ಬೆಂಗಳೂರು:- ಬೈಕ್ ಸವಾರರೊಬ್ಬರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ರಸ್ತೆಯಲ್ಲಿ ಸಂಚರಿಸುವಾಗಲೇ ಬೃಹದಾಕಾರದ ಮರ ಬಿದ್ದಿದ್ದು, ವಿಡಿಯೋ ನೋಡಿದ್ರೆ ಮೈ ಝುಂ ಅನ್ಸತ್ತೆ.
ನಮ್ಮ ಸರ್ಕಾರ ಬಂದ ಮೇಲೆ ಯಾವುದೇ ಒಬ್ಬ ರೈತನಿಗೆ ನೋಟಿಸ್ ನೀಡಿಲ್ಲ: ಎಚ್.ಕೆ ಪಾಟೀಲ್
ಒಂದೇ ಸೆಕಂಡ್ ನಲ್ಲಿ ದುರಂತ ತಪ್ಪಿದೆ. ಬೈಕ್ ರನ್ನಿಂಗ್ ನಲ್ಲಿರುವಾಗ ಮರದ ಕೊಂಬೆ ಬಿದ್ದಿದೆ. ಬೃಹತ್ ಮರದ ಕೊಂಬೆ ಬಿದ್ದು ಸವಾರನಿಗೆ ಸಣ್ಣ ಗಾಯವಾಗಿದೆ.
ಹಿಂಬದಿಯಲ್ಲಿ ಕೂತ ವ್ಯಕ್ತಿಗೆ ಗಾಯವಾಗಿದೆ. ಬೈಕ್ ನ ಮುಂಭಾಗ ಡ್ಯಾಮೇಜ್, ಸವಾರನಿಗೆ ಸಣ್ಣ ಗಾಯವಾಗಿದೆ. ಸವಾರನ ಮುಖ,ಕಣ್ಣಿನ ಭಾಗಕ್ಕೆ ಗಾಯವಾಗಿದ್ಗು, ದುರಂತ ತಪ್ಪಿದಂತಾಗಿದೆ.
ನೇರವಾಗಿ ಸವಾರರ ಮೇಲೆ ಬೀಳುವ ಬದಲು. ಬೈಕ್ ನ ಮುಂಭಾಗದತ್ತ ಮರದ ಕೊಂಬೆ ಬಿದ್ದಿದೆ. ಸವಾರನ ಮೇಲೆ ಬಿದ್ದಿದ್ರೆ ದೊಡ್ಡ ಅನಾಹುತ ಆಗುತ್ತಿತ್ತು. ಅದೃಷ್ಟವಶಾತ್ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ. ನಿನ್ನೆ ತಿಲಕ್ ನಗರದಲ್ಲಿ ಈ ಘಟನೆ ಜರುಗಿದೆ.