ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ನಡೆದ ರೋಡ್ ರೇಜ್ ಪ್ರಕರಣ ದಂಪತಿಯನ್ನೇ ಬೆಚ್ಚಿ ಬೀಳಿಸಿದೆ. ಘಟನೆಯಲ್ಲಿ ಮಗು ಚೀರಾಟ ನೋಡಿದ್ರೆ ನಿಜಕ್ಕೂ ಕರಳು ಹಿಂಡುತ್ತೆ.
ಸಹಾಯಕ್ಕೆ ಬಂದವರ ಮೇಲೆ ಹಲ್ಲೆಗೆ ಯತ್ನ: ವ್ಯಕ್ತಿಗೆ ಮಾರಕಾಸ್ತ್ರಗಳಿಂದ ಥಳಿಸಿದ ಗ್ಯಾಂಗ್!
ಎಸ್, ಬೆಂಗಳೂರಿನ ಕಸವನಹಳ್ಳಿ ಅಮೃತ ಕಾಲೇಜು ಬಳಿ ರೋಡ್ ರೇಜ್ ಪ್ರಕರಣ ಕಂಡು ಬಂದಿದೆ. ದೀಪಾವಳಿ ಶಾಪಿಂಗ್ ಮುಗಿಸಿ ಮನೆಗೆ ಹೊರಟಿದ್ದ ಕುಟುಂಬದ ಮೇಲೆ ಪುಂಡರು ದಾಳಿ ನಡೆದಿದೆ. ಈ ವೇಳೆ 5 ವರ್ಷದ ಮಗುವಿನ ತಲೆಗೆ ಪೆಟ್ಟಾಗಿದೆ.
ಅಕ್ಟೋಬರ್ 30 ರಂದು ದೀಪಾವಳಿ ಶಾಪಿಂಗ್ಗೆ ತಮ್ಮ ಮಕ್ಕಳೊಂದಿಗೆ ಬಂದಿದ್ದ ದಂಪತಿ ರಾತ್ರಿ 9:30ರ ಸುಮಾರಿಗೆ ಶಾಪಿಂಗ್ ಮುಗಿಸಿ ಹೊರಟಿದ್ದರು. ಚಾಲನ ಸೀಟ್ನಲ್ಲಿ ಪತಿ ಅನೂಪ್ ಜಾರ್ಜ್, ಪಕ್ಕದಲ್ಲಿ ಪತ್ನಿ, ಹಿಂಭಾಗ ಇಬ್ಬರು ಮಕ್ಕಳು ಕುಳಿತಿದ್ದರು.
ಈ ವೇಳೆ ಕಿಡಿಗೇಡಿಗಳು ಆ ಕುಟುಂಬಕ್ಕೆ ತೊಂದರೆ ಕೊಟ್ಟಿದ್ದಾರೆ. ಕಾರನ್ನು ಅಡ್ಡಗಟ್ಟಿ, ಗ್ಲಾಸ್ ಇಳಿಸುವಂತೆ ಆವಾಜ್ ಹಾಕಿದ್ದಾರೆ. ಚಾಲಕ ಅನೂಪ್ ಜಾರ್ಜ್ ಹೆದರಿ ಗ್ಲಾಸ್ ತೆರೆಯದೇ ಇದ್ದಿದ್ದರಿಂದ ಕೋಪಗೊಂಡ ಪುಂಡರು ಮಕ್ಕಳು ಇದ್ದಾರೆ ಎಂಬುದನ್ನೂ ನೋಡದೇ ಕಾರಿನ ಮೇಲೆ ಕಲ್ಲಿನಿಂದ ದಾಳಿ ನಡೆಸಿದ್ದಾರೆ
ಗಾಜು ಒಡೆದು 5 ವರ್ಷದ ಮಗುವಿನ ತಲೆಗೆ ಗಾಯವಾಗಿ, ಕಾರಿನಲ್ಲೇ ರಕ್ತ ಚೆಲ್ಲಿದೆ. ಕಲ್ಲೇಟು ಬೀಳುತ್ತಿದ್ದಂತೆ ಮಗು ಚೀರಾಡಿದೆ. ತಕ್ಷಣ ಸಮೀಪದಲ್ಲೇ ಇದ್ದ ಆಸ್ಪತ್ರೆಗೆ ಪೋಷಕರು ಮಗುವನ್ನು ಕರೆದೊಯ್ದು, ಚಿಕಿತ್ಸೆ ಕೊಡಿಸಿದ್ದಾರೆ. ವೈದ್ಯರು ಮಗುವಿನ ತಲೆಗೆ 3 ಸ್ಟಿಚ್ ಹಾಕಿದ್ದಾರೆ. ಬಳಿಕ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದಂಪತಿ ದೂರು ದಾಖಲಿಸಿದ್ದಾರೆ