್ಸೈಟ್ ಗೆ ಲಾಗಿನ್ ಆಗಿ, ಅಪ್ರೆಂಟಿಸ್ ಹುದ್ದೆಯ ಆಯ್ಕೆ ಮೇಲೆ ಕ್ಲಿಕ್ ಮಾಡಿ, ಅಲ್ಲಿ ಕೇಳುವ ಎಲ್ಲ ಮಾಹಿತಿಯನ್ನು ಭರ್ತಿ ಮಾಡಿ, ನಂತ್ರ ಆನ್ಲೈನ್ ಮೂಲಕವೇ ಹಣ ಪಾವತಿ ಮಾಡಿ ಅರ್ಜಿ ಸಲ್ಲಿಸಬೇಕಾಗುತ್ತದೆ.